ಅಡಿಗಡಿಯ ನೋವನು
ಒಳಗೊಳಗೆ ಮುಚ್ಚಿಟ್ಟು..
ಬತ್ತದ ಆ ಉಸಿರಿನಲಿ,
ಸಂತಸದ ಹೂಮಳೆ ಹರಿದಾಡಿ,
ಒಳಗಿನ ಆ ಗಂಟನು ಬಿಡಿಸುವ ತವಕ.
ಕಾಣದ ಆ ಬೆಳಕು ಮಳೆಯಾಗಿ,
ಕೆರೆಯಾಗಿ ಭೂಮಿಗೆ ಬಿದ್ದಿರಲು...
ಗುಟುಕು ನೀರನು ಕುಡಿದು ಚಿಗುರೊಡೆಯುವ
ಆ ಬೀಜ, ಹಸತನದ ಪ್ರಪಂಚಕ್ಕೆ
ಕಣ್ಣು ಬಿಟ್ಟು ನೋಡುತಿಹುದು.
ನಾ ಬಂದಿರುವೇ, ಹೆದರಬೇಡ ನಿನಗೆ
ಆಸರೆಯಾಗವೆ ಅನ್ನುತಲಿತ್ತು.
ಲೋಕವೇ ಕೈ ಬಿಟ್ಟ ನೋವ ಭಾರ,
ಮರುಗಿ ಒಳಸೇರುವ ಮುನ್ನ, ಬಂಧನದ
ಆ ಬೇರು ಸಡಿಲಾಗಲಿ
ಇಲ್ಲವೇ ಸೆರೆಯಾಗಲಿ.