Friday, 12 October 2012

ಏಳು ಬಣ್ಣದ ನಾಚಿಕೆ

(ಜೋಗ ಜಲಪಾತದಲ್ಲಿ ಮೂಡಿದ್ದ  ಕಾಮನಬಿಲ್ಲಿನ ಪ್ರೇರಣೆಯಿಂದ ಬರೆದ ಕವನ)

ನಾಚಿಕೆಯ ಕಾಮನಬಿಲ್ಲು ಅವಳ ಮುಖದಲ್ಲಿ
ಅರಳಿತ್ತು, ನನ್ನನ್ನು ನೋಡಿ ನಗುತ್ತಿತ್ತು.
ಏಳು ಬಣ್ಣಗಳ ನಡುವೆ ಅವಳ ಕಣ್ಣುಗಳು
ನನ್ನನ್ನು ನೋಡಿ ಕೊಲ್ಲುತ್ತಿದ್ದವು. ನೆತ್ತರು ಹೀರುತ್ತಿದ್ದವು.

ಬಾಗಿದ ಏಳು ಬಣ್ಣಗಳಂತೆ ಅವಳ ದೇಹವು
ಬಳ್ಳಿಯಂತೆ ಬಳಕುತ್ತಿತ್ತು.
ಸಿರಿಯಿಂದ ರಂಗೇರಿತ್ತು.
ಬದುಕಿದೆಯಾ ಬಡಜೀವವೇ ನನ್ನಿಂದ
ಅಂತ ಅಣಕಿಸುತ್ತಿತ್ತು.

ಮೋಹದ ಹೆಣ್ಣಿನ ಆಸೆಗೆ ಮಿತಿಯುಂಟೆ?
ಮೋಹಿಸುವವನ ಅನುಮತಿಯ ಕೇಳುವುದುಂಟೆ!
ನನ್ನ ಏಳು ಬಣ್ಣದ ಆಸೆ ಇನ್ನೂ ಕಮರಿರಲಿಲ್ಲ
ಬಣ್ಣಗಳ ಸೌಂದರ್ಯ ಅವಳ ಬಿಲ್ಲಿನ ದೇಹವನು ಬರಸೆಳೆದು
ಆಕೆಯನ್ನು ಮುಂಚಿನಂತೆ ಮಾಯ ಮಾಡಿತ್ತು.

ಖಾಲಿಯಾದ ಆಗಸದಲ್ಲಿ ನನ್ನ ಕಾಮನಬಿಲ್ಲು ಇರಲಿಲ್ಲ.
ಹಾಗೆಯೇ ನೋಡುತ್ತಿದ್ದೆ,
ಅವಳು ಮತ್ತೇ ಮೂಡುವವರೆಗೂ ಕಾದೆ.
ಕಾಮನಬಿಲ್ಲಿನಲ್ಲೊಂದು ಹೆಣ್ಣಿನ ಮಾಯೆ
ನನಗೆ ದೊಡ್ಡ ಮೋಸ ಮಾಡಿತ್ತು.