Monday, 11 June 2012

ಬನವಾಸಿ ರಾಜಬೀದಿಯ ನೆನಪುಗಳು !


 ಫೋಟೋವನ್ನು ಗಮನಿಸಿ, ಹಾಗೆ ಈಗ ಇರುವ ಬನವಾಸಿ ದೇವಸ್ಥಾನದ ಆವರಣವನ್ನು ಒಮ್ಮೆ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿ..ಹೌದು, ಏಷ್ಟೋಂದು ವ್ಯತ್ತಾಸ ಕಾಣುತ್ತಿದೆಯಲ್ಲಾ..! ಫೋಟೋದಲ್ಲಿ ದೇವಸ್ಥಾನದ ಮುಂಭಾಗದ ಪಕ್ಕ(ಎಡಬದಿ) ಒಂದು ಕಟ್ಟಡ ಕಾಣುತ್ತದೆ. ಈಗ,  ಜಾಗವು ಒಂದು ಸಣ್ಣ ಪಾರ್ಕ್ ಆಗಿ ಪರಿವರ್ತನೆಯಾಗಿದೆ.  ಹಳೆ ಕಟ್ಟಡವನ್ನು ಕೆಡವಲಾಗಿದೆ. ಒಂದು ಕಾಲದಲ್ಲಿ  ಕಟ್ಟಡ ಶಾಲೆಯಾಗಿತ್ತು. ಇದೇ ಕಟ್ಟಡದಲ್ಲಿ ನಮ್ಮ ಅಮ್ಮ ಸ್ಕೂಲ್ ಓದಿದ್ದು.  ಫೋಟೋ ನೋಡಿ ಅವರು ತಮ್ಮಸ್ಕೂಲ್  ಹಳೆಯ ದಿನಗಳನ್ನು ನೆನಪಿಸಿಕೊಂಡರು. ಅವರು ಓದಿದ್ದು ಬರೀ ಒಂಬತ್ತನೇ ಕ್ಲಾಸ್ ಅಷ್ಟೇ. ಓದಿದ ದಿನಗಳಲ್ಲಿ ಸ್ವಲ್ಪದಿನಗಳನ್ನು  ಹಳೇ ಕಟ್ಟಡದಲ್ಲಿ ಕಳೆದಿದ್ದಾರೆ. ನಮ್ಮಮ್ಮನ ಕ್ಲಾಸ್ ಮೇಟ್ಗಳು ಅನೇಕರು ಇಂದಿಗೂ ಬನವಾಸಿಯಲ್ಲಿದ್ದಾರೆ. ಅಕ್ಕಪಕ್ಕ ಹಳ್ಳಿಗಳಲಿದ್ದಾರೆ. ಇನ್ನೂ ಕೆಲವರು ದೂರ ದೂರಿನಲ್ಲಿದ್ದಾರೆ. ನಮ್ಮ ಜನರೇಷನ್  ಬನವಾಸಿ ಹುಡುಗರ ತಂದೆ, ತಾಯಿಗಳು ಎಲ್ಲಾ ಇದೇ ಸ್ಕೂಲ್ನಲ್ಲಿ ಓದಿರಬಹುದು. ಇಲ್ಲವೇ ಹೊಸ ಬಿಲ್ಡಿಂಗ್ನಲ್ಲಿ ಓದಿರಬಹುದು. ಈಗ ಉಳಿದುಕೊಂಡಿರುವ ಇನ್ನೊಂದು ಕಟ್ಟಡ ಕೂಡ ಆಗ ಶಾಲೆ...ಯಾಗಿತ್ತು. ಶ್ರೀ ಜಯಂತಿ ಹೈಸ್ಕೂಲ್ ಕಟ್ಟುವ ಮುಂಚೆ ಇದೇ ಕಟ್ಟಡಗಳಲ್ಲಿ ಫ್ರೌಢಶಾಲೆಯನ್ನು ನಡೆಸುತ್ತಿದ್ದರು. ಶ್ರೀ ಜಯಂತಿ ಹೈಸ್ಕೂಲ್  ಎಸ್ ಎಸ್ ಎಲ್ ಸಿ ಸೆಂಡ್ ಆಫ್ ದಿನ ಕೊನೆಯ ಫೋಟೋಶೂಟ್ ನ್ನು ಇದೇ ಕಟ್ಟಡದ ಮುಂದೆ ಮಾಡುತ್ತಿದ್ದರು. ಶ್ರೀಜಯಂತಿ ಹೈಸ್ಕೂಲ್ನಿಂದ ಸುಮಾರು ನಲವತ್ತು ವರ್ಷಗಳ ಹಿಂದೆ ಔಟ್ ಪುಟ್ ಆದವರ ಹಳೆಯ ಪೋಟೋಗಳನ್ನು ನೋಡಬಹುದು. ಕೆಲವೊಂದು ಫೋಟೋಗಳು ಶಾಲೆಯಲ್ಲಿವೆ. ದೇವಸ್ಥಾನದ ಬಲಬದಿಯಲ್ಲಿರುವ ಇನ್ನೊಂದು ಕಟ್ಟಡ ಇನ್ನೂ ಹಾಗೆ ಇದೆ.  ಕಟ್ಟಡದ ಮೊದಲ ಫ್ಲೋರ್ ನಲ್ಲಿ ತೇರು ಕಟ್ಟುವ ಎಲ್ಲ ಮರಮುಟ್ಟುಗಳು, ಹಗ್ಗಗಳನ್ನು ಶೇಖರಿಸುತ್ತಾರೆ. ಇದರ ಕೆಳಗಿನ ಕೋಣೆ ಮೊದಲೇ ಹೇಳಿದಂತೆ ಸುಮಾರು ನಾಲ್ಕು ದಶಕಗಳ ಹಿಂದೆ ಶಾಲಾಕೋಣೆಯಾಗಿತ್ತು. ಒಮ್ಮೆ  ಕಟ್ಟಡಕ್ಕೆ ಬೆಂಕಿ ಬಿದ್ದು ತೇರಿನ ಎಲ್ಲ ಮರಮುಟ್ಟುಗಳು ಹಾಗೂ ಹಗ್ಗ ಸುಟ್ಟು ಭಸ್ಮ ಆಗಿದ್ದವು.  ಘಟನೆ ಎಲ್ಲರಿಗೂ ನೆನಪಿರಬಹುದು ಅಂತ ಅಂದುಕೊಳ್ಳುತ್ತೇನೆ.  ನಂತರ  ಕಟ್ಟಡವನ್ನು ಸಂಪೂರ್ಣವಾಗಿ ಕೆಡವದೇ ಸಣ್ಣ ಪುಟ್ಟ ಬದಲಾವಣೆ ಮಾಡಿ, ಮೊದಲಿನಂತೆ ಕಾಣುವಂತೆ ಮಾಡಿದ್ದಾರೆ.ಇಲ್ಲಿ ಓದಿದವರು ಬಹಳಷ್ಟು ಜನರು. ಇದೇ ಕೋಣೆ, ನಾವು ಚಿಕ್ಕವರಾಗಿದ್ದಾಗ ಅಂಗನವಾಡಿಯಾಗಿತ್ತು.  ಅಂಗನವಾಡಿಯಲ್ಲಿ ನಾನು ಕಲಿತಿದ್ದೇನೆ. ಸ್ವಲ್ಪ ದಿನ ನಮ್ಮ ಅಂಗನವಾಡಿ ದಿನಗಳು ಹನುಮಂತ ದೇವಸ್ಥಾನದಲ್ಲಿಯೂ ಕೂಡ ಆಗಿತ್ತು. ಅಂಗನವಾಡಿಯ ದಿನಗಳು ತುಂಬಾ ಚೆನ್ನಾಗಿದ್ದವು.   ರಥಬೀದಿಯ ಸುಂದರ ಆವರಣದ ಫೋಟೋ ಅಪಾರ ನೆನಪುಗಳನ್ನು ಹೊತ್ತು ನಿಂತಿದೆ.


