Tuesday 8 November 2011

ಮಾಸ್ಟರ್ ಗೆ ದಾರಿ ಬಿಡಿ...

68 ಸಿನಿಮಾಗಳು, ಆರು ಅಂತರಾಷ್ಟ್ರೀಯ ಪ್ರಶಸ್ತಿಗಳು, ಒಂದು ರಾಷ್ಟ್ರೀಯ ಪ್ರಶಸ್ತಿ ಮತ್ತು ಒಂದು ರಾಜ್ಯ ಪ್ರಶಸ್ತಿ. ವಿಷ್ಣುವರ್ಧನ್,ಅಂಬರೀಷ್, ಶಂಕರ್ ನಾಗ್, ರವಿಚಂದ್ರನ್ ಮಾತ್ರವಲ್ಲ, ದಕ್ಷಿಣ ಭಾರತದ ಎಲ್ಲ ಸೂಪರ್ ಸ್ಟಾರ್ಗಳ ಜೊತೆ ಅಭಿನಯ. ಹಿಂದಿಯ ಅಗ್ನಿಪತ್ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ರವರ ಬಾಲನಟನ ಪಾತ್ರ..ಇಡೀ ಭಾರತವೇಕೆ ಇಡೀ ಪ್ರಪಂಚದ ಸಿನಿಮಾ ಉದ್ಯಮವೇ ಹೆಮ್ಮೆಪಡುವ ಮಾಲ್ಗುಡಿ ಡೇಸ್ನ ಸ್ವಾಮಿ  ಪಾತ್ರದ ಮೂಲಕ  ಜನಪ್ರಿಯನಾದ ನಟನ ಜೊತೆಗಿನ ನನ್ನ ಮಾತುಕತೆಯ ಸಾರಾಂಶ


ಹೀಗಿತ್ತು ಆರಂಭದ ಜೀವನ
ಲೋಕೆಷನ್ ಯಶವಂತಪುರ, ಅಲ್ಲೊಂದು ಪುಟ್ಟ ಗೂಡು. ಅಲ್ಲಿದ್ದ ಕೆಳ ಮಧ್ಯಮ ವರ್ಗದ ತಂದೆ ತಾಯಿಗೆ ನಾಲ್ಕು ಜನ ಗಂಡು ಮಕ್ಕಳು. ಆ ಪುಟ್ಟ ಗೂಡಿನಲ್ಲಿ ಇರುವವರಲ್ಲಿ ಅವನೂ ಒಬ್ಬನಾಗಿದ್ದ.  ಅಪ್ಪ-ಅಮ್ಮ ಇಬ್ಬರಿಗೂ ಬಿಎಚ್ಇಎಲ್ನಲ್ಲಿ ಕೆಲಸ. ಬರುವ ಅಲ್ಪ ಸ್ವಲ್ಪ ಹಣದಲ್ಲೇ ನಾಲ್ಕು ಮಕ್ಕಳ ಹೊಟ್ಟೆಪಾಡು, ವಿದ್ಯಾಭ್ಯಾಸ ಎಲ್ಲವನ್ನೂ ನೋಡಿಕೊಳ್ಳಬೇಕಿತ್ತು. ಅವರಿಗೆ ಮಕ್ಕಳೇ ದೊಡ್ಡ ಪ್ರಪಂಚ. ಲೋಕದ ಹಂಗು ನಮಗ್ಯಾಕೆ ಅಂತ ಬಾಳ್ವೆ ನಡೆಸುತ್ತಿದ್ದ ಸಂಸಾರ ಅವರದು. ಜೀವನ ತುಂಬಾ ಸುಂದರವಾಗಿತ್ತು. ಈಗಿನಂತೆ ಹಣದ ಆಹಾಕಾರ ಇರಲಿಲ್ಲ. ಮನೆಯಲ್ಲಿ ಟಿವಿ ಇರಲಿಲ್ಲ. ಸಿನಿಮಾ ನೋಡೊದು ಅಂದರೆ ಅದೊಂಥರ ವರ್ಷಕ್ಕೊಮ್ಮೆ ಬರುತ್ತಿದ್ದ ದೀಪಾವಳಿ ಮತ್ತು ಗಣೇಶಹಬ್ಬದ ಥರ..! ಸುಖ ಮತ್ತು ಸವಲತ್ತು ಗಾಜಿನ ಡಬ್ಬದೊಳಗಿದ್ದ  ಸಿಹಿಯಾದ ಉಂಡೆಯೇ ಆಗಿತ್ತು. ಹಾಗಾಗಿ ಆ ಗಾಜಿನ ಡಬ್ಬವನ್ನೇ ನೋಡುತ್ತಾ ಇದ್ದುದ್ದರಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಮಕ್ಕಳ ಜವಾಬ್ದಾರಿಯಾಗಿತ್ತು. ಆ ಮಕ್ಕಳಲ್ಲಿ ಇನ್ನು ಮುಗ್ಧತೆ ಇತ್ತು. ಎಲ್ಲರೊಡನೇ ಪ್ರೀತಿಯಿಂದ ಸೇರುವ ಗುಣವಿತ್ತು. ಮುಖ್ಯವಾಗಿ ಅಪ್ಪ ಅಮ್ಮ ನೀಡಿದ ಸಂಸ್ಕಾರ ಚೆನ್ನಾಗಿತ್ತು. ಮನೆಯ ಅಕ್ಕಪಕ್ಕದವರಾಗಲೀ, ಯಶವಂತಪುರದ ಆ ಏರಿಯಾದವರಾಗಲಿ ಯಾರೊಬ್ಬರೂ ಊಹೆ ಕೂಡ ಮಾಡಿರಲಿಲ್ಲ. ಆ ಮನೆಯಲ್ಲಿ  ಅಪ್ಪ-ಅಮ್ಮನಿಗೆ ಹೆಮ್ಮೆ ತರುವಂತಹ ಮಗ ಹುಟ್ಟಿದ್ದಾಗಲಿ, ಹುಟ್ಟಿದ್ದು ಕೊನೆಯವನಾದರೂ ಯಾರೊಬ್ಬರೂ ಸಾಮಾನ್ಯರಲ್ಲಿ ಒಬ್ಬ ಅಸಾಮಾನ್ಯನಂತ ಮಗ ಹುಟ್ಟಿದ್ದಾನೆ ಅಂತ ಆರಂಭದಲ್ಲಿ ಗುರುತಿಸುವುದು ಸ್ವಲ್ಪ ಕಷ್ಟ ಸಾಧ್ಯವಾಗಿತ್ತು.
ಇನ್ನು 2-3 ವರುಷದಿರುವವನಾಗಲೇ ಆತ ಹರಳುಹುರಿದಂತೆ ಮಾತನಾಡುತ್ತಿದ್ದ. ಹೀಗೆ ಮುದ್ದುಮುದ್ದಾಗಿ ಮಾತನಾಡುವುದನ್ನ ನೋಡುವುದೇ ಕೆಲವರಿಗೆ  ಖುಷಿ ಮತ್ತು ಆಸೆ. `ಏನ್ರೀ ಇಷ್ಟು ಚೆನ್ನಾಗಿ ಮುದ್ದು ಮುದ್ದಾಗಿ ಮಾತಾಡ್ತಾ ಇದಾನಲ್ರಿ ಅಂತ ಆತ ಗಲ್ಲವನ್ನ ಹೀಚ್ಕೋರೆ ಜಾಸ್ತಿ. ಅಪ್ಪನ ಜೊತೆಯಲ್ಲಿ ಇರುತ್ತಿದ್ದ.  ಈ ಪುಟಾಣಿಯ ಮಾತು ಹಾಗೂ ತುಂಟತನವನ್ನು ನೋಡಿದ ಅವರ ತಂದೆಯ ಸ್ನೇಹಿತರು ಸಿನಿಮಾದಲ್ಲಿ  ಯಾಕೆ ಇವನಿಂದ ಒಂದು ಪಾತ್ರ ಮಾಡಿಸಿ ನೋಡಬಾರದು ಅಂತ ಯೋಚಿಸಿದರು.
 ಲೋಕೇಷನ್ ಶಿಪ್ಟ್ ಟು ರಾಗಿಗುಡ್ಡ, `ಅಜಿತ್' ಸಿನಿಮಾ ಶೂಟಿಂಗ್.  ಅಂಬರೀಶ್ ಚಿತ್ರದ ಹೀರೋ. ಆ `ಪುಟ್ಟ' ಹುಡುಗನಿಗಿದ್ದುದ್ದು ಪುಟ್ಟ ಪಾತ್ರ..! ಡೈರೆಕ್ಟರ್ ಸೋಮಶೇಖರ್ ಹೇಳಿದ ಸೀನನ್ನು ರಿಟೇಕ್ ತೆಗೆದುಕೊಳ್ಳದೆೆ ಪಟಪಟನೆ  ಮಾಡಿಬಿಟ್ಟ. ಅವನನ್ನು ಕರೆದುತಂದ ಅಪ್ಪ ಹಾಗೂ ಅವರ ಸ್ನೇಹಿತರಿಗೆ ಖುಷಿಯೋ ಖುಷಿ.. ಸೀನ್ ಮುಗಿದ ಮೇಲೆ ಅಂಬರೀಷರವರು ಕರೆದು ಆ ಪುಠಾಣಿಗೆ ಚಾಕಲೇಟ್ ಕೊಟ್ಟರು. ತನ್ನ ಮುಗ್ಧತೆ ಹಾಗೂ ತೊದಲು ಮಾತುಗಳಿಂದ ಸೆಟ್ನಲ್ಲಿದ್ದವರಿಗೆಲ್ಲಾ ಆ ಹುಡುಗ ತುಂಬಾನೇ ಹತ್ತಿರವಾಗಿಬಿಟ್ಟ. ಅಂಬರೀಷ್ರವರಿಗೆ ಆ ಪುಠಾಣಿ ಹುಡುಗ ಏಷ್ಟು ಇಷ್ಟವಾಗಿದ್ದ ಅಂದರೆ  ಅವರ ಮುಂದಿನ ಐದು ಸಿನಿಮಾಗಳಲ್ಲಿ ಈತನೇ ಬಾಲ ನಟನಾದ. ಒಂದಾದ ಮೇಲೆ ಒಂದು ಸಿನಿಮಾಗಳು, ಶಂಕರ್ನಾಗ್ ತಂಡದ ಖಾಯಂ ಸದಸ್ಯನಾಗಿಬಿಟ್ಟ. ಹೀಗೆ ಯಶಸ್ಸಿನ ಏಣಿ ಹತ್ತಿದ ಆ ಪುಟ್ಟ ಹುಡುಗನ ಸಾಧನೆ ಮತ್ತು ಪ್ರತಿಭೆ ಮಾತ್ರ ದೊಡ್ಡ ಇತಿಹಾಸ...!

