ಸಿನಿಮಾ ಪ್ರಕಾರದಲ್ಲಿ ಎಲ್ಲ ರೀತಿಯ ಹಾಡುಗಳನ್ನು ಹಾಗೂ ಸಂಗೀತ
ಬರೆದಿರುವ ವಿ. ಮನೋಹರ್, ಕನ್ನಡ ಕಿರುತೆರೆಯ ಬಹಳಷ್ಟು ಸೀರಿಯಲ್ಗಳಿಗೂ ಕೂಡ ಸಂಗೀತ ನೀಡಿದ್ದಾರೆ, ಹಾಡುಗಳನ್ನು ಬರೆದಿದ್ದಾರೆ. ಅವರು
ಹಾಡಿ, ಅಭಿನಯಿಸಿದ್ದ ಫಣಿ ರಾಮಚಂದ್ರರ `ದಂಡಪಿಂಡಗಳು' ಹಾಡು ಇಂದಿಗೂ ಪ್ರಸ್ತುತ. ಫಣಿರಾಮಚಂದ್ರ,
ಸಿಹಿಕಹಿ ಚಂದ್ರು, ರವಿಕಿರಣ್, ಪಿ. ಶೇಷಾದ್ರಿಯಂತಹ ಯಶಸ್ವಿ ನಿರ್ದೇಶಕರ ಸೀರಿಯಲ್ಗಳಿಗೆ ಮನೋಹರ್
ಸಂಗೀತ ಮತ್ತು ಹಾಡು ಖಾಯಂ ಆಗಿಬಿಟ್ಟಿದೆ. ಹೀಗೆ ಕಳೆದ ಒಂದೂವರೆ ದಶಕಗಳಿಂದ ಕನ್ನಡ ಕಿರುತೆರೆಗೆ ತಮ್ಮ
ಸಂಗೀತ ಹಿನ್ನೆಲೆಯಿಂದ ಗಣನೀಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಒಟ್ಟಾರೆಯಾಗಿ ಟೀವಿಯನ್ನು `ಬಣ್ಣದ
ಪೆಟ್ಟಿಗೆಯಲ್ಲಿ ತೆರೆದ ವಿಶ್ವ' ಅಂತ ಬಣ್ಣಿಸುವ ವಿ. ಮನೋಹರ್, ಕಿರುತೆರೆಗೆ ನೀಡಿದ ಸೇವೆ, ಟೀವಿ
ವಾಹಿನಿಗಳ ಬಗ್ಗೆ ಅವರ ಚಿಂತನೆಗಳು, ವಿರೋಧಗಳ ಕುರಿತು ಅವರು ಹಂಚಿಕೊಂಡ ಮಾತುಗಳ ಒಂದು ನೋಟ ಇಲ್ಲಿದೆ.
ನನ್ನ ಕನಸಿನ ಆರಂಭ
1985ರ ಆಸುಪಾಸಿನಲ್ಲಿ ದೂರದರ್ಶನದ ಕಾರುಬಾರು ಪ್ರಾರಂಭವಾದಂತಹ
ಸಂದರ್ಭದಲ್ಲಿ, ನನಗೂ ದೂರದರ್ಶನಕ್ಕೆ ಒಳ್ಳೆಯ ಸೀರಿಯಲ್ ಮಾಡಬೇಕು ಅಂತ ಆಸೆ ಬಂದಿತ್ತು. ಆಗ ನಾನು `ಅರಗಿಣಿ' ಪತ್ರಿಕೆಯಲ್ಲಿ ಕೆಲಸ ಮಾಡ್ತಾ ಇದ್ದೆ.
ಆ ಸಮಯದಲ್ಲಿ ರವಿಕಿರಣ್ ಹಾಗೂ ವಿಶ್ವವಿಜೇತ ಇವರಿಬ್ಬರೂ ಸೇರಿ ಸಿನಿಮಾ ವಿಷಯಕ್ಕೆ ಸಂಬಂಧಪಟ್ಟಂತೆ
ಒಂದು ಕಾಮಿಡಿ ಸೀರಿಯಲ್ ಮಾಡ್ತಾ ಇದ್ರು. ಅವ್ರು ನನಗೆ ಈ ಸೀರಿಯಲ್ಗೆ ಹಾಡು ಮತ್ತು ಟೈಟಲ್ ಡಿಸೈನ್
ಮಾಡಲಿಕ್ಕೆ ಕೆಲಸ ಕೊಟ್ರು. ಅಲ್ಲಿಂದ ನನ್ನ ಈ ಕಿರುತೆರೆ ನಂಟು ಬೆಳೆಯಲಿಕ್ಕೆ ಪ್ರಾರಂಭವಾಯಿತು. ಇದಾದ
ಮೇಲೆ ನಾನು ಮತ್ತೆ ಸಿನಿಮಾದಲ್ಲಿ ತುಂಬಾ ಬ್ಯುಸಿ ಆಗಿಬಿಟ್ಟೆ. ಸಿನಿಮಾ ಕೆಲಸಗಳ ನಡುವೆ ಸೀರಿಯಲ್
ಕೆಲಸಗಳನ್ನು ಮಾಡಲು ಸಾಧ್ಯವಾಗಲೇ ಇಲ್ಲ. ಸಿನಿಮಾದಂತೆ ಟೀವಿಯಲ್ಲೂ ಏನಾದರೂ ಮಾಡಬೇಕೆಂದು ಕಾತುರದಿಂದ
ಕಾಯ್ತಾ ಇದ್ದೆ. ಬಹಳ ವರ್ಷಗಳ ನಂತರ ಉದಯಟೀವಿಯಲ್ಲಿ ಸೀರಿಯಲ್ ಮಾಡುತ್ತಿದ್ದ ಫಣಿ ರಾಮಚಂದ್ರ ಅವರಿಂದ
ನನಗೊಂದು ಬ್ರೇಕ್ ಸಿಕ್ತು. ಅದು 'ದಂಡಪಿಂಡಗಳು' ಸೀರಿಯಲ್.
