ಆತ್ಮೀಯ ಸ್ನೇಹಿತರೇ,
ವಿಮರ್ಷಕರು ಎಲ್ಲರೂ ನನ್ನ ಕತೆಗಳನ್ನು ಓದಿ ತಮ್ಮ ಅಭಿಪ್ರಾಯವನ್ನು
ತಿಳಿಸಿದ್ದಾರೆ. ಅವರ ಪ್ರೀತಿಯನ್ನು ಈ ಕ್ಷಣ ವರ್ಣಿಸುವುದು ತುಂಬಾ ಕಷ್ಟ. ನನ್ನ ಮೊದಲ ಪುಸ್ತಕಕ್ಕೆ
ಇಷ್ಟೊಂದು ಪ್ರತಿಕ್ರಿಯೆ ಸಿಕ್ಕಿರುವುದು ನನ್ನ ಶ್ರಮಕ್ಕೆ ಸಿಕ್ಕ ಪ್ರತಿಫಲ ಎಂತೆಂದುಕೊಳ್ಳುವೆ. ಇದು
ಹೆಮ್ಮೆಯ ವಿಷಯವಲ್ಲ ಅನ್ನುವುದು ನನ್ನ ಅರಿಕೆ.
ಇದರಲ್ಲಿ ಮುಖ್ಯವಾಗಿ ನನ್ನ ಆತ್ಮೀಯ ಸ್ನೇಹಿತರು, ಫೇಸ್ ಬುಕ್ ಸ್ನೇಹಿತರು,
ಸಿನಿಮಾ, ಪತ್ರಿಕೋದ್ಯಮ ಹಾಗೂ ಟೀವಿ ಮಾಧ್ಯಮದಲ್ಲಿ ಕೆಲಸ ಮಾಡುವ ನನ್ನ ಸ್ನೇಹ ಬಳಗ ಎಲ್ಲರೂ ಸೇರಿದ್ದೀರಿ.
ನನ್ನ ಮೊದಲ ಪುಸ್ತಕವನ್ನು ಇಷ್ಟಪಟ್ಟು ಕೊಂಡು, ಓದಿ ತಮ್ಮ ಅಭಿಪ್ರಾಯ ತಿಳಿಸಿದ್ದೀರಿ. ನಿಮ್ಮ
ಪ್ರೀತಿಗೆ ನಾನು ಎಂದೆಂದಿಗೂ ಚಿರಋಣಿ.
ಇನ್ನೊಂದು ಮಹತ್ವದ ವಿಷಯವೇನಂದರೆ, ಕರ್ನಾಟಕ ಸಾಹಿತ್ಯ ಪರಿಷತ್ ಪ್ರತಿ ವರ್ಷ ಕೆಲವು ಸಾಹಿತ್ಯಕ ಕೃತಿಗಳನ್ನು ಆಯ್ಕೆ ಮಾಡಿ ದತ್ತಿ ಪ್ರಶಸ್ತಿಗಳನ್ನು ನೀಡುತ್ತದೆ. ಈ ನಿಟ್ಟಿನಲ್ಲಿ 2012ರಲ್ಲಿ ಪ್ರಕಟವಾದ ನನ್ನ ಕಥಾ ಸಂಕಲನಕ್ಕೆ
ಕೆ.ವಾಸುದೇವಾಚಾರ್ ದತ್ತಿ ಪ್ರಶಸ್ತಿ ಸಿಕ್ಕಿದೆ. ಇದು ಪುಸ್ತಕಕ್ಕೆ ಸಿಕ್ಕ ಮೊದಲ ಪ್ರಶಸ್ತಿ. ಈಗಾಗಲೇ
ಅಭಿನಂದಿಸಿದ ನನ್ನ ಸ್ನೇಹಿತರಿಗೆ ನನ್ನ ಅಂತರಂಗದ ನಮನ ಸದಾ ಇರುತ್ತದೆ.
ಪುಸ್ತಕವನ್ನು ಈಗಾಗಲೇ ಕೊಂಡು ಓದಿದವರಿಗೆ ಮತ್ತೊಮ್ಮೆ ಧನ್ಯವಾದಗಳು, ಓದದೇ ಇರುವವರಿಗೆ,
ಓದಬೇಕೆಂದು ಕೊಂಡವರಿಗೆ ಈ ಕೆಳಕಂಡ ಮಳಿಗೆಗಳಲ್ಲಿ ನನ್ನ ಪುಸ್ತಕ ದೊರೆಯುತ್ತದೆ. ಕೊಂಡು ಓದಿ ಅಭಿಪ್ರಾಯ
ತಿಳಿಸಿ.
1. ಸಪ್ನ ಬುಕ್ ಹೌಸ್,
ಮೆಜೆಸ್ಟಿಕ್-ಗಾಂಧಿನಗರ, ಬೆಂಗಳೂರು
2. ಸ್ಪರ್ಧ ಚೈತ್ರ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು
3. ಸ್ನೇಹ
ಬುಕ್ ಹೌಸ್, ಗಿರಿನಗರ, ಬೆಂಗಳೂರು
4. ರವಿ ಬೆಳಗೆರೆ ಬುಕ್ಸ್ ಆಂಡ್ ಕಾಫಿ, ಗಾಂಧಿ ಬಝಾರ್, ಬೆಂಗಳೂರು
5. ಸಾಯಿ ಬುಕ್ ವಲ್ಡ್ , ಗಾಂಧಿಬಜಾರ್, ಬೆಂಗಳೂರು
6. ಟೋಟಲ್ ಕನ್ನಡ, ಜಯನಗರ 4ನೇ ಬ್ಲಾಕ್ , ಬೆಂಗಳೂರು
7. ರಂಗಶಂಕರ, ಜೆಪಿನಗರ, ಬೆಂಗಳೂರು 8. ಸುಮುಖ ಬುಕ್ ಹೌಸ್ , ಪೈಪ್ ಲೇನ್, ವಿಜಯ ನಗರ ಬೆಂಗಳೂರು
9. ನವಾಡ ಬುಕ್ ಸ್ಟಾಲ್, ರಾಜಾಜಿ ನಗರ, ನವರಂಗ್ ಹತ್ತಿರ ಬೆಂಗಳೂರು 10. ಅಂಕಿತ ಪುಸ್ತಕ, ಗಾಂಧಿ
ಬಝಾರ್, ಬೆಂಗಳೂರು
No comments:
Post a Comment