`ಮಾಸ್ಟರ್ ಮಂಜುನಾಥ್..!.'
ಇಷ್ಟೊಂದು ಸಾಧನೆಯ ನಟ ಇಂದು ಸಿನಿಮಾ ಹಾಗೂ ಟೀವಿ ಉದ್ಯಮದಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಇವರೇನಾ ಮಾಸ್ಟರ್ ಮುಂಜುನಾಥ್ ಅನ್ನುವಷ್ಟು ಸಂಪೂರ್ಣವಾಗಿ ಬದಲಾಗಿದ್ದಾರೆ.  ನೋಡಲಿಕ್ಕೆ ಎರಡು ರೌಂಡು ದಪ್ಪಗಾಗಿದ್ದಾರೆ. ಮದುವೆಯಾಗಿದ್ದಾರೆ. ಅಶೋಕ್ ಖೇಣಿಯವರ `ನೈಸ್' ಕಂಪನಿಯಲ್ಲಿ ಒಳ್ಳೆಯ ಹುದ್ದೆ. ಹುದ್ದೆಗೆ ತಕ್ಕ ಹಾಗೆ ಡ್ರೆಸ್ ಕೋಡ್, ಒಟ್ಟಾರೆ ಕಾಪರ್ೊರೇಟ್ ಲುಕ್. ಹೆಂಡತಿ ಜೊತೆಗೊಬ್ಬ ಪುಟಾಣಿ ಮಾಸ್ಟರ್. ಅಪಾರ ಸ್ನೇಹಿತ ಬಳಗ ಜೊತೆಗೊಂದಿಷ್ಟು ಪ್ರವಾಸ, ಓದು ಕಥನ. ಇದು ಸದ್ಯದ ಮಾಸ್ಟರ್ ದುನಿಯಾ..!
ಮಂಜುನಾಥ್ ನಾಯಕರ್ ಅಲಿಯಾಸ್ ಮಾಸ್ಟರ್ ಮಂಜುನಾಥ್ ಹೀಗಿದ್ದಾರಾ ಅಂತ ಕಲ್ಪನೆ ಕೂಡ ಮಾಡಿಕೊಳ್ಳಲು ಆಗುವುದಿಲ್ಲ. ಮಾಸ್ಟರ್ ಮಂಜುನಾಥ್ ಹೀರೋ ಆಗದಿದ್ದುದಕ್ಕೆ ಈ ರೀತಿ ಬದುಕುತ್ತಿದ್ದಾರೆ. ಅಕಸ್ಮಾತ್ ಹೀರೋ ಆಗಿದ್ದರೆ ಇತರ ಹೀರೋಗಳಂತೆಯೇ ಇರುತ್ತಿದ್ದರೇನೋ..? ಅನ್ನುವ ಕಲ್ಪನೆ ಮಾತ್ರ ಶುಧ್ಧ ಸುಳ್ಳು. ಜೀವನದಲ್ಲಿ ಒದಗುವ ಕೆಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದಿದ್ದರೆ ಜೀವನದಲ್ಲಿ ನಾವು ಸೋಲುವುದಂತೂ ಖಂಡಿತ ಅನ್ನುವುದು ಮಾಸ್ಟರ್ ಕಂಡುಕೊಂಡಿರುವ ಸತ್ಯ..!
ಜೀವನದ ಕೆಲವು ಪ್ರಮುಖ ಘಟ್ಟಗಳಲ್ಲಿ ಕೆಲವೊಂದು ನಿಧರ್ಾರಗಳನ್ನ ತೆಗೆದುಕೊಳ್ಳಲೇಬೇಕಾಗುತ್ತದೆ. ಆ ನಿಧರ್ಾರದ ಮೇಲೆ ನಮ್ಮ ಜೀವನದ ಸಾಧನೆ ನಿಧರ್ಾರವಾಗುತ್ತೆ. ಅಕಸ್ಮಾತ್ ನಮ್ಮ ನಿಧರ್ಾರಗಳು ಕೆಲವೊಮ್ಮ್ಮೆ ತಪ್ಪಾದರೆ ಜೀವನವಿಡೀ ಕೊರಗಬೇಕಾಗುತ್ತದೆ. ಆ ಥರಹದ ಪ್ರಶ್ನೆ ಮಂಜುನಾಥ್  ಜೀವನದಲ್ಲಿಯೂ ಕೂಡ ಬಂದಿತ್ತಂತೆ. ಅದು ರಾಮಾಚಾರಿ ಸಿನಿಮಾದ ನಂತರ. ಕಮಷರ್ಿಯಲಿ ಆಗ ರಾಮಾಚಾರಿ ದೊಡ್ಡ ಹಿಟ್ ಸಿನಿಮಾವಾಗಿತ್ತು. ರವಿಚಂದ್ರನ್ರವರ ಬಾಲನಟನ ಪಾತ್ರದಲ್ಲಿ ಮಿಂಚಿದ್ದ  ಮಂಜುನಾಥ್ಗೆ ಒಳ್ಳೆಯ ಹೆಸರು ಬಂದಿತ್ತು. ಸಕ್ಸಸ್ ಅಂದ್ರೆ ಏನು ಅಂತ ಗೊತ್ತಿತ್ತು. ಬಾಲನಟನ ಪಾತ್ರಕ್ಕೆ ಆಗ ಮಾಸ್ಟರ್ ಬೇಡಿಕೆಯ ನಟ. ಹೀಗಿದ್ದರೂ ಸಿನಿಮಾ ಬೇಸರವಾಯಿತು. ಮಾಡಿದ  ಪಾತ್ರಗಳನ್ನೇ ಮತ್ತೇ ಮಾಡಬೇಕೆ? ಅದೇ ಶೂಟಿಂಗ್, ಸ್ಟುಡಿಯೋ ಸೆಟ್, ಅದೇ ವಾತಾವರಣ ಇದರಲ್ಲೇ ಎಷ್ಟು ದಿನ ಅಂತ ಮುಂದುವರೆಯೋದು. ಆಗಲೇ ಒಬ್ಬ ಹೀರೊಗಿದ್ದಷ್ಟೇ ಡಿಮ್ಯಾಂಡ್ ಹಾಗು ಜನಪ್ರಿಯತೆ ಹೊಂದಿದ್ದ ಮಾಸ್ಟರ್ಗೆ ಏಲ್ಲೋ ಒಂದು ಕಡೆ ತನ್ನ ಅಮೂಲ್ಯವಾದ ಬಾಲ್ಯ ಜೀವನ, ಶಿಕ್ಷಣ, ಸ್ನೇಹಿತರು ನನ್ನದೇ ಆದ ವೈಯಕ್ತಿಕ ಬದುಕು ಎಲ್ಲವೂ ಮಿಸ್ ಆಗಿತ್ತು.
ನಾನು ನಾನಾಗಿದ್ದರೆ ಸಾಕಾಗಿತ್ತು..!
`ಚಿಕ್ಕವನಾಗದ್ದಾಗ ನನಗೆ ಮಸಾಲೆ ಪುರಿ ಅಂದರೆ ತುಂಬಾ ಇಷ್ಟವಾಗಿತ್ತು, ಏಲ್ಲೋ ಒಂದು ಕಡೆ ನನ್ನ ಪಾಡಿಗೆ ಸಂತೋಷವಾಗಿ ತಿನ್ನೋಣ ಅಂದರೆ ಅದು ಕೂಡ  ಆಗುತ್ತಿರಲಿಲ್ಲ. ನಾ ಇದ್ದಲ್ಲಿ ಜನ ಬಂದು ನನ್ನನ್ನ ಮಾತನಾಡಿಸೋರು, ಆಟೋಗ್ರಾಫ್ ಕೇಳೋರು. ಅದು ಅವರ ತಪ್ಪಲ್ಲ ಬಿಡಿ..ಆದರೂ ನನಗೆ ನನ್ನದೇ ಆದ ವೈಯಕ್ತಿಕ ಸ್ವಾತಂತ್ರ್ಯ ಇಲ್ಲದಾಗಿತ್ತು. ನನಗೆ ಮಾಸ್ಟರ್ ಅನ್ನೋ ಬಿರುದು ಬೇಕಾಗಿರಲಿಲ್ಲ. ಬರೀ ನಾನು ನಾನಾಗಿದ್ದರೆ ಸಾಕು ಅನ್ನುವ ಭಾವನೆ ಕಾಡುತ್ತಿತ್ತು. ಹಾಗಾಗಿ ಸಿನಿಮಾಗೆ ಬ್ರೇಕ್ ತಗೆದುಕೊಳ್ಳಲೇ ಬೇಕಾದ ನಿಧರ್ಾರಕ್ಕೆ ಬಂದು ಬಿಟ್ಟೆ. ಚೆನ್ನಾಗಿ ಓದಿ ಒಳ್ಳೆಯ ಕೆಲಸ  ಹಿಡಿಯಬೇಕೆಂಬ ವಾತಾವರಣ ನನ್ನ ಮನಸ್ಸಿನಲ್ಲಿ ಸೃಷ್ಟಿಯಾಯಿತು. ಈ ನಿಧರ್ಾರದ ಹಿಂದೆ ನನಗೆ ನನ್ನ ಮೇಲೆ ಅಗಮ್ಯವಾದ ನಂಬಿಕೆಯಿತ್ತು. ಯಾಕೆಂದರೆ ನಾನು ಏನು? ನನ್ನ ಶಕ್ತಿ ಏನು ಎಂಬುದರ ಸಂಪೂರ್ಣ ಅರಿವು ನನಗಿತ್ತು. ಚೆನ್ನಾಗಿ ಓದಿ ನಾನು ಗೆದ್ದೇ ಗೆಲ್ಲುತ್ತೇನೆಂಬ ಛಲವಿತ್ತು. ಓದಿನಲ್ಲೇ ಮುಂದುವರಿದೆ. ನನ್ನ ನಿಧರ್ಾರ ಸರಿಯಾಗಿತ್ತು. ಅಂದು ಇಡೀ ಇಂಡಸ್ಟ್ರೀಯ ಸ್ನೇಹಿತರು ಹಾಗೂ ಆತ್ಮೀಯರು ಎಲ್ಲರೂ ಸಿನಿಮಾ ಬಿಡಬೇಡ ಅಂತ ಬಲವಂತ ಮಾಡಿದ್ದರು. ನನಗೆ ಸಿನಿಮಾ ಜೀವನದ ಸಕ್ಸಸ್ಫುಲ್ ಲೈಫ್ ಸಾಗಾಗಿತ್ತು. ಯೋಚನೆ ಬೇರೆಯಾದರೂ ನಾನು ಸಾಗಿದ ಹಾದಿ ಮಾತ್ರ ಸರಿಯಾಗಿತ್ತು.  ಈಗ ನಾನು ಡಿಗ್ರಿ ಜೊತೆಗೆ ಎಂಎ ಸೋಷಿಯಾಲಿಜಿ ಮಾಡಿದ್ದೇನೆ. ಅದಕ್ಕೆ ತಕ್ಕ ಹಾಗೆ ಒಳ್ಳೆಯ ಕೆಲಸ. ಎಲ್ಲವೂ ನಾನು ಅಂದುಕೊಂಡಂತಯೇ ಸಾಗಿದೆ. ಅದು ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ' ಅನ್ನುತ್ತಾರೆ 35 ವರ್ಷದ ಮಾಸ್ಟರ್ ಮುಂಜುನಾಥ್.

