Monday 23 April 2012

ನಿಮ್ಮ ಬಾಸ್ ಸೈಕೋ ಥರಾನಾ...?

                              (ಮಾರ್ಚ ತಿಂಗಳ ಸುಧಾ ವಾರಪತ್ರಿಕೆಯಲ್ಲಿ  ಪ್ರಕಟವಾಗಿದ್ದ  ನನ್ನ ಲೇಖನ )


ನಿಮ್ಮ ಬಾಸ್ ಸೈಕೋ ಥರ ಆಡುತ್ತಾನೆ ಅನ್ನುವುದನ್ನು ನೀವು ಗಮನಿಸಿದ್ದೀರಾ..? ಹೇಗಿರುತ್ತಾರೆ ಥರ ಆಡುವವರು..!  ಹಾಗೇ ಮಾಡಲು ಕಾರಣಗಳೇನು, ಅವನಿಗೆ ನಿಮ್ಮ ಮೇಲೆ ಸಿಟ್ಟೇ. ಸಿಟ್ಟಿನ ಹಿಂದೆ ವೈಜ್ಞಾನಿಕ ಕಾರಣಗಳೇನು? ಇದಕ್ಕೆ ವೈದ್ಯರು ಏನು ಹೇಳುತ್ತಾರೆ. ಎಮ್ಎನ್ಸಿ ಕಂಪನಿಗಳ ದೊಡ್ಡ ಹುದ್ದೆಯಲ್ಲಿರುವ ಛೇರ್ಮನ್ಗಳು, ಸಿಇಓ, ಎಂಡಿಗಳು, ಜನಪ್ರಿಯ ಪತ್ರಿಕೆಗಳ/ಟಿವಿ ಚಾನೆಲ್ಗಳ ಸಂಪಾದಕರು ಇವರಿಗೆಲ್ಲಾ ` ಕಾರ್ಪೋರೇಟ್ ಸೈಕೋಪಾತ್' ಎಂಬ ದೊಡ್ಡ ಖಾಯಿಲೆ...! ಇದನ್ನ ``criminals without a crime’ ಅಂತಲೂ ಕರೆಯುತ್ತಾರೆ. ಅಚ್ಚರಿಯ ಸಂಗತಿಯೆಂದರೆ ರೋಗಕ್ಕೆ ಬಲಿಯಾಗುವರಲ್ಲಿ ಹೆಂಗಸರೇ ಹೆಚ್ಚಿನವರು. ತರಹದ ಹೆಂಗಸಿನ ಕೈ ಕೆಳಗೆ ಕೆಲಸ ಮಾಡುವ ಸುಂದರ ಹುಡುಗ ಆಕೆಗೆ ಯಾವ ರೀತಿ `ಸೇವೆ' ಮಾಡಬಹುದು, ಇಲ್ಲವೇ ಅವಳಿಗಿಂತ ಸುಂದರವಾದ ಹುಡುಗಿಗೆ ಯಾವ ರೀತಿ ಈಕೆ ಕಾಡಬಹುದು. ಸೈಕೋಪಾತ್ ಬಲೆಗೆ ಬಿದ್ದವರ ಕಥೆಯೇನು ? ಅವರು ಹಾಗೆಯೇ ಸಾಯುತ್ತಾರೆಯೇ...! ಪಾರಾಗಲು ಕಾರಣಗಳಾದರೂ ಏನಿರಬಹುದು. ಏನಿದು ಸೈಕೋಪಾತ್...? ಏನಿದರ ಒಳವರ್ಮ?


                        ಆಫೀಸಿನಿಂದ ಲೇಟಾಗಿ ಮನೆಗೆ ಬಂದ ರೂಪಕಲಾ, ಹಾಕಿದ್ದ ಬ್ಯಾಗನ್ನು ಎಸೆದು ರಪ್ಪನೇ ತನ್ನ ಬೆಡ್ರೂಂನ ಬಾಗಿಲನ್ನು   ಹಾಕಿಕೊಂಡು ಒಬ್ಬಳೇ ಅಳತೊಡಗಿದಳು. ಅಮ್ಮ ಬಂದು ಕಾರಣ ಕೇಳುತ್ತಾಳೆ. `ಅಮ್ಮಾ, ನಾಳೆಯಿಂದ ನಾನು ಆಫೀಸಿಗೆ ಹೋಗಲ್ಲ...ನೀ ಹೇಳ್ದಾಗೆ, ಮದುವೆ, ಸಂಸಾರ ಅಂತ ಅಂದುಕೊಂಡು ಆರಾಮ್ ಇದ್ದುಬಿಡ್ತೀನಿ... ಕೆಲಸದ ಸಹವಾಸ ಬೇಡ..ಅದೊಂಥರ ನರಕ...ಕೆಲಸ ಇಲ್ಲದೇ ಬೇಕಾದ್ರೂ ಹೇಗೋ ಇದ್ದು ಬಿಡ್ತೀನಿ...ಆದರೆ ಆಫೀಸಿಗೆ ಮಾತ್ರ ಹೋಗಲ್ಲ...!'

