ಹಾಯ್..ಹಲೋ..ನಮಸ್ತೆ...ನಮಸ್ಕಾರ..ಶುಭೋದಯ ಅಂತೆಲ್ಲಾ ದಿನಾ ಬೆಳ್ಳಗೆ ನಿಮ್ಮ ಮನೆ ಟಿವಿಯಲ್ಲಿ (ಟಿವಿ ಆನ್ ಆಗಿದ್ರೆ) ವೀಕ್ಷಕ ಮಹಾಪ್ರಭುವಿಗೆ ಬೆಳಗಿನ ಬಿಸಿಬಿಸಿ ಕಾಫಿ ಹೀರುವಾಗ, ಹೊರಗಿನ ಬೆಳಗಿನ ಬಿಸಿಲು ನೆತ್ತಿಯ ಮೇಲೆ ಏರುವ ಮುಂಚೆಯೇ ಆತನ ಕಿವಿ ಮತ್ತು ಕಣ್ಣನ್ನು ತಂಪಾಗಿಸುವ ಸುಂದರ ಲಲನೆಯರ ಸಂಖ್ಯೆಯೇನು ಕಡಿಮೆಯಿಲ್ಲ. ಕಾಣದ ಯಾವುದೋ ಊರಿನ ಮುಖ ಮೂತಿ ನೋಡಿರದ ವ್ಯಕ್ತಿಯ ಜೊತೆ ಹೊಟ್ಟೆ ತುಂಬುವಷ್ಟು ಮಾತನಾಡುತ್ತಾ ಆತನ ಹೃದಯಕ್ಕೆ ನೇರವಾಗಿ ಬೌಂಡರಿ ಹೊಡೆಯುತ್ತ ಪ್ರತಿ ಎರಡು ಸೆಕೆಂಡ್ಗೆ ನಿಮ್ಮ ಟಿವಿ ವಾಲ್ಯೂಮ್ ಕಮ್ಮಿ ಮಾಡ್ರಿ ಅಂತ ಹೇಳುವ ನಿರೂಪಕ/ನಿರೂಪಕಿಯರ ಪಾಡೇನು ನಾವು ನೀವು ಅಂದುಕೊಂಡಂತೆ ಇಲ್ಲ. ಇಲ್ಲಿ ನಿರೂಪಕಿ ನೋಡಲು ಚೆನ್ನಾಗಿದ್ದರೆ ಅವಳ ಬಾಯಿಂದ ಕನ್ನಡ ಎನ್ನಡವಾಗಿದ್ದರೂ ಬಾಯಿ ಬಿಟ್ಟುಕೊಂಡು ನೋಡುವ ಜನರೇನು ಕಡಿಮೆ ಇಲ್ಲ, ಅದರಲ್ಲೂ ಇಂತಹ ಬಾಲೆಯ ಫೋನು ಒಬ್ಬ ಪಡ್ಡೆ ಹುಡುಗ ಇಲ್ಲವೇ ಮದುವೆಯಾಗದ ಗಂಡಸರಿಗೆ (ಕೆಲವೊಮ್ಮೆ ಮಹುವೆಯಾಗಿರುವ ಗಂಡಸರು ಕೂಡ) ಸಿಕ್ಕಿಬಿಟ್ಟರೆ ಅದುವೇ ಅವರಿಗೆ ದೊಡ್ಡ ಸ್ವರ್ಗ, ರಾತ್ರಿಯೆಲ್ಲ ಮನಸ್ಸಿನಲ್ಲಿ ರೆಕಾರ್ಡ ಮಾಡಿಕೊಂಡಿದ್ದ ಅವಳ ದ್ವನಿಯನ್ನು ರಿವೈಂಡ್ ಮಾಡಿ ಮಾಡಿ ಇಂದು ಜೀವನಕ್ಕಾಗುವಷ್ಟು ಕನಸು ಕಂಡುಬಿಟ್ಟಿರುತ್ತಾರೆ. ತಮ್ಮ ಸ್ನೇಹಿತರ ಜೊತೆ ನಾನು `---' ವಾಹಿನಿಯ ಆ ಸಕ್ಕತ್ ಹುಡುಗಿಯ ಜೊತೆ ಮಾತಾಡ್ದೆ ಕಣೋ..