ಶಂಕರನಾಗ್ ಎಂಬ ಶಕ್ತಿ..!
ಕೇವಲ ಇದೊಂದೇ ಕಾರಣ ಅವರನ್ನ ಸಿನಿಮಾದಿಂದ ವಿಮುಖರನ್ನಾಗಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಏಳುವುದಂತು ಖಂಡಿತ. ಹೌದು, ಮಾಸ್ಟರ್ ಚಿಕ್ಕ ವಯಸ್ಸಿನಲ್ಲೇ ನಟನೆಯಿಂದ ರಿಟೈರ್ಮೆಂಟ್  ತೆಗೆದುಕೊಳ್ಳಲಿಕ್ಕೆ ಇನ್ನೊಂದು ಕಾರಣ ಶಂಕರನಾಗ್ ಎಂಬ ಶಕ್ತಿ..! ಆ ದಟ್ಟ ನಿಧರ್ಾರದ ಹಿಂದೆ ಶಂಕರ್ನಾಗರ ಅಗಲಿಕೆ ಇತ್ತು, ನೋವು ಇತ್ತು. ಶಂಕರನಾಗ್ ತೀರಿಕೊಂಡಾಗ ಒಂದು ವಾರ ಉಪವಾಸವಿದ್ದ ಮಾಸ್ಟರ್ಗೆ ಶಂಕರ್ನಾಗ್ ಬಿಟ್ಟರೆ ಬೇರೆ ಯಾರೂ ಅವರ ಸ್ಥಾನದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಶಂಕರನಾಗ್ ಜೊತೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕೀತರ್ಿ ಮಾಸ್ಟರ್ ಮಂಜುನಾಥ್ಗೆ ಸೇರುತ್ತದೆ. ಶಂಕರ್ ಅವರ ಮಾನಸಿಕ ಗುರುವಾಗಿದ್ದರು. ಅವರಿಬ್ಬರಲ್ಲಿ ಉತ್ತಮ ಸ್ನೇಹವಿತ್ತು, ಅಪ್ಪ-ಮಗನ ಸಂಬಂಧವಿತ್ತು.