ಈ ಧಾರಾವಾಹಿಯಲ್ಲಿ ನಾನು ಹಾಡಿದ್ದ `ದಂಡಪಿಂಡಗಳು ಇವರು ದಂಡಪಿಂಡಗಳು...' ಹಾಡು ಸಖತ್ ಹಿಟ್ ಆಗಿಬಿಡ್ತು.
ಈಗಲೂ ಕೂಡ ಆ ಹಾಡನ್ನು ಮರೆಯಲಿಕ್ಕೆ ಸಾಧ್ಯವಿಲ್ಲ ಅಷ್ಟು ಚೆನ್ನಾಗಿದೆ ಆ ಹಾಡು. ಹೆಚ್ಚಿನವರು ಈ ಹಾಡನ್ನು ನಾನೇ ಕಂಪೋಸ್ ಮಾಡಿದ್ದೇನೆ ಅಂತ
ಎಲ್ಲರೂ ಅಂದುಕೊಂಡಿದ್ದಾರೆ. ಯಾಕೆಂದರೆ ಆ ಹಾಡನ್ನು ನಾನೇ ಹಾಡಿದ್ದೇನೆ, ಜೊತೆಗೆ ಆ್ಯಕ್ಟ್ ಕೂಡ ಮಾಡಿದ್ದೇನೆ.
ಈ ಹಾಡನ್ನು ಕಂಪೋಸ್ ಮಾಡಿದ್ದು ರಾಜೇಶ್ ರಾಮನಾಥನ್. ಫಣಿ ರಾಮಚಂದ್ರ ಹಾಗೂ ನಾನು ಇಬ್ಬರು ಸೇರಿ ಆ
ಹಾಡನ್ನು ಬರೆದಿದ್ವಿ. ಈ ಹಾಡು ಹೀಗೆ ಬರಬೇಕು, ಈ ಸಾಲುಗಳೇ ಬರಬೇಕು ಅಂತ ಫಣಿ ಅವರು ಹೇಳಿದ್ದರಿಂದ,
ಆ ಹಾಡು ತುಂಬಾ ಅರ್ಥಪೂರ್ಣವಾಗಿ, ವಿಡಂಬನೆಯಿಂದ ಮೂಡಿಬಂದಿತು. ಹಾಡು ರೆಡಿಯಾದ ಮೇಲೆ ಫಣಿ ಅವರು ನೀವೇ
ಇದಕ್ಕೆ ಆ್ಯಕ್ಟ್ ಮಾಡಬೇಕು ಅಂತ ಹೇಳಿದ್ರು. ನಾನು ನಾರದನ ಪಾತ್ರಕ್ಕೆ ಅನಂತ್ನಾಗ್ ಸೂಟ್ ಆಗ್ತಾರೆ
ಅವರನ್ನು ಹಿಡಿದು ಮಾಡಿಸಿ ಅಂತ ಹೇಳಿದೆ. ಅದಕ್ಕೆ ಅವ್ರು ಕೇಳಲಿಲ್ಲ. ನೀವೇ ಮಾಡಬೇಕು ಅಂತ ಹೇಳಿದ್ರು.
ಕೊನೆಗೆ ನಾನೇ ಸೋತು, ನಾರದನ ವೇಷ ಹಾಕ್ಕೊಂಡು ತುಂಬಾ ಕಷ್ಟಪಟ್ಟು ಶೂಟಿಂಗ್ ಮುಗಿಸಿದೆ. ಈ ಹಾಡನ್ನು
ಮಾಡುವಾಗಲೂ ನನಗೊಂದು ಹೆದರಿಕೆ ಕಾಡ್ತಾ ಇತ್ತು. ಏಕೆಂದರೆ ನಾನು ಮೊದಲಬಾರಿ ಟೀವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದೆ
.
'ದಂಡಪಿಂಡಗಳು' ನನ್ನ ಕಿರುತೆರೆ ಜೀವನಕ್ಕೆ ಟರ್ನಿಂಗ್ ಪಾಯಿಂಟ್!
'ದಂಡಪಿಂಡಗಳು' ಹಾಡಿನ ನಂತರ ನಾನು ಮತ್ತೆ ಸಿನಿಮಾದಲ್ಲಿ ಬ್ಯುಸಿಯಾದೆ. ಒಮ್ಮೆ ನಾನು
ರಾಮೋಜಿರಾವ್ ಸ್ಟುಡಿಯೋದಲ್ಲಿದ್ದಾಗ ನಟ ವೆಂಕಿ ಬಂದು `ಏನ್ ಸರ್, ನಿಮ್ಮ ದಂಡಪಿಂಡಗಳು ಹಾಡು ಕನರ್ಾಟಕದಲ್ಲಿ
ತುಂಬಾ ಹಿಟ್ ಆಗಿದೆ. ಎಲ್ರೂ ಈ ಹಾಡಿಗೆ ತುಂಬಾ ಫ್ಯಾನ್ಸ್ ಆಗಿಬಿಟ್ಟಿದ್ದಾರೆ' ಅಂತ ಹೇಳಿದ. ಆರಂಭದಲ್ಲಿ ವೆಂಕಿ ಮಾತನ್ನು ನಾನು ನಂಬಲಿಲ್ಲ. ಆತ ತುಂಬಾ
ಪರಿಚಯ ಇದ್ದುದರಿಂದ ಸುಮ್ನೆ ನನ್ನ ಖುಷಿಗೆ ಹೇಳಿದ್ದಾನೆ ಅಂತ ನಾನು ಸುಮ್ಮನಾಗಿಬಿಟ್ಟೆ. ಹೈದರಾಬಾದಿನಿಂದ
ಕೆಲಸ ಮುಗಿಸಿಕೊಂಡು ನಾನು ಬೆಂಗಳೂರಿಗೆ ಬಂದಾಗಲೇ ಗೊತ್ತಾಗಿದ್ದು, ಇಡೀ ಕನರ್ಾಟಕದವರೆಲ್ಲರೂ ದಂಡಪಿಂಡಗಳು