ದೊಡ್ಡ ತೇರು-ದೊಡ್ಡ ಮಾತು
ಸುಮಾರು 4-5 ದಶಕಗಳ ಹಿಂದೆ ತೇರನ್ನು ಕಟ್ಟುವ ಸ್ಥಿತಿಯಲ್ಲಿದ್ದಾಗ ತೆಗೆದ ಚಿತ್ರವಿದು.. ಈಗ ತೇರನ್ನು ಜಾತ್ರೆಯ ಆಚರಣೆಗೆ ದಿವಂಗತ ನರಸಿಂಹ ಉಪ್ಪಾರರ ಮೂರನೇ ತಲೆಮಾರು ಅಂದರೆ ನರಸಿಂಹಜ್ಜನ ಮೊಮ್ಮಕ್ಕಳು ಕಟ್ಟುತ್ತಿದ್ದಾರೆ. ನರಸಿಂಹ ಉಪ್ಪಾರ ತೀರಿಕೊಂಡ ಮೇಲೆ ಅವರ ಮಗ ಗಣಪತಿ ಉಪ್ಪಾರ ಬನವಾಸಿಯ ಎಲ್ಲ ರಥಗಳನ್ನು ಕಟ್ಟುತ್ತಿದ್ದರು. ಗಣಪತಿ ಉಪ್ಪಾರ ತೀರಿಕೊಂಡ ಮೇಲೆ ಈಗ ಅವರ ಮಕ್ಕಳಾದ ಮಧುಕೇಶ್ವರ, ನರಸಿಂಹ, ಬಸವರಾಜು, ಮಂಜುನಾಥ್ ಕಟ್ಟುತ್ತಿದ್ದಾರೆ. ನಲವತ್ತು ವರ್ಷಗಳ ಹಿಂದಿನ ಫೋಟೋದಲ್ಲಿ ದಿವಂಗತ ನರಸಿಂಹ ಉಪ್ಪಾರರನ್ನು ಕಾಣಬಹುದು. ತೇರಿನ ಒಂದು ಮೂಲೆಯಲ್ಲಿ ವಯಸ್ಸಾದ ಅಜ್ಜ ಕುಳಿತುಕೊಂಡಿದ್ದಾರೆ. ಸೂಕ್ಷ್ಮವಾಗಿ ನೋಡಿದಾಗ ಅಸ್ಪಷ್ಟವಾದ ಅವರ ಮುಖ ಕಾಣುತ್ತದೆ.

ಸೋದೆಯ ಅರಸ ರಾಮಚಂದ್ರನಾಯಕ ಮಧುಕೇಶ್ವರ ದೇವರ ಸೇವೆಗೆ ನೀಡಿದ ಕಾಣಿಕೆ ಇದು . ನೀಡಿ ಈಗಾಗಲೇ 500 ವರ್ಷಗಳಾಗಿದೆ. ಇಂದಿಗೂ ತೇರು ತುಂಬಾ ಗಟ್ಟಿಮುಟ್ಟಾಗಿದೆ. ತೇರಿಗೆ ಬಳಸಿದ ಮರ ಇನ್ನು ಗಟ್ಟಿಯಾಗಿದೆ. ಹುಳ ತಿಂದಿಲ್ಲ. ಇಂದಿಗೂ ಟನ್ ಗಟ್ಟಲೇ ಭಾರವನ್ನು ಹೋರುವ ಸಾಮರ್ಥ ಇದಕ್ಕಿದೆ. ರಾಮಚಂದ್ರನಾಯಕನ ಅಪ್ಪಟ ನಿಷ್ಕಲ್ಮಷ
ಭಕ್ತಿ, ಉಮಾಮಧುಕೇಶ್ವರನ ಶಕ್ತಿ, ಕ್ಷೇತ್ರಪಾಲನ ಶ್ರೀರಕ್ಷೆ ಇವೆಲ್ಲವೂಗಳಿಂದ ಮನ್ಮಹಾಸ್ಯಂದನ ರಥ ತುಂಬಾ ಇಂದಿಗೂ ಗಟ್ಟಿಯಾಗಿ ದೇವರ ಸೇವೆಗೆ ಸಿದ್ಧವಾಗಿದೆ. ಪ್ರತಿವರ್ಷ ಜಾತ್ರೆಯ ದಿನ ಸಾಲಂಕೃತವಾದ ದೊಡ್ಡ ತೇರನ್ನು ನೋಡುವ ಅವಕಾಶ ಸಿಕ್ಕಿರುವುದು ಬನವಾಸಿಗರ ಪುಣ್ಯ. 
