Sunday 11 September 2011

ನಾನೋಬ್ಬ ಸ್ನೇಹಿತ

ಒಂದೇ ರಕ್ತ ಹಂಚದಿರಬಹುದು. ಒಂದೇ ತಾಯ ಮಕ್ಕಳಲಲ್ಲದಿರಬಹುದು..
ಕ್ಷಣಕ್ಷಣಕ್ಕೂ ಮಗುವು ತಾಯಿಯನ್ನು ಕಾಡುವಂತೆ, ಹೊರಗೆ ತಿರುಗಾಡಲು ಅಪ್ಪನನ್ನು ಪೀಡಿಸುವಂತೆ
ಕಿತ್ತಾಡಲು  ಒಡಹುಟ್ಟಿದವರು, ಬೋಧಿಸಲು ಗುರುಯೋಧ ಇರಲು ..
ಇನ್ನು ಒಂದು ದೊಡ್ಡ ಚಿಂತೆ ?
ಇದೆಲ್ಲಾ ಇರುವಂತಹ ವ್ಯಕ್ತಿ ಬೇಕು
ದೇವರು ತಥಾಸ್ತು ಎಂದ.!
ಹೌದು, ಅವರ ಕಂಡೆ, ಹೇ ಅವರು ನನ್ನ ಸ್ನೇಹಿತರು.
ಅವರಿಗೆ ಅಪ್ಪಮ್ಮ,ಗುರು,ರಕ್ತಸಂಭಂದಿಗಳ ಎಲ್ಲ ಗುಣವಿದೆ.
ಕೊಟ್ಟವನನ್ನು ,ಜೊತೆಯಲ್ಲಿ ಇರುವವರನ್ನು ನೆನೆಯದಿದ್ದರೆ ಹೇಗೆ?
 

ನಮಗೆ ನಾವೇ ...

ಅವನಿಗೆ ನಾ,ನನಗೆ ಅವರು, ಅವರಿಗೆ ನಾವು                                                    
ಎಲ್ಲರಿಗೂ ನಾವು, ಆದರೆ ನಮಗೆ ನಾವೇ..!
ಮರೆತನೆಂದರೂ ನಾ ನಿನ್ನ ಬಿಡುವುದಿಲ್ಲ
ತಿಂದಿದ್ದು,ಉಂಡಿದ್ದು,ಹೇತಿದ್ದು ,ಆಡಿದ್ದು
ಒಂದೇ ರೂಮಿನಲ್ಲಿ ಓದಿದವರು,ಮೊದಲ ನೀಲಿ ಚಿತ್ರ ನೋಡಿದವರು
ಕನವರಿಕೆಯಲ್ಲೂ  ಬೆತ್ತಲೆಗೆ ಮೈಯೊಡ್ಡಿದವರು ಒಂದು ಸಿಗರೇಟು,ಒಂದು ಬಿಯರ್, ಕ್ವಾಟ್ರ್ ವಿಸ್ಕಿ
ತೊಡೆ ಬಲಿತ ಹುಡುಗರ ಹಸಿದ ಬಾಯಿಗಳು ..!
ನಾವು ವೀರ್ಯಸ್ಕಲಿತ ಹುಡುಗರು..
ಕಾಪಿಚೀಟಿ ಬರೆಯದ ಹುಡುಗರು..
ಕಣ್ಣಿಂಚಿನ ಕಾಡಿಗೆಯ ಹಿಂದೆ ಬೀಳದವರು
ನಮಗೆ ನಾವೇ ...
ಮುಂದಿನ ನಾಡಿನ ಭೂಪರು..

ಹೊಣೆಯ ನಂಬಿಕೆ











ಅಂದುಕೊಂಡಿದ್ದು ಅಂದವಾಗಿರಲಿಲ್ಲ
ಬರೆದಿದ್ದು ಬರೆಯಾಗಿತ್ತು
ಕಂಡಿದ್ದು ಕಾಣಿಸಿದಷ್ಟೇ..!
ಹಾಡಿದ್ದು ಹಾಡಾಗಿತ್ತೇ..?
 ಮನಸ್ಥತಿ ಮನವರಿಕೆಯಾಗುತ್ತಿಲ್ಲ
ಮಾಡಿದ ಕೆಲಸ ಕೆಲಸವನ್ನುವಂತಿಲ್ಲ
ನಂಬಿದವರರಿಗೆ ನಂಬಿಕೆ ಇಲ್ಲ
ಏಲ್ಲವೂ ಅವನ ಮೇಲೆ ಅನ್ನುವಂತಿಲ್ಲ
ನಾನೇ ಹೊಣೆ.. ನಾನೇ ಹೊಣೆ..
ಸಹನೆಯಿಂದ ಸಹಾನುಭೂತಿ ಎನ್ನುವ ನಾ
ಏತ್ತಣವೋ ನಾನರಿಯೆ..ಬಾಂದಣದ ಕಡೆಯೋ..ಬಯಲಿನ ಕಡೆಯೋ...
ನನಗರಿವಿಲ್ಲದ ಮಮ ಶಕ್ತಿಯ ಹುಡುಗಾಟದ ಪಯಣ.


ಬುದ್ದಿಯ ಉಸಿರಾಟ

ಮನಸ್ಸಿಗೆ ಸದಾ ಬುದ್ದಿಯ ಒದೆ..
ಬುದ್ದಿಗೆ ಮನಸ್ಸಿನ ಸೆರೆ..
ದೇಹಕೆ ಸದಾ ಉಸಿರಿನ ಹೊರೆ..
ತಡೆಯ ಸುಳಿಯ ಉಸಿರಾಟ 
ಕೆಲವೊಮ್ಮೆ ನಮ್ನನ್ನು ಕಾಡುತ್ತದೆ,
ಕೆಲವೊಮ್ಮೆ ಜೀವ ನೀಡುತ್ತದೆ.