Sunday, 24 March 2013

ಪಾಪಪ್ರಜ್ಞೆ



ತಪ್ಪು ಮಾಡುತ್ತೇವೆ, ಅರಿವಾಗುತ್ತದೆ.
ಪಾಪಪ್ರಜ್ಞೆ ಆಗಾಗ ನಮ್ಮನ್ನು ಕಾಡುತ್ತಲೇ ಇರುತ್ತದೆ.
ಅರಿವಿಲ್ಲದೇ ಗೊತ್ತಿಲ್ಲದೇ ಆದ ತಪ್ಪುಗಳು
ಕ್ಷಮಾರ್ಹ ಅನ್ನುವರು ದೊಡ್ಡವರು.
ಕ್ಷಮೆಯ ದಂಡನೆಗೆ ಗುರಿಯಾಗದೇ,
ಒಳಗೊಳಗೆ ನೀ ಮಾಡಿದ್ದು ತಪ್ಪು ಅಂತ ಹೇಳುವ ಮನಸು...
ದೇಹ ದಂಡನೆಗೆ ಒಲ್ಲೆನ್ನುವ ಮನಸಿಗೆ
ಪಾಪಪ್ರಜ್ಞೆ ಕಾಡುತ್ತಲೇ ಇರುತ್ತದೆ.
ಮನಸಿನ ಪ್ರಜ್ಞೆಯು ತುಂಬಿ ಹರಿದು
ನೋವಿನ ಭಾರವನ್ನು ಎದೆಯಲಿ ಹರಿಸುವುದು.
ಮುಖದಲಿ ಉಸಿರುಗಟ್ಟಿರುವ ಒಳಗೊಳಗಿನ ಚಿಂತೆ
ತಪ್ಪು ಮಾಡಿದೆ, ಏಕೆ ಮಾಡಿದೆ?
ಆಸೆಯ ದುರ್ಲಾಭಕೊ, ದುರಾಸೆಯ ಚಿಂತನೆಗೊ...?
ಮಾಡಿದ ಅರಿವಿನ ನೋವು ಕಾಡಿದರೆ
ಕ್ಷಮೆ ಎಂಬ ಬೆಂಕಿ ಹತ್ತಿರವೂ
ಸುಳಿಯುವುದಿಲ್ಲ...
ಪಾಪಪ್ರಜ್ಞೆ ಎಂಬ ಬ್ರಾಹ್ಮಣ ಒಳಗೊಳಗೆ
ಮಂತ್ರ ಹೇಳುತ್ತಲೇ ಇರುತ್ತಾನೆ.



1 comment: