Tuesday, 11 October 2011

ಅದ್ದೂರಿ ಚಿತ್ರ ಮಾಡಿದ ನಿದೇ೵ಶಕರ ಅಬ್ಬೇಪಾರಿ ಸ್ಥಿತಿ!!!!!- Directors Special



ಅದ್ದೂರಿ ಐತಿಹಾಸಿಕ, ಸಾಮಾಜಿಕ ಚಿತ್ರಗಳನ್ನು ನಿಮರ್ಿಸಿದ ದಿ|| ಬಿ.ಆರ್. ಪಂತಲುರವರು ಕೊನೆಯ ಗಳಿಗೆಯಲ್ಲಿ ಸಾಲಗಾರರಾಗಿ ಬಹಳ ಕಷ್ಟದ ಜೀವನ ನಡೆಸಿದ್ದರು. ಕನ್ನಡಚಿತ್ರರಂಗವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಅತ್ತುತ್ತಮ ಚಿತ್ರಗಳನ್ನು, ಉತ್ತಮ ಕಲಾವಿದರನ್ನು ಪರಿಚಯಿಸಿದ ದಿ|| ಪುಟ್ಟಣ್ಣ ಕಣಗಾಲ್ರಾಗಲಿ, ದಿ|| ಬಿ. ನಾಗೇಂದ್ರರಾಯರು ಇನ್ನು ಮುಂತಾದ ಕಲಾವಿದರು ಬಹಳ ಬದುಕಿನ ಸಂಧ್ಯಾಕಾಲದಲ್ಲಿ ಆಥರ್ಿಕವಾಗಿ ಬಹಳ ನೊಂದಿದ್ದರು.  ಹೀಗೆ ಒಂದು ಬಾರಿ ನಾಗೇಂದ್ರರಾಯರು ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಖ್ಯಾತ ಕಾದಂಬರಿಗಾತರ್ಿ ಎಂಕೆ ಇಂದಿರಾರವರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು. ಕಾರ್ಯಕ್ರಮದ ನಿರೂಪಕರು ಸ್ವಾಗತಭಾಷಣದಲ್ಲಿ ನಾಗೇಂದ್ರರಾಯರನ್ನು  `ಕನ್ನಡ ಚಿತ್ರರಂಗದ ಭೀಷ್ಮ 'ರೆಂದು ಹೊಗಳಿದರಂತೆ. ಸ್ವಲ್ಪ ಸಮಯದ ನಂತರ ರಾಯರು ಅಧ್ಯಕ್ಷ ಭಾಷಣದಲ್ಲಿ ನಗುತ್ತಾ ಹೇಳಿದರಂತೆ. `ನನ್ನ ಬಿಳಿಯಗಡ್ಡವನ್ನು ನೋಡಿ ನನ್ನನ್ನು ಭೀಷ್ಮನೆಂದು ಹೊಗಳಿದಿರಿ..ಅದು ನಿಮ್ಮ ಅಭಿಮಾನ.  ನನ್ನ ಬಿಳಿಯ ಗಡ್ಡವನ್ನು ನಾನು ಯಾಕೆ ಬೆಳೆಯಲು ಬಿಟ್ಟಿದ್ದೇನೆ ಎಂಬುದು ತಿಳಿದರೆ ನೀವೆಲ್ಲಾ  ಭೇಸರಪಡುತ್ತೀರಿ' ಎಂದು ಹೇಳಿ ವಿಷಾದವಾಗಿ ನಕ್ಕರಂತೆ. ಈ ಸನ್ನಿವೇಷವನ್ನು ಅಂದು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಎಂಕೆ ಇಂದಿರಾರವರು ತಮ್ಮ `ಚಿತ್ರಭಾರತ ಕೃತಿಯಲ್ಲಿ ನಿವೇದಿಸಿದ್ದಾರೆ. ರಾಯರ ಕೊನೆಯ ದಿನಗಳಲ್ಲಿ ಅವರು ಆಥರ್ಿಕವಾಗಿ ಬಹಳ ಕಷ್ಟದಲ್ಲಿದ್ದರು ಅಂತ ಬಿಡಿಸಿ ಹೇಳಬೇಕಿಲ್ಲ!