Thursday, 17 May 2012

ಚಿ(ಂ)ತೆಯ ನಿದ್ದೆ


ನೋವಿನ ನಗೆಯ ಬೀಸದವನು
ಅಳುತ್ತಿದ್ದಾನೆ,  ಇಂದು ಜೋರಾಗಿ ಅಳುತ್ತಿದ್ದಾನೆ
ಸಂತಸದ ಬಿಸಿಬುಕ್ಕೆ  ಹಿಂದೆ ಬಂದಿರಲು
ನಕ್ಕಿದ್ದ. ಅಂದು ಜೋರಾಗಿ ನಕ್ಕಿದ್ದ
 ದುಃಖದ ಮಡಿಲು  ರಕ್ತದ ಹರಿವು
ಕಾಡಬೇಕು, ಸೆಳೆಯಬೇಕು, ಅಂಟಬೇಕು.
ಸುಖ ಬರಲಿ, ಸಂತಸದ ರಕ್ಷೆ ಹರಿಯಲಿ ಅನ್ನಬೇಕು.
ಸರ್ವಸಮಪಾಲಿನ ಕೂಡಾಟ ಇರಲಿ..
ಹಾಗಾದರೆ,
ಜೀವನವೆಂದರೆ, ಅಂದುಕೊಂಡಿದ್ದು ಆಗುವುದೇ ?
ನಲಿವಿನ ತೊಟ್ಟಿಲಲ್ಲಿ ಆಡಿದವನಿಗೆ
ದುಃಖದ ಕನಸು ಬೆಚ್ಚಿರನೇ ಕಾಡಿರಲು
ಚಿಂತೆಯ ಚಿತೆಯಲಿ ಸಾಯುತಿರುವವನಿಗೆ
ತೂಗಿದರೆಷ್ಟೋ..! ಪಾಡಿದರೆಷ್ಟೋ.?
ನಿರಾಳದ ನಿದ್ದೆಯಲ್ಲಿ ತೊರಳಾಡುವವನಿಗೆ
ಜೀವನದ ಸೊಗಸು ಅಂಡಿನಲ್ಲಿ ಕುಳಿತಿತ್ತು.



No comments:

Post a Comment