ಮನಸ್ಸಿಗೆ ಸದಾ ಬುದ್ದಿಯ ಒದೆ..
ಬುದ್ದಿಗೆ ಮನಸ್ಸಿನ ಸೆರೆ..
ದೇಹಕೆ ಸದಾ ಉಸಿರಿನ ಹೊರೆ..
ತಡೆಯ ಸುಳಿಯ ಉಸಿರಾಟ
ಕೆಲವೊಮ್ಮೆ ನಮ್ನನ್ನು ಕಾಡುತ್ತದೆ,
ಕೆಲವೊಮ್ಮೆ ಜೀವ ನೀಡುತ್ತದೆ. ಹಾಗಂತ
ಉಸಿರಿಗೆ ಅರಿವಿಲ್ಲದೇ ನಾವು ಇರಲು ಸಾಧ್ಯವೇ..?
ಬುದ್ದಿಯ ತೂಗುಕತ್ತಿ ಇರದಿದ್ದರೇ ಮನಸಿಗೆ
ಹೇಳುವರ್ಯಾರು?
ಇರುವ ಸತ್ಯ ಇರಲೇಬೇಕು. ಮಿಥ್ಯದ ಪರಿಧಿಗೆ
ಬೇಲಿ ಇರಲೇಬೇಕು
ಅಂಗೈ ಸಾಮ್ರಾಜ್ಯದ ಒಡೆಯರು ನಾವು.
ಬುದ್ದಿ,ಮನಸ್ಸುಗಳ ಕುದುರೆ ಕಟ್ಟಿ, ಉಸಿರಿನ
ಚಾಟಿ ಏಳೆದುಕೊಂಡು
ಬಿಡು ನಿನ್ನ ಬದುಕಿನ ಗಾಡಿಯನ್ನ,
ಹಿಡಿಯುವರಾರು ನಿನ್ನನ್ನ..!
ಸೊಗಸಾದ ಕನವರಿಕೆ ಶ್ರೀಧರ್.ಮಿಥ್ಯದ ಪರಿಧಿಗೆ
ReplyDeleteಬೇಲಿ ಇರಲೇಬೇಕು.
...............ಚಾಟಿ ಏಳೆದುಕೊಂಡು
ಬಿಡು ನಿನ್ನ ಬದುಕಿನ ಗಾಡಿಯನ್ನ,
ಹಿಡಿಯುವರಾರು ನಿನ್ನನ್ನ..! ಈ ಸಾಲುಗಳಂತೂ ಅನನ್ಯವಾದ ಅರ್ಥಹೊಂದಿವೆ.ಇಷ್ಟವಾಯಿತು.
ಚೆನ್ನಾಗಿದೆ ಸರ್... ನಿಮ್ಮ ಸಂಪೂರ್ಣ ಕವಿತೆಯನ್ನು ಪ್ರಕಟಿಸಿ ನಂತರ ಕೊಂಡಿ ಕೊಟ್ಟರೆ ನಿಮಗೆ ಇನ್ನೂ ಹೆಚ್ಚಿನ ಓದುಗರು ಸಂದಾಯವಾಗುತ್ತಾರೆ. ಒಂದು ಉತ್ತಮ ಮತ್ತು ಗಟ್ಟಿ ಕವಿತೆ. ಮನಸ್ಸು ಮತ್ತು ಬುದ್ಧಿಯ ನಡುವೆ ಯಾವಾಗಲೂ ಒಂದು ಸ್ಪಂದನೆಯ ಬೇಲಿಯಿರುತ್ತದೆ. ಕೆಲವೊಮ್ಮೆ ದಾಟಿ ಒಂದಾಗಿಬಿಡುತ್ತವೆ. ಹಲವೊಮ್ಮೆ ಮುಸಿಕೊಂಡು ಮುದುಡಿ ಕುಳಿತುಬಿಡುತ್ತವೆ. ತೆರೆದುಕೊಂಡ ಪ್ರಪಂಚದಲ್ಲಿ ಚಿಂತನೆಯ ಚಿಂತೆಯಾಗಿ ಈ ಎರಡೂ ಅಪ್ರಬುದ್ಧತೆಯ ನೆರಳಿನಲ್ಲಿ ಸೊರಗಿಬಿಡುತ್ತವೆ. ಇಂತಹ ಒಂದು ಗಟ್ಟಿಕವಿತೆಯನ್ನು ಓದಿ ಖುಷಿಪಟ್ಟೆ. ಹೆಚ್ಚು ನಮ್ಮೊಡನೆ ಹಂಚಿಕೊಳ್ಳಿ. ವಂದನೆಗಳು ತಮಗೆ.....
ReplyDelete