ಅವನಲ್ಲಿ ಅಪ್ಪಮ್ಮನದೇ ರಕ್ತ ಮಾಂಸ.
ನನ್ನ ನಂತರ ಅಮ್ಮನ ಒಡಲಲ್ಲಿ
ಬಸಿರಾದವನು..
ಆತ ನನ್ನ ಸೋದರ.. ಪೂರ್ವಜರ ರಕ್ತದ ಹರಿವು
ನಮ್ಮಲ್ಲಿ.
ನಾನಾದ ಮೇಲೆ ಅಮ್ಮನ ಅಮೃತದ ಬಟ್ಟಲು
ಹೀರಿದವನು, ಉಂಡವನು.
ವಯಸಿನ ಅಂತರ ನಿಜ
ದೇಹದ ಅಳತೆಯಲ್ಲಿ ಅವ ದೊಡ್ಡಣ್ಣ.
ನಮ್ಮನಮ್ಮಲ್ಲಿ
ಅಣ್ಣ-ತಮ್ಮ, ದಾಯಾದಿ ಕಲಹ, ಮತ್ಸರ ಇದ್ದದ್ದೆ..!
ಈ ಕಲಹದ ಕಾರಣವೂ ಕೂಡ
ನಮ್ಮೀಬ್ಬರ ಅಪಾರ ಪ್ರೀತಿ
ವರ್ಣಿಸಲಾಗದು.. ಭಾತೃಪ್ರೇಮದಿ
ಕುರುಡಾಗಿಹೆನು ಅಣ್ಣ ಎಂಬ ಕುಣಿಕೆಯಲಿ
ರಕ್ತದ ಮಹಿಮೆ ಅಂದರೆ ಇದೇ ಅಲ್ಲವೇ..!