Wednesday, 17 October 2012

ಮೌನದ ಮಳೆ

ಅವಳ ಮಾತು ಇನ್ನೂ ಕಿವಿಗಂಟಿದೆ.
ಜೋರಾಗಿ ಮಾತನಾಡಿದ್ದರೆ ಕಿವುಡನಾಗುತ್ತಿದ್ದನೇನೋ?
ಮನ ಪಕ್ಕದಲ್ಲಿ ಕೂತು, ಮನಸಿನ ಉಸಿರನು
ನನ್ನ ಕಿವಿಗೆ ಊದಿದ್ದಳು.
ಏನೋ ಪಿಸುಗುಟ್ಟಿದ್ದಳು.
ಮನಸಿನ ಮಾತು ಒಳಗೆ ಅರ್ಥವಾಗಿದೆ.
ಉತ್ತರ ಕೊಡಲು ಧೈರ್ಯವಿಲ್ಲ.
ಕೊಟ್ಟರೆ ಮನಸಿಗೆ ಬೇಸರವಾಗುವ ಚಿಂತೆ
ಬಾಯಿಬಿಟ್ಟರೆ ದೇಹವು ಬಾಧಿಸುವ ಅಳುಕು.
ನಾ ಮೌನಿಯಾದರೆ,
ಮನಸು ಮರುಗುವ ಒರತೆ.
ಅಬ್ಬಬ್ಬಾ..!
ಬೇಡಪ್ಪ ಬೇಡ ಪ್ರೀತಿಯ ಮಳೆ
ಸುರಿಯದಿರು ನನ್ನ ಹತ್ತಿರ.