Sunday 3 February 2013

ಒಲಂಪಿಕ್ ಪದಕಗಳ ದೊಡ್ಡ ನಿರಾಸೆ! ಕ್ರೀಡಾ ಪ್ರಸಾರದಲ್ಲಿ ಚಾನಲ್ಗಳ ಪಾತ್ರ


ಒಲಂಪಿಕ್ ಪಂದ್ಯಾವಳಿಗಳು ಮುಕ್ತಾಯವಾದವು. ಎಂದಿನಂತೆ ದೊಡ್ಡ ಮಟ್ಟದ ನಿರಾಸೆ ಪದಕ ಬೇಟೆಯಲ್ಲಿ ಕಾಡಿದರೂ, ಒಲಂಪಿಕ್ ಪಂದ್ಯಾವಳಿಯನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕುಗಳನ್ನು ಪಡೆದಿದ್ದ ಈಎಸ್ಪಿಎನ್, ಸ್ಟಾರ್ ಸ್ಪೋಟ್ಸ್  ಹಾಗೂ ಡಿಡಿ ವಾಹಿನಿಗಳಿಗೂ ದೊಡ್ಡ ಮಟ್ಟದ ನಿರಾಸೆಯನ್ನುಂಟು ಮಾಡಿದೆ. ಮುಖ್ಯವಾಗಿ ಲಂಡನ್ ಒಲಂಪಿಕ್ನ ನೇರ ದೃಶ್ಯಾವಳಿಯನ್ನು ನೋಡಬೇಕೆಂದಿದ್ದ ಇಲ್ಲಿನ ಕ್ರೀಡಾ ಅಭಿಮಾನಿಗಳು ಹಾಗೂ ಟೀವಿ ವೀಕ್ಷಕರಿಗೂ ದೊಡ್ಡ ಮಟ್ಟದ ನಿರಾಸೆಯನ್ನುಂಟು ಮಾಡಿದೆನಮ್ಮ ದೇಶದ ಜನ ಯಾವಾಗಲೂ ಒಲಂಪಿಕ್ನಲ್ಲಿ ದೇಶದ ಸ್ಪರ್ಧೆ ಗಳು ನೀಡುವ ಪ್ರದರ್ಶನವನ್ನು ನೋಡಲು ಹೆಚ್ಚು ಉತ್ಸುಕರಾಗಿದ್ದರೆ ವಿನಹ, ಭಾರತೀಯರು ಭಾಗವಹಿಸದೇ ಇರುವ ಗೇಮ್ಗಳನ್ನೇ ಅತಿ ಹೆಚ್ಚಾಗಿ ಪ್ರಸಾರ ಮಾಡಿದರೆ ಇಲ್ಲಿನವರು ನೋಡುವರೇ. ತರಹದ ಅನೇಕ ಸಂಗತಿಗಳು ಒಲಂಪಿಕ್ ಪ್ರಸಾರದಲ್ಲಿ ಆಗಿ ವಾಹಿನಿಗಳಿಗೆ ಅಂದುಕೊಂಡಷ್ಟು ವೀಕ್ಷಕರ ಸಂಖ್ಯೆ ಬರದೇ ಇರಲಿಕ್ಕೆ ಕಾರಣವಾಯಿತು
            ಇದಕ್ಕೆ ಒಂದು ಸಣ್ಣ ಉದಾಹರಣೆಗಳನ್ನು ನೀಡುವುದಾದರೆಅಭಿನವ್ ಬಿಂದ್ರಾ, ಗಗನ್ ನಾರಂಗ್ರು ಭಾಗವಹಿಸಿದ ಪ್ರಿಲಿಮಿನರಿ ಸುತ್ತಿನ ಪುರುಷರ 10ಮೀ. ಏರ್ರೈಫಲ್ ಸ್ಫರ್ಧೆ ಯು ಭಾರತದಲ್ಲಿ ನೇರ ಪ್ರಸಾರವಾಗಿರಲಿಲ್ಲ. ಇದು ಬಹಳಷ್ಟು ಜನರಿಗೆ ನಿರಾಸೆಯನ್ನುಂಟು ಮಾಡಿತ್ತು. ಹೆಚ್ಚಿನವರು ಚಾನೆಲ್ ಛೇಂಜ್ ಮಾಡಿದರು. ವೀಕ್ಷಕರ ಸಂಖ್ಯೆ ಒಮ್ಮಿಂದೊಮ್ಮೆಲೆ ಕುಸಿಯಿತು. ಅದೇ ರೀತಿ ಬಾರಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ, ಸೈನಾ ನೆಹ್ವಾಲ್ನ ಮೊದಲ ಮ್ಯಾಚು, ಟೆನ್ನಿಸ್ ಆಟಗಾರ ಸೋಮದೇವ್ ದೇವ್ವರ್ಮನ್ ಹಾಗೂ ಶೂಟರ್ ಹೀನಾ ಸಿಧುರ ಮ್ಯಾಚುಗಳನ್ನು ಕೂಡ ಭಾರತೀಯರು ಮಿಸ್ ಮಾಡಿಕೊಂಡರು. ಭಾರತೀಯರಿಗೆ ಆಸಕ್ತಿ ಇರುವ ಕ್ರೀಡೆಗಳನ್ನು ಹೆಚ್ಚಾಗಿ ತೋರಿಸುವುದರ ಬದಲಾಗಿ, ಭಾರತೀಯರು ಕೆಲವು ಕ್ರೀಡೆಗಳ ಬಗ್ಗೆ ಅರಿವೇ ಇಲ್ಲದ, ಹಾಗೂ ಅದರಲ್ಲಿ ನಮ್ಮವರು ಭಾಗವಹಿಸದೇ ಇರುವ ಕ್ರೀಡೆಗಳನ್ನು ಇಲ್ಲಿ ಪ್ರಸಾರದ ಹಕ್ಕು ಪಡೆದ ವಾಹಿನಿಗಳಲ್ಲಿ ತೋರಿಸಲಾಯಿತು. ಕಳೆದ ಒಲಂಪಿಕ್ ಕ್ರೀಡೆಗಳ ಪ್ರಸಾರಕ್ಕಿಂತ ಬಾರಿಯ ಕ್ರೀಡೆಗಳ ಕವರೇಜ್ ಹಾಗೂ ಪ್ರಸಾರವನ್ನು ಅತ್ಯುತ್ತಮ ಗುಣಮಟ್ಟದಲ್ಲಿ ಮಾಡಿದ್ದು ಬಿಟ್ಟರೆ, ಬೇರೆ ಅಂತಹ ಬೆಳವಣಿಗೆಗಳು ಬಾರಿ ಆಗಲೇ ಇಲ್ಲ. ಪ್ರಸಾರದ ಪ್ರಯೋಜನ ಬೇರೆ ದೇಶಗಳಲ್ಲಿನ ವೀಕ್ಷಕರಿಗೆ ಚೆನ್ನಾಗಿ ಆಯಿತೇ ವಿನಃ ಭಾರತೀಯರಿಗೆ ಪ್ರಯೋಜನವಾದದ್ದಂತೂ ತುಂಬಾ ಕಡಿಮೆ. ಮುಖ್ಯವಾಗಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಟೀವಿ ಪರದೆಗಳು ನಮ್ಮ ದೇಶದಲ್ಲಿ ಎಷ್ಟಿವೆ ಎಂಬುದು ಲೆಕ್ಕಕ್ಕಿಲ್ಲದ ಸಂಗತಿ. ಮನರಂಜನಾ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳಿಗಿಂತ ನಾವು ಎಷ್ಟೋ ಕಿಲೋಮೀಟರ್ ಹಿಂದೆ ಇದ್ದೇವೆಇತ್ತೀಚಿನ ದಿನಗಳಲ್ಲಿ ಇದರ ಪ್ರಚಾರ ಹೆಚ್ಚಾಗುತ್ತಿದ್ದರೂ, ಮಧ್ಯಮ ವರ್ಗದವರೇ ದೇಶದ ಶೇ.70ರಷ್ಟು ತುಂಬಿರುವಾಗ ದುಬಾರಿ ಬೆಲೆಯ ಟಿವಿ ಸೆಟ್ಗಳನ್ನು ಕೊಂಡು ವೀಕ್ಷಿಸುವುದು ನಮ್ಮವರಿಗೆ ದೊಡ್ಡ ದುಸ್ಸಾಹಸವೇ ಸರಿ.
