ಅಮ್ಮನ ಮಾಂಸವ ಉಂಡು,
ಅಪ್ಪನ ರಕ್ತವ ಕುಡಿದು…
ಹುಟ್ಟುವ ಖ(ಅ)ನಿಜಗಳು ಲೆಕ್ಕವಿಲ್ಲದಷ್ಟೋ!
ಉಂಡರೂ,ಕುಡಿದರೂ ಹುಟ್ಟುವ ಮುನ್ನ
ನಾನು ಬರುವುದು ನಿನಗಾಗಿ,
ನಾನು ನಾನಾಗಿಯೇ ಬಾಳುವೆ..
ಅನ್ನುವ ಮರಿಗಳು ಅವಳಿಗೆ ಬೇಕು.
ಆ ಮರಿಗಳ ನಿರೀಕ್ಷೆಯ ಪುಟದಲಿ ಕುಳಿತು
ಕಾಯುತ್ತಿರುವ ಹಸಿ ಪಸಿ ಭೂಮಿಯಲಿ
ಹುಟ್ಟಿರುವ ನಾವೆಲ್ಲರೂ ಧನ್ಯರು…!
ಅಪ್ಪನ ರಕ್ತವ ಕುಡಿದು…
ಹುಟ್ಟುವ ಖ(ಅ)ನಿಜಗಳು ಲೆಕ್ಕವಿಲ್ಲದಷ್ಟೋ!
ಉಂಡರೂ,ಕುಡಿದರೂ ಹುಟ್ಟುವ ಮುನ್ನ
ನಾನು ಬರುವುದು ನಿನಗಾಗಿ,
ನಾನು ನಾನಾಗಿಯೇ ಬಾಳುವೆ..
ಅನ್ನುವ ಮರಿಗಳು ಅವಳಿಗೆ ಬೇಕು.
ಆ ಮರಿಗಳ ನಿರೀಕ್ಷೆಯ ಪುಟದಲಿ ಕುಳಿತು
ಕಾಯುತ್ತಿರುವ ಹಸಿ ಪಸಿ ಭೂಮಿಯಲಿ
ಹುಟ್ಟಿರುವ ನಾವೆಲ್ಲರೂ ಧನ್ಯರು…!
ಸೂರ್ಯ, ಚಂದ್ರರು ಗಂಡಾಗಿ ಬಿಸಿಲಾಗಿ, ತಂಪಾಗಿ
ಆಕೆಯನು ಕಾಡಿದರೂ,
ಅವಳ ತಾಳ್ಮೆಯ ಬಿಸಿ ಎಂದಿಗೂ ಆರುವುದೇ ಇಲ್ಲ…
ಆರದೇ, ಉರಿಯದೇ, ಹರಿಯದೇ ತಂಪಾಗಿರುವ
ಈ ಮಣ್ಣಿನ ಮಹಿಮೆಯ ಏನೆಂದು ಹೇಗೆ ಬಣ್ಣಿಸಲಿ?
ಕ್ಷಮಯಾಧರಿತ್ರಿಯ ಹೊಟ್ಟೆಯಲಿ ನಾವೆಲ್ಲರೂ…