ನೋವಿನ ಬುತ್ತಿ ಉಂಡವನಿಗೆ
ಸುಖದ ಹಸಿವು ಎಂದು ಕಾಣದು..
ಕಾಣದ ಜಗತ್ತಿನ ಹುಡುಕಾಟದಲಿ
ಇರುವ ಒಡಲಿನ ಬೆಳಕು ಎಂದು ಕಾಣದು..
ಜಗತ್ತಿನ ಉದ್ದಗಲದ ಹೊಸ್ತಿಲನು ಕಂಡವರ್ಯಾರು?
ಕಂಡಿದ್ದರೂ ಅದರ ವಿಸ್ತೀರ್ಣದ ಪರಿ ಕಾಣದು..
ಬೆಟ್ಟದಷ್ಟು ಪ್ರೀತಿ, ಸಾಗರದಷ್ಟು ವಾತ್ಸಲ್ಯ,ಮಿತಿಯಿಲ್ಲ
ಹೋಲಿಕೆ ಮಾಡದಷ್ಟು ಇರುವ ಸ್ವತ್ತು
ಅನುಭವಿಸದವರಿಗೆ ಎಂದು ಕಾಣದು..