ಶಂಕರ್ ಜೊತೆ ಮೊದಲ ಭೇಟಿ
ಹೊಸತೀಪರ್ು ಅನ್ನುವ ಸಿನಿಮಾ. ಶಂಕರ್ನಾಗ್ ಅದರ ನಿದರ್ೇಶಕರು. ಮಂಜುನಾಥ್ಗೆ ಅದು ಎಂಟನೇ ಸಿನಿಮಾ ಆಗಿತ್ತು. ಶಂಕರ್  ಜೊತೆಗಿನ ಮೊದಲ ಭೇಟಿ ಹೇಗಿತ್ತು ಎಂಬುದಕ್ಕೆ ಅವರಿಗೆ ನೆನಪಾಗೋದೆ ಇಷ್ಟು. `ನಾ ಶಂಕರ್ನಾಗ್ರವರನ್ನು ಮೊದಲು ಭೇಟಿಯಾದಾಗ ನನ್ನ ವಯಸ್ಸು ಕೇವಲ ಐದು ವರ್ಷ. ಯಾವುದೋ ಹಳ್ಳಿಯಲ್ಲಿ ಶೂಟಿಂಗ್ ನಡೆಯುತ್ತಿತ್ತು. ಅಂಬರೀಷ್ ಕೂಡ ಅದರಲ್ಲಿ ಆ್ಯಕ್ಟ್ ಮಾಡ್ತಾ ಇದ್ರು. ಎಲ್ಲವೂ ಅಸ್ಪಷ್ಟ ಚಿತ್ರಣ. ಆಗ ಶಂಕರನಾಗ್ ದೊಡ್ಡ ನಟ ಅಂತ ಕೂಡ ಗೊತ್ತಿರಲಿಲ್ಲ. ಅವ್ರು ಬಂದ್ರು ನನ್ನನ್ನು ನೋಡಿದ್ರು. ಸ್ವಲ್ಪ ಮಾತಾಡಿದ್ರು. ನನ್ನ ಕಣ್ಣಲ್ಲಿ ಅದೇನ್ ಕಂಡ್ರೋ ಗೊತ್ತಿಲ್ಲ, ನಾನು ಮಾತ್ರ ಅವ್ರು ಕೂಡ ಒಬ್ಬ ಡೈರೆಕ್ಟರ್ ಅಂತ ತಿಳ್ಕೊಂಡೆ. ಮೊದಲ ಸಿನಿಮಾದಲ್ಲಿ ಅಷ್ಟೇನು ಹತ್ತಿರವಾಗದಿದ್ದರೂ ನಂತರ ಸತತವಾಗಿ ಅವರ ಎಲ್ಲ ಸಿನಿಮಾಗಳಲ್ಲಿ ಆಕ್ಟ್ ಮಾಡಲಿಕ್ಕೆ ಅವಕಾಶ ಕೊಟ್ಟರು. ನನ್ನಲ್ಲಿರುವ ಪ್ರತಿಭೆಯನ್ನ ಬೆಳಕಿಗೆ ತಂದ ಮಹಾನ್ ಚೇತನ ಅಂತ ನೆನಪು ಮಾಡಿಕೊಳ್ಳುತ್ತಾರೆ.

