Friday, 14 December 2012

ಆಸೆಯ ಸಾರ್ಥಕತೆ

ಮಂದಾರವನಿತೆ, ಸುಕೋಮಲೆ, ಸುರಸುಂದರಿ
ಅವಳು ಹೂವಿನ ಬತ್ತಲಿ...
ನೂರೆಂಟು ಪಟ್ಟಗಳನು ಹೊತ್ತ ಮಲ್ಲಿಗೆ.
ಕಣ್ಣಿಗೆ ಕಾಣುವ ಸೌಂದರ್ಯ, ದೇಹದ ಚೆಲುವಿನ ಭಾರ...
ಎದುರಿಗಿದ್ದವನನ್ನು ಕುಕ್ಕುವುದು, ಕೆಣಕುವುದು.
ಮೋಹದ ಅರಗಿಣಿಯನು
ಕವಿಯಾದವ ಸೊಗಸಾಗಿ ವರ್ಣಿಸಬಲ್ಲ.
ರಸಿಕನಾದವ ಚೆನ್ನಾಗಿ ಆಸ್ವಾದಿಸಬಲ್ಲ.
ಹಣವಿದ್ದವ ತೃಷೆ ತೀರುವವರೆಗೂ ಅನುಭವಿಸಬಲ್ಲ.
ಒಬ್ಬೊಬ್ಬರು ಒಂದೊಂದು ರೀತಿ.
ಎಲ್ಲ ಮನಸ್ಸುಗಳಲ್ಲೂ
ಒಳಗೊಳಗೆ ಪ್ರೀತಿ, ಕಾಮದ ಪರಿಧಿಯ ಪರದಾಟ.
ಸೇರುವ ಕೊನೆ, ಅಂತಿಮಸತ್ಯವೂ ಅದೇ...
ಒಳಗಿನ ಸೌಂದರ್ಯವು,
ಹೊರಗಿನ ಸೌಂದರ್ಯ ಖನಿಯ ಸೇರುವ ಪರಿ ಅಷ್ಟೇ.
ಅನುಭವಕೆ ಸಿಕ್ಕಿದ್ದು ಸಂತೃಪ್ತಿ, ಸ್ವಯಂಖುಷಿ.
ಒಂಚೂರು ಆಸೆಯ ಸಾರ್ಥಕತೆ.

           --                                             ಫಕೀರ