Sunday 24 March 2013

ಕಾಣದ ಯುದ್ಧ


ಹಸಿರು ಕಂಗಳ ರಾಣಿಯು ಕಣ್ಣಳತೆಯಲಿ
ನಿಂತಿಹಳು.
ಸುಂದರ ವದನ, ಆಕರ್ಷಕ ತೊಡುಗೆಯನ್ನುಟ್ಟು
ರಸಿಕರ ಮನದೊಳಗೇನಿದೆ ಅನ್ನುವುದನು
ತಿಳಿಯುತಿಹಳು, ನೋಡುವ ಕಣ್ಣುಗಳಿಗೆ
ಆಸೆಯ ಸ್ಫುರಣೆಯ ದೇಹವನು ತೋರುತಿಹಳು...
ಅಮೂರ್ತವಾಗಿ ಕೊಲ್ಲುತ್ತಿದ್ದ ಅವಳ ಕಿರಣಗಳು,
ನೋಡುವವರ ಎದೆಯನು ಹೊಕ್ಕು ಅವರನು
ಕೊಲ್ಲಲು ಯತ್ನಿಸುತಿಹುದು.
ಮೋಹದ ಸೆಳೆತ ಇಷ್ಟವಾದರೆ
ಅವಳ ಕ್ಷಕಿರಣಗಳ ನಡುವೆ ಆಸೆಯ ಕಲಾಪ.
ಆಸೆಯಿಟ್ಟು, ನೋಟದ ಬಾಣವಿಟ್ಟು ಅನುಭವದ ತವಕ.
ಮೋಹದ ನೋಟವನು ಎದುರಿಸುವ ಕೆಲವು ನಾಯಕರು.
ಆಸೆಯ ಬಲವೋ! ನೋಟಕೆ ವಿರೋಧವೋ?
ನೋಡುವವಳ ಆಸೆಯ ಬೆಟ್ಟ ಬೆಳೆಯುತಿಹುದು
ಇವನ ಸೈರಿಸುವ ಬೆಟ್ಟವೂ ಚಿಗುರುತಿಹುದು...
ಗೆಲ್ಲುವ ಬೆಟ್ಟ ಯಾವುದು ಎಂಬುದು
ಲಕ್ಷ ಕಂಗಳಲ್ಲಿ.
ಅವಳೋ... ಅವನೋ...
ಲಕ್ಷ ವರ್ಷಗಳು ಕಳೆದವು, ಉತ್ತರ ಮಾತ್ರ ಸಿಕ್ಕಿಲ್ಲ.
ಯುದ್ದ ಸೂತ್ರ ಮಾತ್ರ ನಡೆಯುತ್ತಲೇ ಇದೆ
ಮೋಹವು ಹಾಗೆಯೇ ಇದೆ, ವೈರಾಗ್ಯವೂ ಕಾಣದೇ ಬೆಳೆದುನಿಂತಿದೆ.
ಕೆಲವು ಬಾರಿ ಇವೆರಡರ ದಾರಿಗಳು ಮಾತ್ರ
ಅದಲು ಬದಲು...


ಪಾಪಪ್ರಜ್ಞೆ



ತಪ್ಪು ಮಾಡುತ್ತೇವೆ, ಅರಿವಾಗುತ್ತದೆ.
ಪಾಪಪ್ರಜ್ಞೆ ಆಗಾಗ ನಮ್ಮನ್ನು ಕಾಡುತ್ತಲೇ ಇರುತ್ತದೆ.
ಅರಿವಿಲ್ಲದೇ ಗೊತ್ತಿಲ್ಲದೇ ಆದ ತಪ್ಪುಗಳು
ಕ್ಷಮಾರ್ಹ ಅನ್ನುವರು ದೊಡ್ಡವರು.
ಕ್ಷಮೆಯ ದಂಡನೆಗೆ ಗುರಿಯಾಗದೇ,
ಒಳಗೊಳಗೆ ನೀ ಮಾಡಿದ್ದು ತಪ್ಪು ಅಂತ ಹೇಳುವ ಮನಸು...
ದೇಹ ದಂಡನೆಗೆ ಒಲ್ಲೆನ್ನುವ ಮನಸಿಗೆ
ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದೆ.
ಮನಸಿನ ಪ್ರಜ್ಞೆಯು ತುಂಬಿ ಹರಿದು
ನೋವಿನ ಭಾರವನ್ನು ಎದೆಯಲಿ ಹರಿಸುವುದು.
ಮುಖದಲಿ ಉಸಿರುಗಟ್ಟಿರುವ ಒಳಗೊಳಗಿನ ಚಿಂತೆ
ತಪ್ಪು ಮಾಡಿದೆ, ಏಕೆ ಮಾಡಿದೆ?
ಆಸೆಯ ದುರ್ಲಾಭಕೊ, ದುರಾಸೆಯ ಚಿಂತನೆಗೊ...?
ಮಾಡಿದ ಅರಿವಿನ ನೋವು ಕಾಡಿದರೆ
ಕ್ಷಮೆ ಎಂಬ ಬೆಂಕಿ ಹತ್ತಿರವೂ
ಸುಳಿಯುವುದಿಲ್ಲ...
ಪಾಪಪ್ರಜ್ಞೆ ಎಂಬ ಬ್ರಾಹ್ಮಣ ಒಳಗೊಳಗೆ
ಮಂತ್ರ ಹೇಳುತ್ತಲೇ ಇರುತ್ತಾನೆ.