ಆಗ ನೀವು ಏಷ್ಟು ಸಂಭಾವನೆ ಪಡೀತಿದ್ರಿ..?
ಹಾ..ಹಾ...ಖಂಡಿತ ನನಗೆ ನೆನಪಿಲ್ಲ. ನನ್ನ ಸಂಭಾವನೆ ವಿಚಾರವನ್ನೆಲ್ಲಾ ನಮ್ಮಪ್ಪನೇ ನೋಡ್ಕೊಳ್ತಾ ಇದ್ರು..ಈಗಿನಂತೆ ಹಣದ ಹಿಂದೆ ಬೀಳುವಂತಹ ಸ್ವಭಾವ ಆಗ ಇರಲಿಲ್ಲ. ತುಂಬಾ ಡಿಸೆಂಟ್ ಆಗಿ ಸಂಭಾವನೆ ಕೊಡ್ತಿದ್ರು ಅಂತ ಹೇಳ್ತಿದ್ರು. ಆದರೆ ಏಷ್ಟು ಏನು ಅಂತ ಮಾತ್ರ ಗೊತ್ತಿಲ್ಲ.ಅದೆಲ್ಲಾ ನಮ್ಮಪ್ಪನಿಗೆ ಗೊತ್ತಿತ್ತು..ನನಗೆ ಸಂಭಾವನೆ ಎಷ್ಟು ಕೊಡ್ತಿದ್ರು ಅಂತ ಕೇಳೋಕೆ ನಮ್ಮಪ್ಪ ಈಗಿಲ್ಲ..!

ಮಾಲ್ಗುಡಿಯ ನೆನಪುಗಳು.. 
ಅಂದು ಕೇವಲ ಕನರ್ಾಟಕಕ್ಕೆ ಮಾತ್ರ ಸ್ಟಾರ್ ಆಗಿದ್ದ ಮಾಸ್ಟರ್ ಮುಂಜುನಾಥ್ ನಂತರ ಇಡೀ ದೇಶದ ಗಮನ ಸೆಳೆಯುವ ಮೂಲಕ ದೊಡ್ಡ ಸ್ಟಾರ್ ಆಗಿದ್ದು ಮಾಲ್ಗುಡಿ ಡೇಸ್ ಧಾರಾವಾಹಿಯ ನಂತರ. ಅದರಲ್ಲೂ ಸ್ವಾಮಿ ಆಂಡ್ ಫ್ರೆಂಡ್ಸ್ನ ಮೂಲಕ ಎಲ್ಲರ ಮನೆಮಾತಾದ ಮೇಲೆ ಹಿಂದಿ ಹಾಗೂ ಇತರ ಭಾಷೆಗಳಿಂದಲೂ ಅವಕಾಶ ಬರಲಿಕ್ಕೆ ಪ್ರಾರಂಭವಾಯಿತು.


ಆರ್ಕೆ ನಾರಾಯಣ್ರ ಮಾಲ್ಗುಡಿ ಡೇಸ್ ಕೃತಿಯನ್ನ ಧಾರಾವಾಹಿಯನ್ನಾಗಿ ಮಾಡುವ ಸಾಹಸಕ್ಕೆ ದೂರದರ್ಶನ ಕೈ ಹಾಕಿತ್ತು. ಅದು ಹಿಂದಿ ಮತ್ತು ಇಂಗ್ಲೀಷ್ನಲ್ಲಿ. ಶಂಕರ್ನಾಗ್ ನಿದರ್ೇಶನ ಮಾಡುವುದಾಗಿತ್ತು. ಮಾಲ್ಗುಡಿ ಡೇಸ್ನ `ಸ್ವಾಮಿ' ಅನ್ನುವ ದೊಡ್ಡ ಪಾತ್ರಕ್ಕೆ ಶಂಕರ್ನಾಗ್ ನನ್ನನ್ನ ಆಯ್ಕೆ ಮಾಡಿಕೊಂಡಾಗ ಎಲ್ಲರಲ್ಲೂ ಸ್ವಲ್ಪ ಅಳಕಿತ್ತು. ಏಕೆಂದರೆ ನನಗೆ ಹಿಂದಿ ಮತ್ತು ಇಂಗ್ಲೀಷ್ ಬರುತ್ತಿರಲಿಲ್ಲ. ಭಾಷೆ ಗೊತ್ತಿಲ್ಲದವನಿಗೆ ಭಾಷೆ ಕಲಿಸಿ ಎಪಿಸೋಡ್ ಮಾಡಲಿಕ್ಕೇ ಆಗುತ್ತಾ ಅನ್ನೋ ಡೌಟು ಎಲ್ಲರಿಗೂ ಬಂದಿತ್ತು. ಹಾಗಾಗಿ ಕೆಲವರು ಭಾಷೆ ಗೊತ್ತಿರುವ ಹುಡುಗನನ್ನೇ ಹಾಕಿಕೊಳ್ಳಿ ಅಂತ ಒತ್ತಡ ಕೂಡ ಮಾಡಿದ್ರು. ಶಂಕರ್ನಾಗ್ ಮಾತ್ರ ಧೈರ್ಯ ಮಾಡಿ ನನ್ನನ್ನ ಹಾಕಿಕೊಂಡು ಪೈಲಟ್ ಎಪಿಸೋಡ್ ಮಾಡಿಯೇ ಬಿಟ್ರು. ನಾನು ಕೂಡ ಹಿಂದಿ ಕಲಿತು ಸ್ವಲ್ಪ ಕಷ್ಟಪಟ್ಟು ಸ್ವಾಮಿ ಪಾತ್ರ ಮಾಡಿದೆ. ಮೊದಲ ಎಪಿಸೋಡ್ ಎಲ್ಲರಿಗೂ ಇಷ್ಟವಾಯಿತು. ಎಲ್ಲರೂ ನನ್ನ ಪಾತ್ರ ನೋಡಿ ಇವನೇ ಸ್ವಾಮಿ ಪಾತ್ರಕ್ಕೆ ಇರಲಿ ಅಂತ ಫೈನಲ್ ಮಾಡಿದ್ರು. ನಮ್ ಕನರ್ಾಟಕದಲ್ಲೇ ಶೂಟಿಂಗ್..ಅದು ಆಗುಂಬೆ ಹತ್ತಿರ ಮೂರು ತಿಂಗಳು ಕ್ಯಾಂಪ್. ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಿದ್ದೇವು. ಒಟ್ಟಾರೆ ಮಾಲ್ಗುಡಿ ಅನುಭವ ತುಂಬಾನೇ ಚೆನ್ನಾಗಿತ್ತು. ನನ್ನ ಜೀವನದಲ್ಲಿ ಅದೊಂದು ಮರೆಯಲಾಗದ ಕ್ಷಣಗಳು' ಹೀಗೆ ಮಾಲ್ಗುಡಿಯ ನೆನಪು ಮಾಡಿಕೊಳ್ಳುತ್ತಾರೆ ಮಂಜುನಾಥ್.
ಮಾಸ್ಟರ್ ಸಿನಿಮಾ ನಟನೆಯಿಂದ ಸ್ವಲ್ಪ ದೂರವಾದರೂ ಟಿವಿ ಧಾರಾವಾಹಿಗಳಲ್ಲಿ ನಟಿಸುವುದನ್ನ ಮಾತ್ರ ಬಿಡಲಿಲ್ಲ. ಟೀವಿಯಲ್ಲಿ ಮಾಲ್ಗುಡಿ ಡೇಸ್ ನಂತರ  ಸೀರಿಯಲ್ಗಳಲ್ಲಿ ಅವರನ್ನ ಸಮರ್ಥವಾಗಿ ಬಳಸಿಕೊಂಡವರು ಎನ್.ಎಸ್.ಶಂಕರ್. ಅವರ ಒಳ್ಳೊಳ್ಳೆಯ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಚಕ್ರ, ಕ್ಷಮಯಾ ಧರಿತ್ರಿ, ಶೋಧ ವಿಭಿನ್ನ ಕಥಾಹಂದರವನ್ನು ಹೊಂದಿದ ಧಾರಾವಾಹಿಗಳಾಗಿದ್ದವು.