ಹಾಡನ್ನು ತುಂಬಾ ಇಷ್ಟಪಟ್ಟಿದ್ರು. ಚಿಕ್ಕಚಿಕ್ಕ ಮಕ್ಕಳು ಕೂಡ ಈ ಹಾಡನ್ನು ಹೇಳ್ತಾ ಇರೋದನ್ನು ಕೇಳಿ,
ನನಗಾದ ಖುಷಿ ಅಷ್ಟಿಷ್ಟಲ್ಲ. ಇಡೀ ಸೀರಿಯಲ್ಗೆ ದಂಡಪಿಂಡಗಳು ಹಾಡು ಹೈಲೈಟ್ ಆಗಿಬಿಡ್ತು. ನಮ್ಮ ಕನರ್ಾಟಕದಲ್ಲಿ
ಮಾತ್ರವಲ್ಲ, ಆಂಧ್ರ ಪ್ರದೇಶ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ ಹೀಗೆ ಅರ್ಧಭಾರತದಲ್ಲಿ ಈ ಹಾಡು
ತುಂಬಾ ಜನಪ್ರಿಯವಾಗಿಬಿಡ್ತು. ಬೇರೆ ರಾಜ್ಯಗಳಲ್ಲಿನ ಜನರೂ ಕೂಡ ಈ ಹಾಡನ್ನು ನೋಡಿ, ಆಮೇಲೆ ತಮ್ಮ ಚಾನೆಲ್ಗಳನ್ನು
ನೋಡ್ರಿದ್ರಂತೆ. ಇಂತಹ ಅದ್ಭುತ ಬೆಳವಣಿಗೆಯನ್ನು ಈ ಹಾಡು ಕನ್ನಡದಲ್ಲಿ ಮಾಡಿತ್ತು. ಒಂದು ಲೆಕ್ಕದಲ್ಲಿ
ಧಾರಾವಾಹಿ ಇತಿಹಾಸದಲ್ಲಿ ಈ ಹಾಡು ಸಣ್ಣ ಕ್ರಾಂತಿ ಅಂದರೂ ತಪ್ಪೇನಿಲ್ಲ. ಅಲ್ಲಿಯವರೆಗೆ ಸೀರಿಯಲ್ಗಳಿಗೆ
ಶೀಷರ್ಿಕೆ ಗೀತೆ ಬೇಕು, ಅದಕ್ಕೊಂದು ದೃಶ್ಯ ಮಾಡಬೇಕು ಅಂತ ಯಾರು ಅಂದುಕೊಂಡಿರಲಿಲ್ಲ. ಅಂತಹ ಬದಲಾವಣೆಯನ್ನು
ದಂಡಪಿಂಡಗಳು ಶೀಷರ್ಿಕೆ ಗೀತೆ ಸಾಧಿಸಿ ತೋರಿಸಿತ್ತು. ಹೀಗೆ ಮತ್ತೆ ನಾನು ಕಿರುತೆರೆಯಲ್ಲಿ ಜನಪ್ರಿಯತೆ
ಸಿಗಲಿಕ್ಕೆ ಪ್ರಾರಂಭವಾದೊಡನೆ, ನಾನು ಹೆಚ್ಚೆಚ್ಚು ಟೀವಿಯಲ್ಲಿ ತೊಡಗಿಸಿಕೊಳ್ಳಲಿಕ್ಕೆ ಪ್ರಾರಂಭಿಸಿದೆ.
ಅನೇಕ ಸೀರಿಯಲ್ಗಳಿಗೆ ಶೀಷರ್ಿಕೆ ಗೀತೆಗೆ ಸಂಗೀತ ಮಾಡಿದೆ. ಬೇರೆ ಸಂಗೀತ ನಿದರ್ೆಶಕರ ಟ್ಯೂನ್ಗೆ ಹಾಡುಗಳನ್ನು
ಕೂಡ ಬರೆದೆ. ಹೀಗೆ ಅಂದಿನಿಂದ ಇಂದಿನವರೆಗೆ ಸುಮಾರು 30ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಸಂಗೀತ ನಿದರ್ೆಶನ
ಮಾಡಿರಬಹುದು.
ಶೀರ್ಷಿಕೆ ಗೀತೆಗಳ ಬಂಪರ್ ಮಳೆ !
`ದಂಡಪಿಂಡಗಳು' ಹಾಡು ಜನಪ್ರಿಯವಾದೊಡನೆ ನನ್ನ ಹಾಗೂ ಫಣಿ
ರಾಮಚಂದ್ರರ ಕಾಂಬಿನೇಷನ್ನಲ್ಲಿ ಅನೇಕ ಹಾಡುಗಳು ಮೂಡಿಬಂದವು. ಫಣಿ ನಿದರ್ೆಶನದ `ಪ್ರೇಮ ಪಿಶಾಚಿಗಳು',
`ಜಗಳ ಗಂಟಿಯರು,' `ಸಾಹಸ ಲಕ್ಷ್ಮೀಯರು' ಸೀರಿಯಲ್ಗಳಿಗೆ ಸಂಗೀತ ನೀಡಿದೆ. ಅದಕ್ಕೂ ಮುಂಚೆ ವಾರದ ಧಾರಾವಾಹಿಗಳಾಗಿದ್ದ
`ಟ್ರಿಣ್ ಟ್ರಿಣ್ ಟ್ರಿಣ್', `ದುಡ್ಡು ದುಡ್ಡು ದುಡ್ಡು' ಇವಕ್ಕೆ ಹಾಡು ಬರೆದಿದ್ದೆ. ಮೆಗಾ ಸೀರಿಯಲ್ಗಳು
