Sunday 3 February 2013

ಹಿಂದಿ ಕಿರುತೆರೆಯ ಜನಪ್ರಿಯ ಕಲಾವಿದರು


ಕನ್ನಡ, ತಮಿಳು, ತೆಲುಗು ಸೀರಿಯಲ್ಗಳಷ್ಟೆ ಪ್ರಮುಖವಾಗಿ ಹಿಂದಿ ಸೀರಿಯಲ್ಗಳನ್ನು ನೋಡುವ ದೊಡ್ಡ ವರ್ಗವೇ ಕರ್ನಾಟಕದಲ್ಲಿದೆ. ಪ್ರತಿದಿನ ಕನ್ನಡದಷ್ಟೆ ಅನಿವಾರ್ಯವಾಗಿ ಹಿಂದಿ ಧಾರಾವಾಹಿಗಳನ್ನು ಕೂಡ ನೋಡುತ್ತಾರೆ. ಹಾಗಾಗಿ ಅನೇಕ ಹಿಂದಿ ಕಿರುತೆರೆ ನಟ-ನಟಿಯರು ಕನ್ನಡಿಗರಿಗೆ ತುಂಬಾ ಚಿರಪರಿಚಿತ. ಹಾಗೆಯೇ ಅವರ ಅಪ್ಪಟ ಅಭಿಮಾನಿಗಳು ಕೂಡ ಹೌದು. ಸೀರಿಯಲ್ನಲ್ಲಿ ಕಾಣಿಸಿಕೊಳ್ಳುವ ಈ ನಟನಟಿಯರಿಗೆ ಬಾಲಿವುಡ್ ನಟರುಗಳಷ್ಟೇ ಜನಪ್ರಿಯತೆ ಇದೆ. ಅಂತವರ ಕುರಿತ ಸಣ್ಣ ಮಾಹಿತಿ

ಅವಿಕಾ ಗೌರ್
ಕಲರ್ಸ್ ವಾಹಿನಿ ಪ್ರಾರಂಭವಾದ ಆರೇ ತಿಂಗಳಲ್ಲಿ ದೇಶದ ನಂ.1 ಚಾನೆಲ್ ಆಗಿ ಹೊರಹೊಮ್ಮಿತ್ತುಅತ್ಯುತ್ತಮ ಗುಣಮಟ್ಟದ ಜನಪ್ರಿಯ ರಿಯಾಲಿಟಿ ಶೋಗಳು, ಸೀರಿಯಲ್ಗಳನ್ನು ನಿರ್ಮಾಣ ಮಾಡಿತ್ತು. ಅದರಲ್ಲಿ ಇಡೀ ಭಾರತವನ್ನು ತನ್ನೆಡೆಗೆ ಸೆಳೆದುಕೊಂಡ ನಟಿ ಕಲರ್ಸ್ ವಾಹಿನಿಯ ಮೂಲಕ ಪರಿಚಯವಾಗಿದ್ದಳು. ಆಕೆಯು ಮಾಡಿದ ಪಾತ್ರದ ಹೆಸರು ಆನಂದಿ. ಬಾಲಿಕಾ ವಧು ಇಂದಿಗೂ ಕಲರ್ಸ್ ವಾಹಿನಿಯ ಮುಖವಾಣಿಯಂತೆ ಪ್ರಸಾರವಾಗಿ ಅಪಾರ ವೀಕ್ಷಕರನ್ನು ಪಡೆದು ಸಾಗುತ್ತಿದೆ ಸೀರಿಯಲ್ನ ಆರಂಭದಲ್ಲಿ ಕಾಣಿಸಿಕೊಂಡಿದ್ದ ಆನಂದಿ ಪಾತ್ರಧಾರಿ ಅವಿಕಾ ಗೌರ್ ಎಂಬ ಸುಂದರ ಬಾಲಕಿ ಅತ್ಯದ್ಭುತ ನಟನೆಯಿಂದ ಎಲ್ಲರನ್ನು ಗೆದ್ದಿದ್ದಳು. ಸೀರಿಯಲ್ನ ಗೆಲುವಿನ ಹಿಂದೆ ಅವಿಕಾ ಗೌರ್ನ ಪಾತ್ರ ದೊಡ್ಡದಾಗತ್ತು. ಅವಿಕಾ ಗೌರ್ ಮಾಡುತ್ತಿದ್ದ ಆನಂದಿ ಈಗ ದೊಡ್ಡ ದೊಡ್ಡವಳಾಗಿದ್ದಾಳೆ. ಈಗ ಪಾತ್ರವನ್ನು ಬೇರೆಯವರು ಮಾಡುತ್ತಿದ್ದಾರೆ. ಬಾಲಿಕಾ ವಧು ಮೂಲಕ ಪರಿಚಯವಾದ ಅವಿಕಾ ಗೌರ್  ಅತಿ ಬೇಡಿಕೆಯ ಬಾಲ ನಟಿ ಅಂತ ಗುರುತಿಸಿಕೊಂಡಿದ್ದಳು. ಆಕೆ ಇದ್ದರೆ ಸೀರಿಯಲ್ ಹಿಟ್ ಅನ್ನುವ ಮಾತುಗಳು ಕೂಡ ಕೇಳಿಬರುತ್ತಿದ್ದವು. 5 ವರ್ಷಗಳ ಹಿಂದೆ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಅವಿಕಾ ಈಗ ದೊಡ್ಡವಳಾಗಿದ್ದಾಳೆ. ಸದ್ಯ `ಸಸುರಲ್ ಸಿಮಾರ್ ಕಾ' ಸೀರಿಯಲ್ನಲ್ಲಿ ರೋಲಿ ಎಂಬ ಪಾತ್ರವನ್ನು ಮಾಡುತ್ತಿದ್ದಾಳೆ. ಮಾಡರ್ನ್  ಹುಡುಗಿಯ ಪಾತ್ರವಿದು. ಅವಿಕಾಳನ್ನು ಮತ್ತೆ ಕಲರ್ಸ್ ವಾಹಿನಿಗೆ ಕರೆತರುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಅವಿಕಾ ಗೌರ್ ಮಾಡುವ ಸೀರಿಯಲ್ಗಳ ಬಗ್ಗೆ ಆಕೆಯ ಅಭಿಮಾನಿಗಳಿಗೆ ಅಪಾರ ನಿರೀಕ್ಷೆ ಇದೆ.