ಸಿನಿಮಾ ಜೀವನಕ್ಕೆ ಮತ್ತೇ ಖಂಡಿತ ಬರುತ್ತೇನೆ
ಆಗೆಲ್ಲಾ ಆ್ಯಕ್ಟಿಂಗ್ ಮಾಡುವುದೇ ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿತ್ತು. ಜನರಿಂದ ಬರುತ್ತಿದ್ದ ಚಪ್ಪಾಳೆ ಹಾಗೂ ಸಿಗುತ್ತಿದ್ದ ಪ್ರೀತಿ  ಇದೆಯೆಲ್ಲಾ ಅದು ಏಷ್ಟು ಕೋಟಿಗೂ, ಯಾವ ಪ್ರಶಸ್ತಿಗೂ ಸಮನಾಗಿರಲಿಲ್ಲ. ಅಂದು ಕೂಡ  ಹಣ ಬೇಕಾಗಿತ್ತು, ಆದರೆ ಅದು ಯಾವತ್ತು ಮೊದಲ ಸ್ಥಾನದಲ್ಲಿರಲಿಲ್ಲ. ಆದರೆ ಇಂದು ಎಲ್ಲಾ ಉಲ್ಟಾ..! ಹಾಗಂತ ಈಗಿನ ಸಿಸ್ಟೆಂನ್ನ ದೂರ್ತಾ ಇಲ್ಲ. ಪರಿಸ್ಥಿತಿ ಜೊತೆಗೆ ಬದಲಾವಣೆ ಕೂಡ ಬೆಳವಣಿಗೆಗೆ ಅತಿ ಮುಖ್ಯ  ಅನ್ನುವ ಪರಿಪಾಠ ಇಂದು  ಬೆಳೆದು ಬಿಟ್ಟಿದೆ.
ಸಿನಿಮಾ ಲೈಫು ಒಂದು ಹಂತದವರೆಗೆ ನನ್ನ ಜೀವನದಲ್ಲಿ  ದೊಡ್ಡ ತಿರುವು ಕೊಟ್ಟಂತಹ ಮಾಧ್ಯಮ. ಸಿನಿಮಾಗಳಿಂದ ನಾನು ಬೇಕಾದಷ್ಟು ಕಲಿತಿದ್ದೇನೆ. ದೊಡ್ಡ ದೊಡ್ಡ ಮಹಾನ್ ನಟರುಗಳನ್ನು ಭೇಟಿ ಮಾಡುವ ಅವಕಾಶವನ್ನು ಒದಗಿಸಿದೆ. ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್ಗಳಲ್ಲಿ ಭಾಗವಹಿಸುವಂತೆ ಮಾಡಿದೆ. ಯಾವುದೇ ವಿಷಯವನ್ನ ಬೇಗ ಗ್ರಹಿಸುವ ಶಕ್ತಿಯನ್ನು ನೀಡಿದೆ. ಹಾಗಂತ ಸಿನಿಮಾಗಳಿಂದ ನಾನು ಸಂಪೂರ್ಣವಾಗಿ ದೂರ ಇರಲೆಬೇಕೆಂದು ನಿರ್ಧರಿಸಿಲ್ಲ. ಒಂದು ಹಂತದವರೆಗೆ  ಸದ್ಯದ  ಜೀವನವನ್ನು ಸುಧಾರಿಸಿಕೊಂಡು ಮತ್ತೇ ಬರುವ ಆಲೋಚನೆ ಖಂಡಿತ ಇದೆ. ಈಗಲೂ ಸಿನಿಮಾದವರ ಕಾಂಟ್ಯಾಕ್ಟ್ ಇದೆ. ಆಗಾಗ ಸ್ನೇಹಿತರಲ್ಲಾ ಒಳ್ಳೊಳ್ಳೆಯ ಸಿನಿಮಾಗಳನ್ನ ನೋಡುತ್ತೇವೆ. ಸಿನಿಮಾಗಳ ಬಗ್ಗೆ ಚಚರ್ೆ ಮಾಡುತ್ತೇವೆ.

ಇತ್ತೀಚೆಗೆ ನೋಡಿದ ಸಿನಿಮಾ..?
ಇತ್ತೀಚೆಗೆ ಬಿಡುಗಡೆಯಾದ ಎಲ್ಲ ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಯಾವುದನ್ನ ಬಿಟ್ಟಿಲ್ಲ. ಒಂದೊಂದು ಸಿನಿಮಾ ಒಂದೊಂದು ರೀತಿಯಲ್ಲಿ ತುಂಬಾ ಇಷ್ಟವಾಗಿವೆ. ಅದರಲ್ಲೂ ಉಪೇಂದ್ರರವರ `ಸೂಪರ್' ಸಿನಿಮಾನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೆ.

