Sunday 3 June 2012

ಸುಂದರ್ ರಾಜ್ ನೆನಪಿಸಿಕೊಂಡಂತೆ ಅಂಬರೀಷ್ !


(ಇತ್ತೀಚಿಗೆ ಸುಂದರ್ ರಾಜ್ ರವರನ್ನು ಭೇಟಿ ಮಾಡಿದಾಗ ಅಂಬರೀಷ್ ಜೊತೆಗಿನ ಸ್ನೇಹದ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದರು.ನೆನಪುಮಾಡಿಕೊಂಡಿದ್ದರು.  ಅಂಬರೀಷ್ ಬಗ್ಗೆ ಸುಂದರರಾಜ್ ಜೊತೆಗಿನ ಮಾತುಕತೆ ಬರಹರೂಪದಲ್ಲಿ  ಕಂಡಿದ್ದು  ಹೀಗೆ..)

ಅಂಬರೀಷ್ ಜೊತೆಗಿನ ನನ್ನ ಸ್ನೇಹವನ್ನು ಮೂಲಕ ವರ್ಣಿಸೋದು ತುಂಬಾ ಕಷ್ಟ. ಅಂಬರೀಷ್ ಜೊತೆಗಿನ ನನ್ನ ಒಡನಾಟ, ಸ್ನೇಹ, ಓಡಾಟ, ಕೆಲಸಮಾಡಿದ್ದು ನನಗೆ ಬೆಟ್ಟದಷ್ಟು ಅಪಾರ ನೆನಪುಗಳು ನನ್ನ ಮನಸ್ಸಿನಲ್ಲಿವೆ. ಆತ ಹೀಗೆ ಅಂತ ಹೇಳೋದು ತುಂಬಾ ಕಷ್ಟ, ಆತನ ತರಹ ನೀವಾಗಬೇಕು ಅಂತಾನೂ ಹೇಳೋದು ತುಂಬಾ ಕಷ್ಟ. ಅಂಬರೀಷನಿಗೆ ಅಂಬರೀಷನೇ ಸಾಟಿ. ಅಂಬರೀಷ್  ಯಾಕೆ ಇಷ್ಟವಾಗ್ತಾರೆ ಅಂತ ಅವರನ್ನ ಇಷ್ಟಪಡೋ ಎಲ್ಲರನ್ನು ಕೇಳಿ ಒಬ್ಬೋಬ್ಬರು ಆತನನ್ನು ಒಂದೊಂದು ರೀತಿಯಲ್ಲಿ ವರ್ಣಿಸುತ್ತಾರೆ. ಹಾಗಾಗಿ ಅಂಬರೀಷ್ ಇಷ್ಟವಾಗಲು ಬಹಳಷ್ಟು ಕಾರಣಗಳಿವೆ. ಕನ್ನಡಚಿತ್ರರಂಗವೇಕೇ, ರಾಜಕೀಯ, ಬೇರೆ ಚಿತ್ರರಂಗ, ರಾಜ್ಯ ರಾಜಕೀಯ, ದೆಹಲಿ ರಾಜಕೀಯದ ವ್ಯಕ್ತಿಗಳು ಕೂಡ ಆತನನ್ನು ಇಷ್ಟಪಡುತ್ತಾರೆ. ಆತನ ವ್ಯಕ್ತಿತ್ವೇ ಅಂತಹದ್ದು. ಅಜಾತಶತ್ರು, ಹುಂಬತನ, ಎದೆಗಾರಿಕೆ, ಬೇರೆಯವರಿಗೆ ಮರುಗುವ ಮನಸ್ಸು ಆತನ ಗುಣಗಾನ ಮಾಡುವುದು ನಿಜವಾಗಿಯೂ ಕಷ್ಟ ಸಾಧ್ಯ. ಇಂತಹ ಅಂಬರೀಷ್ ನನ್ನ ಆತ್ಮೀಯ ಸ್ನೇಹಿತ ಅನ್ನುವುದೇ ನನ್ನ ಹೆಮ್ಮೆಗೆ ಕಾರಣ

ಅಂಬಿ 'ನಾನೊಬ್ಬ ಅದ್ಭುತ ನಟ' ಅಂತ ಎಲ್ಲೂ, ಯಾರ ಹತ್ತಿರವೂ ಹೇಳಿಕೊಂಡವರಲ್ಲ. ಆದರೆ, ವ್ಯಕ್ತಿಯಾಗಿ, ಸಮಾಜದ ಶಕ್ತಿಯಾಗಿ, ಉತ್ತಮ ಮನುಷ್ಯನಾಗಿ ಅಂಬಿಗೆ ಅಂಬಿಯೇ ಸಾಟಿ. ಇಂಥ ವೈವಿಧ್ಯತೆಯ ಮನುಷ್ಯನನ್ನು ಎಲ್ಲಿ ಹುಡುಕಿದರೂ ಸಿಕ್ಕುವುದಿಲ್ಲ. ದಿನಗಳಲ್ಲಿ ನನಗೆ ಅಂಬಿ ಕಂಡರೆ  ಸಣ್ಣ ಒಳ್ಳೆಯ ಹೊಟ್ಟೆಕಿಚ್ಚಂತೂ ಇತ್ತು, ಏನಪ್ಪಾ ಮನುಷ್ಯ ಪುಟ್ಟಣ್ಣನಂತಹ ನಿರ್ದೇಶಕರ ಮನಸ್ಸನ ಹೇಗಂಪಾ ಗೆದ್ದು ಬಿಟ್ಟಿದ್ದಾನೆ. ನಾವೇನೋ ಬಾಲಚಂದರ್ ಸಿನಿಮಾಗಳಲ್ಲಿ  ಗುರುತಿಸಿಕೊಂಡುಬಿಟ್ಟಿದ್ವಿ. ಆದರೆ ಪುಟ್ಟಣ್ಣರ ಸಿನಿಮಾಗಳಲ್ಲಿ ನಮಗೆ ಅವಕಾಶ ಸಿಕ್ಕಿರಲಿಲ್ಲ. ಈತನ್ನ ನೋಡಿದ್ರೆ ಪುಟ್ಟಣ್ಣನವರ ಹೆಚ್ಚಿನ ಸಿನಿಮಾಗಳಲ್ಲಿ ಚಾನ್ಸ್ ತಗೋತಾ ಇದಾನೆ. ಪುಟ್ಟಣ್ಣ ಕಣಗಾಲ್ ಗುರುಕೃಪೆಗೆ ಹೆಚ್ಚು ಒಳಗಾದ ನಟ ಅಂಬರೀಶ್ನನ್ನು ಕಂಡಾಗ ರೀತಿಯ ಅವ್ಯಕ್ತ ಅಸೂಹೆಯ ಪ್ರೀತಿ ಆತನ ಮೇಲಿತ್ತು. ಆದರೆ ಅಂಬರೀಷ್ ತನ್ನ ನಿಷ್ಕಲ್ಮಶ ಪ್ರೀತಿಯಿಂದ ನನ್ನನ್ನು ಗೆದ್ದುಬಿಟ್ಟಿದ್ದ.

