Sunday, 30 October 2011

ಉಸಿರವೊಲನುಕ್ಷಣಂ…


ಅವಳಿಲ್ಲದ ಅವಳೊಳಗಿನ  ಒಣಮನಸಿಗೆ
ನಾ ಕೊಟ್ಟ ಉತ್ತರಗಳು ನೂರಾರು
ನನ್ನ ಮೇಲಿನ ದಾಹ ಇಷ್ಟಕ್ಕೆ ಮುಗಿಯಿತೇ.!
ತೀರದ ದಾಹಕ್ಕೆ ಏಣಿಕೆ,ಕುಣಿಕೆಗಳ ಅರ್ಪಣವು ಸರಿಯೇ
ಬಸಿದಿಟ್ಟ ಅವಳ ಪ್ರೀತಿ ಚಿಮ್ಮುವ ಕಡಲು
ಅವಳ ಸ್ಪರ್ಷ,ನಸುನಗೆ, ಆಡಿದ ನೂರಾರು ಮಾತುಗಳು
ಹತ್ತು ಜನುಮಕ್ಕಾಗುವಷ್ಟು ಒಡಲು ತುಂಬಿದ ಅವಳ ಪ್ರೀತಿ
ಸಂಕಲನ,ವ್ಯವಕಲನ,ಗುಣಾಕಾರ,ಭಾಗಾಕಾರ ಹಾಕಿದರೂ
ನಾನಿಟ್ಟ ಅವಳ ಮೇಲಿನ ಪ್ರೀತಿ ಶೂನ್ಯವೆನ್ನುವಳು ಅವಳು..
ಆಸೆ ಬಲೆಯನು ಬೀಸಿ,ಋಣವ ಮೊಟೆಯ ಹೊರಿಸಿ
ಹೋದವಳಿಗೆ, ಮುಟ್ಟು ನಿಂತ ಮೇಲಾದರೂ ನಾ ನೆನಪಾದರೆ ಸಾಕು….
ಎಲ್ಲೆಲ್ಲಿಯುಂ ಮೋಹ, ನಾಶವಾಗುವುದೆಂದೋ…?
 

Friday, 21 October 2011

ಬನವಾಸಿಯ ಮೊಸಳೆರಾಯನ ವ್ಯಥೆ !   ಮೊನ್ನೆ ಅಕ್ಕನ ಮಗಳ ನಾಮಕರಣ ಅಂತ ನಮ್ಮೂರು ಬನವಾಸಿಗೆ ಹೋಗಿದ್ದೆ. ಮನೆ ತುಂಬ ಸಂತೋಷದ ವಾತಾವರಣ..ನಮ್ಮ ಕಾಮನಗಲ್ಲಿ ಯಥಾಪ್ರಕಾರ ತನ್ನದೇ ಸೊಗಸಿನಿಂದ ಮéಿಂಚುತ್ತಿತ್ತು. ದೇವಸ್ಥಾನದ ಹಿಂಬದಿಯ ಕಾಮನಗಲ್ಲಿಗೆ ರೋಡಿಗೆ ಆ ದಿನ ಅಪರೂಪದ ಅತಿಥಿ ಆಗಮಿಸಿದ್ದ. ಕಾಮನಗಲ್ಲಿಯ ಹುಡುಗ-ಹುಡುಗಿಯರೆಲ್ಲಾ  ಬೆಂಗಳೂರು ಸೇರಿದ ಮೇಲೂ, ಕೇರಿಯ ಹುಡುಗರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಗೌಳೇರ್, ಕುರುಬರು,, ಬೋಮ್ನಳ್ಳೇರ್, ಬಂಗ್ಲೇ, ಬಡಿಗೇರ್ಮನಿ ಅಂತೆಲ್ಲಾ ಮನಿ ಸೇರಿದರೂ ಹುಡುಗರ ಸಂಖ್ಯೆ 20 ಮೀರುತ್ತದೆ. ಇದರ ಜೊತೆಗೆ ಉಪ್ಪಾರಕೇರಿ, ತಗ್ಗಿನಕೇರಿ, ದೇವಸ್ಥಾನದ ಓಣಿ, ಪ್ಯಾಟೀಂದ ಬರೋ ಹುಡುಗರ ಸಂಖ್ಯೆ ಸೇರಿದ್ರೆ ಅದು ಇನ್ನೂ ಹೆಚ್ಚಾಗುತ್ತದೆ. ಅಂತದ್ರಲ್ಲಿ ಮಟ್ಟ ಮಟಮಟ ಮಧ್ಯಾಹ್ನ ಎಲ್ಲ ಹುಡುಗರು ಸೇರಿ ಆಟವಾಡುತ್ತಿದ್ದರು.

ಬಂಗ್ಲೇರ್ ಮನೆಯ ಕಂಪೌಂಡ್ನಲ್ಲಿ ಕುಳಿತಿದ್ದ ಅತಿಥಿ !

ಮಳೆ ಬಂದಾಗ ಊರಿನ ವರದಾ ನದಿ ತುಂಬಿ ಹರಿಯುವುದು, ಆ ನೀರು ಸುತ್ತಲಿನ ಕಪಗೇರಿ, ಭಾಸಿ, ತಿಗಣಿಯ ಸುತ್ತಮುತ್ತ ಇರುವ ಹೊಲಗದ್ದೆಗಳಿಗೆ ಹೊಕ್ಕಿ ಅಲ್ಲಿರುವ ಜೀವಜಂತುಗಳು ಅಲ್ಲಿಂದ ಇಲ್ಲಿಗೆ, ಬನವಾಸಿ ಬದಿಯಿಂದ ಸುತ್ತಲಿನ ಹಳ್ಳಿಗಳಿಗೆ ನುಗ್ಗುವುದು ಸಾಮಾನ್ಯ. ಮೀನು, ಏಡಿ, ಸಿಂಗಡಿಗಳ ಜೊತೆಗೆ ಮೊಸಳೆಗಳು ಇದರಲ್ಲಿ ಸೇರಿವೆ. ಅದರಲ್ಲೂ ಬನವಾಸಿಯ ವರದಾ ನದಿಯ ತಪ್ಪಲಿನಲ್ಲಿ ಭಯಾನಕ ಮೊಸಳೆಗಳು ಇದ್ದಾವೆ ಅನ್ನುವುದು ನಮ್ಮೂರಿನ ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿತ್ತು. ನಾವು ಚಿಕ್ಕವರಾಗಿದ್ದಾಗ ಶಿವರಾತ್ರಿ ದಿನ ಹೊಳೇಲಿ ಇಳಿಯಲಿಕ್ಕೆ ಹೋದಾಗಲೆಲ್ಲಾ ಅಮ್ಮ' ನೀರಿಗೆ ಇಳಿಬೇಡ, ಮೊಸಳೆಗಳು ಉಂಟು. ಇಲ್ಲೆ ಕುತ್ಕಂಡು ಸ್ನಾನ ಮಾಡು' ಅಂತ ಹೆದರಿಸುತ್ತಿದ್ದಳು. ಹಾಗಾಗಿ ನನಗೆ ನಮ್ಮೂರಿನ ವರದಾನದಿಯ ಮೊಸಳೆಗಳ ಬಗ್ಗೆ ನನಗೆ ಅತೀವ ಆಸಕ್ತಿ ಮನೆಮಾಡಿತ್ತು.  ನಾನು ನೋಡಿದ ಮೊದಲ ಮೊಸಳೆ ತುಂಬಾ ಭಯಾನಕವಾಗಿತ್ತು. ಚಿಕ್ಕವನಾಗಿದ್ದಾಗ ಅಂದು  ಮೊದಲು ನೋಡಿದ ಮೊಸಳೆಯನ್ನು ಉಪ್ಪಾರಕೇರಿಯ ಜನ ಹಿಡಿದಿದ್ರು. ತುಂಬಾ ದೊಡ್ಡದಾದ, ನೋಡಲು ಉಗ್ರವಾಗಿತ್ತು. ಸಿಟ್ಟಿನಿಂದ ಕೆರಳುತ್ತಿತ್ತು. ಅದನ್ನ ಹೆಡೆಮೀರಿ ಕಟ್ಟಿ ಎಳೆದು ತಂದಿದ್ದರು. ಕಡಿಮೆ ಅಂದರೂ 20 ಜನ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಅದರ ಬಾಲದ ಮೇಲಿದ್ದ ಚೂಪಾದ ಮೂಳ್ಳುಗಳು ಎಲ್ಲಿ ಬಂದು ನಮ್ಮನ್ನು ಹೊಡೆದುಬಿಡುತ್ತವೆಯೊ ಅಂದು ತುಂಬ ಹೆದರಿಕೊಂಡು ದೂರದಿಂದಲೇ ನೋಡಿಕೊಂಡು ಬಂದಿದ್ದೆ. ಕೆಲವರು ಅದರ ಮೇಲೆ ಕುಳಿತು ಫೋಟೋ ತೆಗೆಸಿಕೊಂಡರು. ಇದಾದ ಮೇಲೆ ವರದೆಯ ತಪ್ಪಲಿನ ಮೊಸಳೆಗಳನ್ನ ನೋಡುವ ಹುಚ್ಚು ಅತಿಯಾಗಿ ಕಾಡುತ್ತಿತ್ತು. ಏಷ್ಟೋ ಬಾರಿ  ನಿಂಗನಮಟ್ಟಿ, ಉಪ್ಪಾರಕೇರಿ, ಏಡೂರ್ಬೈಲ್ ಕಡೆಯ ಜನರೆಲ್ಲಾ  ಹೊಳೆ ಕಡಿ ಮೊಸಳೆ ಹೊಕ್ಕಿದೆ, ನಾವು ನೋಡಿದೀವಿ ಅಂತೆಲ್ಲಾ ಹೇಳಿದಾಗಲೆಲ್ಲಾ ನಾನು ಅದನ್ನು ಹುಡುಕಿಕೊಂಡು ಹೊರಟುಬಿಟ್ಟಿದ್ದೆ. ಏಷ್ಟೋ ಸಲ ಹಾಗೆ ಹೋದಾಗ ಮೊಸಲೇ ಕಾಣದೆ ವಾಪಾಸ್ ಬಂದದ್ದು ಕೂಡ ಉಂಟು. ಎರಡು ಮೂರು ಬಾರಿ ದೂರದ ಬಿದಿರಮಟ್ಟಿಯ ಕೆಳಗೆ ಬಾಯಿ ತಳೆದುಕೊಂಡು ಮಲಗಿದ್ದ ಮೊಸಳೆಯನ್ನು ನೋಡಿ ತನ್ನ ಆಸೆಯನ್ನು ಈಡೇರಿಸಕೊಳ್ಳುತ್ತಿದ್ದೆ.
  
ಸಾಮಾನ್ಯವಾಗಿ ಬನವಾಸಿಯಲ್ಲಿ ಮಳೆ ಬಂದಾಗ, ಮಳೆ ನೀರು ಎಲ್ಲ ಹರಿದು ಸೀದಾ ಹೊಳೆಗೆ ಸೇರುವುದು ಮಾಮೂಲು. ಏಷ್ಟೋ ಸಾರಿ ನೀರಿನ ಹೊಳೆಯ ದಡ,ಇಲ್ಲವೇ ಬಿದಿರು ಮಟ್ಟಿಯ ಸಂದಿಯಲ್ಲಿ ಮೊಸಳೆಗಳು ಮರಿ ಮಾಡುವುದು ಸಾಮಾನ್ಯ. ಈ ಮೊಸಳೆಮರಿಗಳು ಒಂದೆಡೆ ನಿಲ್ಲದೇ ಆ ಕಡೆ ಈ ಕಡೆ ಓಡಾಡುವಾಗ ಕಾಲುವೆಗೆ ಹರಿಯುವ ನೀರಿನ ಜೊತೆ ಸೇರಿ ಉರೋಳಗೆ ಬಂದುಬಿಡುತ್ತವೆ. ಈ ಥರ ಮೊಸಳೆ ಮರಿಗಳು ಮಳೆ ಬಂದಾಗ ಬನವಾಸಿಯ ರಸ್ತೆ, ಕಾಲುವೆಗಳಲ್ಲಿ  ಕಾಣುವುದು ಸಾಮಾನ್ಯವಾಗಿತ್ತು. ಮೊನ್ನೆ ಕೂಡ ಹೀಗೆ ಆಗಿತ್ತು. ಹೀಗೆ ಮಳೆ ನೀರು ಕಾಲುವೆಗೆ ಹೊಕ್ಕಾಗ ಎಲ್ಲೋ ಇದ್ದ ಚಿಕ್ಕ ಮೊಸಳೆ ಮರಿ ನಮ್ಮ ಕಾಮನಗಲ್ಲಿಗೆ ಸೇರಿಬಿಟ್ಟಿದೆ.  ಆ ಮೊಸಳೆ ಅವಿತುಕೊಂಡಿದ್ದ ಜಾಗದಲ್ಲೇ ಹುಡುಗರು ಆಟವಾಡುತ್ತಿದ್ದರು. ಯಾರಿಗೂ ಅದು ಮೊಸಳೆ ಮರಿ ಅಂತ ಮೊದಲಿಗೆ ಗೊತ್ತಾಗಲಿಲ್ಲ. ಕೊನೆಗೆ ಅದರ ಬಾಲವನ್ನು ನೋಡಿದವರು ಇದು ಮೊಸಳೆ ಅಂತ ಗುರುತಿಸಿದರು.  ಕೇರಿಯ ಕೆಲವರು ಮತ್ತು ನಮ್ಮ ಬಾವನವರು ಸೇರಿ ಕಂಪೌಂಡ್ನಲ್ಲಿ ಅವಿತುಕೊಂಡಿದ್ದ ಮರಿಯನ್ನು ಹಿಡಿದೆಳೆದು ಹೊರಗೆ ತಂದು ಅದನ್ನು ನೀರಿದ್ದ ಬಕೇಟಿನಲ್ಲಿ ಮುಳುಗಿಸಿದರು. ಮೊಸಳೆಯ ಕುತ್ತಿಗೆಗೆ ಸೆಣಬಿನದಾರವನ್ನು ಕಟ್ಟಿ ಬಡಿಗೇರ ಮನೆಯ ತೊಲೆಗೆ ಕಟ್ಟಿದ್ದರು. ಹಾಗಾಗಿ ನಾಯಿಗೆ ಕಟ್ಟಿದ್ದ ಚೇನ್ನಂತೆ ಅದು ಅಲ್ಲೇ ಒದ್ದಾಡುತ್ತಿತ್ತು. ಆ ಮೊಸಳೆಯನ್ನು ನೋಡುತ್ತಿದ್ದ ಮಕ್ಕಳಿಗೆ ಖುಷಿಯೋ ಖುಷಿ...! ಕೇರಿಯ ದೊಡ್ಡವರು ಕೂಡ ಬಂದು ನೋಡಿದರು. ಮನೆಯಲ್ಲಿ ನನ್ನ ತಮ್ಮ ಮೊಸಳೆ ಬಂದಿದೆ ಅಂತ ಹೇಳಿದಾಗ, ಕೂತೂಹಲ ತಡೆಯಲಾರದೇ ಆ ಮರಿ ಇದ್ದ ಬಡಿಗೇರ್ ಮನೆಗೆ ಧಾವಿಸಿದೆ.  ಸ್ವಲ್ಪ ಹೊತ್ತು ಹಾಗೆ ಆ ಮರಿಯ ತುಂಟಾಟವನ್ನು ನೋಡಿದೆ. ಮರಿಯನ್ನು ಎತ್ತಿದೆ, ಮುಟ್ಟಿದೆ, ಸುಮ್ಮನೇ ಇತ್ತು. ಒಮ್ಮೆ ಮಾತ್ರ ಬುಸ್ ಅಂತ ಬಾಯಿ ತೆಗಯಿತು. ಆಗಲೇ ನಾನು ಸ್ವಲ್ಪ ಹೆದರಿದೆ. ಅದು ಬುಸ್ ಅಂತ ಶಬ್ಗ ಮಾಡಿದಾಗ ಹತ್ತಿರದಲ್ಲೇ ಇದ್ದ ಮಗುವುಂತೂ ಕೀಟಾರನೆ ಚೀರಿತು. ಮನೆಯಲ್ಲಿದ್ದ ಕಾಮೆರಾದಿಂದ ನಮ್ಮ ಬಾ ಅದರ ಕೆಲವು ಪೋಟೋಗಳನ್ನು ಕ್ಲಿಕ್ಕಿಸಿದರು.

