Thursday, 12 January 2012

ಪಂಚಮಿ ಪಬ್ಲಿಕೇಷನ್ಸ್ ನ ಮೊದಲ ಕಾಣಿಕೆ `ಕಲಾವಿದರ ಕಥಾನಕ' ಹೊತ್ತಿಗೆಯನ್ನು  ಕೆಲವು ದಿನಗಳ ಹಿಂದೆ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ದಲಿಂಗಯ್ಯರವರು ಲೋಕಾರ್ಪಣೆ ಮಾಡಿದರು.  ನಮ್ಮ ಸಂಸ್ಥೆಯ ಮೊದಲ ಕೃತಿಯನ್ನು ಈ ಇಬ್ಬರೂ ಮಹಾನುಭಾವರಿಂದ ಬಿಡುಗಡೆಯಾಗುತ್ತದೆ ಅಂತ ನಾನಂತೂ ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ಎಲ್ಲವೂ ಒಂದು ಪ್ರಾಮಾಣಿಕ ಪ್ರಯತ್ನದ ಫಲ ಎಂದು ಕರೆಯಲಿಕ್ಕೆ ಇಷ್ಟಪಡುತ್ತೇನೆ.  ಈ ಕಾರ್ಯಕ್ರಮಕ್ಕೆ ಮುಖ್ಯವಾಗಿ  ಜೊತೆಯಾದ ನನ್ನ ಸ್ನೇಹಿತರಾದ ಆರ್ ಎನ್ ಜಗನ್ನಾಥ್, ಪ್ರಭುರಾಜ್ , ಮಹದೇವ್, ಮಧು ಇನ್ನು ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಜೊತೆಯಾಗಿ ಎಲ್ಲ ರೀತಿಯಿಂದಲೂ ಸಹಕಾರ ನೀಡಿದ್ದರು. ಪ್ರಾಧಿಕಾರ ಹಮ್ಮಿಕೊಂಡಿದ್ದ ಪುಸ್ತಕಮೇಳದಲ್ಲಿ  ನಮ್ಮ ಕೃತಿಯನ್ನು ಬಿಡುಗಡೆ ಮಾಡಲಿಕ್ಕೆ ಅನುಕೂಲವನ್ನು ಮಾಡಿಕೊಟ್ಟವರು ಪ್ರಾಧಿಕಾರದ ಹಿರಿಯ ಕೆಎಎಸ್ ಅಧಿಕಾರಿ ಬಿ.ಹೆಚ್. ಮಲ್ಲಿಕಾರ್ಜುನ್ ಕೊನೆಯವರೆಗೂ ಸಾಥ್ ನೀಡಿ ಬೆಂಬಲ ನೀಡಿದ್ದರು.
 
 ಮೊದಲಿನಿಂದಲೂ  ಈ ಪುಸ್ತಕವನ್ನು ಮಾಡಲು ಬೆಂಬಲ ಮಾಡುತ್ತಾ ಬಂದವರು ನನ್ನ  ಆತ್ಮೀಯ ಲೇಖಕರಾಗಿರುವ ಕಗ್ಗರೆ ಪ್ರಕಾಶ್ ಅವರ ಸಹಕಾರವನ್ನು ಸದಾ ನೆನೆಯಲೇಬೇಕು.
 
 
 
 
 
 
 
 
 
 
 
ಪುಸ್ತಕ ಬಿಡುಗಡೆಯ ದಿನದ ಕೆಲವು ಪೋಟೋ ಕ್ಷಣಗಳು