(ಹೊಸದಾಗಿ ಕೊಂಡ ಪೆನ್ನು ಹೇಗೆ ಬರೆಯುತ್ತೋ , ಇಲ್ಲವೋ ಅನ್ನುವ ಅಳುಕಿತ್ತು. ಸರ್, ಈ ಹಾಳೇ ಮೇಲೆ ಗೀಚಿ ನೋಡಿ, ಆಮೇಲೆ ತಗೋಳ್ಳಿ ಅಂತ ಅಂಗಡಿಯವ ಅಂದ. ಕೊಟ್ಟ ತುಂಡು ಹಾಳೆಯಲ್ಲಿ ಹೊಸ ಪೆನ್ನಿನಿಂದ ಗೀಚಿದ 5 ಸಾಲುಗಳು ಹೀಗಿದ್ದವು. ಪೆನ್ನು ಇಷ್ಟವಾಯಿತು)
ಅವಳು ಇಷ್ಟಪಟ್ಟಳು
ನಾನು ಇಷ್ಟಪಟ್ಟೆ..
ಯಾಕೋ,ಏನೋ.. ಅದು ಸರಿಹೊಂದಲೇ ಇಲ್ಲ
ಸರಿಯಾಗುವ ಲಕ್ಷಣ ಕೂಡ ಕಾಣಲಿಲ್ಲ
ಅವಳು ದೂರ ಸರಿದಳು.
ನಾ ಸರಿಯಲಿಲ್ಲ.
ನನಗಿನ್ನೂ ಅವಳ ಗುಂಗು ಹೋಗಿಲ್ಲ
ನಾನು ಇನ್ನೂ ಅಲ್ಲೇ ನಿಂತಿದ್ದೇನೆ
ಮತ್ತೇ ಬರುವಳೇ
ಎಂಬುದಾಗಿ...
ಅವಳು ದೂರ ಸರಿದಳು.
ನಾ ಸರಿಯಲಿಲ್ಲ.
ನನಗಿನ್ನೂ ಅವಳ ಗುಂಗು ಹೋಗಿಲ್ಲ
ನಾನು ಇನ್ನೂ ಅಲ್ಲೇ ನಿಂತಿದ್ದೇನೆ
ಮತ್ತೇ ಬರುವಳೇ
ಎಂಬುದಾಗಿ...