ನಮ್ಮ ಕೇರಿ ಕಾಮನಗಲ್ಲಿಗೆ ಮೊಸಳೆ ಬಂದ ಆ ದಿನ ತುಂಬಾ ಮಜವಾಗಿತ್ತು. ಎಲ್ಲರೂ ನಮ್ಮ ಕೇರಿಗೆ ಹೊಸಗೆಸ್ಟ್ ಬಂದಿದಾನೆ ಅಂತ ಅಂದುಕೊಂಡು, ನೋಡಿಕೊಂಡು, ಹೋಗುತ್ತಿದ್ದರು. ಎಲ್ಲರೂ ನೋಡಿದ ಮೇಲೆ ಬಡಿಗೇರ್ ಮನೆಯ ಶ್ರೀಧರಣ್ಣ ಅದನ್ನು ಮತ್ತೇ ವರದಾ ನದಿಗೆ ಬಿಟ್ಟರು. ನದಿಗೆ ಇಳಿದ ಆ ಮೊಸಳೆಮರಿ ಅಮ್ಮನನ್ನು ಹುಡುಕುತ್ತಾ ಯಾವ ಕಡೆಗೆ ಹೋಯಿತು ಗೊತ್ತಾಗಲಿಲ್ಲ. ಆ ಮೊಸಳೆ ಮರಿಯ ಅಪ್ಪ-ಅಮ್ಮ ಬನವಾಸಿಯಲ್ಲಿದ್ದರೋ, ಪಕ್ಕದ ಕಪಗೇರಿ,ಭಾಷಿ, ತಿಗಣಿಯಲ್ಲಿದ್ದರೋ...?
ಆದಷ್ಟು, ಅಮ್ಮನ ಮಡಿಲನ್ನ ಬೇಗ ಸೇರಿದರೆ ಸಾಕು!


Thursday, 20 October 2011

ಕ್ಷಣಗಲ್ಲದ ಹುಡುಗನ ನೋವು..!

ಪರಿಪರಿಯಾಗಿ ಬೇಡಿದೆನು, ನನ್ನ ಅರಿಕೆಗೆ
ಸ್ವಲ್ಪವಾದರೂ ಬೆಲೆಯಿದೆ ಇರಬಹುದೆಂದು
ಮಾನವೀಯತೆ ಉಂಟು ಅವರಲ್ಲಿ, ಆದರೂ
ಯಾಕೋ ನನಗೆ ಮಾತ್ರ ಕಾಣುತ್ತಿಲ್ಲ…
ಒಲಿದುದು ನನಗೆ ಇಷ್ಟೇ ಎಂದು ನಾನು ಸುಮ್ಮನಾಗಲಿಲ್ಲ
ಪಾಡಿದ,ಓಡಿದ,ಕುಣಿದ,ಮನಸ್ಸಿನ ಭಾರದ ನೋವು
ಅವರಿಗೇನು ಗೊತ್ತು? ಸಮಯ ಹಂತಕರು ಅವರು
ನಮ್ಮಂತೆ ಅವರು ದಾಟಿ ಬಂದಿದ್ದರೆ
ತಾನೇ  ಗೊತ್ತಾಗೋದು…!
ಕ್ಷಣಗಲ್ಲದ ಹುಡುಗರ ಸಂತೆಯಲ್ಲಿ
ಉಂಡವನೇ ಜಾಣ ಎನ್ನುವ ಅವರ
ದಿಗಿಲಿನ ಪರಿ ನಾ ಕಾಣದೇ ಪರದಾಡಿದೆ
ಅವರು ದೊಡ್ಡವರು ಬೇರೆಯವರಿಗೆ ಮಾತ್ರ…
ನಮಗೆ ಅವರು ಚಿಕ್ಕವರು…!

Tuesday, 11 October 2011

ಅದ್ದೂರಿ ಚಿತ್ರ ಮಾಡಿದ ನಿದೇ೵ಶಕರ ಅಬ್ಬೇಪಾರಿ ಸ್ಥಿತಿ!!!!!- Directors Specialಅದ್ದೂರಿ ಐತಿಹಾಸಿಕ, ಸಾಮಾಜಿಕ ಚಿತ್ರಗಳನ್ನು ನಿಮರ್ಿಸಿದ ದಿ|| ಬಿ.ಆರ್. ಪಂತಲುರವರು ಕೊನೆಯ ಗಳಿಗೆಯಲ್ಲಿ ಸಾಲಗಾರರಾಗಿ ಬಹಳ ಕಷ್ಟದ ಜೀವನ ನಡೆಸಿದ್ದರು. ಕನ್ನಡಚಿತ್ರರಂಗವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಅತ್ತುತ್ತಮ ಚಿತ್ರಗಳನ್ನು, ಉತ್ತಮ ಕಲಾವಿದರನ್ನು ಪರಿಚಯಿಸಿದ ದಿ|| ಪುಟ್ಟಣ್ಣ ಕಣಗಾಲ್ರಾಗಲಿ, ದಿ|| ಬಿ. ನಾಗೇಂದ್ರರಾಯರು ಇನ್ನು ಮುಂತಾದ ಕಲಾವಿದರು ಬಹಳ ಬದುಕಿನ ಸಂಧ್ಯಾಕಾಲದಲ್ಲಿ ಆಥರ್ಿಕವಾಗಿ ಬಹಳ ನೊಂದಿದ್ದರು.  ಹೀಗೆ ಒಂದು ಬಾರಿ ನಾಗೇಂದ್ರರಾಯರು ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಖ್ಯಾತ ಕಾದಂಬರಿಗಾತರ್ಿ ಎಂಕೆ ಇಂದಿರಾರವರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು. ಕಾರ್ಯಕ್ರಮದ ನಿರೂಪಕರು ಸ್ವಾಗತಭಾಷಣದಲ್ಲಿ ನಾಗೇಂದ್ರರಾಯರನ್ನು  `ಕನ್ನಡ ಚಿತ್ರರಂಗದ ಭೀಷ್ಮ 'ರೆಂದು ಹೊಗಳಿದರಂತೆ. ಸ್ವಲ್ಪ ಸಮಯದ ನಂತರ ರಾಯರು ಅಧ್ಯಕ್ಷ ಭಾಷಣದಲ್ಲಿ ನಗುತ್ತಾ ಹೇಳಿದರಂತೆ. `ನನ್ನ ಬಿಳಿಯಗಡ್ಡವನ್ನು ನೋಡಿ ನನ್ನನ್ನು ಭೀಷ್ಮನೆಂದು ಹೊಗಳಿದಿರಿ..ಅದು ನಿಮ್ಮ ಅಭಿಮಾನ.  ನನ್ನ ಬಿಳಿಯ ಗಡ್ಡವನ್ನು ನಾನು ಯಾಕೆ ಬೆಳೆಯಲು ಬಿಟ್ಟಿದ್ದೇನೆ ಎಂಬುದು ತಿಳಿದರೆ ನೀವೆಲ್ಲಾ  ಭೇಸರಪಡುತ್ತೀರಿ' ಎಂದು ಹೇಳಿ ವಿಷಾದವಾಗಿ ನಕ್ಕರಂತೆ. ಈ ಸನ್ನಿವೇಷವನ್ನು ಅಂದು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಎಂಕೆ ಇಂದಿರಾರವರು ತಮ್ಮ `ಚಿತ್ರಭಾರತ ಕೃತಿಯಲ್ಲಿ ನಿವೇದಿಸಿದ್ದಾರೆ. ರಾಯರ ಕೊನೆಯ ದಿನಗಳಲ್ಲಿ ಅವರು ಆಥರ್ಿಕವಾಗಿ ಬಹಳ ಕಷ್ಟದಲ್ಲಿದ್ದರು ಅಂತ ಬಿಡಿಸಿ ಹೇಳಬೇಕಿಲ್ಲ!


Monday, 10 October 2011

ಇದು ಕಥೆ ಅಲ್ಲ, ನಿರೂಪಕರ ನಿಜ ಜೀವನ !

