ಬದುಕುವುದೇ ಬೇಡ ಅನಿಸಿಬಿಡುತ್ತೆ.
ಆಗಾಗ ಬರುವ ಈ ಯೋಚನೆ ಜೀವನ ಸಹಜ.
ನೂರೆಂಟು ನೋವುಗಳು ಒಂದೇಟಿನಲ್ಲಿ ಬಿದ್ದಾಗ
ಮನಸಿನ ಮನೆ ಒಡೆಯುವುದು ಖಚಿತ.
ಕಪ್ಪು ಮೋಡವೇ ಕಳಚಿ ಬಿದ್ದಾಗ
ನೆಚ್ಚಿನ ಮನೆ, ಕಲ್ಲಿನ ದೇಹ, ರಕ್ತ ಮಾಂಸದ
ಮಣ್ಣಿನ ಮುದ್ದೆಯು ಕರಗುವುದಿಲ್ಲವೇ? ಮರಗುವುದಿಲ್ಲವೇ!
ಅಳುವೆಂಬ ಗುಡುಗಿನ ಸದ್ದು, ನಗುವಿನ ಮಿಂಚು
ಬರಲೇಬೇಕು. ಜೀವನವ ಕಾಡಲೇಬೇಕು.
ಸುರಿವ ಈ ಮಳೆಯಲಿ ಮಿಯ್ಯಲೇಬೇಕು.
ಉಪ್ಪಿನ ನೀರನು ಕುಡಿದು, ಸಿಹಿ ನೀರಿನ
ಸಾಗರದಲಿ ನಾವು ಈಜಲೇಬೇಕು.
ಹುಟ್ಟಿದ ಋಣವ ನಾವು
ತೀರಿಸದೇ, ಇನ್ಯಾರು ತೀರಿಸುವರು?
ಬಡ್ಡಿ, ಚಕ್ರಬಡ್ಡಿ, ಸಾಲ ಎಲ್ಲವನ್ನು
ಚುಕ್ತ ಮಾಡಿಕೊಳ್ಳಲೇಬೇಕು.