ಪ್ರಾರಂಭವಾದೊಡನೆ ನಾನು ಹೆಚ್ಚೆಚ್ಚು ಸೀರಿಯಲ್ಗಳಿಗೆ ಕೆಲಸ ಮಾಡಲಿಕ್ಕೆ ಪ್ರಾರಂಭಿಸಿದೆ. ಈ ಟೀವಿ
ಪ್ರಾರಂಭವಾದ ಮೇಲೆ ನನ್ನ ಹಾಗೂ ಸಿಹಿಕಹಿ ಚಂದ್ರು ಅವರ ಕಾಂಬಿನೇಷನ್ನಲ್ಲಿ ಒಳ್ಳೊಳ್ಳೆಯ ಹಾಡುಗಳು
ಬರಲಿಕ್ಕೆ ಶುರುವಾದ್ವು. 'ಪಾಪ ಪಾಂಡು', 'ಸಿಲ್ಲಿ ಲಿಲ್ಲಿ', 'ಯದ್ವಾತದ್ವಾ', 'ಪಾಯಿಂಟ್ ಪರಿಮಳ',
'ಯಾಕ್ಹಿಂಗ್ ಆಡ್ತಾರೋ', 'ಪಾರ್ವತಿ ಪರಮೇಶ್ವರ', 'ಪಾಂಡುರಂಗವಿಠಲ'-ಹೀಗೆ ಸಿಹಿಕಹಿ ಬ್ಯಾನರ್ನ ಎಲ್ಲ
ಕಾಮಿಡಿ ಸೀರಿಯಲ್ಗಳಿಗೆ ನನ್ನ ಹಾಡುಗಳು ತುಂಬಾ ಜನಪ್ರಿಯವಾಗಿದ್ದವು. ಬರೀ ಕಾಮಿಡಿ ಹಾಡುಗಳನ್ನು ಮಾತ್ರ
ನಾನು ಮಾಡಲಿಲ್ಲ. ಕೆಲವು ಗಂಭೀರ ವಿಷಯಗಳನ್ನೊಳಗೊಂಡ ಸೀರಿಯಲ್ಗೂ ನಾನು ಕೆಲಸ ಮಾಡಿದೆ. ಉದಾಹರಣೆಗೆ
ಪಿ. ಶೇಷಾದ್ರಿ ಅವರ 'ಉಯ್ಯಾಲೆ', 'ಮೌನರಾಗ', 'ಚಕ್ರತೀರ್ಥ' ಪ್ರಮುಖವಾದವು. ಮೆಲೋಡಿ ಅಂತ ಬಂದಾಗ
'ಅಂಜಲಿ', 'ಸಪ್ತಪದಿ' ಸೀರಿಯಲ್ಗಳು ಈ ಕ್ಷಣಕ್ಕೆ ನೆನಪಾಗುತ್ತವೆ. ನಾನು ಮ್ಯೂಸಿಕ್ ಮಾಡೋದರ ಜೊತೆಗೆ
ಬೇರೆ ಸಂಗೀತ ನಿದರ್ೆಶಕರ ಟ್ಯೂನ್ಗಳಿಗೆ ಹಾಡುಗಳನ್ನು ಕೂಡ ಬರೆದೆ. ರವಿಕಿರಣ್ ನಿಮರ್ಾಣ ಮಾಡಿರುವ
ಎಲ್ಲ ಸೀರಿಯಲ್ಗಳಿಗೆ ಗುರುಕಿರಣ್ ಮ್ಯೂಸಿಕ್ಗೆ ನಾನು ಹಾಡು ಬರೆದಿದ್ದೇನೆ. `ಬದುಕು', `ಸುಕನ್ಯಾ',
`ಬಾಂಧವ್ಯ', `ನನ್ನವಳು', `ಬೆಳಕು' ಇನ್ನೂ ಹಲವು ಸೀರಿಯಲ್ಗಳನ್ನು ಹೆಸರಿಸಬಹುದು. ನನಗೆ ಒಂದು ಟೈಮಲ್ಲಿ
ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದಾಗ, ಸೀರಿಯಲ್ಗಳಲ್ಲಿ ನನಗೆ ವಿಪರೀತ ಕೆಲಸ ಸಿಕ್ಕಿಬಿಡುತ್ತಿತ್ತು.
ಹಾಗಾಗಿ ಸಿನಿಮಾ ಹಾಗೂ ಟೀವಿ ಎರಡನ್ನೂ ಒಟ್ಟೊಟ್ಟಿಗೆ ಬ್ಯಾಲನ್ಸ್ ಮಾಡ್ತಾ ಕೆಲಸ ಮಾಡ್ತಿದ್ದೆ. ಅದು
ಅಂದಿನಿಂದ ಇತ್ತೀಚಿನ ವರೆಗಿನ `ನೂರೆಂಟು ಸುಳ್ಳು', `ಪಂಚರಂಗಿ ಪೋಂ ಪೋಂ', `ಪಡುವಾರಹಳ್ಳಿ ಪಡ್ಡೆಗಳು'
ವರೆಗೆ ಸಾಗ್ತಾ ಬಂದಿದೆ. ಇದುವರೆಗೆ ನಾನು ಕಂಪೋಸ್ ಮಾಡಿದ ಹಾಡುಗಳಲ್ಲಿ ನನಗೆ ತುಂಬಾ ಇಷ್ಟ ಆಗಿದ್ದ
ಹಾಡುಗಳೆಂದರೆ ಶೇಷಾದ್ರಿಯವರ `ಉಯ್ಯಾಲೆ' ಹಾಗೂ ಟಿ.ಎನ್. ಸೀತಾರಾಮ್ ಅವರ `ಮಾಡು ಮುಟ್ಟದಲ್ಲ'.
`ಸೀರಿಯಲ್' ನಿರ್ದೇಶಕನಾಗುವಾಸೆ...