ಅಂಬಿಯ ಮೊದಲ ಭೇಟಿ
ಅಂಬಿ-ನನ್ನ ಮೊದಲ ಭೇಟಿಯಾದದ್ದು 'ಪ್ರಾಯ ಪ್ರಾಯ ಪ್ರಾಯ' ಚಿತ್ರದ ಸಂದರ್ಭದಲ್ಲಿ. ಅದರಲ್ಲಿ ನನ್ನದು ನೆಗೆಟಿವ್, ಪಾಸಿಟಿವ್ ಎರಡು ಶೇಡ್ ಇರುವ ನಾಯಕ-ಖಳನಾಯಕನ ಪಾತ್ರ. ಇಂಥ ಪರಂಪರೆಯನ್ನು ಮೊದಲು ಹಾಕಿಕೊಟ್ಟವರು ಹಿಂದಿ ನಟ ಶತ್ರುಘ್ನ ಸಿನ್ಹಾ. ಇಂಥ ಚಿತ್ರಗಳು ಕನ್ನಡದಲ್ಲಿ ಅಂಬಿ ಮೂಲಕ ಮೊದಲು ಬಂದವು. ಪರಂಪರೆಯನ್ನು ಮುಂದುವರಿಸುವ ಪಾತ್ರ 'ಪ್ರಾಯ ಪ್ರಾಯ ಪ್ರಾಯ'ದಲ್ಲಿ ನನಗೆ ಸಿಕ್ಕಿತು. ಅಂಬರೀಷ್ಗೆ `ಯಾರೋ ಸುಂದರರಾಜ್ ಅಂತೆ, 'ಒಂದಾನೊಂದು ಕಾಲದಲ್ಲಿ', 'ತಪ್ಪಿದ ತಾಳ'ದಲ್ಲಿ ನಟಿಸಿದ್ದಾನಂತೆ. 'ಪ್ರಾಯ ಪ್ರಾಯ ಪ್ರಾಯ'ದಲ್ಲಿ ಅಭಿನಯಿಸುತ್ತಿದ್ದಾನಂತೆ. ಅದೇನೋ ನನ್ನ ತರಹವೇ ವಿಲನ್ ರೋಲ್ ಮಾಡ್ತಾನಂತೆ, ನಟಿಸುತ್ತಾನಂತೆ ಎಂಬ ಕುತೂಹಲ ಇಟ್ಟುಕೊಂಡೇ ಹೀಗೆಲ್ಲಾ ಬೇರೆಯವರಿಂದ ಕೇಳಿದ್ದ ಅಂಬರೀಷ್, ಒಂದು ದಿನ ನನ್ನನ್ನು ನೋಡುವ ಕಾತುರದಲ್ಲಿ ಮೈಸೂರಿನಲ್ಲಿ 'ಪ್ರಾಯ ಪ್ರಾಯ ಪ್ರಾಯ' ಶೂಟಿಂಗ್ ನಡೀತಾ ಇರೋ ಟೈಮಲ್ಲಿ ಸೆಟ್ಗೆ ಬಂದೇ ಬಿಟ್ಟ. ಆಗಲೇ ನಾನು ಅಂಬರೀಷ್ನನ್ನು ನೋಡಿದ್ದು. ನನಗಂತೂ ಅದೇನೋ ತವಕ, ಪುಳಕ... ದೊಡ್ಡ ನಟನೊಬ್ಬ ನನ್ನಂಥವನ ಚಿತ್ರಕ್ಕೆ ಬಂದನಲ್ಲ ಎಂಬ ಹೆಮ್ಮೆ. ಬಂದವನೇ ನನಗೆ ವಿಷ್ ಮಾಡಿದ. ಸಂಜೆ ನನ್ನ ಕರೆದು ಹೋಟೆಲ್ನಲ್ಲಿ ಒಳ್ಳೆ ಊಟ ಕೊಡಿಸಿದ್ದ. ಊಟ ಮಾಡುತ್ತಲೇ ಸ್ವಲ್ಪೊತ್ತು ಮಾತಾಡಿದ್ವಿ. ಮೊದಲ ಭೇಟಿಯಲ್ಲೇ ನನಗೆ ಅಂಬರೀಷ್ ಅರ್ಥವಾಗಿಬಿಟ್ಟಿದ್ದ. ಮುಂದೆ ಆತನ ಜೊತೆ 'ಒಂಟಿಧ್ವನಿ', 'ದಿಗ್ವಿಜಯ', 'ದಿಗ್ಗಜರು' ಇನ್ನಿತರ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದೂ ಮಾತ್ರ ನನ್ನ ಸುಯೋಗ.

'ದಿಗ್ವಿಜಯ' ಒಂದು ಘಟನೆ
ಅಂಬಿ ಜೊತೆ ನಾನು ಕಳೆದ ಹಲವಾರು ಘಟನೆಗಳನ್ನು ನಾನು ಆಗಾಗ ನೆನಪುಮಾಡಿಕೊಳ್ಳುತ್ತಲೇ ಇರುತ್ತೇನೆ. ಅಂತಹ ಅಪರೂಪದ ಹಲವಾರು ಘಟನೆಗಳು ನನ್ನ ಮನಸ್ಸಿನಲ್ಲಿವೆ. ಆಗ ನಾನು ಕಲಾವಿದನಾಗಿ ನೆಲೆನಿಂತು ಇಂಡಸ್ಟ್ರಿಯಲ್ಲಿ ಒಳ್ಳೋಳ್ಳೆಯ ಪಾತ್ರಗಳು ನನ್ನನ್ನು ಹುಡುಕಿಕೊಂಡು ಬಂದಂತಹ ದಿನಗಳು. ಕಾರಂತರ ಶಿಷ್ಯ ಅನ್ನುವ ಹಣೆಪಟ್ಟಿ ಇದ್ದುದರಿಂದ ನನಗೆ ಸಿನಿಮಾದಲ್ಲಿ ಎಂತಹ ಕೆಲಸ ಕೊಟ್ಟರೂ ಮಾಡುತ್ತಾನೆ, ಪಾತ್ರ ಮಾಡುತ್ತಾನೆ ಅನ್ನುವ ಮಾತುಗಳು ನನ್ನ ಬಗ್ಗೆ ಇದ್ದವು. ಆಗೆಲ್ಲಾ ನಾನು ಅಸಿಸ್ಟಂಟ್ ಡೈರೆಕ್ಟರ್ ಆಗಿ, ಪ್ರೊಡಕ್ಷನ್ ಮ್ಯಾನೇಜರ್ ಆಗಿ  ಕೆಲಸ ಮಾಡ್ತಾ ಇದ್ದೆ. ಅಂತಹದೇ ಸಮಯದಲ್ಲಿ ಸೋಮು ಅನ್ನೋರು ನನಗೆ `ದಿಗ್ವಿಜಯ' ಅನ್ನೋ ಸಿನಿಮಾದಲ್ಲಿ ನನ್ನನ್ನು ಅಸಿಸ್ಟಂಟ್ ಡೈರೆಕ್ಟರ್ ಆಗಿ ತಗೊಳೋದರ ಜೊತೆಗೆ ವಿಲನ್ ರೋಲ್ ಕೂಡ ಕೊಟ್ಟಿದ್ರು.
