Sunday 24 June 2012

ಸೆಲೆಯ ಪರಿ


ಕನವರಿಕೆಯೆಂಬ ಕಸವ ಬಿಟ್ಟು
ನನಸೆಂಬ ರಸವ ಹಿಂಡುತ
ಮನಸ್ಸಿನ ಆಸೆ ಮನಸಿಗಾದರೆ
ದೇಹಕ್ಕೆ ಎಲ್ಲಿಹುದು ಕಣಕಣದಿ ಸಿಗುವ
ಉನ್ಮಾದದ ರಸದೌತಣ.
ಮನಸಿಗೆ ಇರದ ತೆವಲು ದೇಹಕ್ಕಿರದೇ.?
ದೇಹದ  ಅಣುವಿಗೆ ಆಸೆ,ಮೋಹಗಳ ಲೇಪನವಿರದೇ !
ಬಿಟ್ಟನೆಂದರೂ ಬಿಡದೇ ಕಾಡುವುದು, ಹೊಕ್ಕು ಬೇಡುವುದು.
ಬಾಗಲೇಬೇಕು, ಕೇಳಲೇಬೇಕು. ಮೋಹ ವ  ಬೆನ್ನತ್ತಲೇಬೇಕು.
ಅನುಭವಿಸಲೇಬೇಕು.  
ಸಿಕ್ಕ ಅಂಗನೆಯರ ಅಂಗಗಳಲ್ಲಿ ಹುಚ್ಚೆದ್ದು ಎರಚಾಡಿ
ಕಾಯದ ಬಿಸಿಯನು ತಣಿಸುವವಳ
ಅಂಗಳಲ್ಲಿ ಮಿಂದೆದ್ದು, ಕುಣಿದಾಡಿದ
ಸೆಲೆಯನ್ನು ಬಣ್ಣಿಸಲಾದೀತೇ..!
ಮೋಹದ ಪರಿಧಿಯಲಿ ಸಿಕ್ಕಿ ನರಳಾಡಿ ಕೂಗುತಿಹೆನು
ಬಿಡಿಸುವಿರಾ? ಮೇಲೆತ್ತುವಿರಾ?

Add caption