            ಸ್ನೇಹಿತ ಸುಧಾಕರ, ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಾಲೇಜು ದಿನಗಳಲ್ಲಿ ಸಿಗರೇಟು ಸೇದುವವರನ್ನು ರೂಮ್ಗೆ ಸೇರಿಸಿಕೊಳ್ಳದಿದ್ದ ಈತ, ಇಂದು ದಿನಕ್ಕೆ ಎರಡು ಪ್ಯಾಕ್ ಸಿಗರೇಟ್ ಸೇದುತ್ತಾನೆ. `ಯಾಕೋ, ಥರ ಚೇನ್ ಸ್ಮೋಕರ್ ಆಗಿದೀಯಾ' ಅಂತ ಕೇಳಿದ್ರೆ, `ಛೇ, ಏನ್ ಮಾಡೋದು ಕಣೋ...ನಮ್ ಬಾಸ್ ಒಳ್ಳೆ ತಿಕಲು ಥರ ಆಡ್ತಾನೆ... ಏನ್ ಮಾಡಿದ್ರೂ ಸೇರೊಲ್ಲ... ಹಗಲು ರಾತ್ರಿ ಸಿಕ್ಕಾಪಟ್ಟೆ ಟೆನ್ಷನ್ ಕೊಡ್ತಾನೆ. ಒಳ್ಳೆ ಸೈಕೋ ಥರ..! ನನಗಂತೂ ಸಾಕಾಗಿ ಹೋಗಿದೆ... ಕೆಲವೊಂದು ಸಲ ನಮ್ಮ ಊರಿಗೆ ಹೋಗಿ ಬೇಸಾಯ ಮಾಡ್ಕೊಂಡು ಇರೋಣ ಅಂತ ಅನಿಸುತ್ತೆ, ಏನ್ ಮಾಡೋದು...ನಮ್ ಹುಡುಗಿಗೆ ನಾ ಊರಿಗೆ ಹೋಗೋದು ಇಷ್ಟ ಇಲ್ಲ..! ಅವಳಿಗೋಸ್ಕರ ಅವನ ಮುಖ ನೋಡ್ಕೊಂಡ್ ಸುಮ್ಮನೇ ಇದೀನಿ, ಇಲ್ಲಾಂದ್ರೇ...'

ತರಹದ ಅನೇಕ ಉದಾಹರಣೆಗಳು ನಿಮ್ಮ ಸುತ್ತಮುತ್ತಲೂ, ಸ್ನೇಹಿತರ ಮಾತುಕತೆಗಳಲ್ಲಿ ಸಿಗುವುದು ಸಾಮಾನ್ಯ. ಇಂದು ಕೇವಲ ಬೆಂಗಳೂರಿನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಮಹಾನಗರಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಖಾಸಗಿ ಕಂಪನಿಗಳಿವೆ. ಇದರ ಜೊತೆಗೆ ನೂರಕ್ಕೂ ಹೆಚ್ಚು ಸರ್ಕಾರಿ ಕಚೇರಿಗಳಿರಬಹುದು. 300ಕ್ಕೂ ಹೆಚ್ಚು ಕಾರ್ಪೋರೇಟ್ ಕಲ್ಚರ್ ಇರೋ ಕಂಪನಿಗಳ ಸ್ವರ್ಗ ಬೆಂಗಳೂರಿನದ್ದು. ಇದನ್ನೆಲ್ಲಾ ಲೆಕ್ಕ ಹಾಕಿ  ತೆಗೆದುಕೊಳ್ಳುವುದಾದರೆ `ಸೈಕೋಪಾತ್' ಪ್ರವೃತ್ತಿಯ ಬಾಸ್ಗಳ ಸಂಖ್ಯೆಯನ್ನು ವಿವರಿಸಿ ಹೇಳಬೇಕಾಗಿಲ್ಲ.. ಸಂಶೋಧನೆಯ ಪ್ರಕಾರ ಪ್ರತಿ 25 ಕಂಪನಿಗಳೊಂದರಂತೆ `ನಮ್ ಬಾಸ್ ಸೈಕೋ ಥರ' ಅಂತ ನೀವೆಲ್ಲಾ ನಿಮ್ಮ ಸ್ನೇಹಿತರಿಗೆ, ಅಪ್ಪ-ಅಮ್ಮನಿಗೆ ಹೇಳುವ ಲೆಕ್ಕಾಚಾರ ಇದೆ.

ನಿಮ್ ಬಾಸ್ ಥರಾನಾ...?