ನಿಂಗೇನ್ ನೋವಾ..!
ಮಾಸ್ಟರ್ಗೆ ವಿಪರೀತ ಸ್ನೇಹಿತರು..! ಅವರ್ಯಾರು ಸಿನಿಮಾ ಉದ್ಯಮದ ಸ್ನೇಹಿತರಲ್ಲ. ಅವರ ಬಾಲ್ಯದ ಗೆಳೆಯ ರವೀಂದ್ರ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜನೀಯರ್. ಒಂದು ಎಮ್ಎನ್ಸಿ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿದ್ದಾರೆ. ರವೀಂದ್ರನ ಮೂಲಕ ಪರಿಚಯವಾದವರೆಲ್ಲಾ ಇಂದು ಮಾಸ್ಟರ್ನ ದೊಡ್ಡ ಅಭಿಮಾನಿಗಳು ಜೊತೆಗೆ ಒಳ್ಳೆಯ ಸ್ನೇಹಿತರು. ಎಲ್ಲರೂ ಸಮಾನ ಮನಸ್ಕರು, ಅಭಿರುಚಿ ಒಂದೇ. ಎಲ್ಲರೂ ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮದೇ ಸ್ವಂತ ಕಂಪನಿಗಳನ್ನು ನಡೆಸುತ್ತಿದ್ದಾರೆ.  ರಜೆ ಸಿಕ್ಕಾಗಲೆಲ್ಲಾ ಒಂದೆಡೆ ಸೇರುವುದು, ಮಾತು ಹರಟೆ ಊಟ ತಿಂಡಿಗೇನು ಕಡಿಮೆಯಿಲ್ಲ..! ಇವರೆಲ್ಲರೂ ಯಾವಾಗಲೂ ಜೊತೆಗಿರೋದನ್ನ ನೋಡಿದವರೆಲ್ಲಾ ಯಾಕೆ, ಏನು ಅಂತೆಲ್ಲಾ ಕೇಳುತ್ತಿದ್ದರಂತೆ. ಹೀಗೆ ಕೇಳಿದವರಿಗೆಲ್ಲಾ ಅವರು ಹೇಳುತ್ತಿದ್ದ  ರೆಡಿಮೇಡ್ ಉತ್ತರ `ನಿಂಗೇನ್ ನೋವಾ..?' ಅಂತ. ಕೊನೆಗೆ ನಿಂಗೇನ್ ನೋವಾ ಹೆಸರೆ ಚೆನ್ನಾಗಿದೆ, ಇದನ್ನೇ ನಮ್ಮ ಟೀಮಿಗೇಕೆ ಇಟ್ಟುಕೊಳ್ಳಬಾರದು ಅಂತ ಯೋಚನೆ ಮಾಡಿ ಅವರ ಟೀಮಿಗೆ `ನಿಂಗೇನ್  ನೋವಾ' ಅಂತ ನಾಮಕರಣ ಮಾಡಿಕೊಂಡಿದ್ದಾರೆ. ಈ ಟೀಮ್ನ ಎಲ್ಲರೂ ಆಗಾಗ ಬಿಡುವು ಮಾಡಿಕೊಳ್ಳುತ್ತಾರೆ, ಟ್ರಾವೆಲಿಂಗ್ ಅಂದರೆ ಎಲ್ಲರಿಗೂ ಇಷ್ಟ. ಬರೀ ಊರೂರು ತಿರುಗುವುದು ಹಾಗೂ ಹೊಸ ಹೊಸ ಸ್ಥಳಗಳನ್ನ ನೋಡೊದೇ ಇವರ ದೊಡ್ಡ ಹವ್ಯಾಸ. ಮಾಸ್ಟರ್ ಹೇಳುವಂತೆ `ಕನರ್ಾಟಕದಲ್ಲಿರುವಂಹ ಕೆಲವು ಸುಂದರ ಸ್ಥಳಗಳು ಇಡೀ ಜಗತ್ತಿನಲ್ಲೇ ಇಲ್ಲ. ಸಿನಿಮಾ ಶೂಟಿಂಗ್ ಅಂತ ನೀವು ಫಾರನ್ಗೆ ಹೋಗಬೇಕಾಗಿಲ್ಲ, ನಮ್ಮ ಕನರ್ಾಟಕದಲ್ಲೇ ಅತ್ಯಂತ ಸುಂದರವಾದ ಸ್ಥಳಗಳಿವೆ,  ಅದರಲ್ಲೂ ಪಶ್ಚಿಮ ಘಟ್ಟಗಳಲ್ಲಿ ಓಡಾಡಿದರೆ ನಿಮಗೆ ಸಿಗುವಷ್ಟು ಮಜಾ ಬೇರೆಲ್ಲೂ ಸಿಗುವುದಿಲ್ಲ ಎನ್ನುತ್ತಾರೆ. ಈಗಾಗಲೇ ಮಾಸ್ಟರ್ ತಮ್ಮ ಸ್ನೇಹಿತರ ಟೀಮ್ ಜೊತೆ ಕನರ್ಾಟಕದ ಇಂಚು ಇಂಚನ್ನು ನೋಡಿದ್ದಾರಂತೆ. ಇನ್ನೇನು ಶೇ.10ರಷ್ಟು ಮಾತ್ರ ಬಾಕಿ ಇದೆಯಂತೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಅದು ಕೂಡ ಮುಗಿಯಲಿದೆಯಂತೆ.




ಡೈರೆಕ್ಷನ್ ಗ್ಯಾರೆಂಟಿ..!
ಇತ್ತೀಚೆಗೆ ನನಗೆ ಎಲ್ಲರೂ ಕೇಳುತ್ತಿರುವ ಪ್ರಶ್ನೆ. `ನೀವು ಶಂಕರನಾಗ್ ಥರ ನಿದರ್ೇಶನ ಮಾಡ್ತೀರಾ ಅಂತ..?' ಯಾಕೆ ಮಾಡಬಾರದು ಅಂತ ನನಗೆ ಅನಿಸಿದ್ದಂತೂ ನಿಜ. ಅಫ್ಕೋಸರ್್ ಖಂಡಿತಾ ಸಿನಿಮಾ ನಿದರ್ೇಶನ ಮಾಡ್ತೀನಿ. ಅದಕ್ಕೆ ಆಟರ್್ ಅಥವಾ ಕಮಷರ್ಿಯಲ್ ಅನ್ನುವ ಮುಖವಾಡ ಇರುವುದಿಲ್ಲ. ನಾನು ಆಕ್ಟ್ ಮಾಡಿದ್ದು ಜಾಸ್ತಿ ಆಟರ್್ ಮೂವಿಯಾದ್ರೂ, ನನ್ ಡೈರೆಕ್ಷನ್ ಸಿನಿಮಾ ಮಾತ್ರ ಪಕ್ಕಾ ಎಂಟರ್ಟೇನ್ಮೆಂಟ್ ಆಗಿರುತ್ತೆ..ಜನರು ಬಂದು ನೋಡಿ ಖುಷಿಪಡಬೇಕಷ್ಟೇ..! ನಾನು ಕೂಡ ಮೆಂಟಲಿ ತಯಾರಾಗ್ತಾ ಇದೀನಿ. ಸ್ಕ್ರಿಪ್ಟ್ ವಕರ್್ ನಡಿತಿದೆ. ಡೈರೆಕ್ಷನ್, ಪ್ರೊಡಕ್ಷನ್ ಎಲ್ಲ್ಲಾ ಒಂದ್ಸಲ  ಫೈನಲ್ ಆದ್ಮೇಲೆ ಸಿನಿಮಾ ಮಾಡ್ತೀನಿ, ಆದರೆ ಆಕ್ಟಿಂಗ್ ಬಿಟ್ಟು..!