ಅಂತ ಜಂಬಕೊಚ್ಚಿಕೊಳ್ಳುತ್ತಿರುತ್ತಾರೆ. ಏಷ್ಟೋ ನಿರೂಪಕಿಯರಿಗೆ ಅವರ ನಿರೂಪಣೆಯ ಸಮಯದಲ್ಲಿ ಈ ಅಭಿಮಾನಿಗಳ ಕಾಲುಗಳೇ (ಕಾಟ) ಜಾಸ್ತಿಯಾಗಿರುತ್ತವೆ. ಕೆಲವೊಮ್ಮೆ ಬೇಗನೆ ಅವರ ಗೊತ್ತಾಗದಿದ್ದಾಗ `ಹಾಯ್, ನಾನ್ ರೀ.. ನಿಮ್ಮ್ ಜೊತೆ ನಿನ್ನೆ ಮಾತಾಡಿದ್ನಲ್ಲಾ ಮೇಡಂ..ನಾನೇ ಆ..ಆ..' ಅಂದಾಗ ಕೊನೆಗೆ `ಹೋ.. ನೀವಾ.?' ಇಲ್ಲವೇ `ಎಸ್ ಯು ಆರ್ ರೈಟ್' ಎಂದಾಗ ಅಭಿಮಾನಿಯ ಹೋದ ಜೀವ ಮತ್ತೆ ಬಂದಾಂಗುತ್ತದೆ. ಹೀಗೆ ಇಂಥಹ ಜನರಿಂದಾಗಿಯೇ ನಿರೂಪಕಿಯರಿಂದ ಚಾನೆಲ್ಗೆ ಹೆಚ್ಚಿನ ಟಿಆರ್ಪಿ ಅಂಕಗಳು ಸಿಗುತ್ತಿದೆ. ಹೀಗೆ ಟೀವಿಯಲ್ಲಿ ಇಷ್ಟಗಲ ನಗುತ್ತಾ ರಸಿಕರನ್ನು ರಂಜಿಸುವ ನಿರೂಪಕರು ಒಳಗಡೆ ಅನುಭವಿಸುವ ನೋವು ಅವಮಾನವು, ಅಭಿಮಾನಿಗಳು ಮಾಡುವ ಪೋನಿಗೆ ಇದು ಗೊತ್ತಾಗುವುದೇ ಇಲ್ಲ. ಪ್ರತಿದಿನ ಸ್ಟುಡಿಯೋದಲ್ಲಿ ಅನುಭವಿಸುವ ಮನಸ್ಸಿನ ಆತಂಕ, ಇಲ್ಲೂ ನಡೆಯುವ ಒಳ ರಾಜಕೀಯ, ಸ್ಥಿರತೆಯಿಲ್ಲದ ಕೆಲಸ, ಇವತ್ತಿಗೆ ಕೆಲಸ ಆಯ್ತು ಆದ್ರೆ.....ನಾಳೆ ಮತ್ತೇನು ಮತ್ತು ಮುಂದೇನು? ಎಂಬ ಪ್ರಶ್ನೆಗಳ ನಡುವೆ ಜೀವನ ನಡೆಸುವ ನಿರೂಪಕರ ಪಾಡಂತು ಯಾರು ಕೇಳರು.
ಪ್ರಿಯ ವೀಕ್ಷಕರೇ..ಉಸ್ಸಫಾ.. ಸಾರಿ ಸ್ನೇಹಿತರೇ ನಾನು ನಿಮ್ಮ ನೆಚ್ಚಿನ `--------' ಇಂದು ನಾ ನಿಮಗೆ ಹೇಳುತ್ತಿರುವ ಕಥೆ `ಹೀಗೂ ಉಂಟೆ?' ಅಲ್ಲ `ವಾಸ್ತವ' .