 ಹಾಯ್..ಹಲೋ..ನಮಸ್ತೆ...ನಮಸ್ಕಾರ..ಶುಭೋದಯ  ಅಂತೆಲ್ಲಾ ದಿನಾ ಬೆಳ್ಳಗೆ ನಿಮ್ಮ ಮನೆ ಟಿವಿಯಲ್ಲಿ (ಟಿವಿ ಆನ್ ಆಗಿದ್ರೆ) ವೀಕ್ಷಕ ಮಹಾಪ್ರಭುವಿಗೆ ಬೆಳಗಿನ ಬಿಸಿಬಿಸಿ ಕಾಫಿ ಹೀರುವಾಗ, ಹೊರಗಿನ  ಬೆಳಗಿನ ಬಿಸಿಲು ನೆತ್ತಿಯ ಮೇಲೆ ಏರುವ ಮುಂಚೆಯೇ ಆತನ ಕಿವಿ ಮತ್ತು ಕಣ್ಣನ್ನು ತಂಪಾಗಿಸುವ ಸುಂದರ ಲಲನೆಯರ ಸಂಖ್ಯೆಯೇನು ಕಡಿಮೆಯಿಲ್ಲ. ಕಾಣದ ಯಾವುದೋ ಊರಿನ ಮುಖ ಮೂತಿ ನೋಡಿರದ ವ್ಯಕ್ತಿಯ ಜೊತೆ ಹೊಟ್ಟೆ ತುಂಬುವಷ್ಟು ಮಾತನಾಡುತ್ತಾ  ಆತನ ಹೃದಯಕ್ಕೆ ನೇರವಾಗಿ ಬೌಂಡರಿ ಹೊಡೆಯುತ್ತ ಪ್ರತಿ ಎರಡು ಸೆಕೆಂಡ್ಗೆ  ನಿಮ್ಮ ಟಿವಿ ವಾಲ್ಯೂಮ್ ಕಮ್ಮಿ ಮಾಡ್ರಿ ಅಂತ ಹೇಳುವ ನಿರೂಪಕ/ನಿರೂಪಕಿಯರ  ಪಾಡೇನು ನಾವು ನೀವು ಅಂದುಕೊಂಡಂತೆ ಇಲ್ಲ. ಇಲ್ಲಿ ನಿರೂಪಕಿ ನೋಡಲು ಚೆನ್ನಾಗಿದ್ದರೆ ಅವಳ ಬಾಯಿಂದ ಕನ್ನಡ ಎನ್ನಡವಾಗಿದ್ದರೂ ಬಾಯಿ ಬಿಟ್ಟುಕೊಂಡು ನೋಡುವ ಜನರೇನು ಕಡಿಮೆ ಇಲ್ಲ, ಅದರಲ್ಲೂ  ಇಂತಹ ಬಾಲೆಯ ಫೋನು ಒಬ್ಬ ಪಡ್ಡೆ ಹುಡುಗ ಇಲ್ಲವೇ ಮದುವೆಯಾಗದ ಗಂಡಸರಿಗೆ  (ಕೆಲವೊಮ್ಮೆ ಮಹುವೆಯಾಗಿರುವ ಗಂಡಸರು ಕೂಡ) ಸಿಕ್ಕಿಬಿಟ್ಟರೆ ಅದುವೇ ಅವರಿಗೆ ದೊಡ್ಡ ಸ್ವರ್ಗ, ರಾತ್ರಿಯೆಲ್ಲ ಮನಸ್ಸಿನಲ್ಲಿ ರೆಕಾರ್ಡ ಮಾಡಿಕೊಂಡಿದ್ದ ಅವಳ ದ್ವನಿಯನ್ನು ರಿವೈಂಡ್ ಮಾಡಿ ಮಾಡಿ ಇಂದು ಜೀವನಕ್ಕಾಗುವಷ್ಟು ಕನಸು ಕಂಡುಬಿಟ್ಟಿರುತ್ತಾರೆ. ತಮ್ಮ ಸ್ನೇಹಿತರ ಜೊತೆ ನಾನು `---' ವಾಹಿನಿಯ ಆ ಸಕ್ಕತ್ ಹುಡುಗಿಯ ಜೊತೆ ಮಾತಾಡ್ದೆ ಕಣೋ..ಅಂತ ಜಂಬಕೊಚ್ಚಿಕೊಳ್ಳುತ್ತಿರುತ್ತಾರೆ. ಏಷ್ಟೋ ನಿರೂಪಕಿಯರಿಗೆ ಅವರ ನಿರೂಪಣೆಯ ಸಮಯದಲ್ಲಿ ಈ ಅಭಿಮಾನಿಗಳ  ಕಾಲುಗಳೇ (ಕಾಟ) ಜಾಸ್ತಿಯಾಗಿರುತ್ತವೆ. ಕೆಲವೊಮ್ಮೆ ಬೇಗನೆ ಅವರ ಗೊತ್ತಾಗದಿದ್ದಾಗ `ಹಾಯ್, ನಾನ್ ರೀ.. ನಿಮ್ಮ್ ಜೊತೆ ನಿನ್ನೆ ಮಾತಾಡಿದ್ನಲ್ಲಾ ಮೇಡಂ..ನಾನೇ ಆ..ಆ..' ಅಂದಾಗ ಕೊನೆಗೆ `ಹೋ.. ನೀವಾ.?' ಇಲ್ಲವೇ  `ಎಸ್ ಯು ಆರ್ ರೈಟ್' ಎಂದಾಗ ಅಭಿಮಾನಿಯ ಹೋದ ಜೀವ ಮತ್ತೆ ಬಂದಾಂಗುತ್ತದೆ. ಹೀಗೆ ಇಂಥಹ ಜನರಿಂದಾಗಿಯೇ ನಿರೂಪಕಿಯರಿಂದ ಚಾನೆಲ್ಗೆ ಹೆಚ್ಚಿನ ಟಿಆರ್ಪಿ ಅಂಕಗಳು ಸಿಗುತ್ತಿದೆ. ಹೀಗೆ ಟೀವಿಯಲ್ಲಿ  ಇಷ್ಟಗಲ ನಗುತ್ತಾ ರಸಿಕರನ್ನು  ರಂಜಿಸುವ ನಿರೂಪಕರು  ಒಳಗಡೆ ಅನುಭವಿಸುವ ನೋವು ಅವಮಾನವು, ಅಭಿಮಾನಿಗಳು ಮಾಡುವ ಪೋನಿಗೆ ಇದು ಗೊತ್ತಾಗುವುದೇ ಇಲ್ಲ.  ಪ್ರತಿದಿನ ಸ್ಟುಡಿಯೋದಲ್ಲಿ ಅನುಭವಿಸುವ ಮನಸ್ಸಿನ ಆತಂಕ, ಇಲ್ಲೂ ನಡೆಯುವ ಒಳ ರಾಜಕೀಯ, ಸ್ಥಿರತೆಯಿಲ್ಲದ ಕೆಲಸ, ಇವತ್ತಿಗೆ ಕೆಲಸ ಆಯ್ತು ಆದ್ರೆ.....ನಾಳೆ ಮತ್ತೇನು ಮತ್ತು ಮುಂದೇನು? ಎಂಬ ಪ್ರಶ್ನೆಗಳ ನಡುವೆ ಜೀವನ ನಡೆಸುವ ನಿರೂಪಕರ ಪಾಡಂತು ಯಾರು ಕೇಳರು.
ಪ್ರಿಯ ವೀಕ್ಷಕರೇ..ಉಸ್ಸಫಾ.. ಸಾರಿ ಸ್ನೇಹಿತರೇ ನಾನು ನಿಮ್ಮ ನೆಚ್ಚಿನ `--------' ಇಂದು ನಾ ನಿಮಗೆ ಹೇಳುತ್ತಿರುವ ಕಥೆ `ಹೀಗೂ ಉಂಟೆ?' ಅಲ್ಲ `ವಾಸ್ತವ' .ಇದು `ಅಚ್ಚರಿ', ನಮಸ್ಕಾರ `ಸೀ-ರೀಯಲ್ ' ಸ್ವಾಗತ,  ಕ್ರೈಮ್ ಲೋಕದ ಇವತ್ತಿನ ಬೇಟೆ ಯಾವುದು... ತೆರೆಯ ಮೇಲೆ ನಾವೇನೋ(ಆಂಕರ್ಗಳು)  ತಮ್ಮ ದುಃಖ, ಸಂಕಟ, ಹಿಂಸೆಗಳನ್ನು ಮರೆಮಾಚಿ ನಗುತ್ತ ಚೆನ್ನಾಗಿ ಮೇಕಪ್ ಮಾಡಿಕೊಂಡು ಎಲ್ಲರ ಮುಂದೆ ಬರುವುದು ಸಾಮಾನ್ಯದ ಮಾತು. ಯಾವುದೇ ಒಂದು ವಾಹಿನಿಯನ್ನು ಪ್ರತಿನಿಧಿಸುವವರು ನಿರೂಪಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ? ನಿರೂಪಕರು ವಾಹಿನಿಯ ಯಶಸ್ಸಿಗೆ ಹೇಗೆ ಕಾರಣಿಭೂತರಾಗಿರುತ್ತಾರೆ  ಎಂಬುದನ್ನು ನಾವು ಈ ರೀತಿ ಮನದಟ್ಟುಮಾಡಿಕೊಳ್ಳಬಹುದು. 1. ನಿದರ್ೇಶಕರ ಯೋಚನೆಯನ್ನ ತೆರೆಯ ಮೇಲೆ ಪಕ್ವವಾಗಿ ಮೂಡಿಸುವವರು ಮತ್ತು ಜನ ಸಾಮಾನ್ಯರೊಡನೆ ಒಂದು ವಾಹಿನಿಯನ್ನ ಪ್ರತಿನಿಧಿಸುವವರು. 2. ನಿದರ್ೇಶಕರ ಕಲ್ಪನೆಯ ಚಿತ್ರಕ್ಕೆ  ಬಣ್ಣ ಲೇಪಿಸುವವರು ನಿರೂಪಕರು ಅಂದ್ರೆ ಇವರೇ. 3. ಹೊರಗೆ ನೂರೆಂಟು ವ್ಯಯಕ್ತಿಕ ತೊಂದರೆ ಇದ್ದರೂ ಆಕ್ಷನ್ ಎಂದ ತಕ್ಷಣ ಎಲ್ಲಾ ಮರೆತು  ನಿಮ್ಮ ಜೊತೆ ಮಾತಾಡೋರು.
ಹೀಗೆ ಒಮ್ಮೆ ಆಂಕರ್ಗಳು  ಒಂದು ದಿನ  ಬೋರ್ಗರೆಯುವ ಮಳೆಯು ಹೊರಗಡೆ ಬೀಳುತಿರಲು  `ಕಾಫಿ ಡೇ'ಯಲ್ಲಿ ಸೇರಿದ್ದರು.  ಕಾಫಿಯಲ್ಲಿ ಮಾತ್ರ ಸಕ್ಕರೆಯಿತ್ತು, ಆದರೆ ಅವರವರಲ್ಲೆ ಒಬ್ಬರಿಗೆ ಒಬ್ಬರನ್ನು ಕಂಡ್ರೆ ಅಷ್ಟಕಷ್ಟೇ. ಇದೊಂಥರ ಪ್ರೋಫೆಷನಲ್ ಇಗೋ! ಒಬ್ಬರು ಕಾರ್ಯಕ್ರಮ ಬಿಟ್ಟರೆ  ಮತ್ತೊಬ್ಬರಿಗೆ  ಭೋಜನ. ಅವತ್ತು ಯಾರ ಮುಖದಲ್ಲೂ ನಗು ಮಾತ್ರ ಕಾಣ್ತಾ ಇರಲಿಲ್ಲ. ಎಲ್ಲರ ಮುಖದಲ್ಲು ಬೇಜಾರಿನ ಛಾಯೇ ಎದ್ದು ಕಾಣ್ತಾ ಇತ್ತು, ಎಲ್ಲರು  ಹೇಳುವರೇ. ನಿನಗೆ ಹೀಗಾಯ್ತು, ನಂಗೆ ಹಾಗಾಯ್ತು, ಇನ್ನು ನಮಗೆ ಏನಾಗುವುದೋ? ಎಂಬ ಚಿಂತೆ. ನಮ್ಮ ಬಾಳು ಹೀಗೇನಾ? ಹಲವು ದಿನಗಳ ಮಾತ್ರ ನಮಗೆ  ವಾಹಿನಿಗಳ ಜೊತೆ ನಂಟು. ಇನ್ನು ಯಾರು  ಮಾತಾಡಲಿಲ್ಲವೇನೋ ಅನ್ನುವ ಮಾತು.   ಆಗ ಎಲ್ಲರು ` ಈ ವಾಹಿನಿಯವರಿಗೆ ಟಿಆರ್ಪಿಯ ಹುಚ್ಚು ಹಿಡಿದಿದೆ, ಮನುಷ್ಯತ್ವನೇ ಇಲ್ವ.  ಇತ್ತೀಚೆಗೆ ರಿಟೈರ್ ಆದಂತಹ ಈ ಸಿನಿಮಾ ನಟಿಯರು ಕಿರುತೆರೆ ಕಲಾವಿದರು ಬಂದು ನಮ್ಮ ಜಾಗವನ್ನು ಮತ್ತು  ಕೆಲಸವನ್ನು ಕಿತ್ತುಕೊಂಡು ಬಿಟ್ರು. ಅಂತ ಗೊಗರೆದರು.  ಇಷ್ಟೆಲ್ಲಾ ಮಾತಾದ ಮೇಲೆ ಇನ್ನೋಬ್ಬರು ಇನ್ನೊಂದು ಗುಂಪಿನ ನಿರೂಪಕರ ಬಗ್ಗೆ ಮಾತಾಡಿದರು. ಶೋಕಿಗಾಗಿ ನಿರೂಪಣೆಯ ಮೇಲೆ ಕೊಂಚವು ಪ್ರೀತಿ ಹೋಗ್ಲಿ ಗೌರವ ಇಲ್ಲದ  ಬಹಳಷ್ಟು ಮಂದಿ ಇಂದಿಗೂ ಪ್ರಮುಖ ವಾಹಿನಿಯಲ್ಲಿ  ನಿರೂಪಣೆ ಮಾಡ್ತಾ ಇದ್ದಾರೆ ಅಂದ್ರೆ ಆಶ್ಚರ್ಯ ಅಲ್ಲವೇ? ಅಂತ ಉಸುರಿದರು. ರೀ ನೀವೇ ಹೇಳ್ರಿ.. ಸಕರ್ಾರದಿಂದ ಹಿಡಿದು ಎಲ್ಲಾ ಕಡೆ ಇರುವ ಒಳ ರಾಜಕೀಯ ನಮ್ಮ ವಾಹಿನಿಗೆ ಎಂಟ್ರಿ ಕೊಡದೇ ಇರುತ್ತಾ? ಎಲ್ಲಿ ನೋಡಿದ್ರು ಬರೀ ರಾಜಕೀಯ..ರಾಜಕೀಯ .ಟಿಆರ್ಪಿ ಹೆಚ್ಚು ಮಾಡಲು ಹೋಗಿ ನಿರೂಪಕರ ಕೆಲಸದ ಮೇಲೆ ಮೊಳೆ ಹೊಡೆದು ಆರ್.ಐ.ಪಿ ಅಂತ ಹೇಳಿ  ಮೀಸೆ ಅಡಿಯಲ್ಲಿ ಚಿಕ್ಕದಾಗಿ ನಗ್ತಾರಲ್ಲಾ..ಇವರಿಗೇನು ಮಾಡೋದು? ಹೀಗೆ ನಗುವ ಮನಸ್ಸುಗಳಿಗೆಲ್ಲಾ ಧಿಕ್ಕಾರವಿರಲಿ. ಈ ಹಿಂದೆ ಕನ್ನಡದ ಅದ್ಭುತ ಮನರಂಜನೆ ಅನ್ನುವ ವಾಹಿನಿಯ ನಿರೂಪಕರಿಗೆ 'ಬೆಸ್ಟ್ ಆಂಕರ್ ಅವಾರ್ಡ' ಬಂದಾಗ `ಕಂಗ್ರಾಟ್ಸ್ , ವೆರಿ ಗುಡ್, ಟೇಕ್ ಇಟ್ ಇನ್ ಎ ಗುಡ್ ವೇ, ನಾವು ನಿಮಗೆ ಫುಲ್ ಸಪೋಟರ್್ ಮಾಡ್ತೀವಿ' ಅಂತ ಹೇಳಿ ನಾಲ್ಕು ದಿನವಾದ ಮೇಲೆ ` ಸಾರಿ ರೀ.. ನಿಮ್ಮ ಪ್ರೋಗ್ರಾಂ ರಿಜೆಕ್ಟ್ ಆಗಿದೆ'   ಅಂತ  ಮೆತ್ತಗೆ ಹೇಳಿ  ಅವರೇ ಎಸ್ಕೇಪ್  ಆಗೋದಾ? ಮುಂದೆ ಈ ಕೆಲಸವನ್ನೇ ನಂಬಿಕೊಂಡಿರೋ ಅವರ ಗತಿಯೇನು ಅಂತ ಅವರಿಗೆ  ಗೊತ್ತಾಗೋದು ಬೇಡ್ವ? ಕೊನೆ ಪಕ್ಷ ಒಂದು ಥ್ಯಾಂಕ್ಸ್ ಕೂಡ ಇಲ್ಲ. ಆ ಕಾರ್ಯಕ್ರಮವನ್ನು ನಿಮರ್ಿಸಿದ ಸಕಲಕಲಾವಲ್ಲಭನಿಗೆ ಅವನು ನಿಮರ್ಿಸಿದ ಕಾರ್ಯಕ್ರಮಗಳು ನೆನಪಿನಲ್ಲಿದಿಯೋ ಹೊರತು ಆ ಕಾರ್ಯಕ್ರಮಗಳನ್ನು ತಲುಪಿಸಿದ ನಿರೂಪಕರಾರು ನೆನಪಿಲ್ಲ. ಇದೆಲ್ಲ ಯಾರ ಮಹಾತ್ಮೆಯೋ! ಸ್ವಾಮಿ ಇದೇ ನಿರೂಪಕರ ಸದ್ಯದ ಸ್ಥಿತಿಗತಿ. ಇದು ಕಥೆಯಲ್ಲ..ಇದುವೇ ಜೀವನ ಮತ್ತು ಸತ್ಯ ಕೂಡ.  ಎಲ್ಲಾ ಕಲಾವಿದರಿಗೆ ಅಸೋಸಿಯೇಷನ್, ಛೇಂಬರ್ ಅನ್ನೋದಿದೆ. ಅವರ ಕಷ್ಟ ನಷ್ಟಗಳನ್ನು ಕೇಳೋರು ಇದ್ದಾರೆ ಆದ್ರೆ ನಿರೂಪಕರ ದುಖ ಕೇಳೋಕೆ ಯಾವ ಅಸೋಸಿಯೇಷನ್ ಅನ್ನೋದು ಇಲ್ಲಾ.ಇದಕ್ಕೆ ಹಿರಿಯ ನಿರೂಪಕರು ಆಲೋಚಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಬೇಕಾಗಿದೆ.

Sunday, 9 October 2011

ಅಮಿತಾಭ್ ಜೀವನದಲ್ಲಿ ಟೀವಿ ಮಾಡಿದ ಮೋಡಿ!


ಇದು ಸುಮಾರು 12 ವರ್ಷಗಳ ಹಿಂದಿನ ಕತೆ. ಅಂದು ಅಮಿತಾಭ್ ಈಗಿನಂತೆ ಸಾವಿರಾರು ಕೋಟಿ ರೂ.ಗಳ  ಒಡೆಯನಾಗುವಷ್ಟು  ಶ್ರೀಮಂತನಾಗಿರಲಿಲ್ಲ. ಸೆಕೆಂಡ್ಸ್ ಲೆಕ್ಕದ  ಆ್ಯಡ್ಗಳಿಗೆ ಕೋಟಿಗಟ್ಟಲೇ ಹಣವನ್ನು ಡಿಮ್ಯಾಂಡ್ ಮಾಡುವಷ್ಟು ದೊಡ್ಡ ಐಕಾನ್ ಕೂಡ ಆಗಿರಲಿಲ್ಲ. ಇಂದು ತಮ್ಮ ಚಿತ್ರಕ್ಕೆ ಅಮಿತಾಭ್ ಬೇಕೆ ಬೇಕು ಅನ್ನುವ ನಿದರ್ೇಶಕರು  ಹಾಗೂ ನಿಮರ್ಾಪಕರಿಗೆ ಅಂದು ಬಚ್ಚನ್ `ಐರನ್ ಲೆಗ್'' ಆಗಿದ್ದ. ಹಾಗಿತ್ತು ಅಮಿತಾಭ್ ಬಚ್ಚನ್ನ  ಜೀವನದ ಅತ್ಯಂತ  ಕೆಟ್ಟ ದಿನಗಳು. ಇಡೀ ಬಾಲಿವುಡ್ ಭಾರತೀಯ ಚಿತ್ರರಂಗದ ಮೇರುನಟ ಅಮಿತಾಭ್ ಬಚ್ಚನ್ನನ್ನೇ ಮರೆತುಬಿಟ್ಟಿತ್ತು. ಸಾಲು ಸಾಲು ಸೋಲುಗಳು, ನಷ್ಟದಲ್ಲಿದ್ದ ಎಬಿಸಿಎಲ್ ಪ್ರೊಡಕ್ಷನ್ ಹೌಸ್, ನೂರಾರು ಕೋಟಿ ಸಾಲ,  ಪ್ರೀತಿಯಿಂದ ಕಟ್ಟಿಸಿದ್ದ ಮನೆ ಕೂಡ ಬ್ಯಾಂಕ್ ಹರಾಜಿನಲ್ಲಿತ್ತು. ಅಕ್ಷರಶಃ ಅಮಿತಾಭ್ ಬೀದಿಗೆ ಬಿದ್ದಿದ್ದ.