ಆಗಿನ ಬಾಲ ನಟರುಗಳನ್ನು ಭೇಟಿಯಾಗ್ತಿರ್ತಿರಾ?
ಪುನೀತ್, ವಿಜಯ್ ರಾಘವೇಂದ್ರ, ಆನಂದ ಎಲ್ಲರೂ ಆಗಾಗ ಸಿಗ್ತಾ ಇರ್ತಾರೆ. ನಾನು ಕೂಡ ಅವ್ರನ್ನ ಭೇಟಿಯಾಗ್ತಾ ಇರ್ತೀನಿ. ಅದ್ರಲ್ಲೂ ನಾನ್ ಮಾಸ್ಟರ್ ಆನಂದ್ರ ದೊಡ್ಡ ಫ್ಯಾನ್.

ನಿಮಗಿಷ್ಟವಾದ ನಟರುಗಳು..?
ಅಮಿತಾಭ್ ಬಚ್ಚನ್ ನನ್ನ ಆಲ್ಟೈಮ್ ಫೇವರಿಟ್..! ನಾ ಚಿಕ್ಕವನಾಗಿದ್ದಾಗಿನಿಂದಲೂ ರಜನಿಕಾಂತ್ ಅಂದ್ರೆ ತುಂಬಾ ಇಷ್ಟ. ಅವರ ಸ್ಟೈಲ್, ಆಕ್ಟಿಂಗ್ ನನಗೆ ಸಿಕ್ಕಾಪಟ್ಟೆ ಇಂಪ್ರೆಸ್ ಮಾಡಿತ್ತು. ಅವರನ್ನ ಎರಡು ಸಾರಿ ಭೇಟಿ ಕೂಡ ಮಾಡಿದ್ದೆ. ನಮ್ಮ ಕನ್ನಡದಲ್ಲಿ ಡಾ.ರಾಜ್ಕುಮಾರ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಅವರನ್ನು ಭೇಟಿ ಮಾಡುವುದಕ್ಕಿಂತ  ಮುಂಚೆ ಅವರ ಒಂದು ಸಿನಿಮಾನೂ ನೋಡಿರಲಿಲ್ಲ. ಒಂದ್ಸಲ ಅವರನ್ನ ಭೇಟಿ ಮಾಡಿದ್ಮೇಲೆ, ಅವರ ಸಿನಿಮಾಗಳನ್ನ ಹೆಚ್ಚೆಚ್ಚು ನೋಡಲಿಕ್ಕೆ ಶುರುಮಾಡಿದೆ.
ಅವರೊಂಥರ ಒಬ್ಬ ಕಲಾವಿದರಿಗೆ ಪಾಠವಾಗುವ ಮಹಾನ್ ಕಲಾವಿದ. ನಿಜವಾಗ್ಲೂ ಭಕ್ತ ಪ್ರಹ್ಲಾದ್ ಸಿನಿಮಾದಲ್ಲಿ ಹನ್ನೆರಡು ಪೇಜ್ ಡೈಲಾಗನ್ನ ಒಂದೇ ರೀಟೇಕ್ ಇಲ್ಲದೇ ಹೇಳ್ತಿದ್ರಂತೆ. ನಮ್ಗೆಲ್ಲಾ 4 ರಿಂದ 5 ಸಾಲು ಡೈಲಾಗ್ ನೆನಪಿನಲ್ಲಿಟ್ಟುಕೊಳ್ಳೋದೇ ದೊಡ್ಡ ಕಷ್ಟವಾಗ್ತಿತ್ತು. ಅಂತದ್ರಲ್ಲಿ  ಅವ್ರು ಎರಡು ಮೂರು ಪೇಜ್ ಡೈಲಾಗ್ ಹೇಳ್ತಿದ್ರಲ್ಲ, ಅದೇಕೆ ಸಾಧ್ಯವಾಯ್ತು? ನಿಜಕ್ಕೂ ರಾಜ್ಕುಮಾರ್ರವ್ರು ತುಂಬಾನೇ ಗ್ರೇಟ್ ಅನಿಸುತ್ತೆ. ಅದೇ ತರ ವಿಷ್ಣುವರ್ಧನ್, ಶಂಕರ್ನಾಗ್ ಅವರೂ ಕೂಡ ದೊಡ್ಡ ನಟರುಗಳೇ.


ನಿಮ್ಮ ಪ್ರಕಾರ ಬೆಸ್ಟ್ ಕಾಮಿಡಿ ನಟ ?
ಅನಂತ್ನಾಗ್


ನಿಮಗಿಷ್ಟವಾದ ನಿಮ್ಮ ಪಾತ್ರ ಹಾಗೂ ತುಂಬಾ ಸವಾಲಿನ ಪಾತ್ರ..? 
ಮಾಲ್ಗುಡಿ ಡೇಸ್ನ ನಾಗಾ ಮತ್ತು ಕೋತಿಯ ಪಾತ್ರ ತುಂಬಾ ಇಷ್ಟ ಹಾಗೂ ಕಷ್ಟಪಟ್ಟ ಪಾತ್ರವಾಗಿತ್ತು.  ಅದೇ ಥರ ತುಂಬಾ ಛಾಲೆಂಜಿಂಗ್ ಅಂತ ಅನಿಸಿದ್ದು ತೆಲುಗಿನ ಸ್ವಾತಿಕಿರಣ ಅನ್ನೋ ಸಿನಿಮಾದಲ್ಲಿ ಮಾಡಿದ ಗಾಯಕನ ಪಾತ್ರ. ಆ ಪಾತ್ರದಲ್ಲಿ ನನಗೆ ಸಂಗೀತ ಗೊತ್ತಿರುವುದಿಲ್ಲ ಆದರೂ ನನಗೆ ಸಂಗೀತ ಗೊತ್ತು  ಅನ್ನೋ ತರ ಆ್ಯಕ್ಟ್ ಮಾಡಬೇಕು. ಈ ಪಾತ್ರಕ್ಕೆ ನನಗೆ ಆಂಧ್ರಪ್ರದೇಶದಲ್ಲಿ ದೊಡ್ಡ ಪ್ರಶಂಸೆ ಸಿಕ್ಕಿತ್ತು.

ಮದುವೆ,ಸಂಸಾರ ಹೇಗಿದೆ ?
ಚೆನ್ನಾಗಿದೆ, ಮ್ಯಾರೇಜ್ ಆಗಿ 11 ವರ್ಷ ಆಯ್ತು. ಮಗ ಹುಟ್ಟಿದಾನೆ. ವೇದಾಂತ್ ಅಂತ ಹೆಸರು. ಒಟ್ನಲ್ಲಿ ತುಂಬಾ ಚೆನ್ನಾಗಿ ನಡೀತಾ ಇದೆ ಸಂಸಾರ.