ಕರಿಮಣಿಯ ಕರಿಸಾಲು ಸಾಗುತಿಹುದು
ಕಂಬಳಿ ಹುಳುವಿನ ಕುಳದಂತೆ ಕಾಣುವ ಝರಿಯಂತೆ
ಓಡುತಿಹುದು ಕಣ್ಣಿಗೆ ಕಟ್ಟಿದಂತೆ
ಕರಿಮಣಿಯು ಈಗ ಮೈಗಂಟಿದೆ.
ಕೊರಳಲ್ಲಿ ನೇತಾಡುವ ಈ ಮಣಿಸಾಲುಗಳ ಆಕರ್ಷಣೆ
ನೋಡುವವನ ಮುಖ ನನ್ನ ಮುಖದಲ್ಲಿಲ್ಲ.
ಬೇರೆಯವರನು ಸೆಳೆಯುವ ಈ ಮಣಿಗಳ ಉಡುಗೆ
ನನಗೇಕಿಲ್ಲ.
ರಕ್ತ ಮಾಂಸವನು ಹೊತ್ತು ಮಣಿಯಾಗಿ ನಿಂತ
ನನ್ನ ದೇಹವು ಏಕೆ ನೋಡುವವರಿಗೆ ಕಾಣುತ್ತಿಲ್ಲ..
ಕರಿಮಣಿಯ ಮುಂದೆ ಈ
ದೇಹವೂ ಮಂಕಾಯಿತೇ?
ಕಿತ್ತೆಸೆದರೂ ನೋಡುವ ಕಣ್ಣುಗಳು ಮಾತ್ರ
ನನ್ನ ಎದೆಯ ಮೇಲೆ...
ಎಲ್ಲಿ ನಿಮ್ಮ ಗಂಡನ ಕರಿಮಣಿಸಾಲುಗಳು ?
ತಾವು ವಿಧವೆಯಾದರೇನು?
ಕರಿಮಣಿಗೆ ಕಳೆದುಕೊಂಡ ನನಗೆ ಉತ್ತರಿಸಲು ಬಲವಿಲ್ಲ.
ಇನ್ನೊಬ್ಬ ಕರಿಮಣಿದಾರನ ಹುಡುಕುವವರೆಗೂ...