           
ಬಾರಿ ಒಲಂಪಿಕ್ ಸಂಘಟನಾ ಕಮಿಟಿಯು, ಪ್ರಸಾರದ ಹಕ್ಕುಗಳನ್ನು ನೀಡಿದ ಟೀವಿ ವಾಹಿನಿಗಳ ಹೊರತಾಗಿ ಉಳಿದ ವಾಹಿನಿಗಳು, ಮುಖ್ಯವಾಗಿ ಸುದ್ದಿ ವಾಹಿನಿಗಳಿಗೆ ಒಂದು ಕರಾರುವಾಕ್ಕಾದ ಸೂಚನೆಯನ್ನು ನೀಡಿತ್ತು. ಭಾರತದ ಸುದ್ದಿ ವಾಹಿನಿಗಳ ಒಕ್ಕೂಟದ ಸಂಸ್ಥೆಯಾಗಿರುವ ನ್ಯೂಸ್ ಬ್ರಾಡ್ಕ್ಯಾಸ್ಟರ್ ಅಸೋಸಿಯೇಷನ್ (ಎನ್ಬಿಎ) ಒಲಂಪಿಕ್ ಸಂಘಟನಾ ಸಂಸ್ಥೆಯಿಂದ ಒಂದು ಸೂಚನೆಯನ್ನು ಪಡೆದಿತ್ತು. ಸೂಚನೆಯ ನಿಯಮದ ಪ್ರಕಾರ ಯಾವುದೇ ಕಾರಣಕ್ಕೂ, ಸುದ್ದಿ ವಾಹಿನಿಗಳು ಭಾರತದಲ್ಲಿ ಬ್ರೇಕಿಂಗ್ ನ್ಯೂಸ್ ಹೆಸರಿನಲ್ಲಿ ಭಾರತೀಯ ಕ್ರೀಡಾಳುಗಳು ಪದಕ ಗೆದ್ದ ಕ್ಷಣಗಳನ್ನು ನೇರಪ್ರಸಾರ ಮಾಡುವ ಹಾಗಿಲ್ಲ. ಹಕ್ಕುಗಳನ್ನು ಪಡೆದುಕೊಂಡ ವಾಹಿನಿಗಳು ಪ್ರಸಾರ ಮಾಡಿ, ಎರಡು-ಮೂರು ತಾಸು ಕಳೆದ ಮೇಲೆ ಸುದ್ದಿ ವಾಹಿನಿಗಳು ಸುಂದರ ಕ್ಷಣಗಳನ್ನು ಬಳಸಿಕೊಳ್ಳಬೇಕು, ಅಲ್ಲಿಯವರೆಗೆ ವಾಹಿನಿಯು ತನ್ನಲ್ಲಿದ್ದ ಪದಕ ಗೆದ್ದವರ ಫೈಲ್ ಶಾಟ್ಸ್ಗಳನ್ನು ಬಳಸಿಕೊಳ್ಳಬಹುದು ಅಂತ ತಿಳಿಸಿತ್ತು. ಇದು ಭಾರತೀಯ ಸುದ್ದಿ ವಾಹಿನಿಗಳಿಗೆ ನುಂಗಲಾರದ ತುತ್ತಾಗಿ ಕಂಡರೂ, ಪಾಲಿಸಲೇಬೇಕಾದ ಅನಿವಾರ್ಯತೆಯನ್ನು ತಂದೊಡ್ಡಿತು. ಅಕಸ್ಮಾತ್ ಭಾರತೀಯ ಕ್ರೀಡಾಳುಗಳು  ಒಂದರ ಮೇಲೊಂದರಂತೆ ಪದಕಗಳನ್ನು ಕೊಳ್ಳೆ ಹೊಡೆದಿದ್ದರೆ, ಖಂಡಿತ ಅಂತಾರಾಪ್ಷ್ರೀಯ ಒಲಂಪಿಕ್ ಸಂಘಟನೆ ಮಾಡಿದ್ದ ಕರಾರುಗಳಿಗೆ ಎಳ್ಳು ನೀರು ಬಿಟ್ಟುಬಿಡುತ್ತಿದ್ದವೇನೋ? ಆದರೆ ವರ್ಷ ರೀತಿ ಆಗಲೇ ಇಲ್ಲ. ಹೀಗಿದ್ದರೂ ಪದಕ ಗೆದ್ದ ಆರು ಜನರ ಮಾಹಿತಿಯನ್ನು ಕರಾರಿನ ಚೌಕಟ್ಟಿನೊಳಗೆ ಜನರಿಗೆ ತಿಳಿಸುವ ಕಾರ್ಯಕ್ರಮವನ್ನು ರಾಷ್ಟ್ರೀಯ ಸುದ್ದಿ ವಾಹಿನಿಗಳು ಮಾಡಿದವುಆದರೂ ಕೆಲವು ರಾಷ್ಟ್ರೀಯ ವಾಹಿನಿಗಳು ಒಲಂಪಿಕ್ ಪಂದ್ಯಾವಳಿಗಳನ್ನಿಟ್ಟುಕೊಂಡು ಅನೇಕ ಕಾರ್ಯಕ್ರಮಗಳು, ಚರ್ಚೆ  ಸಂವಾದ ಇನ್ನು ಹಲವಾರು ಟಾಕ್ ಶೋಗಳನ್ನು ಹಮ್ಮಿಕೊಂಡಿದ್ದವು. ಹೆಚ್ಚಿನವು ಕಾರ್ಯಕ್ರಮಗಳಿಗಾಗಿ ಸುಪ್ರಸಿದ್ಧ ಒಲಂಪಿಕ್ ಕ್ರೀಡಾಳುಗಳು, ಕ್ರೀಡಾ ವಿಮರ್ಶಕರು, ಸೆಲೆಬ್ರೆಟಿಗಳನ್ನು ಬುಕ್ ಮಾಡಿಕೊಂಡಿದ್ದವು. ಒಲಂಪಿಕ್ ಮೊದಲೇ ತರಹದ ಕಾರ್ಯಕ್ರಮಗಳನ್ನು ನಿಯೋಜಿಸಿಕೊಂಡಿದ್ದ ಕೆಲವು ಸುದ್ದಿ ವಾಹಿನಿಗಳು ನಿಯಮಾವಳಿಗಳನ್ನು ವಿರೋಧಿಸಿದರೂ ಅವುಗಳಿಗೆ ಅಷ್ಟಾಗಿ ಬೆಂಬಲ ಸಿಗಲಿಲ್ಲ.
ಇನ್ನೂ ಒಲಂಪಿಕ್ ಸೆರಮನಿ ಕಾರ್ಯಕ್ರಮ ಕೂಡ ನಮ್ಮ ದೇಶವನ್ನು ಹೊರತುಪಡಿಸಿದರೆ ಉಳಿದೆಲ್ಲಾ ರಾಷ್ಟ್ರಗಳ ವೀಕ್ಷಕರು ತುಂಬಾ ಸಂಭ್ರಮದಿಂದ ನೋಡಿದರುಯುಕೆ ದೇಶದಲ್ಲಿ ಒಲಂಪಿಕ್ ಶುಭಾರಂಭದ ಕಾರ್ಯಕ್ರಮವನ್ನು ಅತಿ ಹೆಚ್ಚು ಜನ ತಮ್ಮ ಟೀವಿ ಪರದೆ ಮೇಲೆ ನೋಡಿ ಖುಷಿಪಟ್ಟರು. ಇದೂ ಯುಕೆ  ಟೆಲಿವಿಷನ್ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯಾಗಿ ಉಳಿಯಿತು. ಆಸ್ಕರ್ ಪುರಸ್ಕೃತ ಸ್ಲಂಡಾಗ್ ಮಿಲೇನಿಯರ್ ಚಿತ್ರ ನಿರ್ದೇ ಶಕ ಡ್ಯಾನಿ ಬೋಯ್ಲ್ ಬಾರಿಯ ಒಲಂಪಿಕ್ಸ್ ಶುಭಾರಂಭದ ಕಾರ್ಯಕ್ರಮದ ರೂಪುರೇಖೆಯನ್ನು ವಹಿಸಿಕೊಂಡಿದ್ದರು. ಭಾರತೀಯ ಸಂಗೀತ ನಿರ್ದೇಶಕ .