 ನಿಮಗೆ ಅನಿಸಿದಂತೆ, ನಿಮ್ಮ ಬಾಸ್ ಸೈಕೋ ಥರ ವರ್ತಿಸುತ್ತಿದ್ದಾರೆಯೇ..? ಅಕಸ್ಮಾತ್ ನಿಮ್ಮ ಉತ್ತರ `ಹೌದು' ಆಗಿದ್ದರೆ, ನಿಮ್ ಬಾಸ್ ಆಫೀಸಿನಲ್ಲಿ ಥರ ಇದ್ದೇ ಇರುತ್ತಾರೆ.
ಮೂರೊತ್ತು ಮುಖ ಗಂಟು ಹಾಕಿಕೊಂಡಿರಬಹುದು. ಆಗಾಗ ನಿಮ್ಮನ್ನು ನೋಡಿ ಹಲ್ಲುಕಿರಿಯಬಹುದು. ಎಲ್ಲರೂ ಇದ್ದಾಗಲೇ ನಿಮ್ಮನ್ನು ಟಾರ್ಗೆಟ್ ಮಾಡಿ ಕೆಟ್ಟ ಮಾತುಗಳಿಂದ ಬಯ್ಯುವುದು. ಪ್ರತಿ 5 ನಿಮಿಷಕ್ಕೆ ಮಾತನ್ನು ಚೆಂಜ್ ಮಾಡಿ, ನಾನು ಹಾಗೇ ಹೇಳೇ ಇಲ್ಲ ಅಂತ ವಾದಿಸುವುದು. ಕ್ಯಾಬೀನ್ಗೆ ಕರೆಸಿ ಬೇರೆಯವರ ಜೊತೆ ನಿಮ್ಮನ್ನು ಅಂಡರ್ಎಸ್ಟಿಮೇಟ್ ಮಾಡೋದು... ಸಿನ್ಸಿಯರ್ ಆಗಿ ಕೆಲಸ ಮಾಡಿದ್ರೂ ಸಹ, ` ಥರ ಮಾಡೋದಾ ಕತ್ತೆ?' ಅಂತ ಬಯ್ಯೋದು. ಪ್ರತಿ ಐದೈದು ನಿಮಿಷಕ್ಕೆ ಪ್ಲೇಟ್ ಚೇಂಜ್ ಮಾಡಿ ಮಾತಾಡೋದು... ನಿಮ್ಮನ್ನು ಹೊಗಳಿ ಅಟ್ಟಕ್ಕೆ ಏರಿಸಿ ನೀವು ಜಾಗ ಖಾಲಿ ಮಾಡಿದಾಗ ನಿಮ್ಮ ಬಗ್ಗೆ ಬಯ್ಯೋದು. ನಿಮ್ ನಿಮ್ಮಲ್ಲೇ ಜಗಳ ತಂದು ಖುಷಿ ಪಡೋದು... ಯಾವಗಾದ್ರೂ ನಿಮ್ಮ ಮೇಲೆ ದೈಹಿಕವಾಗಿ ಅಟ್ಯಾಕ್ ಮಾಡಿ, ಮತ್ತೇ ಐದು ನಿಮಿಷಕ್ಕೇ ಸಾರಿ ಅಂತ ಕೇಳೋದು. ಥರ  ಇಲ್ಲವೇ ಇನ್ನು ಅನೇಕ ಗುಣ, ನಡತೆಗಳಿರೋ ಬಾಸ್ಗಳು ಖಂಡಿತ ನಿಮಗೆ ಇದ್ದೇ ಇರುತ್ತಾರೆ. ಅವರ ಜೊತೆ ಖಂಡಿತ ಕೆಲಸ ಮಾಡಿದವರು, ಪ್ರತಿ 25 ಉದ್ಯೋಗಿಗಳಲ್ಲಿ ಒಬ್ಬರಿಗಾದರೂ ಸಿಕ್ಕೆ ಸಿಕ್ಕಿರುತ್ತಾರೆ. ನಿಮಗೂ ಥರ ಅನುಭವ ಖಂಡಿತ ಆಗಿಯೇ ಆಗಿರುತ್ತೆ. ಸಂಶೋಧನೆಯ ಪ್ರಕಾರ ಥರ ಸೈಕೋಪಾತ್ ಗುಣ ಸಾಮಾನ್ಯ ಜನರಿಗಿಂತ ಕಾಪರ್ೋರೇಟ್ ಜಗತ್ತಿನ ಜನರಲ್ಲಿ ಹೆಚ್ಚ್ಚಿರುತ್ತೆ. ನೂರರಲ್ಲಿ ಶೇ. 0.5 ರಷ್ಟು ಜನ ಅವರಂತೆ ಇವರೂ ರೋಗಕ್ಕೆ ಬಲಿಯಾಗಬಹುದು, ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳಬಹುದು.

ಕಾರಣವೇನಿರಬಹುದು?

ಸಾಮಾನ್ಯವಾಗಿ ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಹೆಚ್ಚಿನವರು ಅನೇಕ ಕಂಪನಿಗಳಲ್ಲಿ ಶೇರುದಾರರಾಗಿರುತ್ತಾರೆ, ಇಲ್ಲವೇ ತಾವೇ ಸ್ವಂತ ಕಂಪನಿ ನಡೆಸುತ್ತಿರುತ್ತಾರೆ. ಇಂತಹ ಸಮಯದಲ್ಲಿ ಕಂಪನಿಯ ಏರುಪೇರುಗಳು, ಲಾಭ ನಷ್ಟಗಳು ಕೆಲವೊಮ್ಮೆ ಮಾನಸಿಕ ಗೊಂದಲಕ್ಕೆ ಈಡು ಮಾಡುತ್ತವೆ. ನಷ್ಟದ ಒತ್ತಡ ಹೆಚ್ಚಾದಾಗ ಕಂಪನಿ ಮ್ಯಾನೇಜ್ಮೆಂಟ್ ಮೇಲೆ ಹೆಚ್ಚಿನ ಒತ್ತಡ ಹೇರಬಹುದು. ಒತ್ತಡದ ಪ್ರಭಾವ ಕಂಪನಿಯ ಉದ್ಯೋಗಿಗಳ ಮೇಲೆ ತರಹದ ನಡತೆಗೆ ಎಡೆ ಮಾಡಿಕೊಡಬಹುದು. ಇದು ಒಂದು ಕಾರಣವಾದರೆ ಸಾಮಾನ್ಯವಾಗಿ ಮನೆಯಲ್ಲಿನ ಸಾಂಸಾರಿಕ ಸಮಸ್ಯೆಗಳು, ಅತಿಯಾದ ಕೆಲಸದ ಒತ್ತಡ, ಡಿವೋರ್ಸ್, ಜಗಳ, ಲೈಂಗಿಕ ಸಮಸ್ಯೆಗಳು, ಮಕ್ಕಳಾಗದಿರುವುದು, ಹೆತ್ತ ಮಕ್ಕಳು ಮಾತು ಕೇಳದಿರುವುದು. ಆರೋಗ್ಯದ ಸಮಸ್ಯೆಗಳು, ಮಾನಸಿಕ ಖಿನ್ನತೆ, ಜೀವನದಲ್ಲಿ ಮರೆಯಲಾಗದ ಘಟನೆ ಸಂಭವಿಸುವುದು, ತನಗಿಂತ ಕೆಳಗಿನವನು ಬೇಗ ಬೆಳೆದುಬಿಡುತ್ತಾನೆ ಎನ್ನುವ ನೋವಿರಬಹುದು, ಜೀವನದಲ್ಲಿ ಸೋಲಿನ ರುಚಿ ಜಾಸ್ತಿ ಉಂಡಿರಬಹುದು. ಸ್ಪರ್ಧಾತ್ಮಕ ಯುಗ, ಎಲ್ಲಿ ನನ್ನ ತಟ್ಟೆಗೆ ಕಲ್ಲುಬೀಳುತ್ತೋ ಎನ್ನುವ ಭಯ. ಇನ್ನು ಅನೇಕ ಕಾರಣಗಳು `ಸೈಕೋಪಾತ್ ನಡತೆ'ಗೆ ಕಾರಣವಾಗಬಹುದು.


