Thursday, 26 April 2012

ಮರುಗುವ ಮನ


ಅವಕಾಶ ನನಗೇ ಏಕೆ ಸಿಗಲಿಲ್ಲ ?
ಅವರಿಗಿಂತ ನಾನು ಖಂಡಿತ ಅರ್ಹ,ಅದಕೆ..
ಅವರಿಗಿರುವ ಅವಕಾಶ, ಒಲಿದ ಹುದ್ದೆ, ಕೊಟ್ಟ ಮಾತು
ಏಳೆಯ ಮನಸ್ಸಿಗಂಟಿದ ನೋವು, ಮನಸ್ಸಿಗೆ ಇಟ್ಟ ಕಿರೀಟ
ನನಗೇಕಿಲ್ಲ..! ನಾ ನೆನಪಾಗಿಲ್ಲವೇ?
ಅನುಭವ ಬಲಿದಿದೆ, ಅವಕಾಶ ಬೇಕಾಗಿದೆ
ಕನಸಿನ ಬುಟ್ಟಿ ತುಂಬಿದೆ
ದೇಹವು ಶ್ರಮಕೆ ಹದವಾಗಿದೆ
ಆದರೂ ನನಗೇಕೆ ಸಿಗುತ್ತಿಲ್ಲ ಅವಕಾಶ.
ಅದೃಷ್ಟದ ವಯಸ್ಸು ನನಗೆ ಕೂಡಿಬಂದಿಲ್ಲವೇ..!
ಇಲ್ಲವೇ ನಾನು ಹೋಗಿಲ್ಲವೇ..?
ನೋವಿನ ಅವಕಾಶ ಕಾಡುತಿಹುದು ಎನ್ನ.
ಕನಸು ಮರುಗುವ ಘಳಿಗೆ,
ದೇಹ ಸವೆಯುವ ಮುನ್ನ
ಅದೃಷ್ಟದ ಅವಕಾಶ ಬಾಚಿ ತಪ್ಪಲಿ ನನ್ನ..!