ಮನಸ್ಸಿಗೆ ಸದಾ ಬುದ್ದಿಯ ಒದೆ..
ಬುದ್ದಿಗೆ ಮನಸ್ಸಿನ ಸೆರೆ..
ದೇಹಕೆ ಸದಾ ಉಸಿರಿನ ಹೊರೆ..
ತಡೆಯ ಸುಳಿಯ ಉಸಿರಾಟ
ಕೆಲವೊಮ್ಮೆ ನಮ್ನನ್ನು ಕಾಡುತ್ತದೆ,
ಕೆಲವೊಮ್ಮೆ ಜೀವ ನೀಡುತ್ತದೆ. ಹಾಗಂತ
ಉಸಿರಿಗೆ ಅರಿವಿಲ್ಲದೇ ನಾವು ಇರಲು ಸಾಧ್ಯವೇ..?
ಬುದ್ದಿಯ ತೂಗುಕತ್ತಿ ಇರದಿದ್ದರೇ ಮನಸಿಗೆ
ಹೇಳುವರ್ಯಾರು?
ಇರುವ ಸತ್ಯ ಇರಲೇಬೇಕು. ಮಿಥ್ಯದ ಪರಿಧಿಗೆ
ಬೇಲಿ ಇರಲೇಬೇಕು
ಅಂಗೈ ಸಾಮ್ರಾಜ್ಯದ ಒಡೆಯರು ನಾವು.
ಬುದ್ದಿ,ಮನಸ್ಸುಗಳ ಕುದುರೆ ಕಟ್ಟಿ, ಉಸಿರಿನ
ಚಾಟಿ ಏಳೆದುಕೊಂಡು
ಬಿಡು ನಿನ್ನ ಬದುಕಿನ ಗಾಡಿಯನ್ನ,
ಹಿಡಿಯುವರಾರು ನಿನ್ನನ್ನ..!