ನಾನು ಟೀವಿಯಲ್ಲಿ ಸೀರಿಯಲ್ ಮಾಡಲಿಕ್ಕೆ ತುಂಬಾ ಪ್ರಯತ್ನ
ಮಾಡಿದೆ. ನನಗೆ ಕಾಮಿಡಿ ಸೀರಿಯಲನ್ನು ನಿದರ್ೆಶನ ಮಾಡಬೇಕು ಅಂತ ತುಂಬಾ ಆಸೆ ಇತ್ತು. ಆ ಆಸೆ ಈಗ ಕೂಡ
ಇದೆ. ಆದರೆ ಅದು ಆಗುತ್ತಿಲ್ಲವಷ್ಟೇ. ನಾನು ಮೂಲತಃ ಕಾಟರ್ೂನಿಸ್ಟ್ ಆಗಿದ್ದರಿಂದ ಏನಾದರೂ ವಿಡಂಬನೆ
ಇರೋ ವಿಷಯವನ್ನಿಟ್ಟುಕೊಂಡು ಕಾರ್ಯಕ್ರಮ ಮಾಡಬೇಕು ಅಂತ ಯೋಚನೆ ಮಾಡಿದೆ. ಇದನ್ನೇ ಇಟ್ಟುಕೊಂಡು ಈ ಟೀವಿಯಲ್ಲಿ
`ಬುರುಡೆ ಭವಿಷ್ಯ' ಅನ್ನುವ ಕಾರ್ಯಕ್ರಮ ಮಾಡಿದೆ. ನಾನು ಹಾಗೂ ಕಾಸರಗೋಡು ಚಿನ್ನಾ ಇಬ್ಬರೂ ಸೇರಿ ಈ
ಶೋ ಮಾಡಿದ್ವಿ. ಜನ ಈ ಕಾರ್ಯಕ್ರಮವನ್ನು ತುಂಬಾ ಮೆಚ್ಚಿಕೊಂಡಿದ್ರು. ಈವಾಗ ಏನು ಜ್ಯೋತಿಷಿಗಳು ಮಾಡ್ತಾ
ಇದಾರೋ ಅದನ್ನು ನಾನು ಆಗಿನ ಸಮಯದಲ್ಲಿ ತುಂಬಾ ವಿಡಂಬನೆಯಿಂದ ಮಾಡಿದ್ದೆ. ಸುಮಾರು 20 ಎಪಿಸೋಡ್ಗಳನ್ನು
ನಿದರ್ೆಶನ ಮಾಡಿದ್ದೆ. ಈಗಲೂ ನನಗೆ ಒಳ್ಳೊಳ್ಳೆಯ ಧಾರಾವಾಹಿಗಳನ್ನು ನಿರ್ದೇಶನ ಮಾಡುವ ಆಸೆ ಮಾತ್ರ
ಹಾಗೆ ಇದೆ. ನನ್ನತ್ರ ಒಳ್ಳೊಳ್ಳೆ ಕಾನ್ಸಪ್ಟ್ಗಳಿವೆ, ಐಡಿಯಾಸ್ ಇದೆ. ಈಗ ವಾಹಿನಿಗಳು ಕೂಡ ಹೆಚ್ಚಾಗಿವೆ.
ಅವಕಾಶ ಸಿಗಬಹುದೇನೋ ಅನ್ನುವ ನಿರೀಕ್ಷೆ ಇಂದಿಗೂ ಕೂಡ ಇದೆ.
ಎರಡೂ ಛಾಲೆಂಜಿಂಗ್ ಆಗಿವೆ...
ನನ್ನ ಪ್ರಕಾರ ಸಿನಿಮಾ ಹಾಗೂ ಸೀರಿಯಲ್ಗೆ ಸಂಗೀತ ನೀಡುವುದರಲ್ಲಿ
ಎರಡೂ ಛಾಲೆಂಜಿಂಗ್ ಅಂತಾನೇ ಹೇಳ್ಬೋದು. ಸೀರಿಯಲ್ಗೆ ಹಾಡು ಕಂಪೋಸ್ ಮಾಡೋದ್ರಿಂದ ಒಂದು ಉಪಯೋಗ ಅಂದ್ರೆ
ನಮ್ಮ ಹಾಡನ್ನು ನೂರಾರು ಎಪಿಸೋಡ್ಗಳವರೆಗೆ ಜನ ಇಷ್ಟಪಟ್ಟು ಪ್ರತಿದಿನ ಕೇಳ್ತಾರೆ. ಆದರೆ ಸಿನಿಮಾದಲ್ಲಿ
ಒಂದೊಳ್ಳೆಯ ಹಾಡನ್ನು ನಿರ್ಮಾಪಕರು, ನಿರ್ದೇಶಕರು ಚೆನ್ನಾಗಿ ಪ್ರಮೋಟ್ ಮಾಡಿದಾಗ ಮಾತ್ರ ಅದು ಹಿಟ್
ಆಗಲಿಕ್ಕೆ ಸಾಧ್ಯವಾಗುತ್ತೆ. ಅದೇ ಸೀರಿಯಲ್ನಲ್ಲಿ ಜನ ಅದನ್ನು ಪ್ರತಿನಿತ್ಯ ಕೇಳೋದ್ರಿಂದ, ಸಂಗೀತ
ನಿದರ್ೆಶಕರಾದ ನಮಗೆ ಆ ಹಾಡು ನಾಳೆ ಕೂಡ ಕೇಳುವಂತಹ ಕ್ಯೂರಿಯಾಸಿಟಿಯನ್ನು ಉಳಿಸಿಕೊಳ್ಳುವಂತೆ ಮಾಡಬೇಕು
ಅನ್ನುವ ಜವಾಬ್ದಾರಿ ನಮ್ಮ ಮೇಲಿರುತ್ತೆ. ಹಾಗಾಗಿ
ಸೀರಿಯಲ್ ಶೀಷರ್ಿಕೆ ಗೀತೆ ನಿಜಕ್ಕೂ ಸಂಗೀತ ನಿರ್ದೇಶಕರಿಗೆ ದೊಡ್ಡ ಸವಾಲೇ!
ಧಾರಾವಾಹಿಯಲ್ಲಿ ಶೀರ್ಷಿಕೆ ಗೀತೆಗಳು ಉಳಿಯಬೇಕು
ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಹಾಡುಗಳನ್ನು ಕಟ್ ಮಾಡ್ತಾ
ಇದಾರೆ. ಚಾನಲ್ನವರು ಶೀಷರ್ಿಕೆ ಗೀತೆಗಳಿಗೆ ಶತ್ರುಗಳಾಗಿಬಿಟ್ಟಿದಾರೆ.