ಸೈಕೋಪಾತ್ ಅಂದರೆ ಏನು?
ಸೈಕೋಪಾತ್ ಎನ್ನುವ ಮಾನಸಿಕ ರೋಗ ವೈದ್ಯಕೀಯ ಜಗತ್ತಿಗೆ ಪರಿಚಯವಾಗಿ ಸುಮಾರು 200 ವರ್ಷಗಳೇ ಆದವು.  1800ರಲ್ಲಿ ಜರ್ಮನ್ ದೇಶದ ವೈದ್ಯ ತನ್ನ ಕ್ಲಿನಿಕ್ಗೆ ಬಂದ ನೂರಾರು ಮಾನಸಿಕ ರೋಗಿಗಳನ್ನು ಅಧ್ಯಯನ ಮಾಡಿ ಮಾನಸಿಕ ರೋಗಕ್ಕೆ `ಸೈಕೋಪಾತ್' ಅಂತ ಹೆಸರಿಟ್ಟ. ಇದೊಂಥರ `ಹುಚ್ಚುತನವಿಲ್ಲದ ಮತಿಭ್ರಮೆ', `ಮಾನಸಿಕ ಅಸ್ಥಿರತೆ' ಇದ್ದಹಾಗೆ. ಇದಕ್ಕೆ ಕಾರಣಗಳು ಬಹಳ. ಸೈಕೋಪಾತ್ ರೋಗದ ಬಗ್ಗೆ ರೀತಿ ಉಲ್ಲೇಖ ಇದೆ
`They does not see others around her/him as people, but only as targets and opportunities. Instead of friends, they have victims and accomplices who end up as victims and, in corporate environment,. ಸಾಮಾನ್ಯವಾಗಿ ಸ್ವಭಾವದ ವ್ಯಕ್ತಿಗಳು ತಮ್ಮ ಜೊತೆ ಹಾಗೂ ಕೈಕೆಳಗೆ ಕೆಲಸ ಮಾಡುವವರನ್ನು ಮನುಷ್ಯರಂತೆ ಪರಿಗಣಿಸುವುದೇ ಇಲ್ಲ. ಅವರ ಪ್ರಕಾರ ತನ್ನನ್ನು ಬಿಟ್ಟು ಉಳಿದವರೆಲ್ಲರೂ ಪ್ರಾಣಿಗಳ ಸಮಾನ. ತಾವು ಮಾಡಿದ್ದೇ ಸರಿ, ಉಳಿದವರೆಲ್ಲರೂ ಮಾಡಿದ್ದು ತಪ್ಪು, ಮಾನಸಿಕ ಸ್ಥಿಮಿತ ಕಳೆದುಕೊಂಡು ಉಳಿದವರ ಮೇಲೆ ದಬರ್ಾರ್ ಮಾಡುವುದು ಸೈಕೋಪಾತ್ ಸ್ವಭಾವದವರು ಇದೇ ರೀತಿಯಲ್ಲಿ ವರ್ತಿಸುತ್ತಾರೆ ಅಂತ ಹೇಳಕ್ಕಾಗಲ್ಲ. ಒಂದೊಂದು ಕಾರ್ಪೋರೇಟ್ ವಾತಾವರಣದಲ್ಲಿ ಥರದ ಸ್ವಭಾವದವರು ಹುಟ್ಟಿಕೊಳ್ಳುತ್ತಾರೆ.


ಕಾರ್ಪೋರೇಟ್ ಸೈಕೋಪಾತ್!