ಇದು `ಅಚ್ಚರಿ', ನಮಸ್ಕಾರ `ಸೀ-ರೀಯಲ್ ' ಸ್ವಾಗತ, ಕ್ರೈಮ್ ಲೋಕದ ಇವತ್ತಿನ ಬೇಟೆ ಯಾವುದು... ತೆರೆಯ ಮೇಲೆ ನಾವೇನೋ(ಆಂಕರ್ಗಳು) ತಮ್ಮ ದುಃಖ, ಸಂಕಟ, ಹಿಂಸೆಗಳನ್ನು ಮರೆಮಾಚಿ ನಗುತ್ತ ಚೆನ್ನಾಗಿ ಮೇಕಪ್ ಮಾಡಿಕೊಂಡು ಎಲ್ಲರ ಮುಂದೆ ಬರುವುದು ಸಾಮಾನ್ಯದ ಮಾತು. ಯಾವುದೇ ಒಂದು ವಾಹಿನಿಯನ್ನು ಪ್ರತಿನಿಧಿಸುವವರು ನಿರೂಪಕರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ? ನಿರೂಪಕರು ವಾಹಿನಿಯ ಯಶಸ್ಸಿಗೆ ಹೇಗೆ ಕಾರಣಿಭೂತರಾಗಿರುತ್ತಾರೆ ಎಂಬುದನ್ನು ನಾವು ಈ ರೀತಿ ಮನದಟ್ಟುಮಾಡಿಕೊಳ್ಳಬಹುದು. 1. ನಿದರ್ೇಶಕರ ಯೋಚನೆಯನ್ನ ತೆರೆಯ ಮೇಲೆ ಪಕ್ವವಾಗಿ ಮೂಡಿಸುವವರು ಮತ್ತು ಜನ ಸಾಮಾನ್ಯರೊಡನೆ ಒಂದು ವಾಹಿನಿಯನ್ನ ಪ್ರತಿನಿಧಿಸುವವರು. 2. ನಿದರ್ೇಶಕರ ಕಲ್ಪನೆಯ ಚಿತ್ರಕ್ಕೆ ಬಣ್ಣ ಲೇಪಿಸುವವರು ನಿರೂಪಕರು ಅಂದ್ರೆ ಇವರೇ. 3. ಹೊರಗೆ ನೂರೆಂಟು ವ್ಯಯಕ್ತಿಕ ತೊಂದರೆ ಇದ್ದರೂ ಆಕ್ಷನ್ ಎಂದ ತಕ್ಷಣ ಎಲ್ಲಾ ಮರೆತು ನಿಮ್ಮ ಜೊತೆ ಮಾತಾಡೋರು.
ಹೀಗೆ ಒಮ್ಮೆ ಆಂಕರ್ಗಳು ಒಂದು ದಿನ ಬೋರ್ಗರೆಯುವ ಮಳೆಯು ಹೊರಗಡೆ ಬೀಳುತಿರಲು `ಕಾಫಿ ಡೇ'ಯಲ್ಲಿ ಸೇರಿದ್ದರು. ಕಾಫಿಯಲ್ಲಿ ಮಾತ್ರ ಸಕ್ಕರೆಯಿತ್ತು, ಆದರೆ ಅವರವರಲ್ಲೆ ಒಬ್ಬರಿಗೆ ಒಬ್ಬರನ್ನು ಕಂಡ್ರೆ ಅಷ್ಟಕಷ್ಟೇ. ಇದೊಂಥರ ಪ್ರೋಫೆಷನಲ್ ಇಗೋ! ಒಬ್ಬರು ಕಾರ್ಯಕ್ರಮ ಬಿಟ್ಟರೆ ಮತ್ತೊಬ್ಬರಿಗೆ ಭೋಜನ. ಅವತ್ತು ಯಾರ ಮುಖದಲ್ಲೂ ನಗು ಮಾತ್ರ ಕಾಣ್ತಾ ಇರಲಿಲ್ಲ. ಎಲ್ಲರ ಮುಖದಲ್ಲು ಬೇಜಾರಿನ ಛಾಯೇ ಎದ್ದು ಕಾಣ್ತಾ ಇತ್ತು, ಎಲ್ಲರು ಹೇಳುವರೇ. ನಿನಗೆ ಹೀಗಾಯ್ತು, ನಂಗೆ ಹಾಗಾಯ್ತು, ಇನ್ನು ನಮಗೆ ಏನಾಗುವುದೋ? ಎಂಬ ಚಿಂತೆ. ನಮ್ಮ ಬಾಳು ಹೀಗೇನಾ? ಹಲವು ದಿನಗಳ ಮಾತ್ರ ನಮಗೆ ವಾಹಿನಿಗಳ ಜೊತೆ ನಂಟು. ಇನ್ನು ಯಾರು ಮಾತಾಡಲಿಲ್ಲವೇನೋ ಅನ್ನುವ ಮಾತು. ಆಗ ಎಲ್ಲರು ` ಈ ವಾಹಿನಿಯವರಿಗೆ ಟಿಆರ್ಪಿಯ ಹುಚ್ಚು ಹಿಡಿದಿದೆ, ಮನುಷ್ಯತ್ವನೇ ಇಲ್ವ. ಇತ್ತೀಚೆಗೆ ರಿಟೈರ್ ಆದಂತಹ ಈ ಸಿನಿಮಾ ನಟಿಯರು ಕಿರುತೆರೆ ಕಲಾವಿದರು ಬಂದು ನಮ್ಮ ಜಾಗವನ್ನು ಮತ್ತು ಕೆಲಸವನ್ನು ಕಿತ್ತುಕೊಂಡು ಬಿಟ್ರು. ಅಂತ ಗೊಗರೆದರು. ಇಷ್ಟೆಲ್ಲಾ ಮಾತಾದ ಮೇಲೆ ಇನ್ನೋಬ್ಬರು ಇನ್ನೊಂದು ಗುಂಪಿನ ನಿರೂಪಕರ ಬಗ್ಗೆ ಮಾತಾಡಿದರು. ಶೋಕಿಗಾಗಿ ನಿರೂಪಣೆಯ ಮೇಲೆ ಕೊಂಚವು ಪ್ರೀತಿ ಹೋಗ್ಲಿ ಗೌರವ ಇಲ್ಲದ ಬಹಳಷ್ಟು ಮಂದಿ ಇಂದಿಗೂ ಪ್ರಮುಖ ವಾಹಿನಿಯಲ್ಲಿ ನಿರೂಪಣೆ ಮಾಡ್ತಾ ಇದ್ದಾರೆ ಅಂದ್ರೆ ಆಶ್ಚರ್ಯ ಅಲ್ಲವೇ? ಅಂತ ಉಸುರಿದರು. ರೀ ನೀವೇ ಹೇಳ್ರಿ.. ಸಕರ್ಾರದಿಂದ ಹಿಡಿದು ಎಲ್ಲಾ ಕಡೆ ಇರುವ ಒಳ ರಾಜಕೀಯ ನಮ್ಮ ವಾಹಿನಿಗೆ ಎಂಟ್ರಿ ಕೊಡದೇ ಇರುತ್ತಾ? ಎಲ್ಲಿ ನೋಡಿದ್ರು ಬರೀ ರಾಜಕೀಯ..ರಾಜಕೀಯ .ಟಿಆರ್ಪಿ ಹೆಚ್ಚು ಮಾಡಲು ಹೋಗಿ ನಿರೂಪಕರ ಕೆಲಸದ ಮೇಲೆ ಮೊಳೆ ಹೊಡೆದು ಆರ್.ಐ.ಪಿ ಅಂತ ಹೇಳಿ ಮೀಸೆ ಅಡಿಯಲ್ಲಿ ಚಿಕ್ಕದಾಗಿ ನಗ್ತಾರಲ್ಲಾ..