ಅವನಿಗೆ ನಾ,ನನಗೆ ಅವರು, ಅವರಿಗೆ ನಾವು
ಎಲ್ಲರಿಗೂ ನಾವು, ಆದರೆ ನಮಗೆ ನಾವೇ..!
ಮರೆತನೆಂದರೂ ನಾ ನಿನ್ನ ಬಿಡುವುದಿಲ್ಲ
ತಿಂದಿದ್ದು,ಉಂಡಿದ್ದು,ಹೇತಿದ್ದು ,ಆಡಿದ್ದು
ಒಂದೇ ರೂಮಿನಲ್ಲಿ ಓದಿದವರು,ಮೊದಲ ನೀಲಿ ಚಿತ್ರ ನೋಡಿದವರು
ಕನವರಿಕೆಯಲ್ಲೂ ಬೆತ್ತಲೆಗೆ ಮೈಯೊಡ್ಡಿದವರು ಒಂದು ಸಿಗರೇಟು,ಒಂದು ಬಿಯರ್, ಕ್ವಾಟ್ರ್ ವಿಸ್ಕಿ
ತೊಡೆ ಬಲಿತ ಹುಡುಗರ ಹಸಿದ ಬಾಯಿಗಳು ..!
ನಾವು ವೀರ್ಯಸ್ಕಲಿತ ಹುಡುಗರು..
ಕಾಪಿ –ಚೀಟಿ ಬರೆಯದ ಹುಡುಗರು..
ಕಣ್ಣಿಂಚಿನ ಕಾಡಿಗೆಯ ಹಿಂದೆ ಬೀಳದವರು
ನಮಗೆ ನಾವೇ ...
ಮುಂದಿನ ನಾಡಿನ ಭೂಪರು..
No comments:
Post a Comment