ಅವಳ ಮಾತು ಇನ್ನೂ ಕಿವಿಗಂಟಿದೆ.
ಜೋರಾಗಿ ಮಾತನಾಡಿದ್ದರೆ ಕಿವುಡನಾಗುತ್ತಿದ್ದನೇನೋ?
ಮನ ಪಕ್ಕದಲ್ಲಿ ಕೂತು, ಮನಸಿನ ಉಸಿರನು
ನನ್ನ ಕಿವಿಗೆ ಊದಿದ್ದಳು.
ಏನೋ ಪಿಸುಗುಟ್ಟಿದ್ದಳು.
ಮನಸಿನ ಮಾತು ಒಳಗೆ ಅರ್ಥವಾಗಿದೆ.
ಉತ್ತರ ಕೊಡಲು ಧೈರ್ಯವಿಲ್ಲ.
ಕೊಟ್ಟರೆ ಆ ಮನಸಿಗೆ ಬೇಸರವಾಗುವ ಚಿಂತೆ
ಬಾಯಿಬಿಟ್ಟರೆ ದೇಹವು ಬಾಧಿಸುವ ಅಳುಕು.
ನಾ ಮೌನಿಯಾದರೆ,
ಆ ಮನಸು ಮರುಗುವ ಒರತೆ.
ಅಬ್ಬಬ್ಬಾ..!
ಬೇಡಪ್ಪ ಬೇಡ ಈ ಪ್ರೀತಿಯ ಮಳೆ
ಸುರಿಯದಿರು ನನ್ನ ಹತ್ತಿರ.
No comments:
Post a Comment