ಇಂದು ಎಮ್ಎನ್ಸಿ ಕಲ್ಚರ್ ಇರುವಂತಹ ಕಂಪನಿಗಳಲ್ಲಿ ಕೆಲಸ ಮಾಡುವ ಬಹಳಷ್ಟು ಉದ್ಯೋಗಿಗಳು ಒಂದೇ ವರ್ಷದಲ್ಲಿ 3-4 ಕಂಪನಿಗಳನ್ನು ಛೇಂಜ್ ಮಾಡುತ್ತಲೇ ಇರುತ್ತಾರೆ. ಹೀಗೆ ಮಂಗನಂತೆ ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹಾರಲು ಮುಖ್ಯವಾಗಿ ಎರಡು ಕಾರಣಗಳು. ಮೊದಲನೆಯದು ಸಂಬಳದ ವಿಷಯವಾದರೆ, ಎರಡನೆಯದು ಅವರಿಗೆ ಸಿಕ್ಕಿರುವ ಬಾಸ್ಗಳ ಕಥೆ ಮಾತ್ರ ಥರ...! ಕಾರ್ಪೋರೇಟ್ ಸೈಕೋಪಾತನ್ನು ಇನ್ನೊಂದು ರೀತಿಯಲ್ಲಿ ``criminals without a crime' ಅಂತಲೂ ಹೇಳಬಹುದುಸೈಕೋಪಾತ್ ಮಾನಸಿಕ ಖಾಯಿಲೆಯ ಬಗ್ಗೆ ಪ್ರೋ.ಹಾರೆ ಹೇಳುವಂತೆ `Corporate psychopaths tend to be manipulative, arrogant, callous, impatient, impulsive, unreliable and prone to fly into rages”   ಇನ್ನೊಂದು ಆಶ್ಚರ್ಯಕರ ಸಂಗತಿಯೆಂದರೆ ಕಾರ್ಪೋರೇಟ್ ಸೈಕೋಪಾತ್ ಮಾನಸಿಕ ಖಾಯಿಲೆ ಹೊಂದಿರುವವರಲ್ಲಿ ಗಂಡಸರಿಗಿಂತ ಮಹಿಳೆಯರೇ ಜಾಸ್ತಿ. ಸಾಮಾನ್ಯವಾಗಿ ಮಹಿಳೆಯರು ಉತ್ತಮ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಸಂದರ್ಭದಲ್ಲಿ `ಸೈಕೋಪಾತ್ ಗುಣದ ಹೆಂಗಸರು, ಗಂಡಸರ ಮೇಲೆ ದಬ್ಬಾಳಿಕೆ ಮಾಡಬಹುದು, ಇಲ್ಲವೇ ಆತನನ್ನು ಗುಲಾಮನ ಥರ ನಡೆಸಿಕೊಳ್ಳಲೂಬಹುದು. ರಾತ್ರಿ ಕಂಪನಿ ಕೊಡು ಅಂತ ಪೀಡಿಸಬಹುದು. ಕೆಲವೊಂದು ಸಲ ಅದು ಮಹಿಳೆಯರ ಮೇಲೂ ಕೂಡ ಆಗಬಹುದು. ಬಿಪಿಓ ಅಥವಾ ಕಾಲ್ಸೆಂಟರ್ಗಳಲ್ಲಿ ಕೆಲಸ ಮಾಡುವವರಿಗೆ ಇದರ ಅನುಭವ ಜಾಸ್ತೀನೆ ಅಂತ ಹೇಳಬಹುದು. ಕೆಲವು  ಬಾಸ್ಗಳು `ಗೇ ಅಥವಾ ಲೇಸ್ಬಿಯನ್' ಆಗಿದ್ದರಂತೂ ಕೆಳಗಿನವರ ಪಾಡಂತೂ ದೇವರೇ ಬಲ್ಲ! ಸಾಮಾನ್ಯವಾಗಿ ಕಾರ್ಪೋರೇಟ್ ವಲಯದಲ್ಲಿ ಹುಡುಗಿಯರು ಅತಿ ಕಡಿಮೆ ಅವಧಿಯಲ್ಲೇ ಉಳಿದವರಿಗಿಂತ ಬೇಗ ಉತ್ತಮ ಹುದ್ದೆಗೆ ಏರಬೇಕು ಎನ್ನುವ ಆಸೆಯ ಭರದಲ್ಲಿ ಥರಹದ ಬಾಸ್ಗಳ ಜೊತೆ ಬೇಗ `ಅಡ್ಜಸ್ಟ್' ಆಗಿ ಬಿಡುತ್ತಾರೆ. ಕೆಲವೊಂದು ಸಲ ಅದು ಒಳ್ಳೆಯದಾಗಬಹುದು, ಇಲ್ಲವೇ ` ಆಮ್ ಯುಸ್ಡ್' ಅನ್ನುವ ಗಿಲ್ಟ್ ಕಾಡಲೂಬಹುದು.



ನಿಮಗೆ ಗೊತ್ತಿರಲಿ, ಕೆಳಕಂಡ ಲಕ್ಷಣಗಳು ಹಾಗೂ ಸ್ವಭಾವ ಇರುವವರನ್ನು ಗುಂಪಿಗೆ ಸೇರಿಸಬಹುದು.

1.         ದಯಾದಾಕ್ಷಿಣ್ಯವಿಲ್ಲದ ಕ್ರೂರ ವರ್ತನೆ
2.         ಸದಾ ಸುಳ್ಳು ಹೇಳುವ ರೋಗ
3.         ಕಪಟ ಬುದ್ಧಿವಂತಿಕೆ, ದುರ್ಬುದ್ಧಿಯ ಅತಿರೇಕ
4.         ಕಂಡರೂ ಕಾಣದ ಹಾಗೆ ಇರುವುದು
5.         ಸಂಕೀರ್ಣ, ಅಭೇದ ರೀತಿಯಲ್ಲಿ ಲೈಂಗಿಕತೆ/ಸಂಭೋಗವನ್ನ ನಡೆಸುವುದು
6.         ಪಶ್ಚಾತ್ತಾಪದ ಕೊರತೆ\ತಪ್ಪಿನ ಅರಿವು ಇಲ್ಲದಿರುವುದು
7.         ಸಮಾಜಕ್ಕೆ ವಿರುದ್ಧವಾದ ಜೀವನವನ್ನು ನಡೆಸುವುದು
8.         ನಾಚಿಕೆ, ಮುಜುಗರ ಇಲ್ಲದ ಸ್ವಭಾವ
9.         ಮಾಡಿದ್ದು ಸರಿ ಇದ್ದರೂ, ಅದು ತಪ್ಪು ಅಂತ ವಾದಿಸುವುದು
10.       ಅಸ್ವಾಭಾವಿಕ, ಕೃತಕವಲ್ಲದ ಅಭಿವ್ಯಕ್ತಿಯ ತೋರ್ಪಡಿಕೆ
11.       ಅಧಿಕಾರದ ಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವುದು
12.       ದೈಹಿಕ ಹಿಂಸೆಯಲ್ಲಿ ಸುಖಪಡುವ ಚಟ
13.       ಸ್ವಂತಿಕೆ ಇಲ್ಲದ ಜೀವನ ಶೈಲಿ
14.       ಬೇರೆಯವರ ಮೇಲೆ ಸದಾ ಕಣ್ಣು, ಎಲ್ಲಿ ನನಗಿಂತ ಬೇಗ ಬೆಳೆದು ಬಿಡುತ್ತಾನೋ ಎನ್ನುವ ಭೀತಿ, ಇನ್ನು ಹಲವು...

ಪರಿಹಾರವೇನು?


ಸೈಕೋಪಾತ್ನ ಮಾನಸಿಕ ಖಾಯಿಲೆಯಿಂದ ದೂರ ಇರಲು ಮುಖ್ಯವಾಗಿ ನಾವು ಬೆಳೆಯುವ ವಾತಾವರಣ ಆರೋಗ್ಯಕರವಾಗಿರಬೇಕು. ನಮ್ಮ ಬಾಲ್ಯ ಅತ್ಯಂತ ಸಂತೋಷದಿಂದ ಕೂಡಿರಬೇಕು. ಪಾಲಕರು ಮಕ್ಕಳಿಗೆ ಆಗುವ ಮಾನಸಿಕ ಖಿನ್ನತೆಯಿಂದ ದೂರವಿಡಬೇಕು. ಅತಿಯಾದ ರಿಸ್ಟ್ರಿಕ್ಷನ್/ನಿರ್ಬಂಧ, ಹೀಗೆ ಇರಬೇಕು ಎನ್ನುವ ಕಟ್ಟುಪಾಡುಗಳನ್ನು ಹೇರಬಾರದು. ಆಟ, ಪಾಠ, ಊಟ ಎಲ್ಲವೂ ಸಮಸ್ಥಾನದಲ್ಲಿರಬೇಕು. ಅತಿಯಾದ ನಿದ್ದೆಗೆಡುವಿಕೆ ಕೂಡ ಒಳ್ಳೆಯದಲ್ಲ. ಹಾರ್ಡವರ್ಕಗಿಂತ  ಸ್ಮಾರ್ಟ್ ವರ್ಕ್ ಜಾಸ್ತಿ ಮಹತ್ವ ಕೊಡಬೇಕು. ದಿನನಿತ್ಯ ಯೋಗ, ಪ್ರಾಣಾಯಾಮ ಮಾಡುವುದರಿಂದ ಮಾನಸಿಕ ಸ್ಥಿಮಿತವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು. ಯಾವುದೇ ಕಂಪನಿ ತಮ್ಮ ಮೇಲಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಮುಂಚೆ ಮೊದಲು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಮಾನಸಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಆತನನ್ನು ನೇಮಕ ಮಾಡಿಕೊಳ್ಳಬೇಕು. ಇಲ್ಲವಾದರೆ ಅವನ ಕೆಳಗೆ ಕೆಲಸ ಮಾಡುವ ನೂರಾರು ಉದ್ಯೋಗಿಗಳ ಮಾನಸಿಕ ಆರೋಗ್ಯ ಸರಿ ಇರುವುದಿಲ್ಲ.



ಸಾಮಾನ್ಯರಿಗೂ ಇರುತ್ತದೆ ರೋಗ



ಇದು ಕೇವಲ ಕಾರ್ಪೋರೇಟ್ ವಲಯದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಇರುತ್ತೆ ಅಂತ ಹೇಳಲಾಗದು. ಇದು ನಮ್ಮ ಸಮಾಜದಲ್ಲಿ ಎಲ್ಲೆಡೆ ಕಾಣಸಿಗುವ ಪಿಡುಗು. ಇದನ್ನು ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಬರೆಯುವಾಗ, ಹೇಳುವಾಗ `ಶೋಷಣೆ' ಇಲ್ಲವೇ ಹೆರ್ಯಾಜ್ಮೆಂಟ್ ಅಂತ ಕರೆಯುತ್ತಾರೆ. ಇದು ರೋಗದ ಒಂದು ಭಾಗವಷ್ಟೇ..! ಸರ್ಕಾರಿ  ಉನ್ನತ ಆಧಿಕಾರಿಗಳು, ಗೆಜೆಟೆಡ್ ಆಫೀಸರ್ಗಳು, ಐಎಎಸ್, ಕೆಎಎಸ್, ಪೊಲೀಸ್ ಆಫೀಸರ್ಸ್, ಶಿಕ್ಷಣತಜ್ಞರು, ಸಾಹಿತಿಗಳು, ಬುದ್ಧಿಜೀವಿಗಳು, ಫಿಲಂ ಸ್ಟಾರ್ಸ್, ಡೈರೆಕ್ಟರ್ಗಳು, ಡಾಕ್ಟರ್ಸ್, ಲೆಕ್ಚರ್ಗಳು, ರಾಜಕೀಯ ವ್ಯಕ್ತಿಗಳು ಇನ್ನು ಹಲವರಲ್ಲಿ `ಸೈಕೋಪಾತ್' ಅನ್ನುವ ರೋಗ ಇದ್ದೆ ಇರುತ್ತದೆ. ಸಾಮಾನ್ಯವಾಗಿ ಇದರ ಪ್ರಭಾವ ಅವರ ಹೆಂಡತಿ, ಮಕ್ಕಳು, ಆಫೀಸಿನಲ್ಲಿ ಕೆಲಸ ಮಾಡುವವರಿಗೆ ತಟ್ಟುತ್ತಲೇ ಇರುತ್ತದೆ. ನಾವು ಸಿನಿಮಾ, ರಾಜಕೀಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿರುವ ಪ್ರಸಿದ್ಧರನ್ನು  ಸಿಕ್ಕಾಪಟ್ಟೆ ಆರಾಧಿಸುತ್ತೇವೆ. ಆದರೆ ಇದರಲ್ಲಿ ಹೆಚ್ಚಿನವರಿಗೆ ರೋಗ ಇರುತ್ತೆ. ಇವರು ಕಾಣುವುದಕ್ಕೂ ಹಾಗೂ ಇರುವುದಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸ ಇರುತ್ತೆ. ಇದು ಕೆಲವರಲ್ಲಿ ರೋಗ ಶಿಶು ಗಾತ್ರದಲ್ಲಿ ಇದ್ದರೆ, ಕೆಲವರಲ್ಲಿ ರಾಕ್ಷಸನಂತೆ ಬೆಳೆದಿರುತ್ತಾನೆ. ನಮ್ಮಲ್ಲಿ ಇದು ರಾಕ್ಷಸನಂತೆ ಬೆಳೆದು ಬಿಟ್ಟರೆ, ಮನುಷ್ಯರು ಹುಳುಗಳಂತೆ ಕಾಣುತ್ತಾರೆ. ಸಿಕ್ಕವರನ್ನು ಅರಿವಿಗೆ ಗೊತ್ತಿಲ್ಲದಂತೆ ಕೊಲ್ಲುತ್ತಾ ಹೋಗುತ್ತದೆ. ಮಾಡಿದ ಅರಿವಿನ ಪಾಪಪ್ರಜ್ಞೆ ಮಾತ್ರ ಕಾಡುವುದಿಲ್ಲ. ಉಮೇಶ್ ರೆಡ್ಡಿ, ಮೊಹಿಂದರ್ ಪಂಥೇರ್ನಂತಹ ಸೈಕೋಗಳು ಒಂಟಿ ಹೆಂಗಸರು ಹಾಗೂ ಮಕ್ಕಳಿಗೆ ದುಸಃಪ್ನವಾಗಿದ್ದು ಕೆಟ್ಟ ಸತ್ಯ. ಥರ ಮನಸ್ಥಿತಿಯವರ ಮೇಲೆ ಅನೇಕ ಸಿನಿಮಾಗಳನ್ನು ಕೂಡ ಮಾಡಲಾಗಿದೆ. 1960ರಲ್ಲಿ ತೆರೆಕಂಡ ಹಿಚ್ಕಾಕ್ನ `ಸೈಕೋ' ಸಿನಿಮಾವನ್ನು ಒಮ್ಮೇ ನೋಡಿ.