ದಿಗ್ವಿಜಯ ಸಿನಿಮಾದಲ್ಲಿ ಅಂಬರೀಶ್, ನಟಿ ಅಂಬಿಕಾ, ನಟ ಶ್ರೀನಾಥ್ ಅಭಿನಯಿಸ್ತಾ ಇದ್ದರು. ಸಿನಿಮಾದ ನಿರ್ಮಾಪಕರಲ್ಲಿ ಶ್ರೀನಾಥ್ ಹಾಗೂ ಸೋಮು ಕೂಡ ಇದ್ದಾರೆ ಅನ್ನೋ ವಿಷಯ ನನಗೆ ಗೊತ್ತಿರಲಿಲ್ಲ. ಸಿನಿಮಾದಲ್ಲಿ ನಾಲ್ವರು ಖಳನಾಯಕರಲ್ಲಿ ನಾನು ಒಬ್ಬನಾಗಿದ್ದೆ. ಚಿತ್ರದಲ್ಲಿ ನನ್ನ ರೋಲ್ಗೆ ತಕ್ಕ ಹಾಗೆ ಹಂಸಲೇಖ ಅವರು 'ಸುಂದರ ಎಚ್ಚರ...' ಎಂಬ ಹಾಡನ್ನು ನನ್ನ ಹೆಸರನ್ನೇ ಬಳಸಿ ಬರೆದಿದ್ದರು. ಹಾಡಿಗೆ ನನ್ನ ಜೊತೆಯಾಗಿ ನಟಿ ರಾಧಾ ಸ್ಪೆಷಲ್ ಗೆಸ್ಟ್ ಅಫೀರಿಯನ್ಸ್ ಆಗಿದ್ದರು. ಇನ್ನೊಂದೆಡೆ ವಿಷ್ಣುವರ್ಧನ್ ಅವರ 'ಜಯಸಿಂಹ' ಚಿತ್ರವನ್ನು ಕೂಡ ಒಪ್ಪಿಕೊಂಡಿದ್ದೆ. ನೋಡಿದ್ರೆ ಎರಡು ಸಿನಿಮಾ ಶೂಟಿಂಗ್ ಡೇಟ್ಸ್ ಕ್ಲಾಶ್ ಆಗಿಬಿಟ್ಟಿತ್ತು. `ಜಯಸಿಂಹ' ಸಿನಿಮಾ ಶೂಟಿಂಗ್ ಇದ್ದ ದಿನ, ದಿಗ್ವಿಜಯ ಸಿನಿಮಾದ ಹಾಡಿನ ಶೂಟಿಂಗ್ ಫಿಕ್ಸ್ ಮಾಡ್ಕೊಂಡು ಬಿಟ್ಟಿದ್ದಾರೆ. ನನಗಂತೂ  ತೀವ್ರ ಗೊಂದಲ ಉಂಟಾಗಿತ್ತು. ಸಿನಿಮಾದ ಮ್ಯಾನೇಜರ್ ನನಗೆ ಟ್ರಂಕ್ ಕಾಲ್ ಮಾಡಿ ಕಡೆವರೆಗೆ ಹೇಳಿದ್ರೂ, ಕಡೆ ನನ್ನನ್ನು ಸಿನಿಮಾಕ್ಕೆ ಕಳುಹಿಸಲೇ ಇಲ್ಲ. ನಿಜ ಹೇಳಬೇಕಂದ್ರೆ `ಜಯಸಿಂಹ' ಸಿನಿಮಾದಲ್ಲಿ ನಾನು ದಿನ ಅಷ್ಟು ಅವಶ್ಯಕತೆ ಇರಲೇ ಇಲ್ಲ. ನಾನು ಏಷ್ಟು ಕೇಳಿಕೊಂಡ್ರೂ ನನ್ನನ್ನ ಕಳುಹಿಸಲೇ ಇಲ್ಲ. `ಸುಂದರ' ಹಾಡನ್ನು ನಾನಿಲ್ಲದೇ ಶೂಟ್ ಮಾಡೇ ಬಿಟ್ಟರು. ಇದೇ ಟೈಮಲ್ಲಿ ನನಗೂ, ಪ್ರಮೀಳಾಗೂ ಪ್ರೀತಿ ಶುರುವಾಗಿತ್ತು. ಹೀಗೆ ಒಂದು ದಿನ ಡಬ್ಬಿಂಗ್ ಸ್ಟುಡಿಯೋದಲ್ಲಿ ನಾನಿದ್ದೆ. ಅಚಾನಕ್ ಆಗಿ ಅಂಬರೀಷ್ ಅಲ್ಲಿಗೆ ಬಂದಿದ್ದ. ನನ್ನನ್ನು ನೋಡಿದ್ದೇ ತಡ ಸಿಟ್ಟಾಗಿ 'ಏನ್ ನೀನು ಶೂಟಿಂಗ್ಗೆ ಬರದೇ ಅಲೆಯುತ್ತಿದ್ದೀಯಾ?' ಅಂತ ನಾನು ಮಾತಾಡೋ ಮುಂಚೇನೇ ನನ್ನ ಕೆನ್ನೆಗೆ ರಪ್ ಅಂತ ಹೊಡೆದೇ ಬಿಟ್ಟ. 'ನೀನು ಒಬ್ಬ ಕಲಾವಿದನಾಗಿ ಡೇಟ್ ಕೊಟ್ಟು ತಪ್ಪಿಸಿಕೊಳ್ಳಬಹುದಾ?' ಅಂತ ರೇಗಿದ. ಆಗ ನಾನು ದಿನ ಆದ ಘಟನೆಯನ್ನು ಇಂಚು ಇಂಚಾಗಿ ಹೇಳಿದ ಮೇಲೆ  'ಅಯ್ಯೋ ಸುಂದ್ರಣ್ಣ... ಇದನ್ನು ಮೊದಲೇ ನನಗೆ ಏಕೆ ಹೇಳಬಾರದಿತ್ತು' ಅಂತ ನೊಂದುಕೊಂಡು ತಬ್ಬಿ ಮುದ್ದಾಡಿಬಿಟ್ಟ.

