ಇತ್ತೀಚಿಗೆ ಬಿಡುಗಡೆಯಾದ `ವಿಕ್ಕಿ ಡೊನಾರ್' ಚಿತ್ರವನ್ನು ನೀವು ನೋಡಿರಬಹುದು. ಜನಪ್ರಿಯ ನಟ ಜಾನ್ ಅಬ್ರಾಹಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ವಿಕ್ಕಿ ಡೊನಾರ್ ಚಿತ್ರದಲ್ಲಿ ನಾಯಕನಾಗಿ ಮಿಂಚಿದ್ದ ಆಯುಷ್ಮಾನ್ ಖುರಾನಾ ಒಂದು ಕಾಲದಲ್ಲಿ ಟೀವಿಯ ಜನಪ್ರಿಯ ವಿಡಿಯೋ ಜಾಕಿ(ವಿಜೆ)ಯಾಗಿದ್ದ. ಅನೇಕ ಟೀವಿ ರಿಯಾಲಿಟಿ ಶೋಗಳ ನಿರೂಪಕನಾಗಿದ್ದ. ಹೀಗೆ ಟೀವಿಯಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದಿದ್ದ ಆಯುಷ್ಮಾನ್ ರಾತ್ರೋರಾತ್ರಿ ಬಾಲಿವುಡ್ನ ಸ್ಟಾರ್ ಆಗಿ ಮಿಂಚಿ ಬಿಟ್ಟಿದ್ದ. ಹೀಗೆ ಟೀವಿಯಿಂದ ಸಿನಿಮಾ ಉದ್ಯಮಕ್ಕೆ ಕಾಲಿಟ್ಟು ಯಶಸ್ವಿ ನಟರಾದವರಲ್ಲಿ ಆಯುಷ್ಮಾನ್ ಕೂಡ ಸೇರುತ್ತಾರೆ.
ಮೂಲತಃ ಚಂಡೀಗಢದಲ್ಲಿ ಹುಟ್ಟಿ ಬೆಳೆದ ಆಯುಷ್ಮಾನ್ ಬಣ್ಣದ ಬದುಕು ರೂಪಿಸಿಕೊಳ್ಳಲು ಬಂದಿದ್ದು ಮಾತ್ರ ಮುಂಬೈ ಎಂಬ ಬಣ್ಣದ ನಗರಕ್ಕೆ. ಈತನ ತಂದೆ ಪಿ.ಖುರಾನಾ ಚಂಡೀಗಡದ ಜನಪ್ರಿಯ ಜ್ಯೋತಿಷಿಗಳು. ಹಾಗಾಗಿ ತಂದೆಯ ಸಲಹೆಯ ಮೇರೆಗೆ ಸಿನಿಮಾ ಹಾಗೂ ಟೀವಿ ಜಗತ್ತಿನಲ್ಲಿ ಸಾಧಿಸಲು ಈತ ಮುನ್ನುಗ್ಗಿದ್ದು. ಈತನ ಸಹೋದರ ಅಪಾರಶಕ್ತಿ ದೆಹಲಿಯ ರೆಡಿಯೋ ಸ್ಟೇಷನ್ನಲ್ಲಿ ಆರ್ಜೆಯಾಗಿದ್ದಾನೆ.
ಎಂಟೀವಿ ಆಯುಷ್ಮಾನ್ಗೆ ಬ್ರೇಕ್ ನೀಡಿದ ಚಾನೆಲ್. ಅಲ್ಲಿ ನೇರ ಕಾರ್ಯಕ್ರಮ, ಸಿನಿಮಾ ವಿಮರ್ಶೆ , ಸಣ್ಣ ಟೀವಿ ಸಂದರ್ಶನ ನಡೆಸಿಕೊಡುವ ಮೂಲಕ ಯುವಕ, ಯುವತಿಯರ ಮನಗೆದ್ದಿದ್ದ. ಇದಕ್ಕಿಂತ ಆಯುಷ್ಮಾನ್ಗೆ ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿದ್ದು ಐಐಎಫ್ಎ ಫಿಲಂ ಅವಾರ್ಸ್ ಕಾರ್ಯಕ್ರಮ. ಪ್ರಶಸ್ತಿ ಕಾರ್ಯಕ್ರಮಗಳ ಮೂಲಕ ಇಡೀ ಬಾಲಿವುಡ್ನ ಘಟಾನುಘಟಿಗಳನ್ನು ತನ್ನ ಮಾತಿನ ಮೂಲಕ ಆಕರ್ಷಿಸಿಬಿಟ್ಟಿದ್ದ. ಈತನ ಪ್ರತಿಭೆಯನ್ನು ಕಂಡು ಬಾಲಿವುಡ್ ತನ್ನ ಬಾಗಿಲನ್ನು ತೆರೆಯಿತು. ವಿಕ್ಕಿ ಡೊನಾರ್ ಹಿಟ್ ಆಗಿದೆ. ಸದ್ಯ ಎರಡನೇ ಚಿತ್ರ `ಹಮಾರಾ ಬಜಾಜ್' ಸದ್ಯದಲ್ಲೇ ಬಿಡುಗಡೆಯಾಗಲಿದೆ. ರೋಹನ್ ಸಿಪ್ಪಿಯ `ನೌಟಂಕಿ ಸಾಲಾ' ಚಿತ್ರೀಕರಣ ನಡೆಯುತ್ತಿದೆ. ವೈಯಕ್ತಿಕವಾಗಿ ಬಾಲಿವುಡ್ನಲ್ಲಿ ನೆಲೆನಿಂತಿರುವ ಆಯುಷ್ಮಾನ್ ತನ್ನ ಬಾಲ್ಯದ ಗೆಳತಿ ತಹಿರಾಳನ್ನು ಮದುವೆಯಾಗಿದ್ದಾನೆ. ವಿಕ್ಕಿ ಡೋನಾರ್ ಸಿನಿಮಾದಲ್ಲಿ ಈತ ಕಂಪೋಸ್ ಮಾಡಿ ಹಾಡಿದ `ಪಾನಿ ದಾ..' ಹಾಡು ತುಂಬಾ ಜನಪ್ರಿಯವಾಗಿದೆ. ಆ ಮೂಲಕ ಆಯುಷ್ಮಾನ್ ಹಾಡುಗಾರನಾಗಿಯೂ ಕೂಡ ಗೆದ್ದಿದ್ದಾನೆ.
He is also singer
ReplyDelete