Sunday, 29 April 2012

ಬೆ(ಂಕಿ)ಳಕು

ಅವಳ ಮೊಗವೇ ಅಂತಹುದು,
ಸೌಂದರ್ಯದ ಬೆಂಕಿಯನ್ನು ಮುಖದಲ್ಲಿ ಇಟ್ಟುಕೊಂಡವಳು.
ಕಣ್ಣು ಮುಚ್ಚಿದರೂ, ಆರದ ಕೆಂಡದಂತವಳು.
ಕಾಡಿದವಳು...ಆಸೆ ಹುಟ್ಟಿಸಿದವಳು, ದೇಹ ಹಸಿವ ಹೆಚ್ಚಿಸಿದವಳು.
ಮಾತನಾಡುವ ಬಯಕೆ ಹುಟ್ಟಿಸಿದವಳು.
ಅರಿಘಳಿಗೆ, ಅನುಕ್ಷಣವೂ ಅವಳಲ್ಲಿ ನಾನು...
ನನ್ನ ಮಾತುಗಳನ್ನು ಹೇಳಲು ತಡಕಾಡಿದೆ.
ಅವಳ ಒಡಲ ಮುಟ್ಟಲು ಬಯಸಿದೆ, ಪ್ರಯತ್ನಿಸಿದೆ.
ಅವಳ ಬೆಂಕಿಯಲಿ ನನ್ನ ಬೆಳಕು ಕಾಣಲಿಲ್ಲ.
ಹತ್ತಿರ ಹೋದರೂ ಬೆಳಕಿಗೆ ದಾರಿ ಇಲ್ಲದಂತಾಯಿತು,
ಬೆಂಕಿ ಏಷ್ಟು ದಿನ ಉರಿಯುವುದು?
ಬೆಳಕು ಕಾಯುತಿಹುದು
ಬೆಂಕಿ ಆರಿ   ಬೆಳಕನ್ನು
ಹುಡುಕುವ ತನಕ..!