ಬದುಕು ಬವಣೆಯ ಸುತ್ತ ನನ್ನ ಕನ್ನಡಿ
ಪ್ರತಿಬಿಂಬದ ತುಂಬಾ ಬರೀ ಬೆತ್ತಲು...
ದೇವರು ಕೊಟ್ಟಿರುವುದಷ್ಟೇ.
ಸುಂದರದೇಹ, ಪ್ರತಿಭೆ, ಹಣ, ಅಧಿಕಾರ, ಸಂಬಂಧಗಳು
ಆದರೂ ಅಸಂತೋಷ, ಅಸಂತೃಪ್ತಿ.
ಇನ್ನೂ ಬೇಕಿತ್ತೇನೋ? ಇನ್ನೂ ಚೆನ್ನಾಗಿರಬೇಕಿತ್ತೇನೋ!
ಏನೂ ಅನುಭವಿಸಲಿಲ್ಲವಲ್ಲ...! ಸಿಗಬೇಕಾದುದು ಸಿಗಲಿಲ್ಲವಲ್ಲ?
ಅಯ್ಯೋ..
ಮುಗಿಯದ ಆಸೆಗಳು, ತೀರದ ಬಯಕೆಗಳು..
ದೇಹವನು ನೋಡಿ ಮನಸು ಹೇಳುವುದು
ನೂರೆಂಟು ನೋವುಗಳನು..!
ಅಂತ್ಯವಿರದ ಅಲೆಗಳು ಇವು.
ಮನಸ್ಸಿಗೆ ಜೀವ ಶಾಶ್ವತ, ದೇಹಕ್ಕೆ ಜೀವ ಶಾಶ್ವತವೇ?
ಕಣ್ಣು ಕಗ್ಗತ್ತಲು, ಬಾಗಿದ ದೇಹ, ಸವೆದ ಮೂಳೆಗಳು
ರಕ್ತ ಇಲ್ಲದ ಮಾಂಸದ ಬಾಗಿನವು
ಬದುಕ ಕೊನೆಯಲ್ಲೂ ನೂರೆಂಟು ಯೋಚನೆಗಳು
ದೇಹ ಕೊಳೆಯಿತು, ಮಣ್ಣು ಸೇರಿತು.
ಅಂತೂ ಮನಸ್ಸಿಗೆ ನೆಮ್ಮದಿಯಿಲ್ಲ
ಸಾಯೂವರೆಗೂ...!