ಅಮಿತಾಭ್ನ ಹೊಸ ಅವತಾರ...!ಆದ್ರೆ, ಅಮಿತಾಭ್ ಬಚ್ಚನ್ ಎಂದಿಗೂ ಎದೆಗುಂದಲಿಲ್ಲ..ಆಗ ಅವನ ಜೊತೆ ಕೈ ಹಿಡಿದ ಹೆಂಡತಿ ಜಯಾ ಬಾಧುರಿ ಬಿಟ್ಟರೆ ಬೇರೆಯವರ ಸಾಥ್ ಕೂಡ ಇರಲಿಲ್ಲ. ಹೀಗಿದ್ದರೂ ಅಮಿತಾಭ್ ಒಂದೇ ರಾತ್ರಿಯಲ್ಲಿ  ಗೆದ್ದೇ ಬಿಟ್ಟ, ಫಿನಿಕ್ಸ್ ಪಕ್ಷಿಯಂತೆ ಮತ್ತೆ ಮಿಂಚಿನಂತೆ ಗಗನಕ್ಕೆ ಹಾರಿದ. ನೂರಾರು ಕೋಟಿ ಸಾಲವನ್ನು ಒಂದೆರಡು ವರ್ಷಗಳಲ್ಲಿ ತೀರಿಸಿಬಿಟ್ಟ..ಸಿನಿಮಾಗಳ ಮೇಲೆ ಸಿನಿಮಾಗಳು, ಒಂದು ರೂಪಾಯಿ ಚಾಕಲೇಟ್ನಿಂದ ಹಿಡಿದು ಕೋಟಿ ರೂ.ಗೆ ಬೆಲೆ ಬಾಳುವ ಕಾರುಗಳ ಪ್ರಚಾರಕ್ಕೂ ಅಮಿತಾಭನೇ ಬೇಕಾದ..ಲೆಕ್ಕವಿಲ್ಲದಷ್ಟು ಜಾಹಿರಾತುಗಳು. ಕೆಲವೇ ವರ್ಷಗಳಲಿ ್ಲ ಸಾವಿರಾರು ಕೋಟಿ ರೂಗಳ  ಒಡೆಯನಾದ. ಅದೇ ಅಮಿತಾಬ್ ಮತ್ತೇ ಅಮಿತಾಭ್ ಆಗಿದ್ದು ಒಂದೇ ಒಂದು ಕಾರ್ಯಕ್ರಮದ ನಿರೂಪಣೆಯ ಮೂಲಕ, `ಕೌನ್ ಬನೇಗಾ ಕರೊಡ್ಪತಿ'' ಆತನ ಜೀವನದಲ್ಲಿ ಮತ್ತೊಮ್ಮೆ ಮರುಜೀವ ನೀಡಿದ ಶೋ..!

ಉತ್ತರಪ್ರದೇಶದ ಒಂದು ದೊಡ್ಡ ರ್ಯಾಲಿಯಲ್ಲಿ ಅಮಿತಾಭ್ ಭಾಗವಹಿಸಿದ್ದ. ಅವನನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಬಂದಿದ್ದರು. ತನ್ನನ್ನು ನೋಡಲು ಬಂದ ಅಭಿಮಾನಿಗಳಿಗೆ ಕೈ ನೀಡುತ್ತಿರುವಾಗ ಅಲ್ಲಿದ್ದ ಅಮ್ಮನ ಜೊತೆ ಬಂದ ಪುಟಾಣಿ ಮಗುವೊಂದು ಅಮ್ಮನ ಕಂಕುಳಲ್ಲಿ ಕುಳಿತುಕೊಂಡಿತ್ತು. ಅದು ಅಮ್ಮನಿಗೆ ಕೈ ತೋರಿಸಿ 'ಅಮ್ಮಾ,ಇವರೇ ಅಲ್ವಾ ಟಿವಿಲಿ ಕ್ವೀಜ್ ಪ್ರೋಗ್ರಾಂ ನಡೆಸಿಕೊಡೋರು' ಅಂತ ಅಮಿತಾಭ್ ಎದುರೇ ಕೇಳಿತು. ಅಮ್ಮ ಸ್ವಲ್ಪ ಪೇಚಿಗೆ ಸಿಕ್ಕಿಕೊಂಡರೂ ಅಮಿತಾಭ್ಗೆ ಮಾತ್ರ ಮಗು ಮಾತನ್ನ ಕೇಳಿದಾಗ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು. ಆ ಕ್ಷಣಕ್ಕೆ ಅವನಿಗಾದ ಸಂತೋಷ ಅಷ್ಟಿಷ್ಟಲ್ಲ..! ತಕ್ಷಣ ತನಗಾದ ಆ ಆನಂದ ಬಾಷ್ಪವನ್ನು ತೋರಿಸಿಕೊಳ್ಳದೆ ಆ ಪುಟಾಣಿ ಮಗುವಿನ ಗಲ್ಲಕ್ಕೆ ಮುತ್ತಿಕ್ಕಿ ಮುಂದೆ ಸಾಗಿದ. `ನಲವತ್ತು ವರ್ಷಗಳ ಕಾಲ ಸಿನಿಮಾ ಹೀರೊ ಆಗಿ ಮಿಂಚಿದ್ದ ನನ್ನನ್ನು ಸಿನಿಮಾಗಳ ಮೂಲಕ ಗುರುತಿಸದೇ ಕೇವಲ ಟಿವಿ ಕಾರ್ಯಕ್ರಮದ ಮೂಲಕ ನನ್ನನ್ನು ಗುರುತಿಸುವುದನ್ನು ನೋಡಿದರೆ ಈ ಟಿವಿ ಮಾಧ್ಯಮ ಏಷ್ಟೊಂದು ಪ್ರಭಾವಶಾಲಿಯಾಗಿದೆಯಲ್ಲಾ..!'' ಅಂತ ಒಮ್ಮೆ ಸಂದರ್ಶನದಲ್ಲಿ  ಅಮಿತಾಭ್ ನೆನಪಿಸಿಕೊಂಡಿದ್ದ.
ಯುಕೆ ದೇಶದ  ಗೇಮ್ ಶೋ `ಹೂ ವಾಂಟ್ಸ್ ಬಿ ಮಿಲೇನಿಯರ್''ನ ಭಾರತೀಯ ಅವತರಣಿಕೆ ಅಥರ್ಾತ್ ರಿಮೇಕ್ಕೇ ಈ ಕೌನ್ ಬನೇಗಾ ಕರೋಡ್ಪತಿ. 2000ರಲ್ಲಿ  ಸ್ಟಾರ್ ಪ್ಲಸ್ನಲ್ಲಿ ಪ್ರಾರಂಭವಾದ ಕೌನ್ ಬನೇಗಾ ಕರೋಡ್ಪತಿ ಶೋ ಕೇವಲ ಅಮಿತಾಭ್ಗೆ ಮಾತ್ರವಲ್ಲ, ಇಂಡಿಯಾದಲ್ಲಿ ತನ್ನ ಅಸ್ತಿತ್ವಕ್ಕೆ ಹೆಣಗುತ್ತಿದ್ದ  ರೂಪರ್ಟ ಮುಡರ್ೋಕ್ ಒಡೆತನದ ಸ್ಟಾರ್ ಟಿವಿಗೂ ಕೂಡ ಒಂದು ದೊಡ್ಡ ಬ್ರೇಕನ್ನೇ  ನೀಡಿತ್ತು. ಜನರಿಗೆ ಜನರಲ್ ನಾಲೇಜ್ಗೆ ಸಂಬಂಧಿಸಿದಂತೆ ಜನರಿಗೆ ಕ್ವೀಜ್ ಮೂಲಕ  ಹಣ ಮಾಡುವ ಗ್ಯಾಮ್ಲಿಂಗ್ ಗೇಮ್ ಇದಾಗಿತ್ತು. ಸಿದ್ದಾರ್ಥ ಬಸು  ಹಿಂದಿಯಲ್ಲಿ ಇದನ್ನ ನಿಮರ್ಾಣ ಮಾಡೋದ್ರ ಜೊತೆಗೆ ನಿದರ್ೇಶನ ಕೂಡ ಮಾಡ್ತಿದ್ರು. ಯುಕೆ ಗೇಮ್ ಶೋ `ಹೂ ವಾಂಟ್ಸ್ ಬಿ ಮಿಲೇನಿಯರ್'' ಎಷ್ಟು ಜನರನ್ನು ಸೆಳೆಯಿತೋ ಗೊತ್ತಿಲ್ಲ, ಆದ್ರೆ ಅಮಿತಾಭ್ ಮಾತ್ರ ಕರೋಡ್ಪತಿ ಪ್ರೋಗ್ರಾಂ ಮೂಲಕ ಅಕ್ಷರಶಃ ಭಾರತೀಯರನ್ನ ಆಳಿದರು.  ಕಾರ್ಯಕ್ರಮ ನಿರೂಪಣೆ, ನಿರೂಪಣೆಗೆ ಜೀವ ತುಂಬುತ್ತಿದ್ದ ಅವರ ಗಡುಸಾದ ದನಿ, ಮ್ಯಾನರಿಸಂ, ಗೇಮ್ನಲ್ಲಿ ಸೋತು ಹತಾಶರಾದವರಿಗೆ ಅಮಿತಾಭ್ ಹೇಳುತ್ತಿದ್ದ ಸಾಂತ್ವನದ ಮಾತುಗಳು, ಇಡೀ ಶೋ ಸಂಪೂರ್ಣವಾಗಿ ಅಮಿತಾಭ್ಮಯವಾಗಿತ್ತು. ಅಮಿತಾಭ್ ಅಂದಿನಿಂದ ಇಂದಿನವರೆಗೂ ಭಾರತದ ಟಿವಿ ಐಕಾನ್ ಅಂದೇ ಜನಪ್ರಿಯರಾಗಿದ್ದಾರೆ. ಇಂದಿಗೂ ಅಮಿತಾಭ್ ಆಂಕರಿಂಗ್ ಅಂದ್ರೆ ಅದು ಕೌನ್ ಬನೇಗಾ ಕರೋಡ್ಪತಿಯೇ ಕಣ್ಮುಂದೆ ಬರುತ್ತದೆ. ಹೀಗೆ ಅಮಿತಾಭ್ ಇಡೀ ಶೋದ ಕೇಂದ್ರ ಬಿಂದುವಾಗಿ ಕೋಟ್ಯಂತರ ಜನರ ಆರಾಧಕರಾಗಿ ಬೆಳೆದ ಪರಿ ಮಾತ್ರ ರಿಯಲಿ ಗ್ರೇಟ್..!

ಕೆಬಿಸಿ-1 ಪ್ರಾರಂಭವಾದಾಗ ಸ್ಟಾರ್ ಟಿವಿಯ ಕಮಷರ್ಿಯಲ್ ಆಡ್ ರೇಟ್ ಲಕ್ಷದವರೆಗೆ ಮುಟ್ಟಿತ್ತು. ಈ ಶೋನ ಜನ್ರು ಎಷ್ಟು ಇಷ್ಟಪಟ್ಟಿದ್ರು ಅಂದ್ರೆ ರಾತ್ರಿ ಈ ಶೋ ನೋಡಲಿಕ್ಕೆ ಹಳ್ಳಿಗಳಲ್ಲಿ ತಮ್ಮ ಮನೆಯಲ್ಲಿ ಟಿವಿ ಇಲ್ದೋರು ಕಿಲೋಮಿಟರ್ಗಟ್ಟಲೆ ನಡೆದು ಬೇರೆ ಊರಿನವರ ಮನೆಯ ಬಾಗಿಲು ತಟ್ಟಿದವರಿದ್ದಾರೆ. ಟಿವಿ ಇಲ್ದೋರು ಸಾಲ ಮಾಡಿ ಟಿವಿ ತಂದು ನೋಡಿದವರಿದ್ದಾರೆ. ತಮ್ಮ ಮನೆಯ ಟಿವಿಯಲ್ಲಿ ಸ್ಟಾರ್ ಟಿವಿ ಬರುತ್ತಿಲ್ಲವೆಂದು ಕೇಬಲ್ ಆಪರೇಟರ್ ಜೊತೆ ಜಗಳ ಆಡಿದವರಿದ್ದಾರೆ. ಹೀಗೆ, ಅಂದು ಟಿವಿಯತ್ತ ಹೆಚ್ಚೆಚ್ಚು ಜನ್ರನ್ನ ಸೆಳೆದ ಐಕಾನ್ ಅಮಿತಾಭ್ ಆಗಿದ್ದರು. ಇಂತಹ ಇನ್ನು ಹಲವು ಮೈಲಿಗಲ್ಲುಗಳನ್ನ ಅಮಿತಾಭ್ `ಕೌನ್ ಬನೇಗಾ ಕರೋಡ್ಪತಿ'' ಪ್ರೋಗ್ರಾಂ ಮೂಲಕ ಸಾಧಿಸಿದ್ದರು. ಕಾರ್ಯಕ್ರಮ ಜನಪ್ರಿಯವಾದಂತೆ ಅಮಿತಾಭ್ರ ಡಿಮ್ಯಾಂಡ್ ಕೂಡ ಜಾಸ್ತಿಯಾಯಿತು. ಪ್ರತಿದಿನಕ್ಕೆ  ಕೋಟಿ ರೂ.ವರೆಗೆ ಡಿಮ್ಯಾಂಡ್ ಮಾಡುವಷ್ಟು ಪ್ರಸಿದ್ದರಾದರು. ಟಿವಿಯಲ್ಲಿ ಇವರ ಡಿಮ್ಯಾಂಡ್ ಹೆಚ್ಚಾದಂತೆ ಸಿನಿಮಾಗಳಲ್ಲಿ ಕೂಡ ಇವರ ಕಾಲ್ಶೀಟ್ಗೆ ಭಾರಿ ಡಿಮ್ಯಾಂಡ್ ಹುಟ್ಟಿಕೊಂಡಿತು. ಆಗಿನ ಸಮಯದಲ್ಲಿ ಅಮಿತಾಭ್ ಕೇವಲ ಸಪೋಟರ್ಿಂಗ್ ರೋಲ್ಗೆ 2 ರಿಂದ 3 ಕೋಟಿ ರೂ.ಗಳಷ್ಟು ಹಣವನ್ನು ಪಡೀತಿದ್ರು. ಅಂದು ಬೆಟ್ಟದಷ್ಟು ಅಡಗಿಕುಳಿತುಕೊಂಡಿದ್ದ ಕೋಟ್ಯಂತರ ಸಾಲವನ್ನು ತೀರಿಸಲಿಕ್ಕೆ ಅಮಿತಾಭ್ ಮೂರ್ನಾಲ್ಕು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಿದ್ದರು. ದೇಹಕ್ಕೆ ಬಿಡುವು ಇಲ್ಲದ ಹಾಗೆ ಶೂಟಿಂಗ್ನಲ್ಲಿ ಭಾಗವಹಿಸ್ತಿದ್ರು. ಅಮಿತಾಭ್ ಶಕ್ತಿಯೇ ಅಂತದ್ದು, ಒಮ್ಮೆ ಆತ ಮನಸ್ಸು  ಮಾಡಿದರೆ ಆ ಕೆಲಸ ಸಂಪೂರ್ಣವಾಗಿ ಯಶಸ್ಸು ಕಾಣೋವರ್ಗೂ ಬಿಡ್ತಿರಲಿಲ್ಲ. ತಾನು ಅನುಭವಿಸಿದ ಎಲ್ಲ ನೋವು-ಅವಮಾನಗಳಿಗೆ ತನ್ನ ದುಡಿಮೆಯೇ ಉತ್ತರ ಕೊಡುತ್ತೆ ಅನ್ನೋ ನಂಬಿಕೆಯಲ್ಲಿ ಕೆಲಸ ಮಾಡುತ್ತಿದ್ದ. ಅದನ್ನು ಸಾಧಿಸಿಯೂ ತೀರಿದ್ದ. ಈಗಲೂ ಅವನಲ್ಲಿ ಅದೇ ಹಠ ಇದೆ. ಅಂದು ಅಮಿತಾಭ್ ಸೋತಾಗ ಹಿಂಡಿ ಹಿಪ್ಪೆ ಮಾಡಿದಂತಹ ಜನಗಳೇ ಮತ್ತೊಮ್ಮೆ ಅವನ ಕಾಲ್ಶೀಟ್ಗೆ ಮನೆಬಾಗಿಲಲ್ಲಿ ನಿಂತಿದ್ದರು.
ಸಾಮಾನ್ಯವಾಗಿ ಅಪ್ಪಮ್ಮಂದಿರಿಗೆ ತಮ್ಮ ಮಕ್ಕಳು ಜಾಸ್ತಿ ಟಿವಿ ನೋಡೊದನ್ನ ಇಷ್ಟಪಡೋಲ್ಲ, ಎಲ್ಲಿ ತಮ್ಮ ಮಕ್ಳು ಟಿವಿ ನೋಡಿ ಹಾಳಾಗಿ ಬಿಡ್ತಾರೋ ಅನ್ನೋ ಭಯ ಸಾಮಾನ್ಯವಾಗಿ ಎಲ್ಲರಿಗೂ ಇದ್ದದ್ದೆ. ಆದ್ರೆ ಅಮಿತಾಭ್ ನಡೆಸುತ್ತಿದ್ದ ಈ ಗೇಮ್ ಶೋದಲ್ಲಿ ಮಾತ್ರ ಇದು ಸುಳ್ಳಾಯಿತು. ಸಾಮಾನ್ಯವಾಗಿ 6 ವರ್ಷದ ಮಕ್ಕಳಿಂದ ಹಿಡಿದು ಸ್ಟಿಕ್ಕೇ ಇಲ್ಲದೆ ನಿಲ್ಲಲಾಗದ ವಯಸ್ಸಾದವರೂ ಕೂಡ ಈ ಶೋವನ್ನು ತುಂಬಾನೇ ಇಷ್ಟಪಟ್ಟಿದ್ರು. ಸಿವಿಲ್ ಹಾಗೂ ಕಾಂಪಿಟೇಟಿವ್ ಎಕ್ಸಾಮ್ ಕಟ್ಟಿದಂತಹ ಯುವಕ ಯುವತಿಯರಿಗೆ ಈ ಶೋ ಒಂಥರ ಟ್ಯೂಷನ್ಕ್ಲಾಸ್ ಆಗಿತ್ತು. ಅಪ್ಪಮ್ಮಂದಿರು ತಮ್ಮ ಮಕ್ಕಳನ್ನ ಹಿಡಿದು ಕೂರಿಸಿ ಈ ಕ್ವೀಜ್ ಕಾರ್ಯಕ್ರಮವನ್ನ ತೋರಿಸುತ್ತಿದ್ರು. ಮಕ್ಕಳ ಜನರಲ್ ನಾಲೇಜ್ ಈ ಶೋ ನೋಡಿಯಾದ್ರೂ ಹೆಚ್ಚಾಗಲಿ ಎನ್ನುವುದು ಅವರ ಒತ್ಯಾಸೆಯಾಗಿತ್ತಷ್ಟೇ..!

