Thursday 14 June 2012

ಬದುಕು ಮಗನೇ ನೀನು.!


ಅದು ನನ್ನ ಜಗತ್ತು, ಜಗತ್ತಿನಲ್ಲಿ ನಾನು !
`ನಾನು' ಅನ್ನುವ ಪರಮಾತ್ಮ.
ಅವನಿಗೆ ದೇಹವೂ ಆಧೀನ..
ಅವನು ಹೇಳುತ್ತಾನೆ. ನಾನು ಕೇಳುತ್ತೇನೆ
ಅವನು ಬಸಿದಂತೆ, ನಾನು ಬಸಿಯುತ್ತೇನೆ
ಅಂದು ಆತ ಬಸಿರಾಗಿದ್ದ,
ಇಂದು ನಾನು ಹುಟ್ಟಿದ್ದೇನೆ.
ಅವನಿಗೆಲ್ಲವೂ ಗೊತ್ತು. ನಾನೇನುಂಬುದು ತಿಳಿದಿದೆ.
ಬರಸೆಳೆದು ಗರ್ಭದಿಂದ ಹೊರದಬ್ಬಿದ ಅಂದು..
ಬದುಕು ಮಗನೇ ನೀನು.. ತಾಕತ್ತಿದ್ದರೆ ಸಾಧಿಸು-ತೋರಿಸು ಅಂದಿದ್ದ.
ಮಾತನಾಡಲಿಲ್ಲ. ಕ್ಷಣಕತ್ತಲಿನಲಿ ಕಾಣದ ನನ್ನ ಹೆಜ್ಜೆಗಳು.
ನನ್ನ ಒಳದನಿ ಅವನಿಗೆ ಅರ್ಥವಾಗಿತ್ತು. 
ಹೇಗಿದ್ದರೂ ನೀನಿರುವೆಯಲ್ಲಾ ಭಗವಾನ್...!
ಬದುಕುವೆ, ಮಾಡುವೆ, ತೋರಿಸುವೆ.
ನನಗೊಸ್ಕರ ಅಗಳು ಅನ್ನವು ಸಿಗದೇ?
ಚೂರು ನೆರಳು ಕಾಣದೇ? ಕಿಡಿ ಸಿಡಿಲು ಒಲಿಯದೇ?
ಜಂಟಿ ಮಾತುಗಳು, ಒಂಟಿ ಭಯ. ಒಂಟಿತನದ ಕತ್ತಲಿನಲಿ
ಸಾಗುತಿಹೆನು.
ಅವನು ಹಿಂದೆ ಇರುವನು ಅನ್ನುವ ನೆಪದಲಿ.


                           --