ಆರ್. ರೆಹಮಾನ್ಗೂ ಕೂಡ ಅವಕಾಶವನ್ನು ನೀಡಲಾಗಿತ್ತುಬಿಬಿಸಿ ಹೇಳುವ ಪ್ರಕಾರ ಮೊದಲ ದಿನದ ಸುಂದರ ಕಾರ್ಯಕ್ರಮವನ್ನು ನೋಡಿದ ಜನರ ಸಂಖ್ಯೆ 26.9 ಮಿಲಿಯನ್. ಅದೇ 1992 ಬಾರ್ಸಿಲೋನಾ ಗೇಮ್ಸ್ನ ಓಪನಿಂಗ್ ಕಾರ್ಯಕ್ರಮಕ್ಕೆ ಸೇರಿದವರು 11.3 ಮಿಲಿಯನ್ ಜನರು. ದಿ ಯುಕೆ ಪಬ್ಲಿಕ್ ಬ್ರಾಡ್ಕ್ಯಾಸ್ಟರ್ನ ಪ್ರಕಾರ, 2004 ಅಥೆನ್ಸ್ ಹಾಗೂ 2008 ಬೀಜಿಂಗ್ ಓಪನಿಂಗ್ ಸೆರಮನಿಗೆ ಕ್ರಮವಾಗಿ 8.7 ಮಿಲಿಯನ್ ಹಾಗೂ 5.1 ಮಿಲಿಯನ್ ಜನರು ಸೇರಿದ್ದರು. ನಮ್ಮ ದೇಶದಲ್ಲಿ ಇಷ್ಟೊಂದು ಜನರು ಒಲಂಪಿಕ್ನ ಆರಂಭದಲ್ಲಿ ಸೇರುವುದು ತುಂಬಾ ಕಷ್ಟಸಾಧ್ಯ. ಸುಮಾರು 77 ದೇಶಗಳಲ್ಲಿ ಒಲಂಪಿಕ್ ಕ್ರೀಡೆಗಳು ಆಯಾ ದೇಶಗಳ ಟೀವಿಗಳಲ್ಲಿ ಪ್ರಸಾರವಾಗಿದ್ದವು. ಸುಮಾರು 80ಕ್ಕೂ ಹೆಚ್ಚು ವಾಹಿನಿಗಳು ಬಿಲಿಯನ್ಗಟ್ಟಲೇ ಇರುವ ಕ್ರೀಡಾ ಅಭಿಮಾನಿಗಳಿಗೆ ನೇರ ಪ್ರಸಾರವನ್ನು ಮಾಡಿದ್ದವುನಮ್ಮ ದೇಶದಲ್ಲಿ ಒಲಂಪಿಕ್ ಶುಭಾರಂಭದಲ್ಲಿ ಕಂಡ ಮಧುರಾ ಹನಿ ಎಂಬ ಕನ್ನಡದ ಹುಡುಗಿ ಇಡೀ ದೇಶಕ್ಕೆ ಆರಂಭದಲ್ಲಿ ಪ್ರಶ್ನಾರ್ಥಕವಾಗಿ ಕಂಡು  ದೊಡ್ಡ ಮಟ್ಟದ ಚರ್ಚೆ ಗೆ ಗ್ರಾಸವಾಗಿದ್ದಳು. ನಮ್ಮ ಭಾರತೀಯ ಸುದ್ದಿ ವಾಹಿನಿಗಳಿಗೆ ಮಧುರಾ ಒಂದು ಸುದ್ದಿಯ ಸಂಕೇತವಾಗಿ ಕಂಡಿತೇ ವಿನಃ ಭಾರತೀಯ ಸಂಗೀತ ಸಂಸ್ಕೃತಿಯನ್ನು ಕಾರ್ಯಕ್ರಮದ ಮೂಲಕ ನೀಡಿದ ಎಆರ್ ರೆಹಮಾನ್ನ ಕಾರ್ಯಕ್ರಮ ಕೇವಲ ನೇಪಥ್ಯಕ್ಕೆ ಸರಿಯಿತು.
