ನೋವಿನ ನಗೆಯ ಬೀಸದವನು
ಅಳುತ್ತಿದ್ದಾನೆ, ಇಂದು ಜೋರಾಗಿ ಅಳುತ್ತಿದ್ದಾನೆ
ಸಂತಸದ ಬಿಸಿಬುಕ್ಕೆ ಈ ಹಿಂದೆ ಬಂದಿರಲು
ನಕ್ಕಿದ್ದ. ಅಂದು ಜೋರಾಗಿ ನಕ್ಕಿದ್ದ
ದುಃಖದ ಮಡಿಲು ರಕ್ತದ ಹರಿವು…
ಕಾಡಬೇಕು, ಸೆಳೆಯಬೇಕು, ಅಂಟಬೇಕು.
ಸುಖ ಬರಲಿ, ಸಂತಸದ ರಕ್ಷೆ ಹರಿಯಲಿ ಅನ್ನಬೇಕು.
ಸರ್ವಸಮಪಾಲಿನ ಕೂಡಾಟ ಇರಲಿ..
ಹಾಗಾದರೆ,
ಜೀವನವೆಂದರೆ, ಅಂದುಕೊಂಡಿದ್ದು ಆಗುವುದೇ ?
ನಲಿವಿನ ತೊಟ್ಟಿಲಲ್ಲಿ ಆಡಿದವನಿಗೆ
ದುಃಖದ ಕನಸು ಬೆಚ್ಚಿರನೇ ಕಾಡಿರಲು…
ಚಿಂತೆಯ ಚಿತೆಯಲಿ ಸಾಯುತಿರುವವನಿಗೆ
ತೂಗಿದರೆಷ್ಟೋ..! ಪಾಡಿದರೆಷ್ಟೋ.?
ನಿರಾಳದ ನಿದ್ದೆಯಲ್ಲಿ ತೊರಳಾಡುವವನಿಗೆ
ಜೀವನದ ಸೊಗಸು ಅಂಡಿನಲ್ಲಿ ಕುಳಿತಿತ್ತು.