ಅವಳ ಮಾತು ರುಚಿಯಾಗಿರಲಿಲ್ಲ..
ರುಚಿಯಾಗದಿದ್ದುದು ನನಗೆ ಮಾತ್ರ..!
ಜಾಸ್ತಿ ಖಾರ, ಸ್ವಲ್ಪ ಸಿಹಿ,
ಸಿಹಿಗೂ ಸಕ್ಕರೆ ಕಡಿಮೆ...
ಉಪ್ಪಿನ ಭಾರ ಇಳಿಸದೇ ಮಾಡಿದ ಅಡಿಗೆ,
ಬಾಯಿಗೆ ಹತ್ತಲಿಲ್ಲ, ನಾಲಿಗೆ ಖುಷಿಯಾಗಲಿಲ್ಲ.
ಒಳಗಿನ ಎಳಸು ಮಾತು, ಅದಕ್ಕೆ ತೋರಿದ ಕೆಟ್ಟ ನಗೆ,
ಟೊಳ್ಳು ತೋರ್ಪಡಿಕೆಯ ಕಣ್ಣಿನ ಪ್ರೀತಿ.
ಅವಳ ಒಣಜಂಭದ ಮಾತುಗಳು ಬರೀ ಉಪ್ಪುಪ್ಪು...!
ಕೊಳಕು ನೀರನು ಹಾಕಿ, ರುಚಿಯ ಅನ್ನವ ಬಸಿಯದೇ..
ಸುಂದರ ಮುಖವ ತೊಟ್ಟು, ಚಿನ್ನದ ತಟ್ಟೆಯಲಿ ಬಡಿಸಿ,
ಒಳಗಿನ ಕಹಿಯನ್ನು ಹೊರಹಾಕಿದ್ದಳು.
ಒಳಗಿನ ಸ್ವಾದವ ಮರೆತು,
ಚೆಂದದ ಮುಖಕೆ ಮರುಳಾಗಿ ಉಣ್ಣುವರೆಷ್ಟೋ..!
ಕಪಟತನದ ಮನೆಯಲ್ಲಿ ಮಾಡಿದ ಅಡಿಗೆ
ರುಚಿಯಾಗುವುದೇ..! ಇಷ್ಟವಾಗುವುದೇ..?
ಎಲ್ಲರದೂ ಒಂದೇ ಮಾತು, ಅದೇ ನೋವು
ಮತ್ತೆ
ಹೊಟ್ಟೆ ಖಾಲಿಯಾಗಿದೆ. ರುಚಿಯಾದ ಊಟ ಬೇಕಾಗಿದೆ.
ಒಳ್ಳೆಯ ಬಾಣಸಿಗರು ಬೇಕಾಗಿದ್ದಾರೆ.
ಎಲ್ಲರಿಗೂ...