Thursday, 15 December 2011

ದೇವಲೋಕದ `ದೇವಾನಂದ್' ಕಣ್ಮರೆಇಂದಿಗೂ ಬಾಲಿವುಡ್ಡನ್ನು ಪ್ರಥ್ವಿರಾಜ್ ಕಪೂರ್ ಫ್ಯಾಮಿಲಿ, ದೇವಾನಂದ್ ಬ್ರದರ್ಸ್ಗಳಿಲ್ಲದೇ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬಾಲಿವುಡ್ನ ಬೆಳವಣಿಗೆಗೆ ಅಂತ ಅಮೋಘವಾದ ಕೊಡುಗೆಯನ್ನು ಇವರು ನೀಡಿದ್ದಾರೆ. ಈಗಾಗಲೇ ಕಪೂರ್ ಕುಟುಂಬದ ಮೂರು ಪ್ರಮುಖ ಕೊಂಡಿಗಳು (ಪ್ರಥ್ವಿರಾಜ್ಕಪೂರ್, ರಾಜ್ ಕಪೂರ್, ಶಮ್ಮಿಕಪೂರ್) ಬಾಲಿವುಡ್ಡನ್ನು ಅಗಲಿವೆ. ಇತ್ತೀಚೆಗೆ ಬಾಲಿವುಡ್ನ `ಸ್ಟೈಲ್ಕಿಂಗ್ ದೇವಾನಂದರನ್ನು ಕಳೆದುಕೊಂಡಿರುವುದು ಇನ್ನೊಂದು ದೊಡ್ಡ ಆಘಾತವನ್ನು  ನೀಡಿದೆ. ಬಾಲಿವುಡ್ ಸಾಂಸ್ಕೃತಿಕ ಲೋಕದ ಅಧಿನಾಯಕನಾಗಿ ದೇವಾನಂದ್ ದೊಡ್ಡವನೆನಿಸಿಕೊಳ್ಳುತ್ತಾರೆ. ಇಂದಿಗೂ  ದೇವ್ಸಿನಿಮಾಗಳಲ್ಲಿ ಪಾಶ್ಚಾತ್ಯ ಸಿನಿಮಾಗಳ ಒಳನೋಟ, ಪ್ರಭಾವ, ವೈಭವೀಕರಣ, ಹೆಣ್ಣಿನ ಸೌಂದರ್ಯದ ಅವಗಾಹನೆ ಎಂದಿಗೂ ಸ್ಫುರಿಸುವುದಿಲ್ಲ. ತಮ್ಮದೇ ಆದ ನಟನೆ, ಡ್ರೆಸ್ ಕೋಡ್ , ತಲೆಯ ಮೇಲಿನ ಮಿರಿಮಿರಿ ಮಿಂಚುವ ವಿಗ್, ಕುತ್ತಿಗೆಯ ಸ್ಕಾಫರ್್, ಇಂಡಿಯನ್ ಟಿಪಿಕಲ್ ಇಂಗ್ಲೀಷ್ ಸ್ಪಿಕಿಂಗ್ ಸ್ಟೈಲ್ ಇವೆಲ್ಲ ದೇವಾನಂದರನ್ನು ಹಾಲಿವುಡ್ನವರು ಗುರುತಿಸುವ ಬಗೆ. ಹಿಂದೆಲ್ಲಾ ಬಾಲಿವುಡ್ ಮುಖಗಳೆಂದರೆ ಅಮಿತಾಭ್ ಬರುವ ಮುಂಚೆ, ದಿಲೀಪ್ ಕುಮಾರ್, ರಾಜ್ಕಪೂರ್, ದೇವಾನಂದ, ರಾಜೇಶ್ ಖನ್ನಾ ಅನ್ನುವ ಮಟ್ಟಿಗೆ ಒಗ್ಗಿಹೋಗಿತ್ತು. ಕಾಲ ಬದಲಾಯಿತು, ಅನೇಕ ನಾಯಕರು ಅವರ ಸ್ಥಾನವನ್ನು ಅಲಂಕರಿಸಿದರು. ನಟನೆಯಿಂದ ದೇವಾನಂದ್, ಇನ್ನು ಹಲವು ನಟರು ಸ್ವಲ್ಪ ಮರೆಯಾದರೂ ಈ ನಟರುಗಳು ಮಾಡಿದ ಅದ್ಭುತ ಸಿನಿಮಾಗಳು, ಅವರ ಆಕ್ಟಿಂಗ್, ಸಂಗೀತ, ಹೀಗೆ ಇನ್ನು ಹತ್ತು ಅಂಶಗಳನ್ನು ಇಟ್ಟುಕೊಂಡು ನೋಡುವುದಾದರೆ ಇಂದಿನ ನಟರುಗಳ ಸಿನಿಮಾಗಳು ಏನೂ ಇಲ್ಲ.
ಶಮ್ಮಿಕಪೂರ್ ಸಾವು ಇನ್ನು ಮರೆಯಾಗುವ ಮುನ್ನವೇ, ಬಾಲಿವುಡ್ಗೆ ಭಾರತದ `ರಿಯಲ್ ಸ್ಟೈಲ್ಕಿಂಗ್ ದೇವಾನಂದರನ್ನು ಕಳೆದುಕೊಂಡಿರುವುದು ಇನ್ನೊಂದು ದೊಡ್ಡ ಆಘಾತವನ್ನು  ನೀಡಿದೆ. ದೇವಾನಂದರ ಚಿರಯೌವ್ವನಕ್ಕೆ ಸಾವೂ ಕೂಡ ನಾಚಿತ್ತು. ಹಾಗಾಗಿ ತಡವಾಗಿ ಬಂದು ಅವರನ್ನು ಆವರಿಸಿಕೊಂಡಿತು.ನಾನು ಸಾಯುವರೆಗೂ ಸಿನಿಮಾದಲ್ಲೇ ಉಸಿರಾಡುತ್ತೇನೆ, ಸಿನಿಮಾಗಾಗಿಯೇ ಬದುಕುತ್ತೇನೆ ಅಂತ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ ವ್ಯಕ್ತಿ ಇಂದು ಕೇವಲ ನೆನಪು ಮಾತ್ರ. ಸ್ಮರಿಸಿದರೂ ಅದು ನೆಪ ಮಾತ್ರ.

