Sunday, 3 March 2013

ಕೆಟ್ಟಕಣ್ಣು



ಅಂದಕೊಂದಿಷ್ಟು ದೃಷ್ಟಿಬೊಟ್ಟು, ಸುಂದರ ಮನೆಗೆ ದೃಷ್ಟಿ ಗೊಂಬೆ
ಇಟ್ಟುಕೊಳ್ಳುವವರಿಗೆ ತೊರ್ಪಡಿಕೆಯ ಆಸೆಯಿದ್ದರೂ, ನೋವಿದ್ದರೂ,
ಒಳಗೊಳಗೆ ಹೊರಗಿನವರ ಕಣ್ಣಾಸರೆಯ ಭಯ...
ಅಂದದ ದೇಹದ ಮನೆಯು ಬೆಳೆದು ಸುಂದರವಾಗಿ
ನಿಂತಿರುವುದು.
ಪರರ ಕಣ್ಣು ಅದರ ಮೇಲೆ ಬಿದ್ದಿರಲೂಬಹುದು.
ಬೀಳುವವರ ಕಪ್ಪು ಕಣ್ಣಿಗೆ ಇನ್ನೊಂದು ಕೆಟ್ಟ ಕಣ್ಣು...
ಸುಣ್ಣ ಬಣ್ಣವ ಮಾಡಿ, ಅಂಗಳದಿ ಸಗಣಿಯ ಸಾರಿಸಿ
ರಂಗೋಲಿ ಕುಂಕುಮ ಅರಿಶಣ ಧಾರೆ ಎರೆದು
ಬಾಗಿಲ ತೋರಣದ ಸಿಂಗಾರದ ಮೊಗಕೆ ಒಂದು ಕಪ್ಪುಚುಕ್ಕೆ.
ಹುರಿಹುರಿಯ ದಪ್ಪ ಮೀಸೆಯ ಖಾರ ಬಣ್ಣದ
ಮುಖವಾಡ ಮನೆಯ ದೇಹದ ಮೇಲೆ.
ಕಣ್ಣು ಬಿದ್ದರೂ, ಆಸೆಪಟ್ಟರೂ ದೇಹದ ಮೇಲಿನ
ಮಾನವ ಪ್ರೀತಿಯ ಮೋಹ ಮಾತ್ರ ತೀರುತ್ತಿಲ್ಲ.
ದೃಷ್ಟಿಗೊಂಬೆ, ಕಪ್ಪು ಚುಕ್ಕೆ
ಬರೀ ನೇಪತ್ಯಕಷ್ಟೇ!