ಸೈಕೋಪಾತ್ ಬಗ್ಗೆ ತಜ್ಞರು ಹೇಳುವುದು ಹೀಗೆ

ಶ್ರೀಶಾಂತಾರಾಮ್ ಆಚಾರ್ಯರು 

ಸೈಕೋಪಾತ್ ಎಂಬ ಮಾನಸಿಕ ಕಾಯಿಲೆಗೆ ಸಂಬಂಧಪಟ್ಟಂತೆ ಆಧ್ಯಾತ್ಮಿಕ ಹಾಗೂ ಯೋಗಸಾಧಕ ಶ್ರೀಶಾಂತಾರಾಮ್ ಆಚಾರ್ಯರು ಬೇರೊಂದು ರೀತಿಯಲ್ಲಿ ರೋಗವನ್ನು ವರ್ಣಿಸುತ್ತಾರೆ. `ಹುಟ್ಟಿನಿಂದಲೂ ಯಾರೂ ಸೈಕೋಪಾತ್ಗಳಾಗಿರುವುದಿಲ್ಲ. ಕೆಲವೊಂದು ಕುಟುಂಬಗಳಲ್ಲಿರುವ ಸಮಸ್ಯೆಗಳಿಂದಾಗಿ ಅಲ್ಲಿ ಹುಟ್ಟು ಬಂದಿರುವಂತಹ ವ್ಯಕ್ತಿ ಸೈಕೋಪಾತ್ ಆಗಿ ಬದಲಾಗುವ ಸಂಧರ್ಭಗಳು ಹೆಚ್ಚು. ಹಾಗಂತೇಳಿ ಎಲ್ಲಾ ಸೈಕೋಪಾತ್ಗಳ ಕುಟುಂಬದ ಹಿನ್ನಲೆಯಲ್ಲಿ ಸೈಕೋಪಾತ್ ರೇಡಿಯೇಷನ್ ಇದೆ ಅಂತ ಅರ್ಥವಲ್ಲ. ಎಲ್ಲಾ ಸೈಕೋಪಾತ್ಗಳು ಒಂದೇ ತರಹದ ಸೈಕೋಪಾತ್ಗಳಾಗಿರುವುದಿಲ್ಲ. ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿರುತ್ತದೆ. ಹಾಗೆಯೇ ಇಂತಹ ರೋಗಿಗಳನ್ನು ಟ್ರೀಟ್ ಮಾಡುವಂತಹ ಪರಿಯೂ ಕೂಡ ಅವರ ಸಮಸ್ಯೆಗೆ ತಕ್ಕಂತೆ ಬದಲಾಗಬೇಕಾಗಿದೆ. ಆದರೆ ಹಚ್ಚಿನ ಸೈಕೋಪಾತ್ಗಳು ಆತ್ಮಶಕ್ತಿಯ ಕೊರತೆಯಿಂದಾಗಿ ತರಹದ ಮನೋರೋಗದಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವರು ಕೆಲವೊಂದು ಘಟನೆಗಳಿಂದ, ಕೆಲವೊಂದು ವ್ಯಕ್ತಿಗಳ ಹಾವಭಾವದಿಂದ, ಕೆಲವು ವ್ಯಕ್ತಿಗಳ ಒತ್ತಡದಿಂದ, ಪರಿಸ್ಥಿತಿಯ ಒತ್ತಡಗಳಿಂದ ತರಹದ ಸಮಸ್ಯೆಗಳಿಗೆ ಕಾರಣರಾಗುತ್ತಾರೆ. ಮನುಷ್ಯನು ಭಾವನಾತ್ಮಕ ಜೀವಿಯಾಗಿರುವುದರಿಂದ ಹಲವು ಸಲ ಅವನ ಭಾವನೆಗಳಿಗೆ ಹೊಡೆತ ಬಿದ್ದಾಗ ತರಹದ ಸಮಸ್ಯೆಗಳಿಗೆ ಒಳಗಾಗಬಹುದು. ಹೀಗೆ ಬೇರೆ ಬೇರೆ ವಿಧಗಳಿಂದ ವ್ಯಕ್ತಿಯು ಸೈಕೋಪಾತ್ ಅನ್ನುವ ಮನೋವ್ಯಾಧಿಗೆ ಒಳಗಾಗಬಹುದು.