ಅಮಿತಾಭ್ ಶೋ ಟಿಆರ್ಪಿಯಲ್ಲಿ ನಂ.1

2000ರಲ್ಲಿ ಅಂದು ಈಗಿನಂತೆ ಟಿವಿ ಚಾನೆಲ್ಗಳ ಭರಾಟೆ ಹೆಚ್ಚಾಗಿರಲಿಲ್ಲ. ಇಂದು ಸರಿ ಸುಮಾರು 600ಕ್ಕೂ ಹೆಚ್ಚು ಚಾನೆಲ್ಗಳು ನಮ್ಮನ್ನು ಆಳುತ್ತಿವೆ. ಕೋಟ್ಯಂತರ ಟಿವಿ ಪ್ರೇಕ್ಷಕರು ಒಂದೊಂದು ಚಾನೆಲ್ನ ಒಂದೊಂದು ಕಾರ್ಯಕ್ರಮಕ್ಕೆ ಹರಿದು ಹಂಚಿ ಹೋಗಿದ್ದಾರೆ. ಇಂದು ಯಾವುದೇ ಚಾನೆಲ್ ತನ್ನ ಎಲ್ಲ ಕಾರ್ಯಕ್ರಮಗಳನ್ನು ಇಷ್ಟಪಡುವ ಪ್ರೇಕ್ಷಕರನ್ನು ಹೊಂದಿದೆ ಅಂತ ಧೈರ್ಯವಾಗಿ ಹೇಳಲಿಕ್ಕೆ ಆಗೋಲ್ಲ. ಯಾಕಂದ್ರೆ ಒಂದೊಂದು ಚಾನೆಲ್ ಒಂದೊಂದು ಕಾರ್ಯಕ್ರಮಕ್ಕೆ  ತುಂಬಾನೇ ಫೇಮಸ್ ಆಗಿ ಬಿಟ್ಟಿವೆ. ಹಾಗೆಯೇ ಆ ಟೈಮಲ್ಲಿ ಸ್ಟಾರ್ಟಿವಿ ಕೂಡ 'ಕೌನ್ ಬನೇಗಾ ಕರೋಡ್ಪತಿ' ಪ್ರೋಗ್ರಾಂ ಮೂಲಕ ತುಂಬಾನೇ ಜನಪ್ರಿಯವಾಗಿತ್ತು. ಇಡೀ ಭಾರತದ ಎಲ್ಲ ಭಾಷೆಯ ಜನರಿಗೆ ತುಂಬಾನೇ ಇಷ್ಟವಾದ ಕಾರ್ಯಕ್ರಮವಾಗಿತ್ತು. ಕೆಬಿಸಿ-1ನ ಬಿಸಿ ಇರುವಾಗಲೇ ಸ್ಟಾರ್ನ ಎದುರಾಳಿ ಝೀ ಚಾನೆಲ್ ಅನುಪಮ್ ಖೇರ್ ಹಾಗೂ ಮನೀಷಾ ಕೋಯಿರಾಲಾರವರನ್ನು  ಹಾಕಿಕೊಂಡು `ಸವಾಲ್ ದಸ್ ಕ್ರೋರ್ ಕಾ'' ಎಂಬ ಗೇಮ್ ಶೋ ಪ್ರಾರಂಭಿಸಿತು. ಕೆಬಿಸಿ ಬರೋ ಟೈಮಿಂಗ್ಸ್ನಲ್ಲೇ ಇದು ಕೂಡ ಪ್ರಸಾರವಾಗ್ತಿತ್ತು. ಅಮಿತಾಭ್ರ ಕೆಬಿಸಿಗೆ ನೇರವಾದ ಪೈಪೋಟಿಯನ್ನು ನೀಡೋ ದೃಷ್ಟಿಯಿಂದ ಬಹುಮಾನದ ಮೊತ್ತವನ್ನು ಹತ್ತು ಕೋಟಿಗೆ ಏರಿಸಲಾಯಿತು. ಕೆಬಿಸಿ ಶೋದಲ್ಲಿ ಗೆದ್ದವರಿಗೆ ಕೇವಲ ಒಂದು ಕೋಟಿಯನ್ನು ಮಾತ್ರ ನೀಡಲಾಗುತ್ತಿತ್ತು. ಹೀಗೆ ಝೀ ಚಾನೆಲ್ ಅಕ್ಟೋಬರ್, 2000ರಂದು `ಸವಾಲ್ ದಸ್ ಕ್ರೋರ್ ಕಾ'' ಪ್ರೋಗ್ರಾಂ ಶುರು ಮಾಡೇ ಬಿಟ್ಟಿತು. ಆರಂಭದ ಎರಡು ವಾರ ಝೀನ `ಸವಾಲ್'' ಕೆಬಿಸಿಗೆ ಸ್ವಲ್ಪ ಫೈಟ್ ಕೊಟ್ಟರೂ ನಂತರ ಇದರ ಹವಾ ಕಡಿಮೆಯಾಯಿತು. ಅಮಿತಾಭ್ ಆಂಕರಿಂಗ್ ಮುಂದೆ ಅನುಪಮ್ ಖೇರ್ ಹಾಗೂ ಮನೀಷಾ ಕೋಯಿರಾಲಾ ಡಲ್ಲಾದರು. ಆರಂಭದಲ್ಲಿ 7.9 ರಷ್ಟು ಟಿಆರ್ಪಿ ಗಳಿಸಿದ್ದ `ಸವಾಲ್ ದಸ್ ಕ್ರೋರ್ ಕಾ'' ಕೇವಲ ಮೂರೇ ವಾರದಲ್ಲಿ ಟಿಆರ್ಪಿ 3.7 ಗೆ ಇಳಿಯಿತು. ಝೀಚಾನೆಲ್ನ ಗೇಮ್ ಶೋ ಸೋಲಲಿಕ್ಕೆ ಬಹಳಷ್ಟು ಕಾರಣಗಳಿದ್ದವು. ಕೆಬಿಸಿಯ ಟಿಆರ್ಪಿ ಮಾತ್ರ 9.3 ದಿಂದ 10.5ಗೆ ಏರಿತ್ತು. ಕೆಬಿಸಿ ತನ್ನ ವೀಕ್ಷಕರ ಸಂಖ್ಯೆಯನ್ನ ಸೆಳೆಯಲಿಕ್ಕೆ ದೀಪಾವಳಿ, ಹೋಲಿ ಇನ್ನು ಹಲವು ವಿಶೇಷ ದಿನಗಳಲ್ಲಿ ಬಾಲಿವುಡ್ ಸ್ಟಾರ್ಗಳನ್ನು ಕರೆತಂದು ಕಾರ್ಯಕ್ರಮದ ರಂಗನ್ನು ಇನ್ನು ಹೆಚ್ಚಿಸಿಕೊಂಡಿತ್ತು.  ಹಿಂದಿ ಭಾಷೆ ಹಾಗೂ ಹಿಂದಿ ಸಿನಿಮಾಗಳ ಬಗ್ಗೆ ಪರೋಕ್ಷ ಧೋರಣೆಯನ್ನು ಹೊಂದಿದಂತಹ ತಮಿಳರು ಕೂಡ ಈ ಅಮಿತಾಭ್ರ ಕೆಬಿಸಿ ಶೋವನ್ನು ತಪ್ಪದೇ ನೋಡುತ್ತಿದ್ದರು. ಹೀಗಾಗಿ ತಮಿಳು ಚಾನೆಲ್ಗಳು ಅಲ್ಲಿಯ ಟಿವಿ ಸ್ಟಾರ್ಗಳನ್ನು  ಇಟ್ಟುಕೊಂಡು ಕರೋಡ್ಪತಿ ತರಹದ ಗೇಮ್ ಶೋ ಮಾಡಿದರೂ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲೇ ಇಲ್ಲ. ಅದನ್ನು ನಿಮರ್ಿಸಿದಂತಹ ಸನ್ ಟಿವಿಯಂತಹ ಚಾನೆಲ್ಗಳು ಕೂಡ ಇದರಿಂದ ಅಷ್ಟೊಂದು ಲಾಭ  ಕಾಣಲಿಲ್ಲ.

ಅಮಿತಾಭ್ ಮುಂದೆ  ಶಾರುಖ್ ಡಲ್ಲಾದ !2000ರಲ್ಲಿ ಅಮಿತಾಭ್ ಸಾರಥ್ಯದಲ್ಲಿ ಪ್ರಾರಂಭವಾದ  ಕೌನ್ ಬನೇಗಾ ಕರೋಡ್ಪತಿ ಶೋ ಟಿವಿ ಮಾಧ್ಯಮದಲ್ಲಿ ಕ್ವೀಜ್ ಪ್ರೋಗ್ರಾಂಗಳಿಗೆ ಭರ್ಜರಿ ಒಪನಿಂಗ್ ನೀಡಿತ್ತು.  ಕೆಬಿಸಿ-1 ಯಶಸ್ಸಿನ ನಂತರ ಅಮಿತಾಭ್ ಹೆಚ್ಚೆಚ್ಚು ಸಿನಿಮಾಗಳಲ್ಲಿ ಅಭಿನಯಿಸಲಿಕ್ಕೆ ಪ್ರಾರಂಭಿಸಿದ್ರು, ಹಾಗಾಗಿ ಸ್ಟಾರ್ ಟೀವಿಯವ್ರು ಅಮಿತಾಭರನ್ನ ಮತ್ತೆ ಹಾಕಿಕೊಂಡು ಕೆಬಿಸಿ ಸೀಸನ್-2 ಪ್ರಾರಂಭಿಸಲಿಕ್ಕೆ ಸುಮಾರು 5 ವರ್ಷಗಳೇ ಬೇಕಾದವು. ಸ್ಟಾರ್ಟಿವಿ ಸೀಸನ್-2 ಪ್ರಾರಂಭಿಸಿದಾಗ ಶೋದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿತು. ಬಹುಮಾನದ ಮೊತ್ತವನ್ನು 1 ರಿಂದ 2 ಕೋಟಿಗೆ ಹಾಗೂ 85 ಎಪಿಸೋಡ್ಗಳನ್ನ ನಿಮರ್ಿಸುವ ಯೋಜನೆ ಮಾಡಲಾಯಿತು. ಆಗಸ್ಟ್ 5,2005 ರಂದು ಕೆಬಿಸಿ ಸೀಸನ್-2 ಪ್ರಾರಂಭವಾಯಿತು. ಶೋಗೆ ಒಳ್ಳೆಯ ಟಿಆರ್ಪಿ ಇದ್ದರೂ ಅನಿದರ್ಿಷ್ಟವಾಗಿ ನಿಲ್ಲಿಸಬೇಕಾಯಿತು. 2006ರಲ್ಲಿ ಅಮಿತಾಭ್ರ ಆರೋಗ್ಯ ಕೈ ಕೊಟ್ಟಿತು, ದೀರ್ಘಕಾಲದ ಖಾಯಿಲೆಗೆ ಬಿದ್ದರು, ವಿಶ್ರಾಂತಿ ಇಲ್ದಿದ್ರೆ ಅಮಿತಾಭ್ ಬದುಕುವುದೇ ಕಷ್ಟ ಅನ್ನುವ ಹಾಗಾಯಿತು. ದೇಶದಾದ್ಯಂತ ಅಮಿತಾಭ್ ಬೇಗ ಗುಣಮುಖವಾಗಲಿ ಅಂತ ಪೂಜೆ-ಪುನಸ್ಕಾರ,ಹೋಮ ಹವನಗಳು ನಡೆದವು. ಹಾಗಾಗಿ ಸುಮಾರು 24 ಎಪಿಸೋಡ್ಗಳನ್ನ  ಅಮಿತಾಭ್  ಮಾಡಲಿಕ್ಕೆ ಆಗಲಿಲ್ಲ,  ಹಾಗಾಗಿ ಸೀಸನ್-2 ಜನಪ್ರಿಯತೆಯ ಹಾದಿಯಲ್ಲಿರುವಾಗಲೇ ಮಗುಚಿ ಬಿದ್ದಿತ್ತು. ಆಗಿನ ಸಮಯದಲ್ಲಿ ಕೆಬಿಸಿ ಶೋಗೆ ಸ್ಪಾನ್ಸರ್ಗಳಿಗೇನು ಕಡಿಮೆ ಇರಲಿಲ್ಲ. ಹಾಗಾಗಿ ಸ್ಪಾನ್ಸರ್ಸ್ಗಳಿಂದ ಚಾನೆಲ್ಗೆ ಒತ್ತಡ ಇದ್ದೇ ಇತ್ತು. ಹಾಗಾಗಿ ಕೆಬಿಸಿಯನ್ನು ಮತ್ತೊಮ್ಮೆ ಪ್ರಾರಂಭಿಸಲೇ ಬೇಕಾದ ಅನಿವಾರ್ಯತೆ ಎದುರಾದಾಗ ಅಮಿತಾಭ್ಗೆ  ಸರಿಸಾಟಿಯಾಗಿ ಶೋವನ್ನು ಮುನ್ನಡೆಸುವ ಆಂಕರ್ನನ್ನು ಹುಡುಕುತ್ತಿದ್ದಾಗ ಮೊದಲು ನೆನಪಾದವನೇ ಶಾರುಖ್ ಖಾನ್..!