ತೇರಿನ ಮರಮುಟ್ಟುಗಳ ಮೇಲೆ ಅದ್ಭುತ ಕಲಾಕೆತ್ತನೆ ಇದೆ. ಕೆತ್ತನೆ ಪ್ರತಿವರ್ಷ ಹಾಕುವ ಕೀಲೆಣ್ಣೆಯಲ್ಲಿ ಮುಚ್ಚಿಹೋಗಿದೆ. ಜಿಡ್ಡು ತುಂಬಿ ಹೋಗಿದೆ. ಇದೇ ರೀತಿ ಹೂವಿನ ತೇರು ಕೂಡ ಕೀಲೆಣ್ಣೆಯ ಜಿಡ್ಡಿನಲ್ಲಿ ಮುಚ್ಚಿಹೋಗಿತ್ತು. ಕಳೆದ ಒಂದು ವರ್ಷದಲ್ಲಿ ಹೂವಿನ ತೇರಿಗೆ ಅಂಟಿದ್ದ ಜಿಡ್ಡನ್ನು ತೆಗೆದು ಹೊಸ ಹುರುಪನ್ನು ನೀಡಲಾಗಿದೆ, ತೇರಿನಲ್ಲಿ ಏಂತಹ ಅದ್ಭುತ ಕೆತ್ತನೆ ಇದೆ ಅದನ್ನು ತೆಗೆದಾಗಲೇ ಗೊತ್ತಾಗಿದ್ದು. ಹೂವಿನ ತೇರಿನಲ್ಲಿ ಆದಿಶೇಷನ ಅದ್ಭುತ ಕೆತ್ತನೆ ಇದೆ. ಎಲ್ಲರನ್ನು ಸೆಳೆಯುವ ಸುಂದರ ಕಲಾಕೃತಿ ಅದರಲ್ಲಿದೆ. ಹೂವಿನ ತೇರಿನ ಜಿಡ್ಡನ್ನು ತೆಗೆದಿರುವಂತೆ ದೊಡ್ಡ ತೇರಿನ ಜಿಡ್ಡನ್ನು ಕೂಡ ತೆಗೆಯುತ್ತಾರೆ ಅಂತ ಸುದ್ದಿ ಇದೆ. ನಾನಂತೂ ತುಂಬಾ ಕೂತೂಹಲಕಾರಿಯಾಗಿದ್ದೇನೆ. ಹೂವಿನ ತೇರಿನಂತೆ ಇದರಲ್ಲಿ ಎಂತಹ ಅದ್ಭುತೆ ಕೆತ್ತನೆ ಇದೆ ಅಂತ ನೋಡಲಿಕ್ಕ್ಕೆ. ರಾಮಚಂದ್ರನಾಯಕ 500 ವರ್ಷಗಳ ಹಿಂದೆ ದೇವರಿಗೆ ನೀಡಿದಾಗ ಹೇಗಿತ್ತು ಅನ್ನುವುದನ್ನು ಈಗ ನೋಡಲು ತುಂಬಾ ಕಾತುರವಾಗಿದ್ದೇವೆ. ದೇಶದ ಚಾರಿತ್ರಿಕ ಹಿನ್ನಲೆಯ ಅದ್ಭುತ ಕುರುಹುಗಳಲ್ಲಿ ದೊಡ್ಡ ತೇರು ಕೂಡ ಒಂ
ದು

ಒಂದು ಹಾರೈಕೆ…!


ಅನುದಿನವು,ಅನುಕಾಲ,
ಸಂತಸದ ಅಂಗಿಯ ತೊಟ್ಟು
ಸಾಧನೆಯ ಮುಖಕ್ಕೆ ರಂಗೇಲ್ಪಟ್ಟು
ಚಿಮ್ಮುವ ಕಡಲಂತೆ, ಬಾನೆರಗಿ
ಜಗವೇ ಕಿವಿಮುಚ್ಚುವಂತೆ ಕೂಗಿ
ಬಾಂದಳದ  ಬಾಂಧವರ ಆಶಿರ್ವಾದ ಪಡೆದು,
ಅಪ್ಪಅಮ್ಮ, ಬೆನ್ನಿಗಂಟಿದವರ ಅಪ್ಪುಗೆ ಇಟ್ಟುಕೊಂಡು
ಹಸನಾದ ಬದುಕಿಗೆ ಸಂಗಾತಿಯ ಅರಸುತ
ಬದುಕುವ  ಓಟಕ್ಕೆ ವೃತ್ತಿಯ ಅವಲಂಬಿಸುತಾ
ಪ್ರತಿವರ್ಷವು ಸಾಧನೆಯ ಮಡಿಲಲ್ಲಿ ಬೆಳೆಯುತಾ
ಓಡುತ್ತಿರು,ನೀ  ಸದಾ ಓಡುತ್ತಿರು.
ಗುರಿಯ ನೇಗಿಲನು ಹೊತ್ತು, ಸ್ನೇಹದ ಹೊಲದಲಿ ಮೇಯುತಾ
ಹಿಂದೆ ಕೈ ಹಿಡಿದವರ ಸಹಾಯವನು ಮರೆಯದೇ
ಗೆಲ್ಲುತ್ತಿರು, ನೀ ಸದಾ ಗೆಲ್ಲುತ್ತಿರು