ನೋವಿನ ಮನೆಗೆ ನೂರೆಂಟು ಬಾಗಿಲುಗಳು
ಯಾವ ಬಾಗಿಲನು ನಾ ಮುಚ್ಚಲಿ...
ಬೆಳಕೆ ಬಾರದ ಕಿಟಕಿಯಲಿ ಏನೆಂದು ಕಾಣಲಿ..
ಮಗುವಿನ ಮನಸೊಳಗೆ ಬೇಡದ ಕನಸುಗಳು
ಬಾಳ ಚಿಗುರು ಅರಳುವ ಮುನ್ನ ಮಂಕಾಯಿತೇ ಈ ಸೊಬಗು
ಒಳಗಿನ ಆ ಮನಸ್ಸನ್ನು ಅರ್ಥಮಾಡಿಕೊಳ್ಳುವರು ಯಾರಿಹರು?
ಹೆತ್ತವಳೇ ಕರುಳ ಕುಡಿಯನ್ನು ಕಿತ್ತೆಸೆದಾಗ
ಎಲ್ಲಿ ಅಡಗಿಹುದು ತಾಯಿಯೆಂಬ ಮಮಕಾರ...!
ತಾಯಿ ಋಣವ ಏನಿತೋ ಅರಿಯೇ?
ಅಮ್ಮ ಎಂಬ ಹುಣ್ಣಿಮೆ ಚಂದ್ರಮನ ಕಾಣುವುದೆಲ್ಲಿಂದ ಬಂತು.
ಅಮ್ಮನ ನಿಲುವಿಗೆ ಪ್ರೀತಿಯ ಉತ್ತರ
ಹುಡುಕುತಿಹೆನು, ಅರಸುತಿಹೆನು.
ನೋವಿನ ಮನೆಗೆ ನೂರೆಂಟು ಬಾಗಿಲುಗಳು
ಯಾವ ಬಾಗಿಲನು ನಾ ಮುಚ್ಚಲಿ...|1|