Thursday, 25 October 2012

ಕೈಗುಣ


ಅವಳ ಜೊತೆ ಮಾತನಾಡಿದ್ದು

ಇನ್ನೂ ಹಸಿಯಾಗಿದೆ.

ಒಣ ಮಣ್ಣಿಗೆ ಪ್ರೀತಿಯ ನೀರನು ಹಾಕಿ

ಕಿವುಚಿ ಹದ ಮಾಡಿದ ಆಕೆಯ ಕೈಗುಣ

ಬಲು ಚೆಂದ.

ಹಸಿ ಪಸಿ ಬಣ್ಣನಲಿ ಅಂದದ ಗೊಂಬೆಯನು ಮಾಡಿ

ನನಗೆ ಉಡುಗೊರೆಯಾಗಿ ನೀಡಿದ್ದಳು.

ಅವಳು ಕೊಟ್ಟಿದ್ದು ಇಷ್ಟವಾಯಿತು.

ಮನಸ್ಸಿನ ಅತಿಥಿಯಾಯಿತು.

ಈಗ

ಮನದ ಅತಿಥಿ ಮನೆ ಬಿಟ್ಟು ಹೋಗುತ್ತಿಲ್ಲ

ಹೋಗು ಅನ್ನಲಿಕ್ಕೂ ನನಗೆ ಇಷ್ಟವಿಲ್ಲ

ಇರುವಷ್ಟು ದಿನ ಇರು

ಅಲ್ಲಿವರೆಗೂ ನನ್ನ ಕಾಯುತಿರು

ಮಾಯೆಯ ನಾ ಅರಿಯಲಾರೆ.