ಇವರಿಗೇನು ಮಾಡೋದು? ಹೀಗೆ ನಗುವ ಮನಸ್ಸುಗಳಿಗೆಲ್ಲಾ ಧಿಕ್ಕಾರವಿರಲಿ. ಈ ಹಿಂದೆ ಕನ್ನಡದ ಅದ್ಭುತ ಮನರಂಜನೆ ಅನ್ನುವ ವಾಹಿನಿಯ ನಿರೂಪಕರಿಗೆ 'ಬೆಸ್ಟ್ ಆಂಕರ್ ಅವಾರ್ಡ' ಬಂದಾಗ `ಕಂಗ್ರಾಟ್ಸ್ , ವೆರಿ ಗುಡ್, ಟೇಕ್ ಇಟ್ ಇನ್ ಎ ಗುಡ್ ವೇ, ನಾವು ನಿಮಗೆ ಫುಲ್ ಸಪೋಟರ್್ ಮಾಡ್ತೀವಿ' ಅಂತ ಹೇಳಿ ನಾಲ್ಕು ದಿನವಾದ ಮೇಲೆ ` ಸಾರಿ ರೀ.. ನಿಮ್ಮ ಪ್ರೋಗ್ರಾಂ ರಿಜೆಕ್ಟ್ ಆಗಿದೆ' ಅಂತ ಮೆತ್ತಗೆ ಹೇಳಿ ಅವರೇ ಎಸ್ಕೇಪ್ ಆಗೋದಾ? ಮುಂದೆ ಈ ಕೆಲಸವನ್ನೇ ನಂಬಿಕೊಂಡಿರೋ ಅವರ ಗತಿಯೇನು ಅಂತ ಅವರಿಗೆ ಗೊತ್ತಾಗೋದು ಬೇಡ್ವ? ಕೊನೆ ಪಕ್ಷ ಒಂದು ಥ್ಯಾಂಕ್ಸ್ ಕೂಡ ಇಲ್ಲ. ಆ ಕಾರ್ಯಕ್ರಮವನ್ನು ನಿಮರ್ಿಸಿದ ಸಕಲಕಲಾವಲ್ಲಭನಿಗೆ ಅವನು ನಿಮರ್ಿಸಿದ ಕಾರ್ಯಕ್ರಮಗಳು ನೆನಪಿನಲ್ಲಿದಿಯೋ ಹೊರತು ಆ ಕಾರ್ಯಕ್ರಮಗಳನ್ನು ತಲುಪಿಸಿದ ನಿರೂಪಕರಾರು ನೆನಪಿಲ್ಲ. ಇದೆಲ್ಲ ಯಾರ ಮಹಾತ್ಮೆಯೋ! ಸ್ವಾಮಿ ಇದೇ ನಿರೂಪಕರ ಸದ್ಯದ ಸ್ಥಿತಿಗತಿ. ಇದು ಕಥೆಯಲ್ಲ..ಇದುವೇ ಜೀವನ ಮತ್ತು ಸತ್ಯ ಕೂಡ. ಎಲ್ಲಾ ಕಲಾವಿದರಿಗೆ ಅಸೋಸಿಯೇಷನ್, ಛೇಂಬರ್ ಅನ್ನೋದಿದೆ. ಅವರ ಕಷ್ಟ ನಷ್ಟಗಳನ್ನು ಕೇಳೋರು ಇದ್ದಾರೆ ಆದ್ರೆ ನಿರೂಪಕರ ದುಖ ಕೇಳೋಕೆ ಯಾವ ಅಸೋಸಿಯೇಷನ್ ಅನ್ನೋದು ಇಲ್ಲಾ.ಇದಕ್ಕೆ ಹಿರಿಯ ನಿರೂಪಕರು ಆಲೋಚಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಬೇಕಾಗಿದೆ.