ಕನವರಿಕೆಯೆಂಬ ಕಸವ ಬಿಟ್ಟು
ನನಸೆಂಬ ರಸವ ಹಿಂಡುತ
ಮನಸ್ಸಿನ ಆಸೆ ಮನಸಿಗಾದರೆ
ದೇಹಕ್ಕೆ ಎಲ್ಲಿಹುದು ಕಣಕಣದಿ ಸಿಗುವ
ಉನ್ಮಾದದ ರಸದೌತಣ.
ಮನಸಿಗೆ ಇರದ ತೆವಲು ದೇಹಕ್ಕಿರದೇ.?
ದೇಹದ ಅಣುವಿಗೆ ಆಸೆ,ಮೋಹಗಳ ಲೇಪನವಿರದೇ !
ಬಿಟ್ಟನೆಂದರೂ ಬಿಡದೇ ಕಾಡುವುದು, ಹೊಕ್ಕು ಬೇಡುವುದು.
ಬಾಗಲೇಬೇಕು, ಕೇಳಲೇಬೇಕು. ಮೋಹ ವ ಬೆನ್ನತ್ತಲೇಬೇಕು.
ಅನುಭವಿಸಲೇಬೇಕು.
ಸಿಕ್ಕ ಅಂಗನೆಯರ ಅಂಗಗಳಲ್ಲಿ ಹುಚ್ಚೆದ್ದು ಎರಚಾಡಿ
ಕಾಯದ ಬಿಸಿಯನು ತಣಿಸುವವಳ
ಅಂಗಳಲ್ಲಿ ಮಿಂದೆದ್ದು, ಕುಣಿದಾಡಿದ
ಸೆಲೆಯನ್ನು ಬಣ್ಣಿಸಲಾದೀತೇ..!
ಮೋಹದ ಪರಿಧಿಯಲಿ ಸಿಕ್ಕಿ ನರಳಾಡಿ ಕೂಗುತಿಹೆನು
ಬಿಡಿಸುವಿರಾ? ಮೇಲೆತ್ತುವಿರಾ?
Add caption |
No comments:
Post a Comment