Monday, 14 May 2012

ಏನೆಂದು ಹೇಳಲಿ..!



ಹೋಗುವ ದಾರಿಗೆ ದಿಕ್ಕಿಲ್ಲ,
ದಿಕ್ಕಿದ್ದ ಕಡೆ ದೃಷ್ಟಿ ಇಲ್ಲ.
ದೃಷ್ಟಿ ಇದ್ದ ಕಡೆ ಗುರಿ ಇಲ್ಲ,
ಗುರಿ ಇದ್ದ ಕಡೆ ನೆಲೆ ಇಲ್ಲ.
ನೆಲೆ ಇದ್ದ ಕಡೆ  ನಾನಿಲ್ಲ.
ನಾನಿಲ್ಲದೇ ಅರಿವಿಲ್ಲ
ಅರಿವಿಲ್ಲದೇ ಜ್ಞಾನವಿಲ್ಲ
ಜ್ಞಾನವಿಲ್ಲದೇ ಬದುಕಿಲ್ಲ
ಬದುಕಿಲ್ಲದೇ ಲೋಕವಿಲ್ಲ.
ಲೋಕವಿಲ್ಲದೇ ಆಸೆಯಿಲ್ಲ.
ಆಸೆಯಿಲ್ಲದೇ ಶೂನ್ಯವೆಲ್ಲಾ..!
ಒಟ್ಟಾರೆ  ಸೃಷ್ಟಿಯೇ
ಅಯೋಮಯ..ವಿಚಿತ್ರ, ವಿಶಿಷ್ಟ..!
ವರ್ಣಿಸಲಾಗದು ನಮ್ಮ ಜೀವನವ
ನಿಮಗೆ ನಾವು, ನಮಗೆ ಎಲ್ಲರೂ
ಕುರುಡು ಜಗತ್ತಿನಲಿ, ಧೂಳು ಮಣ್ಣಿನಲಿ
ಸೇರುವ ಒಂದಾಗಿ...