2003ರಿಂದ ಶಾರುಖ್ನ ಗೋಲ್ಡ್ಡನ್ ಡೇಸ್ ಶುರುವಾಗಿದ್ದವು. ಶಾರುಖ್ ನಿಮರ್ಾಣದ `ಚಲ್ತೆ ಚಲ್ತೆ'' ಸಿನಿಮಾ ಕ್ಲಿಕ್ ಆಗಿತ್ತು. ಅವನ ಹಾಗೂ ಕರಣ್ ಜೋಹರ್, ಫರಾಖಾನ್ ಸಿನಿಮಾಗಳು ಹಿಟ್ ಮೇಲೆ ಹಿಟ್ ಆಗಿದ್ದವು. ಶಾರುಖ್ ಎಲ್ಲರ ಫೇವರಿಟ್ ನಟನಾಗಿದ್ದ, ಹಾಗಾಗಿ ಸ್ಟಾರ್ ಕಂಪನಿ ಕೆಬಿಸಿ ಸೀಸನ್-3ನ ಸಾರಥ್ಯವನ್ನು ಶಾರುಖ್ಗೆ ವಹಿಸಿತು. ಆ ಸಮಯದಲ್ಲಿ `ಬಿಗ್ ಬಿ''ಅಮಿತಾಭ್ ಮತ್ತು `ಬಾಲಿವುಡ್ ಬಾದ್ಶಾಹ್'' ಶಾರುಖ್ಖಾನ್ ನಡುವೆ ಬಾಲಿವುಡ್ನ ನಂ-1 ಪಟ್ಟಕ್ಕಾಗಿ ಸಣ್ಣಗೆ ಯುದ್ದ ಶುರುವಾಗಿತ್ತು. ಆ ಸಮಯದಲ್ಲಿ ಇದು ದೊಡ್ಡ ಚಚರ್ೆಗೆ ಗ್ರಾಸವಾಗಿದ್ದರೂ ಶಾರುಖ್ ಮತ್ತು ಅಮಿತಾಭ್ ಮಾತ್ರ ಇದನ್ನ ತಳ್ಳಿಹಾಕಿದ್ದರು. ವಾಸ್ತವ ಸಂಗತಿ ಮಾತ್ರ ಅದೇ ಆಗಿತ್ತು (!?)

ಜನವರಿ22,2007ರಂದು ಕೌನ್ ಬನೇಗಾ ಕರೋಡ್ಪತಿ ಶಾರುಖ್ಖಾನ್ನಿಂದ ಭರ್ಜರಿಯಾಗಿ ಒಪನಿಂಗ್ ಪಡೆಯಿತು, ಹಾಗೆಯೇ ಅಷ್ಟೇ ಬೇಗ ಅಂದ್ರೆ ಎಪ್ರಿಲ್ 19,2007ರಂದು ಕೇವಲ ಮೂರೇ ತಿಂಗಳಲ್ಲಿ ಶೋ ನಿಂತು ಹೋಯಿತು. ಶಾರುಖ್ ಸಾರಥ್ಯದಲ್ಲಿ ಮೂಡಿ ಬರುತ್ತಿದ್ದ ಕೆಬಿಸಿ-3 ಟಿಆರ್ಪಿ ಮೊದಲವಾರ 5.3 ಅಂಕಗಳನ್ನು ಮಾತ್ರ ಗಳಿಸಿತ್ತು, ಉಳಿದಂತೆ ಮುಂಬೈನಲ್ಲಿ 2.5 ಹಾಗೂ ಕೋಲ್ಕತಾದಲ್ಲಿ ಕೇವಲ 2 ಅಂಕಗಳನ್ನ ಮಾತ್ರ ಗಳಿಸಿತ್ತು.  ಇದು ಕೆಬಿಸಿ-2ಗಿಂತ ತುಂಬಾನೇ ಕಡಿಮೆಯಾಗಿತ್ತು. ಅಮಿತಾಭನ ಶೋ ಮೊದಲವಾರದಲ್ಲಿ  ಮುಂಬೈ 9.5, ದೆಹಲಿ 6.5 ಹಾಗೂ ಕೊಲ್ಕತಾ 3.4 ಅಂಕಗಳನ್ನು ಗಳಿಸಿತ್ತು. ಶಾರುಖ್ ತನ್ನ ಶೋದಲ್ಲಿ ಜೋಕ್, ಟಿಆರ್ಪಿ ವಿಷಯದಲ್ಲಿ ಸಂಪೂರ್ಣವಾಗಿ ಸೋತಿದ್ದ..!

ಅಮಿತಾಭ್ಗಿಂತ ಶಾರುಖ್ನನ್ನು ಟಿವಿಯಲ್ಲಿ ಇನ್ನಷ್ಟು ಬೆಳೆಸಬೆಕೆಂದು ಹಪಹಪಿಸುತ್ತಿದ್ದ ಶಾರುಖ್ನ ಬೆಂಬಲಿಗರು ಹಾಗೂ ವಾಹಿನಿಯವರಿಗೆ ದೊಡ್ಡ ಫ್ಲಾಪ್ ಸಿಕ್ಕಿತ್ತು. ಸೀಸನ್-3 ಸೋಲಲಿಕ್ಕೆ ಶಾರುಖ್ನೇ ಮುಖ್ಯ ಕಾರಣ ಅನ್ನೋದು ಟಿವಿ ವಿಮರ್ಷಕರ ಅಭಿಪ್ರಾಯವಾಗಿತ್ತು, ಇದಲ್ಲದೇ ಅಲ್ಲಿಯವರಗೆ ಅಮಿತಾಭ್ನನ್ನು ಮಾತ್ರ  ಕೆಬಿಸಿ ಸೀಟಲ್ಲಿ ನೋಡುತ್ತಿದ್ದ ಜನರಿಗೆ ಅಷ್ಟು ಬೇಗ ಶಾರುಖ್ನನ್ನು ಒಪ್ಪಿಕೊಳ್ಳಲು ಆಗಲೇ ಇಲ್ಲ, ಅಮಿತಾಭ್ನಂತೆ ಜನರನ್ನು ತನ್ನೆಡೆ ಹಿಡಿದಿಟ್ಟುಕೊಳ್ಳುವ ಮ್ಯಾಜಿಕ್ ಶಾರುಖ್ನಲ್ಲಿರಲಿಲ್ಲ. ಸೀಸನ್-3 ಫ್ಲಾಪ್ ಆಗೋದರ ಜೊತೆಗೆ ಶಾರುಖ್ ಮತ್ತೊಮ್ಮೆ ಕೆಬಿಸಿ ಸೀಟಿಗೆ ಬರಲಾರದಂತೆ ಮಾಡಿತ್ತು. ಶಾರುಖ್ ಸೋತಿದ್ದು ಇನ್ನೊಂದೆಡೆ ಅಮಿತಾಭ್ರವರನ್ನ ಮತ್ತೊಮ್ಮೆ ಕೆಬಿಸಿ ಸೀಟಿಗೆ ರೆಡ್ ಕಾಪರ್ೆಟ್ ಹಾಕಿ ಕರೆತರುವ ಸನ್ನಿವೇಶ ಸಿದ್ದವಾಯಿತು.

ಅಕ್ಟೋಬರ್11,2010 ಅಮಿತಾಭ್ ಬಚ್ಚನ್ರ 68ನೇ ಹುಟ್ಟಿದ ಹಬ್ಬ. ಅಂದೇ ಕೆಬಿಸಿ ಸೀಸನ್-4 ಮತ್ತೆ ಅಮಿತಾಭ್ ಸಾರಥ್ಯದಲ್ಲಿ ಸೋನಿ ಟೆಲಿವಿಷನ್ನಲ್ಲಿ ಪ್ರಾರಂಭವಾಯಿತು. ಇದಕ್ಕಾಗಿ ಅಮಿತಾಭ್ಗೆ ಪ್ರತಿ ಎಪಿಸೋಡ್ಗೆ 60 ಲಕ್ಷ ಹಣವನ್ನು ನೀಡಲಾಗಿತ್ತು.  ಮೂಲಗಳ ಪ್ರಕಾರ ಅಮಿತಾಭ್ ಜೊತೆ ಶೋದಲ್ಲಿ ಭಾಗವಹಿಸಲಿಕ್ಕೆ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಆಡಿಷನ್ನಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಬಹುಮಾನ ಮೊತ್ತವನ್ನು ಮತ್ತೆ ಒಂದು ಕೋಟಿಗೆ ಇಳಿಸಿ, ಜಾಕ್ಪಾಟ್ ಪ್ರಶ್ನೆಗೆ ಉತ್ತರಿಸಿದರೆ 5 ಕೋಟಿ ನೀಡುವ ಚಾನ್ಸ್ ನೀಡಲಾಗಿತ್ತು. ಸೀಸನ್-4 ಕೂಡ ನಿರೀಕ್ಷೆಯಂತೆ ಯಶಸ್ವಿಯಾಗಿ ಡಿಸೆಂಬರ್ 9, 2010 ಕ್ಕೆ ಮುಗಿಯಿತು.

ಈಗ ಮತ್ತೊಮ್ಮೆ ಕೆಬಿಸಿ-5 ಪ್ರಾರಂಭವಾಗಲಿಕ್ಕೆ ದೊಡ್ಡ ವೇದಿಕೆ ಸೋನಿ ಟಿಲಿವಿಷನ್ನಲ್ಲಿ ಸಿದ್ದವಾಗುತ್ತಿದೆ. ಕೌನ್ ಬನೇಗಾ ಕರೋಡ್ಪತಿ  ಕಾರ್ಯಕ್ರಮವನ್ನ ಅಮಿತಾಭ್ ಇಲ್ಲದೇ  ಕಲ್ಪಿಸಿಕೊಳ್ಳಲಿಕ್ಕೂ ಆಗೋಲ್ಲ, ಹೇಗೆ ಕನ್ನಡಿಗರಿಗೆ ಕೃಷ್ಣದೇವರಾಯನ ಪಾತ್ರ ಅಂದರೆ ಮೊದಲು ನೆನಪಾಗೋದೇ ಅಣ್ಣಾವ್ರು..ಅದೇ ರೀತಿ ಆಂಧ್ರದವರಿಗೆ ಶ್ರೀಕೃಷ್ಣನ ಪಾತ್ರವನ್ನು ಎನ್ಟಿಆರ್ ಇಲ್ಲದೇ ಬೇರೆಯವರನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ. ಹೀಗೆ ಈ ಮೇರು ನಟರುಗಳೆಲ್ಲಾ ಆಯಾ ಪಾತ್ರಗಳಿಗೆ ಆತ್ಮದಂತೆ ಬೆರೆತುಹೋಗಿದ್ದಾರೆ. ಈ ಮಾತು ಅಮಿತಾಭ್ ಬಚ್ಚನ್ರ `ಕೌನ್ ಬನೇಗಾ ಕರೋಡ್ಪತಿ'' ಕಾರ್ಯಕ್ರಮಕ್ಕೆ ಹೋಲಿಕೆ ಮಾಡಿದರೆ ಅತಿಶಯೋಕ್ತಿ ಆಗೋಲ್ಲ.

 ಬಾಲಿವುಡ್ ಸ್ಟಾರ್ಗಳು ಕೂಡ ಈ ಶೋದಲ್ಲಿ ಭಾಗವಹಿಸಿದ್ರುಅಮಿತಾಭ್ನ ಶೋದಲ್ಲಿ ಉಳಿದ ಬಾಲಿವುಡ್ ಸ್ಟಾರ್ಗಳಿಗೇನು ಕಡಿಮೆ ಇರಲಿಲ್ಲ. ಕೆಲವರು ಈ ಶೋದಲ್ಲಿ ಭಾಗವಹಿಸಲಿಕ್ಕೆ ತುದಿಗಾಲಲ್ಲಿ ನಿಲ್ಲುತ್ತಿದ್ದರು.ಕೆಲವು ನಟ ನಟಿಯರು ಅದೇ ತಮ್ಮ ದೊಡ್ಡ ಸೌಭಾಗ್ಯ ಅಂತ ತಿಳ್ಕೋತ್ತಿದ್ರು. `ಹೂವಿನ ಜೊತೆ ನಾರು ಕೂಡ ದೇವರ ಮುಡಿಗೆ'' ಅನ್ನೋ ಮಾತಂತೆ ಅಮಿತಾಭ್ ಜನಪ್ರಿಯತೆಯಲ್ಲಿ ತಮ್ಮದೂ ಒಂದು ಪಾಲಿರಲಿ ಅನ್ನೋದು ಕೆಲವರ ನಂಬಿಕೆಯಾಗಿತ್ತು. ದೀಪಾವಳಿ,ದಸರಾ, ನ್ಯೂ ಇಯರ್ ಹೀಗೆ ಇನ್ನು ಹಲವು ವಿಶೇಷ ದಿನಗಳಂದು ಬಾಲಿವುಡ್ ಸ್ಟಾರ್ಗಳು ಆಗಮಿಸಿ ಲಕ್ಷಗಟ್ಟಲೇ ಹಣವನ್ನು ದೋಚಿಕೊಂಡು ಹೋಗ್ತಿದ್ರು. ಹೀಗೆ ಬಂದ ಸೆಲೆಬ್ರಿಟಿಗಳಲ್ಲಿ ಅಮೀರ್ ಖಾನ್ ಮೊದಲಿಗ. ಅಮೀರ್ ಶೋದಲ್ಲಿ ಅಮಿತಾಭ್ ಕೇಳಿದ ಎಲ್ಲ  ಪ್ರಶ್ನೆಗಳಿಗೆ ಪಟಪಟ ಉತ್ತರ ಹೇಳಿ ಸುಮಾರು 50 ಲಕ್ಷ ಹಣವನ್ನು ಗೆದ್ದಿದ್ದ. ಅದರಂತೆ ಸೋನಾಲಿ ಬೇಂದ್ರೆ 25 ಲಕ್ಷ, ಶಾರುಖ್ಖಾನ್ 50 ಲಕ್ಷ, ರಾಣಿ ಮುಖಜರ್ಿ 25 ಲಕ್ಷ, ಸಂಜಯ್ದತ್ 50 ಲಕ್ಷ, ಅನಿಲ್ ಕಪೂರ್ 50ಲಕ್ಷ ಹಾಗೂ ಕಾಜೋಲ್ ಹಾಗೂ ಅಜಯ್ ದೇವಗನ್ 1 ಕೋಟಿ, ಸೈಫ್ ಅಲಿಖಾನ್ 50ಲಕ್ಷ ಇನ್ನು ಹಲವು ಬಾಲಿವುಡ್ ಸೆಲಿಬ್ರೆಟಿಗಳು ಶೋದಲ್ಲಿ ಭಾಗವಹಿಸಿ ಲಕ್ಷಗಟ್ಟಲೆ ಹಣವನ್ನು ಗೆದ್ದಿದ್ದರು. ಇಲ್ಲೊಂದು ತುಂಬಾ ಅನುಮಾನಕ್ಕೆ ಈಡುಮಾಡಿದಂತ ಸಂಗತಿಯೆಂದರೆ ಭಾಗವಹಿಸಿದ ಸಾಮಾನ್ಯ ಜನರು ಕೆಲವೇ ಲಕ್ಷದ ಹಣವನ್ನು ಗೆಲ್ಲಲಿಕ್ಕೆ ಹರಸಾಹಸ ಪಡುವಾಗ ಈ ಬಾಲಿವುಡ್ ಸ್ಟಾರ್ಗಳು ಪಟಪಟನೆ ಉತ್ತರ ಹೇಳಿ ಲಕ್ಷಗಟ್ಟಲೆ ಹಣವನ್ನು ಗೆಲ್ಲೋದನ್ನ ಕಂಡವರಿಗೆ ಶೋದ  ಮೇಲೆ ಅಪನಂಬಿಕೆ ಹಾಗೂ ಅನುಮಾನ ಬೆಳೆಯಲಿಕ್ಕೆ ಕಾರಣವಾಗಿತ್ತು.ಭಾಗವಹಿಸಿದ ಎಲ್ಲ ಸ್ಟಾರ್ಗಳು ಮಿನಿಮಮ್ 50 ಲಕ್ಷದ ಹಣವನ್ನು ಪಡೆದುಕೊಂಡು ಹೋಗಿದ್ದಾರೆ, ಇದು ಹೇಗೆ ಸಾಧ್ಯಯಾಯಿತು? ಕೆಲವು ಸ್ಟಾರ್ಗಳು ಗೆದ್ದ ಹಣವನ್ನು ಟ್ರಸ್ಟ್ಗಳಿಗೆ ನೀಡಿ ಶೋದಲ್ಲಿ ದೊಡ್ಡವರೆನಿಸಿಕೊಂಡವರಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಮಾಧುರಿ ದೀಕ್ಷಿತ್ ಗೆದ್ದ 50 ಲಕ್ಷ ಹಣವನ್ನು ನೆರೆ ಸಂತ್ರಸ್ಥರ ನಿಧಿಗೆ ನೀಡಿದ್ದರು. ಇದೆಲ್ಲಾ ಶೋದ ಪಾಪುಲಾರಿಟಿ ಹೆಚ್ಚಿಸಲಿಕ್ಕೆ ಚಾನೆಲ್ ಮಾಡಿದ ಗಿಮಿಕ್ಸ್ಗಳು ಅಂತ ಯಾರಿಗೂ ಬಿಡಿಸಿ ಹೇಳಬೇಕಾಗಿಲ್ಲ..!