ದೇವಾನಂದ, ನಟ,ಕಥೆಗಾರ, ನಿರ್ದೆಶಕ ,ನಿರ್ಮಾಪಕ
ಮೂಲ ಹೆಸರು ಧರಮ್ ದೇವ್ ಪಿಶೋರಿಮಾಲ್
ಜನ್ಮ ದಿನ: ಸೆಪ್ಟಂಬರ್ 26,1923,  ಗುರ್ಡಸ್ಪುರ, ಪಂಜಾಬ್
ಅಣ್ಣತಮ್ಮಂದಿರು : ಮನಮೋಹನ್ ಆನಂದ್, ವಿಜಯ್ ಆನಂದ್, ಚೇತನ್ ಆನಂದ್
ತಂಗಿ : ಶೀಲಾಕಾಂತ ಕಪೂರ್( ಹೆಸರಾಂರ ನಿದರ್ೇಶಕ ಶೇಕರ್ ಕಪೂರ್ ತಾಯಿ)
                                                         ಹೆಂಡತಿ: ಕಲ್ಪನಾ ಕಾರ್ತಿಕ್
                                                          ಮಗ: ಸುನೀಲ್ ಆನಂದ್

ಮೊದಲ ಚಿತ್ರ: ಹಮ್ ಏಕ್ ಹೇನ್(1946)
ಬ್ರೇಕ್ ಕೊಟ್ಟ ಚಿತ್ರ: ಝಿದ್ದಿ (1948)
ಕೊನೆಯ ಚಿತ್ರ: ಚಾರ್ಜಶೀಟ್
ಆತ್ಮಚರಿತ್ರೆ: ರೋಮ್ಯಾನ್ಸಿಂಗ್ ವಿತ್ ಲೈಫ್


ಹಿಟ್ ಸಿನಿಮಾಗಳು : ಬಾಝಿ(1951), ಜಾಕ್(1952), ಟ್ಯಾಕ್ಸಿ ಡ್ರೈವರ್(1954), ಮುನಿಮ್ಜಿ(1955), ಸಿಐಡಿ (1956), ಪೇಯಿಂಗ್ ಗೆಸ್ಟ್(1957), ಕಾಲಾಪಾನಿ(1958), ಗೈಡ್ (1965), ಜ್ಯುವೆಲ್ ಥೀಫ್(1967), ಜಾನಿ ಮೇರಾ ನಾಮ್(1970), ಹರೆ ರಾಮ ಹರೆ ಕೃಷ್ಣ (1971), ತೇರೆ ಮೇರೆ  ಸಪ್ನೆ (1971), ದೇಸ್ ಪದರ್ೇಸ್(1978),

ಇಂದಿರಾಗಾಂಧಿ ವಿರುದ್ಧ ದೇವಾನಂದ್ 
ದೇಶದಲ್ಲಿ ತುತರ್ುಪರಿಸ್ಥಿತಿಯನ್ನು ಹೇರಿದಾಗ ಬಾಲಿವುಡ್ ಕಡೆಯಿಂದ ಶತ್ರುಘ್ನಾ ಸಿನ್ಹಾ, ಇಂದರ್ಸೇನ್ ಜೋಹರ್, ಕಿಶೋರ್ ಕುಮಾರ್ ಜೊತೆಗೂಡಿ ಇಂದಿರಾ ಗಾಂಧಿಯ ನಿಧರ್ಾರವನ್ನು ವಿರೋಧಿಸಿದ್ದರು. ದೇವಾನಂದ್ `ನಾಷನಲ್ ಪಾರ್ಟಿ
 ಆಫ್ ಇಂಡಿಯಾ' ಎಂಬ ರಾಜಕೀಯ ಪಕ್ಷವನ್ನು ಕಟ್ಟಿದ್ದರು. ಕಟ್ಟಿದ ಪಕ್ಷವನ್ನು ಉಳಿಸಿಕೊಳ್ಳಲಾಗಲಿಲ್ಲ.

ಪ್ರಶಸ್ತಿ-ಪುರಸ್ಕಾರ: ಎರಡು ಬಾರಿ ಫಿಲಫೇರ್ ಪ್ರಶಸ್ತಿ, ಪದ್ಮವಿಭೂಷಣ(2001), ದಾದಾ ಸಾಹೇಬ್ ಫಾಲ್ಕೆ ಅವಾಡರ್್(2002)

ದೇವಾನಂದ್ ತನ್ನ ಹೆಂಡತಿ ಕಲ್ಪನಾ ಕಾರ್ತಿಕ್ ಜೊತೆ,  ಆರಂಭದ ಸವಿ ನೆನಪುಗಳು
ದೇವ್ ಅಫೇರ್ಸ್
ದೇವಾನಂದ್ ಬಹಳ ಇಷ್ಟಪಟ್ಟ ನಟಿಯೆಂದರೆ ಸುರೈಯಾ. ಅದ್ಭುತ ಚೆಲುವೆಯಾಗಿದ್ದ ಸುರೈಯಾ ಕೂಡ ದೇವ್ ಲುಕ್ಗೆ ಬೋಲ್ಡ್ ಆಗಿದ್ದಳು. ಕೆಲವು ವರ್ಷಗಳ ಕಾಲ ಇವರಿಬ್ಬರ ನಡುವೆ ರೊಮ್ಯಾನ್ಸ್ ನಡೆದಿತ್ತು. ಆದರೆ ಯಾಕೋ ಆಕೆ ದೇವ್ ನನ್ನು ಮದುವೆಯಾಗಲು ಹಿಂದೇಟು ಹಾಕಿದಳು. ಇವಳ ನಂತರ ಜೀನತ್ ಅಮಾನ್, ಇದು ಕೂಡ ಬಹಳ ದಿನಗಳ ಕಾಲ ನಡೆಯಲಿಲ್ಲ.
ಪ್ರಶಸ್ತಿ-ಪುರಸ್ಕಾರ: ಎರಡು ಬಾರಿ ಫಿಲಂಫೇರ್ ಪ್ರಶಸ್ತಿ, ಪದ್ಮವಿಭೂಷಣ(2001), ದಾದಾ ಸಾಹೇಬ್ ಫಾಲ್ಕೆ ಅವಾಡರ್್(2002

ಅಭಿನಯಿಸಿದ ಸಿನಿಮಾಗಳು: 114,


ನಾಯಕನಾಗಿ 110 ಸಿನಿಮಾಗಳು


ಬಿರುದು : ಬಾಲಿವುಡ್ನ ಚಿರಯುವಕ,  ಎವರ್ಗ್ರೀನ್ ಲಿವಿಂಗ್ ಲೆಜೆಂಡ್, ಸ್ಟಾರ್ ಆಫ್ ಮಿಲೇನಿಯಂ

ದೇವಾನಂದ್ ಬ್ಯಾನರ್: ನವ್ಕೇತನ್ ಇಂಟರ್ನ್ಯಾಷನಲ್ ಫಿಲಂಸ್(1949ರಲ್ಲಿ ಪ್ರಾರಂಭ)

ಜನಪ್ರಿಯ ಹಾಡುಗಳು: ಆಸ್ಮಾನ್ ಕೆ ನೀಚೆ, ಐಸೆ ನಾ ಮುಝೆ ತುಲ್, ಬಹುತ್ ದೂರ್ ಚಲೆ, ಚೂಡಿ ನಹೀನ್ ಯೇ ಮೇರ, ದಿಲ್ ಆಜ್ ಶಾಹೇರ್, ಹೇ ಮೈನೆ ಕಸಮ್ ಲೀ, ಜೀವನ್ ಕೀ ಭಾಗಿಯಾ, ಗಾತಾ ರಹೇ ಮಿಲಾ ಹೈ, ಮೇರಾ ಮನ್ ತೇರಾ ಪ್ಯಾಸಾ, ಓ ಮೇರಾ ರಾಜ್, ಧೂಲನ್ ಕಾ ತಾರೇನ್, ಪನ್ನಾಕಿ ತಮ್ಮನ್ನಾ ಹೈ ಇನ್ನು ಹಲವು.
ದೇವ್ ಹಿಲರಿ ಕ್ಲಿಂಟನ್ ಜೊತೆಗೆ


ಪದ್ಮಭೂಷಣ ದೇವ್ 

ಅಮಿತಾಭ್ ಜೊತೆ ಆಟೋಬಯಾಗ್ರಫಿ `ರೋಮ್ಯಾನ್ಸಿಂಗ್ ವಿತ್ ಲೈಫ್ '