ಕ್ಷಮಾಗುಣ ಈತನ ಹುಟ್ಟುಗುಣ
ಅಂಬಿಯಲ್ಲಿ ನಾನು ನೋಡಿದ ಅದ್ಭುತ ಗುಣ ಹಾಗೂ ಇಷ್ಟಪಡೋ ಗುಣ ಅಂದ್ರೆ ಕ್ಷಮೆ. ಆತನಿಗೆ ಸ್ವಲ್ಪ ಅವಸರ ಜಾಸ್ತಿ. ಅವಸರದಲ್ಲಿ ಒಂದೊಂದು ಸಲ ಜೋರಾಗಿ ಮನಸ್ಸಿಗೆ ನೋವಾಗುವಂತೆ ಮಾತಾಡಿಬಿಡ್ತಾನೆ. ಅಕಸ್ಮಾತ್ ಸ್ವಲ್ಪ ಹೊತ್ತಾದ ಮೇಲೆ ತಾನು ಹೇಳಿದ್ದು ತಪ್ಪು ಅಂತ ಅನಿಸಿದರೆ ಚಿಕ್ಕವರಿರಲಿ, ದೊಡ್ಡವರಿರಲಿ ಕ್ಷಮೆ ಕೇಳಿಬಿಡುತ್ತಾನೆ. ಇದು ತುಂಬಾ ದೊಡ್ಡ ಗುಣ. ಅಂಬಿ ಯಾವಾಗ್ಲೂ ಸುಳ್ಳು ಹೇಳುತ್ತಿರಲಿಲ್ಲ.ಆತನಿಗೆ ಸುಳ್ಳು ಹೇಳೋರನ್ನ ಕಂಡ್ರೂ ಆಗುತ್ತಿರಲಿಲ್ಲ. ಬೇರೆಯವರ ಬಗ್ಗೆ ಹಿಂದುಗಡೆ ಒಂದು ಮುಂದುಗಡೆ ಎಂದೂ ಮಾತನಾಡುತ್ತಿರಲಿಲ್ಲಮಾತಿನಲ್ಲೇ ಬಂದವರ ವ್ಯಕ್ತಿತ್ವ ಅಳೆದುಬಿಡುತ್ತಿದ್ದ. ಯಾರಾದ್ರೂ ಸಹಾಯ ಕೇಳ್ಕೋಂಡು ಬಂದ್ರೆ ಜೋರಾಗಿ  ಬಂದವರು ಬೆಚ್ಚಿ ಬೀಳುವಂತೆ ಹೆದರಿಸಿಬಿಡ್ತಾನೆ. ಜೋರಾದ ಆತನ ಗಡಸು ಮಾತಿನಲ್ಲಿ ಬೆಟ್ಟದಷ್ಟು ಮುಗ್ಧತೆ ಇರುತ್ತೆ. ಅವನ ಜೊತೆ ಹತ್ತಿರೋ ಇರೋ ನಮಗೆ ಈತನ ಮಾತುಗಳು ಅರ್ಥವಾಗಿಬಿಡುತ್ತದೆ. ಹೊಸಬರಿಗೆ ಸ್ವಲ್ಲ ಇರಿಸುಮುರುಸು ಆಗೋದಂತೂ ಖಂಡಿತ
ಅಂಬಿ ತುಂಬಾ ಸಿಂಪಲ್ ಮನುಷ್ಯ. ಆತನಿಗೆ ಸಾಮಾನ್ಯನಂತೆ ರಸ್ತೆಯಲ್ಲಿ ನಡ್ಕೊಂಡು ಹೋಗೋದಂದ್ರೆ ತುಂಬಾ ಇಷ್ಟ. ನಮ್ಮನೆ, ಅವನ ಮನೆ ಜೆ.ಪಿ ನಗರದಲ್ಲಿ ಹತ್ತಿರದಲ್ಲೇ ಇರೋದ್ರಿಂದ ಒಂದೊಂದು ಸಲ ನಮ್ಮನೆವರೆಗೂ ವಾಕಿಂಗ್ ಮಾಡ್ಕೊಂಡು ಬಂದು ಬಿಡೋನು. ಏಷ್ಟೋ ಸಲ ನಾವಿಬ್ರೂ ಜೆಪಿ ನಗರದಲ್ಲಿ ವಾಕಿಂಗ್ ಮಾಡ್ಕೊಂಡು ಹೋಗಿದ್ದು ಕೂಡ ಇದೆ. ಓಡಾಡೋವಾಗಲೂ  ತಾನೊಬ್ಬ ದೊಡ್ಡ ಸ್ಟಾರ್ ಎಂಬ ಯಾವುದೇ ಹಮ್ಮುಬಿಮ್ಮುಗಳಿಲ್ಲದೇ ಸಾಮಾನ್ಯನಂತೆ ಓಡಾಡುತ್ತಿದ್ದ. ಈತ ಬೇರೆಯವರಿಗೆ ತೊಂದರೆಯಾಗುತ್ತೆ ಅಂತ ಆತನ ಮನಸ್ಸಿಗೆ ಬಂದುಬಿಟ್ಟರೆ ಮುಗೀತು, ಅದು ಎಂತಹ ಪ್ರೀತಿವಸ್ತು ಆಗಲಿ, ಅದನ್ನು ಬಿಟ್ಟುಬಿಡುತ್ತಿದ್ದ. ಇದಕ್ಕೆ ನಾನು ಒಂದು ಸಣ್ಣ ಉದಾಹರಣೆ ಕೊಡ್ತೀನಿ. ಅಂಬಿ ಮನೆಯಲ್ಲಿ ಅವನಿಗೆ ಇಷ್ಟವಾದ ಒಂದು ನಾಯಿ ಇತ್ತು. ಒಂದು ಸಲ ತನ್ನ ಕೊರಳಿಗೆ ಕಟ್ಟಿದ್ದ ಚೈನ್ ಬಿಚ್ಚಿಕೊಂಡು ಹೊರಗಡೆ ಬಂದು ರಸ್ತೆಯಲ್ಲಿ ಓಡಾಡೋರಿಗೆ ಹಾಗೂ ಅಕ್ಕಪಕ್ಕದವರಿಗೆ ಕಚ್ಚಿಬಿಟ್ಟಿತ್ತು. ಆಗ ಇಡೀ ಸುತ್ತಮುತ್ತಲ ಮನೆಗಳ ಜನರಿಗಂತೂ ಭಯ, ಆತಂಕವಿತ್ತು. ಅವನ ಮನೆಮುಂದೆ ಓಡಾಡಲಿಕ್ಕೆ ಹೆದರುತ್ತಿದ್ದರು. ಕೊನೆಗೆ ಕೆಲವು ಜನರು, ಸ್ನೇಹಿತರೆಲ್ಲಾ ಮನೆ ಮುಂದೆ ಪ್ರತಿಭಟನೆ ಮಾಡಿದಾಗ, ಆತ ಎಲ್ಲರಿಗೂ ಕ್ಷಮೆ ಕೇಳಿ ನಮ್ಮೆಲ್ಲರ ಸ್ನೇಹಕ್ಕೆ ಕಟ್ಟುಬಿದ್ದು ನಾಯಿಯನ್ನೇ ಬೇರೆಯವರಿಗೆ ಕೊಟ್ಟುಬಿಟ್ಟ. ಇವತ್ತಿಗೂ ಅವನ ಮನೆಯಲ್ಲಿ ನಾಯಿ ಇಲ್ಲ. ಇದುಬೇರೆಯವರಿಗೋಸ್ಕರ ಏಂತಹ ತ್ಯಾಗಕ್ಕೂ ಸಿದ್ದನಾಗಿದ್ದ ಎಂಬ ಅಂಬರೀಷ್ ವ್ಯಕ್ತಿತ್ವವನ್ನು ಹೇಳುತ್ತದೆ.

