Sunday 13 January 2013

ಬಣ್ಣಿಕೆಯ ನೋವು!



ಅಮ್ಮನ ಮಾಂಸವ ಉಂಡು,
ಅಪ್ಪನ ರಕ್ತವ ಕುಡಿದು
ಹುಟ್ಟುವ ()ನಿಜಗಳು ಲೆಕ್ಕವಿಲ್ಲದಷ್ಟೋ!
ಉಂಡರೂ,ಕುಡಿದರೂ ಹುಟ್ಟುವ ಮುನ್ನ
ನಾನು ಬರುವುದು ನಿನಗಾಗಿ,
ನಾನು ನಾನಾಗಿಯೇ ಬಾಳುವೆ..
ಅನ್ನುವ ಮರಿಗಳು ಅವಳಿಗೆ ಬೇಕು.
ಮರಿಗಳ ನಿರೀಕ್ಷೆಯ ಪುಟದಲಿ ಕುಳಿತು
ಕಾಯುತ್ತಿರುವ ಹಸಿ ಪಸಿ ಭೂಮಿಯಲಿ
ಹುಟ್ಟಿರುವ ನಾವೆಲ್ಲರೂ ಧನ್ಯರು…!
ಸೂರ್ಯ, ಚಂದ್ರರು ಗಂಡಾಗಿ ಬಿಸಿಲಾಗಿ, ತಂಪಾಗಿ
ಆಕೆಯನು ಕಾಡಿದರೂ,
ಅವಳ ತಾಳ್ಮೆಯ ಬಿಸಿ ಎಂದಿಗೂ ಆರುವುದೇ ಇಲ್ಲ
ಆರದೇ, ಉರಿಯದೇ, ಹರಿಯದೇ ತಂಪಾಗಿರುವ
ಮಣ್ಣಿನ ಮಹಿಮೆಯ ಏನೆಂದು ಹೇಗೆ ಬಣ್ಣಿಸಲಿ?
ಕ್ಷಮಯಾಧರಿತ್ರಿಯ ಹೊಟ್ಟೆಯಲಿ ನಾವೆಲ್ಲರೂ



No comments:

Post a Comment