ಯೋಗಸಾಧನೆಯಲ್ಲಿ ಖಂಡಿತ ಪರಿಹಾರವಿದೆ



ಇಂತಹ ರೋಗಿಯು ಯೋಗದ ಕಡೆ ತನ್ನ ಒಲವನ್ನು ತೋರಿಸುವುದರ ಮೂಲಕ, ಸಂಗೀತ, ಚಿತ್ರಕಲೆ, ಉದ್ಯಾನವನಗಳಲ್ಲಿ ಸ್ವಚ್ಚಂದವಾಗಿ ವಿಹಾರ ಮಾಡುವುದರಿಂದ ಒಂದು ರೋಗಕ್ಕೆ ತುತ್ತಾಗದ ರೀತಿಯಲ್ಲಿ ತಪ್ಪಿಸಿಕೊಳ್ಳಬಹುದು. ಹಾಗೆಯೇ ಪ್ರಾರಂಭಿಕ ಹಂತದಲ್ಲಿರುವ  ಇಂತಹ ರೋಗಗಳಿಂದ ವಿಮುಖರಾಗಿ ಆನಂದಯುತ ಆರೋಗ್ಯಯುತ ಜೀವನವನ್ನು ನಡೆಸಲು ಸಾಧ್ಯವಾಗುವುದು.
ಪ್ರಪಂಚದಲ್ಲಿ ಸಮಸ್ಯೆ ಅನ್ನುವುದೇ ಇಲ್ಲ. ಸಮಸ್ಯೆ ಇದೆ ಎಂದರೆ ಅದು ಮನುಷ್ಯನ ಮನಸ್ಸಿನಲ್ಲಿ ಮಾತ್ರ. ಆದುದರಿಂದ ಒಂದು ಸತ್ಯವನ್ನು ತಿಳಿದ ವ್ಯಕ್ತಿ ಯಾವುದೇ ರೀತಿ ಸೈಕೋಪಾತ್ನಂತಹ ಅಥವಾ ಇನ್ನಾವುದೇ ಮನೋ ದೈಹಿಕ ರೋಗಗಳಿಗೆ ಸುಲಭವಾಗಿ ತುತ್ತಾಗವುದಿಲ್ಲ, ಆದರೆ ಅದಕ್ಕೆ ವಿರುದ್ಧವಾಗಿ ಅವನು ಮನೋ ದೈಹಿಕವಾಗಿ, ಧೈರ್ಯದಿಂದ, ಪ್ರೇಮದಿಂದ ಉಲ್ಲಾಸದಿಂದ, ಉತ್ಸಾಹದಿಂದ, ಆತ್ಮಸ್ಥೈರ್ಯದೊಂದಿಗೆ ಜೀವನ ನಡೆಸುವ ಕಲೆಯನ್ನು ಅರಿತಿರುವನು.
ಒಬ್ಬ ಸೈಕೋಪಾತ್ ತನ್ನನ್ನು ತಾನು ರೋಗದಿಂದ ಹೊರಬರಲು ಕಷ್ಟಸಾಧ್ಯವಾದಾಗ, ಅವನ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಅಥವಾ ಅವನಿರುವ ಯಾವುದೇ ಸ್ಥಳದಲ್ಲಿಯೂ ಕೂಡ ಇಂತಹ ಸಮಸ್ಯೆ ಉದ್ಭವವಾದಾಗ ಮತ್ತು ಅವನನ್ನು ಹತೋಟಿಗೆ ತರಲು ಅಸಾಧ್ಯವಾದಾಗ, ಅಲ್ಲಿರುವ ಯಾವುದೇ ಒಬ್ಬ ವ್ಯಕ್ತಿ ಮೊದಲಿಗೆ ಅವನ ಸ್ಥಿತಿಯನ್ನು  ಸಕಾರಾತ್ಮಕವಾಗಿ ಒಪ್ಪಿಕೊಂಡು ಇವನನ್ನು ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಪರಿವರ್ತಿಸಬಹುದು ಅನ್ನುವ ಆತ್ಮಶಕ್ತಿಯನ್ನು ನೀಡಿದ ಕ್ಷಣದಲ್ಲಿಯೇ ಅಂತಹ ಸಮಸ್ಯೆಯನ್ನು ಅರ್ಧ ಪರಿಹಾರ ಮಾಡಿದಂತಾಗುವುದು. ಇನ್ನುಳಿದ ಭಾಗದಲ್ಲಿ ಅವನ ವ್ಯಕ್ತಿಗತ ಕೌನ್ಸಲಿಂಗ್ನ ಮೂಲಕ ಅವನ ಸಮಸ್ಯೆಯ ಆಳವನ್ನು ಅರಿತು ಅದು ಏನು ದೊಡ್ಡ ಸಮಸ್ಯೆಯಲ್ಲ ಅನ್ನುವುದರ ಅರಿವು ಮೂಡಿಸಿದಾಗ ಅವನು ತನ್ನ ಆತ್ಮಶಕ್ತಿಯನ್ನು ಪುನಃ ಮೊದಲಿನಂತೆ ಆಗುವ ಸಾಧ್ಯತೆಗಳು ಹೆಚ್ಚಾಗಿರುವುದು.