ರೆಬೆಲ್ ಅಲ್ಲ; ಕೈಂಡ್ಲಿ ಸ್ಟಾರ್

ಇಂದು ಏಷ್ಟೋ ಜನ ಸ್ಟಾರ್ಗಳ ನಾವು ನೋಡ್ತಾ ಇರ್ತೀವಿ. ಅವರೆಲ್ಲಾ ತಮ್ಮ ಜೊತೆಗಿದ್ದ ಸಹನಟರಂದ್ರೆ ಅಷ್ಟಕಷ್ಟೇ. ಆದರೆ ಅಂಬರೀಷ್ ಹಾಗಿರಲಿಲ್ಲ. ಆತನಿಗೆ ಸೆಟ್ನಲ್ಲಿರೋ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ. ಆತನಿಗೆ ಅಗಾಧ ಜ್ಞಾಪಕಶಕ್ತಿ ಇತ್ತು. ಯಾರನ್ನು ಅಷ್ಟು ಸುಲಭವಾಗಿ ಮರೆಯುತ್ತಿರಲಿಲ್ಲ. ಅದರ ಜೊತೆಗೆ ಅಂಬಿಗೆ ರಂಗಭೂಮಿ, ನಾಟಕದವರು ಅಂದರೆ ತುಂಬಾ ಅಭಿಮಾನ. ಆದರೆ ಈತ ರಂಗಭೂಮಿಯಿಂದ ಬಂದವನಲ್ಲ. ನಾಟಕಗಳಲ್ಲಿ ಅಭಿನಯಿಸಿದವನಲ್ಲ. ಆದರೂ ಸಹಕಲಾವಿದರು, ನಾಟಕ ಕಲಾವಿದರು ಅಂದ್ರೆ ತುಂಬಾ ಪ್ರೀತಿ, ಅಭಿಮಾನ. ಬಿ.ವಿ.ಕಾರಂತರು, ಸಾಹಿತಿಗಳು ಅಂದರೆ ಅಷ್ಟು ಗೌರವ ಕೋಡೋನು. ಹೀಗೆ ಒಮ್ಮೇ ಅವನ ಸಿನಿಮಾದಲ್ಲಿ ಆಕ್ಟ್ ಮಾಡೋ ಟೈಮಲ್ಲಿ   ದಿನ ನನ್ನ ಅವನ ಸೀನ್ ಶೂಟಿಂಗ್ ಆಗಬೇಕಿತ್ತು. ನಾನಿಲ್ಲ ಅಂದರೆ ದಿನ ಶೂಟಿಂಗ್ ಮಾಡಲಿಕ್ಕೆ ಆಗ್ತಿರಲಿಲ್ಲ. ನನಗೂ ಅದೇ ದಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಇತ್ತು. ನಾನು ಅಂಬರೀಷ್ ಹತ್ತಿರ ಬಂದು  ಇವತ್ತು ಸಂಜೆ ನನ್ನ ನಾಟಕ ಇದೆ ಹೋಗಬೇಕು' ಅಂತ ಹೇಳಿದೆ. ಅಕಸ್ಮಾತ್ ಬೇರೆ ಹೀರೋಗಳಾಗಿದ್ರೆ ಖಂಡಿತ ಒಪ್ಪುತ್ತಿರಲಿಲ್ಲ. ಆದರೆ ಅಂಬಿ ಹಾಗೆ ಮಾಡಲಿಲ್ಲ. ನನ್ನನ್ನು ನಾಟಕ ಕಳಿಸೋಕೆ `ಶೂಟಿಂಗ್ ಪ್ಯಾಕ್ ಅಪ್' ಅಂತ ಹೇಳೇಬಿಟ್ಟ. ನನಗೆ ಶೂಟಿಂಗ್ ಮಾಡೋಕೆ ಆಗ್ತಾ ಇಲ್ಲಾ ಅಂತ ತನ್ನ ಮೇಲೆ ಹಾಕಿಕೊಂಡು ಶೂಟಿಂಗ್ ಕಾನ್ಸೆಲ್ ಮಾಡೇ ಬಿಟ್ಟ. ಆಗ ಸುಂದರ್ರಾಜ್ ನಾಟಕಕ್ಕೆ ಹೋಗಬೇಕು ಅಂತ ಹೇಳಲಿಲ್ಲ, ಏಲ್ಲಾ ತಪ್ಪನ್ನೂ ತನ್ನ ಮೇಲೆ ಹಾಕಿಕೊಂಡುಬಿಟ್ಟಿದ್ದನನಗೋಸ್ಕರ ಅಂಬಿ ದಿನ ತರಹದ ರಿಸ್ಕ್ ತಗೊಂಡಿದ್ದ. ಹೀಗೆ ಎಲ್ಲರನ್ನೂ, ಎಲ್ಲವನ್ನೂ ತೂಗಿಸಿಕೊಂಡು ಹೋಗುವ ಅಪರೂಪದ ವ್ಯಕ್ತಿತ್ವ ಅವನದು. ಯಾಕೆ ಎಲ್ಲ ನಿರ್ಮಾಪಕರು, ನಿರ್ದೇಶಕರು ಅಂಬರೀಷನೇ ಬೇಕು ಅಂತ ಕೇಳ್ತಿದ್ರೂ  ಅನ್ನೊದಕ್ಕೂ ಒಂದು ಕಾರಣ ಇತ್ತು. ಅಂಬರೀಶ್ ಅಂದ್ರೆ ಯಾವುದಕ್ಕೂ ಡಿಮ್ಯಾಂಡ್ ಮಾಡದ ಕಲಾವಿದ. ತನಗೆ ಇಂತದ್ದೆ ರೂಮು ಬೇಕು, ಅದು ಬೇಕು, ಇದು ಬೇಕು ಅಂತ ಎಂದಿಗೂ ಕೇಳ್ತಿರಲಿಲ್ಲ. ತುಂಬಾ ಸ್ನೇಹಮಯಿ. ಕಾರಣಕ್ಕೆ ನಿರ್ಮಾಪಕರು , ನಿರ್ದೇಶಕರು  ಅಂಬಿಯ ಚಿತ್ರ ತಯಾರಿಕೆಗೆ ಮುಂದಾಗುತ್ತಿದ್ದರು. ಅಂಬಿ ಸ್ನೇಹಕ್ಕೆ ಕರಗೋನು, ಮರುಗೋನು. ದಾನ-ಧರ್ಮಕ್ಕೆ ಹೆಚ್ಚು ಒತ್ತು ಕೊಡೋನು. ಜನರು, ಅಭಿಮಾನಿಗಳು ಆತನಿಗೆ ಸುಮ್ಮನೇ `ಕರ್ಣ' ಅಂತ ಬಿರುದು ಕೊಟ್ಟಿಲ್ಲ. ಬಿರುದಿಗೆ ತಕ್ಕ ಹಾಗೆ ಆತ ಅಷ್ಟು ಕೆಲಸ ಮಾಡಿದ್ದಾನೆ, ಅಷ್ಟು ಜನರಿಗೆ ಸಹಾಯ ಮಾಡಿದ್ದಾನೆ. ಹಾಗಾಗಿ ಆತ ರೆಬೆಲ್ಸ್ಟಾರ್ ಅಷ್ಟೇ ಅಲ್ಲ, ಕೈಂಡ್ಲಿ ಸ್ಟಾರ್. ಅವನೊಬ್ಬ ಎಲ್ಲರಿಗೂ ಬೇಕಾದ ಅಜಾತಶತ್ರು.

