Sunday, 30 October 2011

ಉಸಿರವೊಲನುಕ್ಷಣಂ…


ಅವಳಿಲ್ಲದ ಅವಳೊಳಗಿನ  ಒಣಮನಸಿಗೆ
ನಾ ಕೊಟ್ಟ ಉತ್ತರಗಳು ನೂರಾರು
ನನ್ನ ಮೇಲಿನ ದಾಹ ಇಷ್ಟಕ್ಕೆ ಮುಗಿಯಿತೇ.!
ತೀರದ ದಾಹಕ್ಕೆ ಏಣಿಕೆ,ಕುಣಿಕೆಗಳ ಅರ್ಪಣವು ಸರಿಯೇ
ಬಸಿದಿಟ್ಟ ಅವಳ ಪ್ರೀತಿ ಚಿಮ್ಮುವ ಕಡಲು
ಅವಳ ಸ್ಪರ್ಷ,ನಸುನಗೆ, ಆಡಿದ ನೂರಾರು ಮಾತುಗಳು
ಹತ್ತು ಜನುಮಕ್ಕಾಗುವಷ್ಟು ಒಡಲು ತುಂಬಿದ ಅವಳ ಪ್ರೀತಿ
ಸಂಕಲನ,ವ್ಯವಕಲನ,ಗುಣಾಕಾರ,ಭಾಗಾಕಾರ ಹಾಕಿದರೂ
ನಾನಿಟ್ಟ ಅವಳ ಮೇಲಿನ ಪ್ರೀತಿ ಶೂನ್ಯವೆನ್ನುವಳು ಅವಳು..
ಆಸೆ ಬಲೆಯನು ಬೀಸಿ,ಋಣವ ಮೊಟೆಯ ಹೊರಿಸಿ
ಹೋದವಳಿಗೆ, ಮುಟ್ಟು ನಿಂತ ಮೇಲಾದರೂ ನಾ ನೆನಪಾದರೆ ಸಾಕು….
ಎಲ್ಲೆಲ್ಲಿಯುಂ ಮೋಹ, ನಾಶವಾಗುವುದೆಂದೋ…?