ಒಂದು ಒಳ್ಳೆಯ ಹಾಡನ್ನು ಕಟ್ ಮಾಡಿ ತೋರಿಸೋದ್ರಿಂದ ಅವ್ರಿಗೆ ಎಷ್ಟು ಒಳ್ಳೆದಾಗುತ್ತೋ ಇಲ್ವೋ ನನಗಂತೂ
ಗೊತ್ತಾಗ್ತಿಲ್ಲ. ಆದರೆ ಜನ ಇಷ್ಟಪಟ್ಟಿರುವ ಶೀಷರ್ಿಕೆ ಗೀತೆಗಳನ್ನು ಉಳಿಸಿಕೊಳ್ಳಬೇಕು, ಅದನ್ನು ಜನ
ಪ್ರತಿನಿತ್ಯ ಆ ಹಾಡನ್ನು ಕೇಳುವಂತಾಗಬೇಕು, ನೋಡುವಂತಾಗಬೇಕು. ನಮಗೆ ಒಂದು ನಿಮಿಷದಲ್ಲಿ ಹಾಡು ಬೇಕು
ಅಂತ ಕೇಳಿದ್ರೆ ನಾವು ಒಂದೇ ನಿಮಿಷದ ಹಾಡನ್ನು ಕೂಡ ಮಾಡಿಕೊಡಬಲ್ಲೆವು. ನನ್ನ ಪ್ರಕಾರ ಹಾಡನ್ನು ಹಾಕದೆ
ಧಾರಾವಾಹಿಯನ್ನು ಪ್ರಾರಂಭಿಸಿದರೆ ಅದು ಅಷ್ಟು ಚೆನ್ನಾಗಿ ಮೂಡಿಬರುವುದಿಲ್ಲ ಅನ್ನುವುದು ನನ್ನ ನಂಬಿಕೆ.
ಟೀವಿಯಿಂದ ಮಕ್ಕಳು ಬುದ್ಧಿವಂತರಾಗಿದ್ದಾರೆ...
ಟೀವಿ ನಿಜಕ್ಕೂ ಬಂದ ಮೇಲೆ ನಮ್ಮ ಮಕ್ಕಳೆಲ್ಲಾ ತುಂಬಾ ಚುರುಕಾದ್ರು.
ಬುದ್ಧಿವಂತರಾದ್ರು. ಟೀವಿಯನ್ನು ನೋಡ್ತಾ ಇಡೀ ಜಗತ್ತನ್ನು ಅರಿತುಕೊಳ್ಳುತ್ತಿದ್ದಾರೆ. ನಮಗೆಲ್ಲಾ
ಪಾಠವನ್ನು ನಮ್ಮ ಅಪ್ಪ ಅಮ್ಮ ಗಿಣಿಪಾಠದ ರೀತಿ ಹೇಳಿ ಕೊಡ್ತಾ ಇದ್ರು. ಆದರೆ ಇಂದು ಟೀವಿ ಎಲ್ಲವನ್ನೂ ಹೇಳಿಕೊಡುವುದರಿಂದ ಮಗು ದೃಶ್ಯಮಾಧ್ಯಮದ ಮೂಲಕ ಬಹುಬೇಗ ಎಲ್ಲವನ್ನು
ಅರಿತುಕೊಳ್ಳುತ್ತಿದೆ. ಹಾಗಾಗಿ ಪಾಲಕರಾದ ನಮ್ಮ ಕರ್ತವ್ಯವೇನಂದರೆ ಒಳ್ಳೊಳ್ಳೆಯ ಕಾರ್ಯಕ್ರಮಗಳು, ವಿಶೇಷವಾಗಿ
ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮಾಹಿತಿಪೂರ್ಣ ಕಾರ್ಯಕ್ರಮಗಳನ್ನು ನೋಡುವಂತೆ ಮಾಡಬೇಕು. ಇದರಿಂದ
ಮಕ್ಕಳ ಬೌದ್ಧಿಕ ಮಟ್ಟ ಬೆಳೆಯುವುದರ ಜೊತೆಗೆ, ನಮ್ಮ ಮಕ್ಕಳನ್ನು ಸರಿದಾರಿಯಲ್ಲಿ ತರುವಂತೆ ಮಾಡಬಹುದು.
ಹೊಸತನ ಕಾಣುತ್ತಿಲ್ಲ...
ಇಂದು ಕನ್ನಡದ ಬಹುತೇಕ ವಾಹಿನಿಗಳಲ್ಲಿ ವೈವಿಧ್ಯತೆ ಇರುವ
ಕಾರ್ಯಕ್ರಮಗಳು ಬರುತ್ತಲೇ ಇಲ್ಲ. ಹೆಣ್ಣಿಗೆ ಹೆಣ್ಣೇ ಶತ್ರು ಅನ್ನುವ ಸಿದ್ಧಾಂತವನ್ನಿಟ್ಟುಕೊಂಡು
ಧಾರಾವಾಹಿಗಳನ್ನು, ಕಾರ್ಯಕ್ರಮಗಳನ್ನು ನಿಮರ್ಾಣ ಮಾಡುತ್ತಿದ್ದಾರೆ. ಹೊಸತನ ಹಾಗೂ ಹೊಸರೂಪದ ಕಾರ್ಯಕ್ರಮಗಳಿಗೆ
ವಾಹಿನಿಯವರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಹಿಂದೆ ಉದಯ ಟೀವಿಯಲ್ಲಿ `ಗೋಧೂಳಿ' ಅನ್ನುವ ಸೀರಿಯಲ್
ಬರುತ್ತಿತ್ತು. ಅದು ಸ್ತ್ರೀ ವೀರತ್ವದ ಕಥೆಯಾಗಿರಲಿಲ್ಲ. ಅದು ಒಂದು ಹಳ್ಳಿಯ ಮಾಮೂಲಿ ಕಥೆ. ಅದು ಮಧ್ಯಾಹ್ನದಲ್ಲಿ
ಪ್ರಸಾರವಾಗುತ್ತಿದ್ದರೂ ಕೂಡ ತುಂಬಾ ಸೂಪರ್ ಹಿಟ್ ಆಗಿತ್ತು. ಕಥೆಯಲ್ಲಿ ವಿಭಿನ್ನತೆ ಬೇಕು, ಜನರು
ಖಂಡಿತ ಅದನ್ನು ಸ್ವೀಕರಿಸುತ್ತಾರೆ.