(ರಮೇಶ್ ಅರವಿಂದ್ ಸಾರಥ್ಯದಲ್ಲಿ ಕನ್ನಡದಲ್ಲಿ  ಕೌನ್ ಬನೇಗಾ ಕರೋಡ್ಪತಿ

ಈಗಾಗ್ಲೆ ಹೇಳಿದಂತೆ ಕೆಬಿಸಿ ಸೀಸನ್-5 ಮತ್ತೊಮ್ಮೆ ಭರ್ಜರಿಯಾಗಿ ಒಪನಿಂಗ್ ಪಡೆಯೋಕೆ ಸಿದ್ದವಾಗಿದೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ, ಬೆಂಗಾಲಿ, ಭೋಜ್ಪುರಿ,ಕನ್ನಡ,ತಮಿಳು ಹಾಗೂ ತೆಲುಗು ಹೀಗೆ 5 ಭಾಷೆಗಳಲ್ಲಿ ಕಾರ್ಯಕ್ರಮ ಮಾಡಲಿಕ್ಕೆ ಸಿದ್ದಾರ್ಥ ಬಸು ನಿಮರ್ಾಣದ `ಬಿಗ್ ಸಿನಜರ್ಿ'' ಕಂಪನಿ ರೆಡಿಯಾಗಿದೆ. ಆಯಾ ಭಾಷೆಯಲ್ಲಿ ಅಲ್ಲಿನ ಫೇಮಸ್ ಸೆಲಿಬ್ರೆಟಿಗಳನ್ನ ಕಂಪನಿ ಆಯ್ಕೆಮಾಡಿಕೊಂಡಿದೆ. ಹಿಂದಿಯಲ್ಲಿ ಹಳೆ ಹುಲಿ ಅಮಿತಾಭ್ ಇದ್ದೇ ಇರುತ್ತಾರೆ, ಅದೇ ರೀತಿ ಬೆಂಗಾಲಿ ಭಾಷೆಯಲ್ಲಿ ಈ ಗೇಮ್ ಶೋದ ನಿರೂಪಣೆಯನ್ನು ಖ್ಯಾತ ಕ್ರಿಕೆೆಟಿಗ ಸೌರವ್ಗಂಗೂಲಿ, ಭೋಜ್ಪುರಿ ಭಾಷೆಯಲ್ಲಿ ಹಿರಿಯ ನಟ ಶತ್ರುಘ್ನ ಸಿನ್ಹಾ ಮಾಡಲಿದ್ದಾರೆ. ಬೆಂಗಾಲಿ ಭಾಷೆಯಲ್ಲಿ ಈ ಶೋಗೆ `ಕೀ ಹೋಬೆ ಬಾಂಗ್ಲಾರ್ ಕೋಟಿಪತಿ'' , ಭೋಜ್ಪುರಿ ಭಾಷೆಯಲ್ಲಿ `ಕೀ ಬಾನಿ ಕ್ರೋರ್ಪತಿ'' ಅಂತ ಹೆಸರಿಡಲಾಗಿದೆ.

ಭೋಜ್ಪುರಿ ಭಾಷೆಯ ಈ ಗೇಮ್ ಶೋಗೆ ಗ್ಲ್ಯಾಮರ್ ಹಾಗೂ ಒಳ್ಳೆಯ ಒಪನಿಂಗ್ಗೆ ಶತ್ರುಘ್ನ ಸಿನ್ಹಾರ ಮಗಳು ಸೋನಾಕ್ಷಿ ಬರುವ ಸಾಧ್ಯತೆ ಇದೆ. ಅಕಸ್ಮಾತ್ ಸೋನಾಕ್ಷಿ ಬಂದರೆ ಅಲ್ಲಿಗೆ ಸಲ್ಮಾನ್ ಮತ್ತು ಅಬರ್ಾಜ್ಖಾನ್ ಗೆಸ್ಟ್ಗಳು ಆಗಿ ಬರದಂತೂ ಸತ್ಯ !  ಮಹುವಾ ಟಿವಿ ಬೆಂಗಾಲಿ ಹಾಗೂ ಭೋಜ್ಪುರಿ ಭಾಷೆಯ ಪ್ರಸಾರದ ಹಕ್ಕನ್ನ ಹೊಂದಿದೆ. ದಕ್ಷಿಣದಲ್ಲಿ ಸನ್ಟಿವಿ ಕನ್ನಡ, ತಮಿಳು ಹಾಗೂ ತೆಲುಗು ಚಾನೆಲ್ಗಳ ಪ್ರಸಾರದ ಹಕ್ಕನ್ನ ಪಡೆದಿದೆ. ದಕ್ಷಿಣದ ಖ್ಯಾತ ಖಳನಟ ಪ್ರಕಾಶ್ ರೈ ತಮಿಳು (ಉಂಗಳೀಲ್ ಯಾರ್ ಕೋದೆಸ್ವರನ್) ಹಾಗೂ ತೆಲುಗು (ಮೇಲೊ ಏವರು ಕೋದಿಸ್ವರುಡು) ಈ ಎರಡು ಭಾಷೆಗಳ ನಿರೂಪಣೆಯನ್ನು ಮಾಡಲಿದ್ದಾರೆ, ಕನ್ನಡದಲ್ಲಿ (ನಿಮ್ಮಲ್ಲಿ ಯಾರು ಕೋಟ್ಯಾಧಿಪತಿ) ರಮೇಶ್ ಅರವಿಂದ್ ಅಮಿತಾಭ್ ಪಾತ್ರ ಮಾಡಲಿಕ್ಕೆ  ರೆಡಿಯಾಗಿದ್ದಾರೆ. ಇದು ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಕನರ್ಾಟಕದಲ್ಲಿ ಯಾರು ಕೋಟ್ಯಾಧಿಪತಿಗಳು ಆಗ್ತಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಕೆಬಿಸಿಯ ಹಿಂದೆ `ಅಂಡರ್ವಲ್ಡ್' ಬ್ಲಾಕ್ ಮನಿ'

ಕೆಬಿಸಿ ಶೋ ಅಷ್ಟೊಂದು ಜನಪ್ರಿಯತೆಯನ್ನು ಹೊಂದಿದ್ದರೂ ವಿವಾದಗಳು ಕೂಡ ಅಮಿತಾಭ್ನನ್ನ ಹಾಗೂ ಈ ಗೇಮ್ ಶೋವನ್ನ ಬಿಡಲಿಲ್ಲ. ಇದೊಂಥರ ಕ್ವೀಜ್ ಮೂಲಕ ಗ್ಯಾಮ್ಲಿಂಗ್ ದಂಧೆ ಮಾಡೋ ಕಾರ್ಯಕ್ರಮ ಅಂತ ಬುದ್ದಿಜೀವಿಗಳು ಆಪಾದನೆ ಮಾಡಿದ್ರು. ತಮ್ಮ ಸಿನಿಮಾಗಳ ಹೆಸರನ್ನೇ ನೆನಪಿಟ್ಟುಕೊಳ್ಳಲು ಆಗದಂತಹ ಸ್ಟಾರ್ಗಳೆಲ್ಲಾ ಜನರಲ್ ನಾಲೇಜ್, ಐತಿಹಾಸಿಕ, ಪೌರಾಣಿಕ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪಟಪಟ ಉತ್ತರ ಹೇಳೊದನ್ನ ನೋಡಿದ ಕೆಲವರಿಗೆ ಉತ್ತರ ಪತ್ರಿಕೆ ಲೀಕ್ ಆದ ಅನುಮಾನ ಕಂಡಿದಂತೂ ನಿಜ, ಜೊತೆಗೆ ಈ ಶೋದ ಹಿಂದೆ ಭೂಗತ ಜಗತ್ತಿನ ಕಪ್ಪುಹಣ ಓಡಾಡುತ್ತಿತ್ತು, ಆ ಮೂಲಕ ಬ್ಲಾಕ್ಮನಿ ವೈಟ್ ಮನಿಯಾಗಿ ಮಾಪರ್ಾಡಾಗುತ್ತಿತ್ತು ಅನ್ನೋ ಊಹೆ ಕೂಡ ಇತ್ತು. ಸೆಲೆಬ್ರೆಟಿಗಳೆಲ್ಲಾ ಗೆದ್ದ ಲಕ್ಷಗಟ್ಟಲೇ ಹಣವನ್ನು ಕೆಲವು ಟ್ರಸ್ಟ್ಗಳಿಗೆ ದೇಣಿಗೆಯಾಗಿ ನೀಡುತ್ತಿದ್ದರು, ಈ ಟ್ರಸ್ಟ್ಗಳಿಗೆ ಹೋದ ಹಣಕ್ಕೆ ಯಾವುದೇ ತೆರಿಗೆ ಇರುತ್ತಿರಲಿಲ್ಲ. ಹೀಗೆ ಟ್ರಸ್ಟ್ಗೆ ಸೇರಿದ ಹಣ ವೈಟ್ಮನಿಯಾಗಿ ಸೇರಬೇಕಾದವರ ಅಕೌಂಟ್ಗೆ ಸೇರುತ್ತಿತ್ತು. ಹೀಗೆ ಈ ತರಹದ ಹತ್ತು ಹಲವು ಅನುಮಾನಗಳಿಗೆ ಕೆಬಿಸಿ ಎಡೆ ಮಾಡಿಕೊಟ್ಟಿತ್ತು. ಈ ಎಲ್ಲ ಅನುಮಾನಗಳು ದಾಖಲೆ ಸಮೇತ ಹೊರಬರದೇ ಹಾಗೆಯೇ ಊಹೆಗಳಾಗಿಯೇ ಉಳಿದುಹೋದವು.
 

Thursday, 6 October 2011

ಬೆರಳ ತುದಿಯಲ್ಲಿ ಜಗತ್ತು ನಿಲ್ಲಬೇಕು ಎಂದವ ಈಗಿಲ್ಲ!-Steve jobs Memory


ಆಯುಧ ಪೂಜೆ ಇದ್ದುದರಿಂದ ಎಲ್ಲ ಪತ್ರಿಕೆಗಳು ವರ್ಷಕ್ಕೊಮ್ಮೆ ಸಿಗುವ ರಜೆಯನ್ನು ಮಜಾ ಮಾಡುತ್ತಿದ್ದ ಹಾಗೆ ಕಾಣುತ್ತಿತ್ತು. ಮುಂಜಾನೆ ಎದ್ದ ಮಬ್ಬಿನಲ್ಲಿ ನನ್ನ ನೆಚ್ಚಿನ ಪತ್ರಿಕೆ ಎಲ್ಲಿದೆ ಅಂತ ಹುಡುಕಾಡಿದಾಗ ನೆನಪದಾದದ್ದೇ ಅಯ್ಯೋ ಪೇಪರ್ಗಳಿಗೆ ನಿನ್ನೇ ರಜೆ ಅಲ್ವಾ? ಅದೇ ಗುಂಗಿನಲ್ಲಿ ಸುದ್ದಿ ನೋಡೋಣವೆಂದು ನ್ಯೂಸ್ ಚಾನೆಲ್ ಹಚ್ಚಿದಾಗ ನೋಡಿದ ಸುದ್ದಿ ಮನಸ್ಸಿಗೆ ಬೇಸರವಾದಂತಹುದು.
ಸ್ಟೀವ್ ಜಾಬ್ಸ್ ನೋ ಮೋರ್ !
ಮಾಚರ್್2, 2011 ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಆ್ಯಪಲ್ ಕಂಪನಿಯ ಐಪಾಡ್-2ನ ಬಿಡುಗಡೆ ಮಾಡಿದಾಗ ಸ್ಟೀವ್ ಜಾಬ್ಸ್ನನ್ನು ಇದುವರೆಗೆ ಕಪ್ಪುಬಣ್ಣದ ಟೀ ಶರ್ಟ, ನೀಲಿ ಬಣ್ಣದ ಜೀನ್ಸ್ನಲ್ಲಿ ನೋಡಿದವರಿಗೆ ಆಶ್ಚರ್ಯವಾಗಿತ್ತು. ಸ್ಟೀವ್ ಇವರೇನಾ ಅನ್ನುವಷ್ಟು ಗೊಂದಲ. ಮುಖದ ಗಲ್ಲ, ಮುಖ, ಹೊಟ್ಟೆ ಜೊಜ್ಜುವಿನಿಂದ ತುಂಬಿಕೊಂಡು ಸುಂದರವಾಗಿ ಕಾಣುತ್ತಿದ್ದ ಆತ, ಆ ದಿನ ನೋಡಲು ತೀರ ಸಣಕಲು ಆಗಿದ್ದ. ಮುಖದ ಗಲ್ಲ, ಕುತ್ತಿಗೆಯಲ್ಲಿದ್ದ ಮಾಂಸ,ಕೊಬ್ಬೆಲ್ಲಾ ಕರಗಿ ತೀರಾ ವಯಸ್ಸಾಗಿ ಕಾಣುವ ಮುದುಕನಂತೆ ಕಾಣುತ್ತಿದ್ದ. ಜಾಬ್ಸ್ ಹೀಗೆ ಕಾಣಲು ಏನಾಗಿರಬಹುದು ಅಂತ  ಮಾಧ್ಯಮದವರು ಹುಡುಕಿದಾಗ ಸಿಕ್ಕ ಉತ್ತರ, ಆತನಿಗಿದ್ದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್!  ಇದು ಕೂಡ ದೊಡ್ಡ ಸುದ್ದಿಯಾಗಿತ್ತು. ಹೀಗಿದ್ದರೂ ತನಗಿದ್ದ ಖಾಯಿಲೆಯ ಬಗ್ಗೆ ಸ್ಟೀವ್ ಮಾತಾಡಿದ್ದು ತುಂಬಾ ಕಡಿಮೆ. 
ಅರರೇ... ಮೊನ್ನೆವರೆಗೂ ಟಿವಿ, ಪೇಪರ್, ಇಂಟರ್ನೆಟ್ನಲ್ಲಿ ಕಾಣಸಿಗುತ್ತಿದ್ದ ವ್ಯಕ್ತಿ ಆ್ಯಪಲ್ ಎಂಬ ದೈತ್ಯ ಕಂಪನಿಯನ್ನು ಬೆಳೆಸಿ ಕೊನೆಕ್ಷಣದಲ್ಲಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿ ತನ್ನಷ್ಟೇ ಸಮರ್ಥನಾಗಿದ್ದ ಟಾಮ್ ಹಾಂಕ್ ಎಂಬ ಸಲಂಗಿಯನ್ನು ಕೂರಿಸಿದವ ಇವತ್ತು ಇಲ್ಲ! 
 ಸ್ಟೀವ್ ಜಾಬ್ಸ್ ಯಾಕೆ ಎಲ್ಲರಿಗೂ ಮಾದರಿಯಾಗುತ್ತಾನೆ?