ಹಲವು ಪ್ರಥಮಗಳ ಏಕೈಕ ವ್ಯಕ್ತಿ

ಕನ್ನಡ ಅಕ್ಷರಮಾಲೆಯಲ್ಲಿ ಮೊದಲ ಅಕ್ಷರ `' ಹಾಗೇ ಇಂಗ್ಲೀಷ್ ಲೆಟರ್ಸ್ನಲ್ಲಿ ಮೊದಲ ಅಕ್ಷರ ''. ಇವೆರಡೂ ಅಂಬರೀಷ್ಗೆ ತಕ್ಕದಾಗಿ ಸೂಟ್ ಆಗುತ್ತೆ. '' ಅಂದ್ರೆ ಅಮರನಾಥ್. ಹಾಗಾಗಿ `', `' ಅಕ್ಷರಗಳಂತೆ ಯಾವಾಗ್ಲೂ ಎಲ್ಲರಿಗಿಂತ ಫಸ್ಟು. ಅಕ್ಷರದಲ್ಲಿ ಪ್ರಥಮ. ಅಂಕೆಯಲ್ಲಿ ಈಗ 60 ತುಂಬಿ, 61 ಆಗ್ತಾ ಇದೆ. ಅರವತ್ತು ವರ್ಷದ ಘಟ್ಟವನ್ನು ಮುಗಿಸಿ ಈಗ ಮಗುವಾಗಿ ಮತ್ತೇ ಒಂದನೇ ವರ್ಷಕ್ಕೆ ಕಾಲಿಡುತ್ತಿದ್ದಾನೆ. ಹಲವು ಪ್ರಥಮಗಳಲ್ಲಿ ಅಂಬರೀಷ್ಗೆ ಅದು ಒಳ್ಳೇದಿರಲಿ, ಕೆಟ್ಟದಿರಲಿ, ಅದರಲ್ಲಿ ಆತನಿಗೆ ಮೊದಲಸ್ಥಾನವನ್ನು ಕೊಡಲೇಬೇಕು. ಎಲ್ಲದರಲ್ಲೂ ಆತ ಫಸ್ಟ್. ಸಿನಿಮಾ, ರಾಜಕೀಯ, ಕುಡಿತ, ಮೋಜು-ಜೂಜು, ಕುದುರೆ ರೇಸ್, ಕ್ರೀಡಾಪ್ರೇಮಿ, ಜನಸೇವೆ, ದಾನ-ಧರ್ಮ ಇತ್ಯಾದಿ..ಇತ್ಯಾದಿ.. ಯಾವುದೇ ತೆಗೆದುಕೊಳ್ಳಿ ಆತ ಹಲವು ಪ್ರಥಮಗಳ ಅಪೂರ್ವ ಸಂಗಮ. ಅಂಬಿಗೆ ಇಂಥ ಅಭ್ಯಾಸ ಇಲ್ಲ ಅಂತಿಲ್ಲ. ಆತ ಸಕಲಕಲಾವಲ್ಲಭ. ಕುಡಿತಾನೆೆ, ಮಾಂಸ ತಿನ್ನುತ್ತಾನೆ, ಹುಡುಗೀರ ರೇಗಿಸುತ್ತಾನೆ, ಪೋಲಿ-ತುಂಟಚೇಷ್ಟೆಗಳೇ ಜಾಸ್ತಿ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ. ಈತನ ಕೃಷ್ಣೆ ಲೀಲೆಗಳು ಒಂದಾ... ಎರಡಾ...? ಹೀಗಿದ್ರೂ ಅಂಬಿ ನಮಗೆ ತುಂಬಾ ಇಷ್ಟವಾಗ್ತಾನೆ. ಅಂಬಿ ಸುಳ್ಳು ಹೇಳೋಲ್ಲ ಅನ್ನೋದು ಅಷ್ಟೇ ಸತ್ಯ. ಸುಳ್ಳು ಹೇಳೋರು ಕಂಡರೆ ಈತ ಕೆಂಡಾಮಂಡಲ. ಒಳಗೊಂದು ಹೊರಗೊಂದು ಇಲ್ಲ. ಮಾತಿನಲ್ಲಂತೂ ಫಿಲ್ಟರ್ ಇಲ್ಲವೇ ಇಲ್ಲ. ಯಾರಿಗೂ ಅಂಜಲ್ಲ, ಅಳುಕ್ಕಲ್ಲ. ನೇರಾನೇರ... ಒರಟು ಸ್ವಭಾವ, ಅಪಾರ ಎದೆಗಾರಿಕೆ ಅವನಲ್ಲಿ. ಹೀಗಿದ್ರೂ ಇವನ ಮನಸ್ಸು ಮಾತ್ರ ಬೆಣ್ಣೆ. ಮಡಿವಂತಿಕೆ, ಜಾತೀಯತೆಯಂತೂ ಈತನಲ್ಲಿ ನೋಡಲು ಸಾಧ್ಯವಿಲ್ಲ.