ಒಟ್ಟಾರೆಯಾಗಿ ಬಾರಿಯ ಒಲಂಪಿಕ್ ಪ್ರಸಾರದ ಹಕ್ಕು ಪಡೆದಿದ್ದ ಈಎಸ್ಪಿಎನ್ ಸ್ಟಾರ್ ಸ್ಪೋರ್ಟ್ಸ್ , ಡಿಡಿ ವಾಹಿನಿಗಳಿಗೆ ಭಾರತದಲ್ಲಿ ಹೆಚ್ಚಿನ ಲಾಭವಾದಂತೆ ಕಾಣಲಿಲ್ಲ. ಅದೇ ಅಮೆರಿಕ, ಆಸ್ಟ್ರೇಲಿಯಾ, ಚೀನಾ, ರಷ್ಯಾದಂತಹ ಅತಿ ಹೆಚ್ಚು ಪದಕಗಳನ್ನು ಪಡೆದಂತಹ ರಾಷ್ಟ್ರಗಳು ಒಲಂಪಿಕ್ನ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿದ್ದವು. ಹಾಗಾಗಿಯೇ ಅಲ್ಲಿಯ ಜನರು ಎಲ್ಲ ಕ್ರೀಡೆಗಳಲ್ಲಿ ತಮ್ಮ ದೇಶ ಪ್ರತಿಸ್ಪ ರ್ಧಿಸುತ್ತಿದೆ ಅಂತ ಸಂತಸದಿಂದ ನೋಡಿದರು. ಪದಕಗಳನ್ನು ಗೆದ್ದ ರಾಷ್ಟ್ರದ ಜನರಲ್ಲಿದ್ದ ಹುಮ್ಮಸ್ಸು ನಮ್ಮ ಜನರಲ್ಲಿ ಕಾಣಲಿಲ್ಲ. ಇದರ ಹೊರತಾಗಿ ಕೆಳಗಿನ ಗ್ರಾಫ್ ಮೂಲಕ ಟೀವಿ ವೀಕ್ಷಕರ ಸಂಖ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಹೋಗಿದೆ. ಉದಾಹರಣೆಗೆ 1996 ಅಟ್ಲಾಂಟಾ ಒಲಂಪಿಕ್ (3.20 ಬಿಲಿಯನ್), 2000 ಸಿಡ್ನಿ ಒಲಂಪಿಕ್ (3.60 ಬಿಲಿಯನ್), 2004 ಅಥೆನ್ಸ್ ಒಲಂಪಿಕ್ (3.90 ಬಿಲಿಯನ್), 2008 ಬೀಜಿಂಗ್ ಒಲಂಪಿಕ್ (4.70 ಬಿಲಿಯನ್), ಬಾರಿಯ ಲಂಡನ್ ಒಲಂಪಿಕ್ (4.80 ಬಿಲಿಯನ್). ಟೀವಿ ವೀಕ್ಷಣೆಯಲ್ಲಿ ತಂತ್ರಜ್ಞಾನದ ಅಳವಡಿಕೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಸಾಗುತ್ತಿದೆ. ಇದರಿಂದ ಹೆಚ್ಚೆಚ್ಚು ವೀಕ್ಷಕರ ಸಂಖ್ಯೆಯನ್ನು ಬೇರೆ ಬೇರೆ ವಾಹಿನಿಗಳು ಪಡೆಯುತ್ತಿವೆ. ನಮ್ಮಲ್ಲಿ ಕ್ರಿಕೆಟ್ ಪ್ರಸಾರದಿಂದ ಸಿಗುತ್ತಿರುವ ಆದಾಯ ಬೇರೆ ಕ್ರೀಡೆಗಳಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಾಯೋಜಕರ ಕೊರತೆಯನ್ನು ಅನೇಕ ಭಾರತೀಯ ಕ್ರೀಡೆಗಳು ಅನುಭವಿಸುತ್ತಿದೆ. ಹಾಕಿಯಂತಹ ದೊಡ್ಡ ಉದಾಹರಣೆ ಇನ್ನೊಂದಿಲ್ಲ

No comments:

Post a Comment