 ಇತ್ತಿಚೆಗಷ್ಟೇ ಆ್ಯಪಲ್ನ ಇನ್ನೊಂದು ಉತ್ಪನ್ನವನ್ನ ಜಗತ್ತಿಗೆ ಪರಿಚಯಿಸುವಾಗ, ಮಾಧ್ಯಮಗಳಿಗೆ ಈ ಹಿಂದೆ ಇದ್ದ ಹುಮ್ಮಸ್ಸು, ಮಾತನ್ನು ಕೇಳುವ ಉತ್ಸಾಹ ಇರಲಿಲ್ಲ. ಈ ಹಿಂದಿನ ಎಲ್ಲ ಆ್ಯಪಲ್ ಪ್ರಾಡಕ್ಟ್ಗಳನ್ನು ಯಾವಾಗಲೂ ಕಪ್ಪುಬಣ್ಣದ ಟೀಶಟರ್್, ಬ್ಲ್ಯೂ ಜೀನ್ಸ್ ತೊಟ್ಟ ವ್ಯಕ್ತಿ ಅದರ ಬಗ್ಗೆ ಮಾತಾಡುವಾಗ ಆ ಕಾನ್ಸ್ರೆನ್ಸ್ ಹಾಲ್ ತುಂಬಾ ಉತ್ಸಾಹದ ಚಿಲುಮೆ ಚಿಮ್ಮುತ್ತಿತ್ತು. ತಾನು ಜಗತ್ತಿಗೆ ಸುಂದರವಾದುದನ್ನು ಕೊಡುತ್ತಿದ್ದೇನೆ, ಅದು ನಮಗೆಲ್ಲರಿಗೂ ಅವಶ್ಯಕವೆಂದು ಎಂದು ಹೇಳುವ ಆತನ ಮಾತುಗಳೇ ಆ್ಯಪಲ್ ಕಂಪನಿಯನ್ನು ದೈತ್ಯನನ್ನಾಗಿ ಮಾಡಿದ್ದು. ಆತನ ಮಾತಿನ ಮೋಡಿಯೇ ಅಂತದ್ದು. `ಜಗತ್ತಿಗೆ ಏನು ಬೇಕು ಎನ್ನುವುದು ನನಗೆ ಗೊತ್ತು. ನಾನು ಬೇರೆಯವರಿಗಿಂತ ಸುಮಾರು 20 ರಿಂದ 30 ವರ್ಷ ಮುಂದಿನದದನ್ನೇ ಸದಾ ಚಿಂತಿಸುವೆ, ನಾವು ವೇಗವಾಗಿ ಚಿಂತಿಸಿದಷ್ಟು ತಂತ್ರಜ್ಞಾನ ಬಹುಬೇಗವಾಗಿ ಬೆಳೆಯುತ್ತದ'ೆ ಅನ್ನುವುದು ಸ್ಟೀವ್ ಜಾಬ್ಸ್ನ ಪ್ರಬಲ ನಿಲುವಾಗಿತ್ತು. ಹಾಗೆಯೇ ಬೆರಳ ತುದಿಯಲ್ಲಿ ಜಗತ್ತು ನಿಲ್ಲಬೇಕು ಅನ್ನುವ ವಾದವನ್ನು ಇಡೀ ಜಗತ್ತಿಗೆ ತೋರಿಸಿದ ಕೂಡ. ಅತಿ ಕಡಿಮೆ ವಯಸ್ಸಿನಲ್ಲೇ ಮನಸ್ಸು ಶೂನ್ಯವಾಯಿತೆಂದು ಸಂನ್ಯಾಸಿ ಆಗಲು ಭಾರತಕ್ಕೂ ಬಂದಿದ್ದ ಸ್ಟಿವ್ ಆನಂತರ ಭಾರತದಿಂದ ಹೋದ ಮೇಲೆ ಆತನ ಜೀವನವೇ ಬೇರೆಯವರಿಗೆ ಪಾಠವಾಗುವ ಮಟ್ಟಿಗೆ ಬೆಳೆದಿರುವ ಪರಿ ನಿಜಕ್ಕೂ ಗ್ರೇಟ್!. ಇಂದಿಗೂ ಸಾಫ್ಟ್ವೇರ್, ಕಾಪೋರೇಟ್, ಫೈನಾನ್ಸ್, ಐಐಎಮ್, ಐಐಟಿಗಳಲ್ಲಿ ಕಲಿಯುವವರೆಲ್ಲಾ ಸ್ಟೀವ್ಜಾಬ್ಸ್ನ ನಡೆಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾರೆ. ಆತನ ನಿಧರ್ಾರಗಳ ಮೇಲೆ ಸಂಶೋಧನೆ ಮಾಡುತ್ತಾರೆ, ಚಚರ್ೆ ಮಾಡುತ್ತಾರೆ. ಮೊನ್ನೆ ಕೂಡ ಸ್ಟೀವ್ ತನ್ನ ಸ್ಥಾನಕ್ಕೆ ಸ್ಟೀವ್ ರಾಜೀನಾಮೆ ಕೊಟ್ಟಾಗ ಕೆಲವರು ಆಪಲ್ ಕಥೆ ಮುಗಿಯಿತು ಅಂದರು. ಮಾಧ್ಯಮಗಳು ಕಾಪೋರೇಟ್ ಜಗತ್ತಿನ ಸಂತ ಮತ್ತೇ ಬರಬೇಕು, ಇಡೀ ಜಗತ್ತಿಗೆ ಮತ್ತೇ ಮಾದರಿಯಾಗಬೇಕು ಅಂತ ಹೇಳಿದವು. ನಮ್ಮಲ್ಲಿ ಇನ್ಫೋಸಿಸ್ನ ನಾರಾಯಣಮೂತರ್ಿಯವರು ತಮ್ಮ ಸ್ಥಾನವನ್ನು ಪದತ್ಯಾಗ ಮಾಡಿದಾಗ ಅವರ ಬಗ್ಗೆ ನಮ್ಮ ದೇಶ ಮಾತ್ರ ಅವರ ಉತ್ತರಾಧಿಕಾರಿಯ ಬಗ್ಗೆ ಚಿಂತೆ ಹಾಗೂ ಚಚರ್ೆ ಮಾಡಿತೇ ವಿನಹ ಬೇರೆ ದೇಶಗಳು ಮಾಡಿದ್ದು ಕಡಿಮೆ. ಆದರೆ ಜಾಬ್ಸ್ ವಿಷಯದಲ್ಲಿ ಹಾಗಾಗಲಿಲ್ಲ. ನನ್ನ ವೈಯಕ್ತಿಕ ಕಾರಣಗಳಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಅಂತ ಹೇಳಿದ ನಾಲ್ಕು ಲೈನ್ಗಳು ಇಡೀ ಜಗತ್ತಿನ ಕಾಪರ್ೊರೇಟ್ ವಲಯದಲ್ಲಿ ಚಚರ್ೆಯ ವಿಷಯವಾಗಿ ಹೊರಹೊಮ್ಮಿತ್ತು. ಸುಮಾರು ನೂರಕ್ಕೂ ಹೆಚ್ಚು ದೇಶಗಳು ಆಪಲ್ ಕಂಪನಿಯ ಉತ್ಪನ್ನಗಳನ್ನು ಬಳಸುತ್ತಿವೆ. ತಂತ್ರಜ್ಞಾನ, ಗುಣಮಟ್ಟ, ಆಯ್ಕೆ ಸ್ವಾತಂತ್ರ್ಯ, ಮನರಂಜನೆ ಇವೆಲ್ಲವೂ ಆ್ಯಪಲ್ ಕಂಪನಿಯ ಮುಖ್ಯ ಆಧಾರಸ್ಥಂಭಗಳಾಗಿದ್ದವು. ಸ್ಟೀವ್ ಮುಖ್ಯವಾಗಿ ಗಮನಹರಿಸಿದ್ದು ಇವುಗಳ ಮೇಲೆ. ಆತ ಗೆದ್ದ ಪರಿಯು ಹೀಗೆ. ಸ್ಟೀವ್ ನಮಗಿಷ್ಟವಾಗಲು ಬಹಳಷ್ಟು ಕಾರಣಗಳಿವೆ. ಆತ ತನ್ನ ಪ್ರೋಪೇಷನಲ್ ಹಾಗೂ ಪರ್ಸನಲ್ ಲೈಫನ್ನು ತೆರೆದ ಪುಸ್ತಕದಂತೆ ಇಟ್ಟವನು. ಆತನನ್ನು ಕಂಡರೆ ಅಮೇರಿಕನ್ ಮಾಧ್ಯಮಗಳಿಗೆ ಅದೇನು ಉತ್ಸಾಹವೋ ಏನೋ, ಮೊದಮೊದಲು ಯುಎಸ್, ಇಂಗ್ಲೇಂಡ್ ಮಾಧ್ಯಮದವರಿಗೆ ಮಾತ್ರ ಪ್ರಿಯನಾಗಿದ್ದ ಈತ ಕೊನೆಗೆ ಇಡೀ ಜಗತ್ತಿಗೆ ಹತ್ತಿರವಾದ. ಆ್ಯಪಲ್ ಕಂಪನಿಯ ಪ್ರಾಡಕ್ಟ್ಗಳು ಕೈಸೇರದ ವ್ಯಕ್ತಿ ಇಲ್ಲ. ಜಾಬ್ಸ್ನ ಹೆಸರು ಕೇಳದವರು ಇಲ್ಲ ಅನ್ನುವ ಮಟ್ಟಿಗೆ ಬೆಳೆದುಬಿಟ್ಟಿತು. ಕಾಪರ್ೊರೇಟ್ ಜಗತ್ತಿನ ಎಲ್ಲ ದಿಗ್ಗಜರನ್ನು ಮೀರಿಸಿ ಜಗತ್ತಿನ ಬೆಸ್ಟ್ ಸಿಇಓ ಅಂತ ಕರೆಸಿಕೊಂಡ ಬಗೆಯಾದರೂ ಏನಿರಬಹುದು. ವಾಷರ್ಿಕವಾಗಿ ಕೇವಲ ಒಂದು ಡಾಲರ್ ಸಂಬಳಕ್ಕೆ ಕೆಲಸ ಮಾಡಿ ದುಡಿದರೂ ಈತ ಅಮೇರಿಕದ ಅತ್ಯಂತ ಶ್ರೀಮಂತ ವ್ಯಕ್ರಿ ಅಂತ ಕರೆಸಿಕೊಳ್ಳುತ್ತಾನೆ. ಆ್ಯಪಲ್ನಲ್ಲಿ ಸ್ಟೀವ್ ಇರುವವರೆಗೂ ಹೂಡಿಕೆ ಮಾಡಿದ ಹಣಕ್ಕೆ ಮೋಸವಿಲ್ಲ ಅನ್ನುವ ಮಾತು. ನಾನು ಕಂಪನಿಯಿಂದ ದೂರ ಇದ್ದರೂ, ನನ್ನ ಮನಸ್ಸು ಸದಾ ಕಂಪನಿಯ ಜೊತೆಗ ಇರುತ್ತೆ ಎನ್ನುತ್ತಿದ್ದ ಸ್ಟೀವ್ನ ಮನವರಿಕೆಯನ್ನು ಇಡೀ ಜಗತ್ತೇ ಕೊಂಡಾಡುತ್ತೆ. ಯಾಕೆ ಆತ ನಮಗಿಷ್ಟವಾದ. ಕೇವಲ ನಾವೆಲ್ಲಾ ಆ್ಯಪಲ್ ಪ್ರಾಡಕ್ಟ್ಗಳನ್ನು ಬಳಸುತ್ತೇವೆ ಅನ್ನುವುದರಿಂದಲೇ ಮಾತ್ರ ನಾವು ಅವನನ್ನು ಇಷ್ಟಪಡಬೇಕೆ! ಇದ್ದರೂ ಕೆಲವು ಅಂಶಗಳನ್ನು ನೋಡಿದಾಗ ಅಲ್ಲಗಳೆಯುಂತಿಲ್ಲ. ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ, ಸ್ಟೀವ್ನ ಸ್ಥಾನವನ್ನು ತುಂಬುವವನ್ನು ಹುಡುಕಿದವನು ಕೂಡ ಇದೇ ಸ್ಟೀವ್. ಖಾಯಿಲೆಯಿಂದ ತನ್ನ ಹುದ್ದೆಗೆ ಸರಿಯಾಗಿ ನಡೆದುಕೊಳ್ಳಲಾಗುತ್ತಿಲ್ಲ ಅಂತ ಆತನಿಗೆ ಮನಸ್ಸಿಗೆ ಕಾಡಿದ್ದಿರಬೇಕು, ಆಧ್ಯಾತ್ಮದ ಕಡೆ ವಿಪರೀತ ತುಡಿತವಿದ್ದ ಸ್ಟೀವ್ಗೆ ತನ್ನ ಜಗತ್ತಿನ ನಿರ್ಗಮನ ಅವನನ್ನು ಕಾಡಿದ್ದಿರಬೇಕು? ಉತ್ತರಾಧಿಕಾರಿಯನ್ನು ನಿಮರ್ಿಸಿ ಕಂಪನಿಯ ಭದ್ರಬುನಾದಿಯನ್ನು ಇನ್ನಷ್ಟು ಗಟ್ಟಿ ಮಾಡಿದ ಸ್ಟೀವ್ನ ಕಾರ್ಯವೈಖರಿಯಿಂದ ನಮ್ಮ ದೇಶದ ರಾಜಕಾರಣಿಗಳು ಕಲಿಯುವುದು ಬೇಕಾದಷ್ಟಿದೆ. ವಯಸ್ಸು ಮಾಗಿ, ಹಲ್ಲು ಬಿದ್ದು, ಓಡಾಡಲೂ ಆಗದಿದ್ದರೂ ಸಾಯುವರೆಗೂ ಆ ಸೀಟು ನನ್ನ ಬುಡದಲ್ಲೇ ಇರಬೇಕು, ಗೂಟದ ಕಾರಲ್ಲೇ ಓಡಾಡಬೇಕು ಅನ್ನುವ ನಮ್ಮ ರಾಜಕಾರಣಿಗಳ ದುರಾಸೆಯನ್ನು ಮೆಚ್ಚುವವರು ಯಾರು