ನಾನು ನೋಡಿದ್ದ ಇನ್ನೊಂದು ಸ್ವಭಾವ ಅಂದ್ರೆ, ಅವನ ಮನೆಗೆ ದಿನನಿತ್ಯ ನೂರಾರು ಜನರು ಬರ್ತಾನೇ ಇರ್ತಾರೆ, ಹೋಗ್ತಾನೇ ಇರ್ತಾರೆ. ಆತನ ಮನೆಗೆ ಬಂದೋರು ಸುಮ್ಮನೇ ಹೋಗೋಂಗಿಲ್ಲ. ಸಹಾಯ ಕೇಳ್ಕೊಂಡು ಬಂದೋರ, ಏನಾದ್ರೂ ಸಹಾಯ ಪಡ್ಕೊಂಡೆ ಹೋಗ್ತಾರೆ. ತಿಂಡಿ ತಿನ್ನೋ ಟೈಮಲ್ಲಿ ಬಂದ್ರೆ, ತಿಂಡಿ ತಿನ್ನು ಅಂತ ಬಲವಂತ ಮಾಡ್ತಾನೆ. ಹಾಗಾಗಿ ಹೋದವರು ಆತನ ಎದುರು ಊಟ, ಇಲ್ಲವೇ ತಿಂಡಿ ಮಾಡಲೇಬೇಕು, ಅಕಸ್ಮಾತ್ ಹಸಿವಿದ್ರೂ, ತಿನ್ನೊಕೆ ನಾಚಿಕೊಂಡ್ರೆ, ಎಗ್ಗಾಮುಗ್ಗಾ ಬಯ್ಯೋಕೆ ಶುರುಮಾಡಿಬಿಡ್ತ್ತಾನೆ. ಅದರಲ್ಲೂ ಯಾರೇ ಈತನ ಮನೆಗೆ ಬಂದ್ರೂ, ಅವ್ರಿಗೆ  'ಬಾ ಅನ್ನಲ್ಲ, ಹೋಗು ಅನ್ನಲ್ಲ'. ಅವನು ನಡೆದುಕೊಳ್ಳೋದೆ ಹಾಗೆ. ನಾನು ಅವನ ಮನೆಗೆ ಹೋದಾಗಲೆಲ್ಲಾ ಅವನ ಜೊತೆ ನಾನು  ತಿಂಡಿ, ಊಟ ಮಾಡಲೇಬೇಕು. ಅಕಸ್ಮಾತ್ ಇಲ್ಲಾ ಅಂದ್ರೆ ಮುಗೀತು.. ಬಾಯಿಗೆ ಬಂದಂಗೆ ಬೈದುಬಿಡುತ್ತಾನೆ. ಅದು ಆತನ ಮನೆಗೆ ಬಂದವರ ಮೇಲಿನ ಪ್ರೀತಿ. ಊಟದ ವಿಷಯದಲ್ಲಂತೂ ಅವನು ಪಕ್ಷಪಾತ ಮಾಡಿದವನೇ ಅಲ್ಲ. ಅವನು ಏನು ತಿನ್ನುತ್ತಾನೆ, ಅದೇ ಎಲ್ಲರೂ ತಿನ್ನಬೇಕು. ಒಂದೇ ಟೇಬಲ್ನಲ್ಲಿ ಎಲ್ರನ್ನೂ ಕೂಡಿಸಿಕೊಂಡು ತಿನ್ನೋದು ಅಂದ್ರೆ ಆತನಿಗೆ ದೊಡ್ಡ ಖುಷಿ. ಕುಡಿಯೋ ವಿಷಯದಲ್ಲೂ ಅಷ್ಟೇ. ಬ್ಲಾಕ್ ಲೇಬಲ್ ಅಂದ್ರೆ ಬ್ಲಾಕ್ ಲೇಬಲ್ಲೇ... ಆತನ ಮನೆಗೆ ಬಡವರು ಬರ್ತಾರೆ, ಅಷ್ಟೇ ದೊಡ್ಡ ದೊಡ್ಡ ಶ್ರೀಮಂತರು, ಬ್ಯುಸಿನೆಸ್ಮೆನ್ಗಳು, ರಾಜಕೀಯವದವರು ಬರ್ತಾನೇ ಇರ್ತಾರೆ. ಆತ ಎಲ್ಲರನ್ನೂ ಒಂದೇ ಸೀಟಲ್ಲಿ ಕೂರಿಸಿ ಮಾತನಾಡಿಸುತ್ತಾನೆ. ಎದುರುಗಡೆ ಯಾರೇ ಇದ್ದರೂ, ಹೆದರೋಲ್ಲ. ಅವರ ಮುಂದೇನೇ ಸಿಗರೇಟ್ ಸೇದುತ್ತಾನೆ. ಕುಡಿತಾನೆ. ತುಂಬಾ ಒರಟ. ಯಾರಿಗೂ ಕೇರ್ ಮಾಡಲ್ಲ. ಬಹುಶಃ ನನ್ನ ಪ್ರಕಾರ ಪುಟ್ಟಣ್ಣರಿಗೆ ಮಾತ್ರ ಹೆದರುತ್ತಿದ್ದ ಅನ್ನಿಸುತ್ತದೆ. ಯಾರಾದ್ರೂ ಅಂಬಿಯನ್ನು ಕಾಪಿ ಮಾಡಲೂ ಪ್ರಯತ್ನಿಸಿದರೆ ಖಂಡಿತ ಅದು ಸಾಧ್ಯವಿಲ್ಲ. ಅಂಬಿಯನ್ನು ಯಾರೂ ಕಾಪಿ ಮಾಡಲು ಸಾಧ್ಯವೇ ಇಲ್ಲ. ಹೀಗೆ ಅಂಬಿ ಎಲ್ಲವನ್ನೂ ದಕ್ಕಿಸಿಕೊಂಡ ಏಕೈಕ ವ್ಯಕ್ತಿ. `ಆನೆ ನಡೆದದ್ದೇ ದಾರಿ' ಈತನಿಗೆ ಅನ್ವರ್ಥ ಮಾತು.

ಅಂಬಿಯಿಂದ ಕಲಾವಿದರ ಸಂಘಕ್ಕೆ ಸ್ವಂತ ಜಾಗ..!
