Wednesday, 1 August 2012

ರಕ್ಷಾಬಂಧನ


ಒಟ್ಟಿಗೆ ಬೆಳೆದವರು, ಕೂಡಿ ಆಡಿದವರು.
ಅನ್ನದೇಹ, ಮೊಲೆಹಾಲನು ಹಂಚಿಕೊಂಡವರು.
ಈಗ  ಎಲ್ಲರೂ ಬೆಳೆದಿಹರು...
ರಕ್ತದಾ ಬಂಧನದಲಿ ಒದ್ದಾಡುತಿಹರು...
ಬಿಡಿಸಿಕೊಳ್ಳಲು ಸಾಧ್ಯವೇ ಅಂತ ಚಿಂತಿಸುತಿಹರು.
ಅಕ್ಕನಿಗೆ ತಮ್ಮನು, ಅಣ್ಣನಿಗೆ ತಂಗಿಯೂ,
ಮಾವನಿಗೆ ಅಮ್ಮನು, ದೊಡ್ಡಮ್ಮನಿಗೆ ಚಿಕ್ಕಪ್ಪನು,
ಸ್ನೇಹಿತನಿಗೆ ಸ್ನೇಹಿತೆಯು..
ಒಟ್ಟಾರೆ ಒಂದೊಂದು ಬಂಧನದಲಿ ಎಲ್ಲರೂ ಬಂಧಿಗಳೇ!
ಸೇರುವ  ಕುಂಡಲಿಯಲಿ ಬಂಧುಗಳೇ.
ಬಿಟ್ಟು ಬಾಳುವುದು, ದೂರ ಸರಿಯುವುದು ಬಲು ಸುಲಭ.
ಬಾಹು ಬಂಧನದಿ ನೀ ಅಗಲಿದರೂ,
ಬಿಟ್ಟೆನೆಂದರೂ ಬಿಡದೇ ಹೇಳುವುದು.
ಪ್ರೀತಿಯ ಸೋದರತ್ವದ ಬಂಧವೂ ನಿನ್ನ ಎದೆಯಲ್ಲಿಹುದು.
ರಕ್ಷಾಬಂಧನದಿ ಎಲ್ಲರೂ ಸಿಲುಕಿರುವೆವು...
ಸೋದರಿಯ ಶ್ರೀರಕ್ಷೆಯ ಉಸಿರನು ಸದಾ ಜೊತೆಗಿಟ್ಟುಕೊಳ್ಳುತಾ...
ಒಟ್ಟಿಗ್ಹುಟ್ಟಿರುವ ಸಂಬಂಧಗಳು ಏಳೇಳು ಜನ್ಮಗಳವರೆಗೂ
ಇರಲಿ ಅಂತ ಬೇಡುತಾ...
ರಕ್ಷಾಬಂಧನದಿ ಸೇರುವ ಮತ್ತೇ ಒಂದಾಗಿ..
ಕ್ಷಣಕ್ಷಣಕೂ ಅಣುಪರಮಾಣುವಿನ ಬಂಧ ಸೇರಲಿ,
ಎಲ್ಲರ ಹಾರೈಕೆ ಹಸನಾಗಲಿ...

                            -