ನಮಗೆ ವಿಕೃತಿಯ ಟಿಆರ್ಪಿ ಬೇಡ
ವಾಹಿನಿಗಳು ಟಿಆರ್ಪಿ ಬೇಕು ಅನ್ನುವ ಹಠದಲ್ಲಿ ಸಾಗುತ್ತಿರುವ
ಪದ್ಧತಿ ಮಾತ್ರ ನಿಜಕ್ಕೂ ಬೇಸರ ಮೂಡಿಸುತ್ತಿದೆ. ವಿಶೇಷವಾಗಿ ಸುದ್ದಿ ವಾಹಿನಿಗಳು ಹೆಣ್ಣುಮಕ್ಕಳು,
ಸಿನಿಮಾ ನಟಿಯರನ್ನು ಇಟ್ಟುಕೊಂಡು ಅವರ ನಡತೆ, ದಂಧೆಯ ಕುರಿತು ಕಾರ್ಯಕ್ರಮ ಮಾಡುವುದು, ಸಂದರ್ಶನ ಮಾಡುವುದು
ಇವೆಲ್ಲಾ ನೋಡುವ ಸಾಮಾನ್ಯ ಜನರಿಗೆ ಸರಿ ಕಾಣುವುದಿಲ್ಲ. ಮುಖ್ಯವಾಗಿ ಬಡಪಾಯಿ ಹೆಣ್ಣು ಮಕ್ಕಳ ಜೀವನವನ್ನು
ವೈಭವೀಕರಣ ಮಾಡಿ ಟಿಆರ್ಪಿ ಪಡೆದುಕೊಳ್ಳುವುದು ಅಷ್ಟು ಚೆಂದ ಕಾಣುವುದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ
ಆದ ಒಂದು ಬದುಕು ಇರುತ್ತೆ. ಆ ಬದುಕಿನ ಮೂಲಕ ಅವರನ್ನು ಸನ್ಮಾರ್ಗದ ಮೂಲಕ ನಡೆಯುವಂತೆ ಮಾಡಬೇಕು. ಅವಳ
ಹಿಂದೆ ಎಂತಹುದೇ ಕೆಟ್ಟ ಚರಿತ್ರೆ ಇದ್ದರೂ ಅದನ್ನು ಜನರಿಗೆ ಹೇಳದೆ, ಅವಳನ್ನು ಸನ್ಮಾರ್ಗದಲ್ಲಿ ನಡೆಯುವಂತೆ
ಮಾಡಬೇಕೇ ವಿನಃ ವಿಕೃತಿಯನ್ನು ತೋರಿಸುವ ಮೂಲಕ ಟಿಆರ್ಪಿ ಪಡೆದುಕೊಳ್ಳಬಾರದು ಅನ್ನುವುದು ನನ್ನ ನಂಬಿಕೆ.
ಇನ್ನೊಬ್ಬರ ಮನಸ್ಸಿಗೆ ಹಿಂಸೆ ಕೊಟ್ಟು ಅದರಿಂದ ತಮ್ಮ ವಾಹಿನಿಯ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವುದನ್ನು
ನಾನು ಖಂಡಿತ ವಿರೋಧಿಸುತ್ತೇನೆ. ಈ ತರಹದ ಬೆಳವಣಿಗೆಗಳು ಕನ್ನಡ ಸುದ್ದಿವಾಹಿನಿಗಳಲ್ಲಿ ಆಗಬಾರದು ಅನ್ನುವುದು
ಕೂಡ ನನ್ನ ಮನವಿ. ಇತ್ತೀಚೆಗೆ ತೀರಿಕೊಂಡ ಹೇಮಶ್ರೀ ಎಂಬ ಸುಂದರ ನಟಿಯ ಸತ್ತ ದೇಹವನ್ನು ಹೆಚ್ಚು ವೈಭವೀಕರಣ
ಮಾಡುವುದನ್ನು ಬಿಟ್ಟು, ಹಳೆಯ ಫೋಟೋಗಳನ್ನು ಇಟ್ಟುಕೊಂಡು ಅವಳ ಅನುಮಾನಾಸ್ಪದ ಸಾವನ್ನು ಸುದ್ದಿವಾಹಿನಿಗಳು
ತೋರಿಸಬಹುದಾಗಿತ್ತು. ಜನರಿಗೆ ಅವಳ ಪೋಸ್ಟ್ಮಾರ್ಟಂ ಆದ ಹೆಣವನ್ನೇ ತೋರಿಸಿ ತೋರಿಸಿ ತುಂಬಾ ಬೇಸರ ಮೂಡಿಸಿದರು.
ಈ ರೀತಿಯಾಗಿ ಜನರನ್ನು ಕೆರಳಿಸುವಂತಹ ಕಾರ್ಯಕ್ರಮಗಳು
ಆಗಬಾರದು. ವೈಭವೀಕರಣ ಮಾಧ್ಯಮಗಳಲ್ಲಿ ಆಗಬಾರದು ಎಂಬುದು ನನ್ನ ಅಭಿಪ್ರಾಯ ಅಷ್ಟೇ.
ರಿಯಾಲಿಟಿ ಶೋಗಳಿಂದ ಮಕ್ಕಳ ಸಾಧನೆ ಸಾಧ್ಯವಾಗುತ್ತಿಲ್ಲ...