ಕಲಾವಿದರ ಸಂಘಕ್ಕೆ ಆಗ ತನ್ನದೇ ಆದ ನೆಲೆ ಇರಲಿಲ್ಲ. ನಿಟ್ಟಿನಲ್ಲಿ ಜಾಗ ನೀಡುವಂತೆ ಸಂಘದ ಮೀಟಿಂಗ್ನಲ್ಲಿ  ನಿರ್ಧಾರ  ತೆಗೆದುಕೊಂಡು ಅದನ್ನು ರಾಜಕೀಯ ನಾಯಕರಿಗೆ ಮನವಿ ಮಾಡಬೇಕಾಗಿತ್ತು. ಸಮಯದಲ್ಲಿ ಕರ್ನಾಟಕದಲ್ಲಿ ಜೆ.ಎಚ್. ಪಟೇಲರ ಸರ್ಕಾರವಿತ್ತು. ಸಂಘದ ಜಾಗದ ವಿಷಯಕ್ಕ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತುಕತೆ ಇತ್ತು. ಆಗಿನ ಸ್ಥಿತಿ ಇಂದಿಗೂ ನನ್ನ ಕಣ್ಣ ಮುಂದಿದೆ. ಅಂಬರೀಷ್ ಯಾಕೆ ದೊಡ್ಡವನೆನಿಸಿಕೊಳ್ಳುತ್ತಾನೆ,ಸಮರ್ಥನಾಯಕ ನೆನಸಿಕೊಳ್ಳುತ್ತಾನೆ ಅನ್ನುವುದಕ್ಕೆ ಘಟನೆ ಯಾವಾಗಲೂ ನನಗೆ ಚಿರಸ್ಮರಣೀಯ. ಸಂಘದ ಮೂಲಮೂರ್ತಿಯಾಗಿದ್ದ  ರಾಜ್ಕುಮಾರ್ರವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಹೋಗುವಂತಿರಲಿಲ್ಲ. ಇನ್ನೊಂದೆಡೆ ಉತ್ಸವಮೂರ್ತಿ ಅಂಬರೀಶ್ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮಲಗಿದ್ದ. ಆತನ ಆರೋಗ್ಯ ಸ್ಥಿತಿ ಹೇಗಿತ್ತು ಅಂದರೆ, ಆತನ ಆಸ್ಪತ್ರೆ ಬಿಟ್ಟು ಹೋಗುವ ಹಾಗಿರಲಿಲ್ಲ. ಹೊರಗಡೆ ಬಂದ್ರೆ ಇನ್ಫೆಕ್ಷನ್ ಆಗುತ್ತೆ ಅಂತ ಡಾಕ್ಟರ್ ವಾರ್ನ ಮಾಡಿದ್ದರು. ಅಂಬಿಗೆ ಫುಲ್ ಬೆಡ್ ರೆಸ್ಟ್ ಬೇಕಾಗಿತ್ತು. ಆತನ  ಮೂಗಿಗೆ ಪೈಪ್ ಹಾಕಲಾಗಿತ್ತು. ಪೂರ್ಣ ದಾಡಿ ಬಿಟ್ಟ ಮುಖ. ದೇಹದಲ್ಲಿ ಶಕ್ತಿಯೇ ಇರಲಿಲ್ಲ. ದೈಹಿಕವಾಗಿ ಅನಾರೋಗ್ಯದಿಂದ ಬಳಲಿದ್ದ. ಇಂತಹ ಸಂದರ್ಭದಲ್ಲಿಯೂ ಅಂಬಿ ಯಾವುದನ್ನೂ ಲೆಕ್ಕಿಸದೆ ಕಲಾವಿದರ ಒಳಿತಿಗಾಗಿ, ಜಾಗವನ್ನು ನೀಡುವಂತೆ ಕೋರಿ, ಅಂಬಿ ತಾನೊಬ್ಬ ಜನಪ್ರಿಯ ನಟ ಅಂತಲೂ ನೋಡದೆ ಅದೇ ಸ್ಥಿತಿಯಲ್ಲಿ ವಿಧಾನಸೌದಕ್ಕೆ ಬಂದಿದ್ದ. ದಿನ ಕ್ಯಾಬಿನೆಟ್ನ ಎಲ್ಲರ ಸಚಿವರು ಅಲ್ಲಿ ಇದ್ದರು. ಅವರೆಲ್ಲಾ ಅಂಬಿಯನ್ನು ನೋಡಿದ್ದೆ ತಡ `ಏನ್ ಅಂಬಣ್ಣ, ನೀವ್ಯಾಕೆ ಇಲ್ಲಿ ಬರೋಕೆ ಹೋದ್ರಿ, ನೀವ್ ಒಂದು ಮಾತು ಹೇಳದ್ರೆ ನಾವೇ ಬರ್ತಿದ್ವಿ, ಯಾಕೆ ಸುಮ್ನೆ ರಿಸ್ಕು ತಗೋಂಡ್ರಿ' ಅಂತ ಹೇಳಿದ್ರು. ಅವನ ಜೊತೆ ಇದ್ದ ನನಗೆ ಮಾತು ಕೇಳಿ ತುಂಬಾ ಆಶ್ಚರ್ಯವಾಯ್ತು. ತಬ್ಬಿಬ್ಬವಾದ್ವಿ. ಅಂಬಿ ಸಿಎಂ ಕಾರ್ಯದರ್ಶಿ ಬಿ.ಎಸ್. ಪಾಟೀಲ್, ಪಿಜಿಆರ್ ಸಿಂಧ್ಯಾ, ಸಿದ್ಧರಾಮಯ್ಯ, ಎಂ.ಪಿ. ಪ್ರಕಾಶ್, ಹೆಚ್.ಎಂ. ರೇವಣ್ಣ ಜೊತೆ ಮಾತುಕತೆ ನಡೆಸಿದರು, ಜಾಗ ಸಿಗುವಂತೆ ಮಾಡಿದರು. ಆವತ್ತಿನ ಅಂಬಿಯ ಮುಖ ನನಗೆ ಇವತ್ತಿಗೂ ಕಣ್ಣಿಗೆ ಕಟ್ಟಿದಂತೆ ಇದೆ. ಕಾರಣಕ್ಕೆ ಎಲ್ಲ ಕಲಾವಿದರೂ ಅಂಬಿಯನ್ನು ನೆನಪಿಸಿಕೊಳ್ಳಲೇಬೇಕು. ಯಾವ ಜಾಗಕ್ಕೆ ಅಂದು ನಾವೆಲ್ಲಾ ಹೋರಾಟ ಮಾಡಿದ್ದೇವೋ, ಅದರ ಫಲವಾಗಿ ಬೆಂಗಳೂರಿನ ಹೃದಯಭಾಗದಲ್ಲಿ ಕಲಾವಿದರಿಗೋಸ್ಕರ ಅಂತಲೇ ಜಾಗ ಸಿಕ್ಕಿದೆ. ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗಿದೆ.

ಅಂಬಿಯ ಇಂಥ ಪ್ರತಿಭೆ, ಸಾಮಥ್ರ್ಯ, ಜನಪ್ರಿಯತೆ ಮೆಚ್ಚೇ ಸೋನಿಯಾ ಗಾಂಧಿ ಇದೀಗ ಕೆಪಿಸಿಸಿ ಉಪಾಧ್ಯಕ್ಷನನ್ನಾಗಿ ನೇಮಿಸಿದ್ದಾರೆ. ಈತನ ಜನಸೇವೆ, ಜನಶಕ್ತಿ ಡೆಲ್ಲಿಗೂ ಗೊತ್ತಾಗಿದೆ. ‘ನಾಗರಹಾವು' ಚಿತ್ರದ ಜಲೀಲನ ಪಾತ್ರದಿಂದ ಬಂದ ಅಂಬಿ ಮಟ್ಟಕ್ಕೆ ಬೆಳೆದದ್ದೂ ಅಚ್ಚರಿಯ ಸಂಗತಿ. ಇಡೀ ಭಾರತದಲ್ಲೇ ಅದರಲ್ಲೂ ಎಲ್ಲ ಭಾಷೆಯ ಚಿತ್ರೋದ್ಯಮದಲ್ಲಿ ಒಬ್ಬ ಕಲಾವಿದನ ಹುಟ್ಟಿದಹಬ್ಬವನ್ನ ಕಲಾವಿದರೇ ಸೇರಿಸಿ ಆಚರಿಸುತಿರುವುದು ಇದೇ ಮೊದಲು. ಅಂತಹ ಭಾಗ್ಯವಂತನ ಹುಟ್ಟಿದ ದಿನದ ಆಚರಣೆಯಲ್ಲಿ ಭಾಗವಹಿಸುತ್ತಿರುವ ನಾವೆಲ್ಲಾ ಭಾಗ್ಯವಂತರೇ  ಸರಿ.