Tuesday, 11 October 2011

ಅದ್ದೂರಿ ಚಿತ್ರ ಮಾಡಿದ ನಿದೇ೵ಶಕರ ಅಬ್ಬೇಪಾರಿ ಸ್ಥಿತಿ!!!!!- Directors Special



ಅದ್ದೂರಿ ಐತಿಹಾಸಿಕ, ಸಾಮಾಜಿಕ ಚಿತ್ರಗಳನ್ನು ನಿಮರ್ಿಸಿದ ದಿ|| ಬಿ.ಆರ್. ಪಂತಲುರವರು ಕೊನೆಯ ಗಳಿಗೆಯಲ್ಲಿ ಸಾಲಗಾರರಾಗಿ ಬಹಳ ಕಷ್ಟದ ಜೀವನ ನಡೆಸಿದ್ದರು. ಕನ್ನಡಚಿತ್ರರಂಗವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ ಅತ್ತುತ್ತಮ ಚಿತ್ರಗಳನ್ನು, ಉತ್ತಮ ಕಲಾವಿದರನ್ನು ಪರಿಚಯಿಸಿದ ದಿ|| ಪುಟ್ಟಣ್ಣ ಕಣಗಾಲ್ರಾಗಲಿ, ದಿ|| ಬಿ. ನಾಗೇಂದ್ರರಾಯರು ಇನ್ನು ಮುಂತಾದ ಕಲಾವಿದರು ಬಹಳ ಬದುಕಿನ ಸಂಧ್ಯಾಕಾಲದಲ್ಲಿ ಆಥರ್ಿಕವಾಗಿ ಬಹಳ ನೊಂದಿದ್ದರು.  ಹೀಗೆ ಒಂದು ಬಾರಿ ನಾಗೇಂದ್ರರಾಯರು ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಖ್ಯಾತ ಕಾದಂಬರಿಗಾತರ್ಿ ಎಂಕೆ ಇಂದಿರಾರವರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು. ಕಾರ್ಯಕ್ರಮದ ನಿರೂಪಕರು ಸ್ವಾಗತಭಾಷಣದಲ್ಲಿ ನಾಗೇಂದ್ರರಾಯರನ್ನು  `ಕನ್ನಡ ಚಿತ್ರರಂಗದ ಭೀಷ್ಮ 'ರೆಂದು ಹೊಗಳಿದರಂತೆ. ಸ್ವಲ್ಪ ಸಮಯದ ನಂತರ ರಾಯರು ಅಧ್ಯಕ್ಷ ಭಾಷಣದಲ್ಲಿ ನಗುತ್ತಾ ಹೇಳಿದರಂತೆ. `ನನ್ನ ಬಿಳಿಯಗಡ್ಡವನ್ನು ನೋಡಿ ನನ್ನನ್ನು ಭೀಷ್ಮನೆಂದು ಹೊಗಳಿದಿರಿ..ಅದು ನಿಮ್ಮ ಅಭಿಮಾನ.  ನನ್ನ ಬಿಳಿಯ ಗಡ್ಡವನ್ನು ನಾನು ಯಾಕೆ ಬೆಳೆಯಲು ಬಿಟ್ಟಿದ್ದೇನೆ ಎಂಬುದು ತಿಳಿದರೆ ನೀವೆಲ್ಲಾ  ಭೇಸರಪಡುತ್ತೀರಿ' ಎಂದು ಹೇಳಿ ವಿಷಾದವಾಗಿ ನಕ್ಕರಂತೆ. ಈ ಸನ್ನಿವೇಷವನ್ನು ಅಂದು ಅವರ ಜೊತೆ ವೇದಿಕೆ ಹಂಚಿಕೊಂಡಿದ್ದ ಎಂಕೆ ಇಂದಿರಾರವರು ತಮ್ಮ `ಚಿತ್ರಭಾರತ ಕೃತಿಯಲ್ಲಿ ನಿವೇದಿಸಿದ್ದಾರೆ. ರಾಯರ ಕೊನೆಯ ದಿನಗಳಲ್ಲಿ ಅವರು ಆಥರ್ಿಕವಾಗಿ ಬಹಳ ಕಷ್ಟದಲ್ಲಿದ್ದರು ಅಂತ ಬಿಡಿಸಿ ಹೇಳಬೇಕಿಲ್ಲ!


2 comments:

  1. ಫಕೀರನ ಮನೆಯಲ್ಲೂ ಇಷ್ಟೂಂದು ವೆರೈಟಿ ಊಟ ಅದ್ಭುತ..ಎಲ್ಲಾ ವಿಷಯದ ಬಗ್ಗೆಯೂ ಉತ್ತಮ ಲೇಖನಗಳಿವೆ. ಶ್ರೀಧರ್ ಸಾರ್ ಫಕೀರನ ಮನೆಯ ಕದ ತಟ್ಟಿದ್ದಕ್ಕೆ ಒಳ್ಳೆಯ ಆಥಿತ್ಯವೇ ಸಿಕ್ತು.... ಹೀಗೆ ಬರೆಯುತ್ತಿರಿ. ಬರವಣಿಗೆಯಲ್ಲೂ ಇದೇ,ಹಿಡಿತ ಮಿಡಿತ ಇರಲಿ....

    ReplyDelete
  2. tumba dhanyavada sir..nimma hesaru enu anta gottagalilla

    ReplyDelete