ಮ್ಯೂಸಿಕ್ ರಿಯಾಲಿಟಿ ಶೋಗಳ ಬಗ್ಗೆ ಹೇಳೋದಾದ್ರೆ, ಇಂದು ಹೆಚ್ಚಿನವರಿಗೆ
ಟೀವಿಯಲ್ಲಿ ತಕ್ಷಣ ಕಾಣಿಸಿಕೊಳ್ಳುವ ಆಸೆ. ಸಂಗೀತದಲ್ಲೇ
ಏನಾದರೂ ಸಾಧನೆ ಮಾಡಬೇಕೆಂಬ ಗುರಿ ಮಾತ್ರ ಯಾರಿಗೂ ಇಲ್ಲ. ಇದು ಅತ್ಯಂತ ಬೇಸರದ ಸಂಗತಿ. ಹಳೆಹಾಡನ್ನು
ಚೆನ್ನಾಗಿ ಹಾಡುವುದಕ್ಕೂ, ಹೊಸ ಹಾಡನ್ನು ಕಲಿತು ಹಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಿಜವಾದ ಪ್ರತಿಭೆ
ಹೊರಹೊಮ್ಮುವುದೇ ಹೊಸ ಹಾಡಿಗೆ ಜೀವತುಂಬಿದಾಗ. ರಿಯಾಲಿಟಿ ಶೋಗಳ ಮೂಲಕ ಕೆಲವು ಒಳ್ಳೆಯ ಪ್ರತಿಭೆಗಳು
ಖಂಡಿತ ಸಿಕ್ಕಿವೆ. ಆದರೆ ಈ ರಿಯಾಲಿಟಿ ಶೋಗಳಲ್ಲಿರುವ ಡೆಂಜರ್ಝೋನ್, ಎಲಿಮಿನೇಷನ್, ಟಾಸ್ಕ್ , ಇನ್ನೂ
ಏನೇನೋ ಗಿಮಿಕ್ಸ್ ಇವೆಲ್ಲಾ ಇರಬಾರದು ಅಂತ ನಾನು ಹೇಳ್ತೀನಿ. ಇದರಿಂದ ಮಕ್ಕಳ ಮೇಲೆ ತುಂಬಾ ಪರಿಣಾಮ
ಬೀರುತ್ತೆ. ಅದರಲ್ಲೂ ಕೆಲವು ಒಳ್ಳೆಯ ರಿಯಾಲಿಟಿ ಶೋಗಳು ಬಂದಿವೆ. ಉದಾಹರಣೆಗೆ ಈಟೀವಿಯ `ಎದೆತುಂಬಿ
ಹಾಡುವೆನು' ಕಾರ್ಯಕ್ರಮದಲ್ಲಿ ಎಸ್ಪಿಬಿಯವರು ನಡೆಸಿಕೊಡೋದು ತುಂಬಾ ಚೆನ್ನಾಗಿದೆ. ಅವ್ರು ಈ ಮೇಲಿನ
ಯಾವ ಶಬ್ದಗಳನ್ನು ಹೇಳದೆ ಮಕ್ಕಳನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಾ, ಪ್ರೋತ್ಸಾಹ ನೀಡುವ ಮಾತುಗಳನ್ನು
ಹೇಳುತ್ತಾ ನಡೆಸಿಕೊಡುತ್ತಾರೆ. ಇದು ಒಂದು ಲೆಕ್ಕದಲ್ಲಿ ಆರೋಗ್ಯಪೂರ್ಣ ಕಾರ್ಯಕ್ರಮ ಅಂತ ಹೇಳಬಹುದು.
ಕೊನೆಮಾತು
ನನ್ನ ಸಂಗೀತ ಸಾಧನೆ ಹಾಗೂ ವೃತ್ತಿಯಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಕನ್ನಡ ಸಾಹಿತ್ಯವನ್ನು ಓದುತ್ತೇನೆ. ಮುಖ್ಯವಾಗಿ ಹಾಸ್ಯ ಸಾಹಿತ್ಯ ನನಗೆ ಬಲು ಪ್ರಿಯ. ಮನೆಯಲ್ಲಿದ್ದಾಗ ಸೀರಿಯಲ್ಗಳನ್ನು ಜಾಸ್ತಿ ನೋಡುತ್ತೇನೆ. ನನಗೆ ನ್ಯಾಷನಲ್ ಜಿಯೋಗ್ರಾಫಿಕ್, ಎನಿಮಲ್ ಪ್ಲಾನೆಟ್ ವಾಹಿನಿಗಳೆಂದರೆ ತುಂಬಾ ಇಷ್ಟ. ನನ್ನ ಮಗಳಿಗೆ ಕಾಟರ್ೂನ್ ನೆಟ್ವಕರ್್ ಅಂದ್ರೆ ಅಚ್ಚುಮೆಚ್ಚು. ಮಗಳು ಪದ್ಮಾ ಶಾರ್ವರಿ, ಹೆಂಡತಿ ವೇಣಿ ಮನೋಹರ್ ಸಾಂಗತ್ಯದ ಸುಂದರ ಕುಟುಂಬ ನನ್ನದು...
ಹೀಗೆ ಮಾತನಾಡುವ ವಿ. ಮನೋಹರ್ ಕನ್ನಡದ ಯಶಸ್ವಿ ಸಂಗೀತ ನಿದರ್ೆಶಕರಲ್ಲೊಬ್ಬರು. ಪರಭಾಷೆಯ ಸಂಗೀತ ನಿರ್ದೇಶಕರ ನಡುವೆ ನಮ್ಮತನದ ವಿ. ಮನೋಹರ್ ಅವರು ಸಾರ್ವಕಾಲಿಕ ಅಂತ ಅನಿಸುವ ಹಾಡುಗಳನ್ನು ನೀಡಿ, ಕನ್ನಡ ಸಿನಿಮಾ ಸಂಗೀತ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ಸಾಧನೆ ಮಾಡಿದ್ದಾರೆ. ಮೂಲತಃ ವ್ಯಂಗ್ಯಚಿತ್ರಕಾರರಾಗಿ ಉದ್ಯಮಕ್ಕೆ ಬಂದು, ನಂತರ ಪತ್ರಕರ್ತರಾಗಿ, ಬಳಿಕ ಗೀತ ರಚನೆಕಾರರಾಗಿ, ಸಂಗೀತ ನಿದರ್ೆಶಕರಾಗಿ, ನಟರಾಗಿ, ನಿದರ್ೆಶಕರಾಗಿ ಪ್ರಸಿದ್ಧರಾದವರು. ಇಂದಿಗೂ ವಿ. ಮನೋಹರ್ ಅವರಿಗೆ ಕನ್ನಡ ಸಿನಿಪ್ರಿಯರ ಹೃದಯದಲ್ಲಿ ಶಾಶ್ವತವಾದ ಒಂದು ಸ್ಥಾನವಿದೆ. ಇವರು ನೋಡಲಿಕ್ಕೆ ತುಂಬಾ ಗಂಭೀರ ಅಂತ ಅನಿಸಿದರೂ, ಅವರಲ್ಲೇ ಒಬ್ಬ ಹ್ಯೂಮರಸ್ ವ್ಯಕ್ತಿ ಅಡಗಿ ಕುಳಿತಿದ್ದಾನೆ.
No comments:
Post a Comment