Monday, 12 March 2012

ಈ ಪರಿಯ...


ಈ ಪರಿಯ...                       
                        
ಕನವರಿಕೆ, ನೋವು ಆದದಷ್ಟೇ..!
ಹೇಳಿಕೊಳ್ಳುವಂತಹುದಲ್ಲ.
ಹೇಳಿಕೊಂಡರೂ, ನಮ್ಮ ಭಾವನೆಯ ಮುಟ್ಟು
ಉತ್ಕಟತೆ, ಅವರಿಗೆ ಮುಟ್ಟುವುದೇ..? ತಟ್ಟುವುದೇ..!
`ಮುಟ್ಟು'ವುದಿಲ್ಲ. ಅರ್ಥವಾಗುವುದಿಲ್ಲ, ಅನುಭವಿಸದಂತಾಗುವುದಿಲ್ಲ.
ಒಳಗಿನ ಬೆಂಕಿ ಉರಿದುರಿದು, ಕೆಂಡವಾಗಿ
ಬೂದಿಯಾಗಿ, ಬಿದ್ದಿಹುದು
ಕಾಣುವ ಬಿಳಿಭಸ್ಮ, ಹಚ್ಚಿಕೊಂಡರೆ ಕಪ್ಪು ಕಪ್ಪು
ಹಾಗೆಯೇ ಇದು
ಅಂತಸತ್ವವು ಅಂಧಸತ್ವವಾಗಿಹುದು
ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಮನಸು ನಮಗೇ
ಹೊರತು ಬೇರೆಯವರಿಗಲ್ಲ..!