ಸಾಕ್ಷಿ ತನ್ವರ್
ಸಾಕ್ಷಿ ತನ್ವರ್ ಜನನ  ಜನವರಿ 12, 1973. ಹಿಂದಿ ಕಿರುತೆರೆ ಉದ್ಯಮದ ಜನಪ್ರಿಯ ನಟಿ. ಕೆಲವು ಬಾಲಿವುಡ್ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. `ಕಹಾನಿ ಘರ್ ಘರ್ ಕೀ' ಧಾರಾವಾಹಿಯ ಪಾರ್ವತಿ ಅಗರ್ವಾಲ್ ಹಾಗೂ `ಬಡೆ ಅಚ್ಚೇ ಲಗ್ತೇ ಹೇನ್' ಪ್ರಿಯಾ ಕಪೂರ್ ಪಾತ್ರಗಳು ಸಾಕ್ಷಿಯ ಜನಪ್ರಿಯತೆಯನ್ನು ಮುಖ್ಯ ಅಂಗಣಕ್ಕೆ ತಂದಿವೆ. ಟೆಲಿವಿಷನ್ ವೀಕ್ಷಕರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ನಟಿ ಅಂತ ಈಕೆಯನ್ನು ಗುರುತಿಸಲಾಗಿದೆ.
ರಾಜಸ್ಥಾನದ ಮಧ್ಯಮ ವರ್ಗದಲ್ಲಿ ಹುಟ್ಟಿದ ಸಾಕ್ಷಿಯ ತಂದೆ ರಾಜೇಂದ್ರ ಸಿಂಗ್ ತನ್ವರ್ ಸಿಬಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಐಎಎಸ್ ಆಫೀಸರ್ ಆಗಬೇಕೆಂದು ಅಂದುಕೊಂಡಿದ್ದ ಸಾಕ್ಷಿಗೆ ದೂರದರ್ಶನದ ಚಿತ್ರಗೀತೆಗಳ ಕಾರ್ಯಕ್ರಮ `ಅಲ್ಬೆಲಾ ಸುರ್ ಮೇಲಾ'ಕ್ಕೆ ಆಯ್ಕೆಯಾಗಿದ್ದು ಕಿರುತೆರೆ ಉದ್ಯಮಕ್ಕೆ ಬರಲು ದೊಡ್ಡ ವೇದಿಕೆಯಾಯಿತು. ನವದೆಹಲಿಯಲ್ಲಿ ಓದುವಾಗಲೇ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಕಿರುತೆರೆಯಲ್ಲಿ ಬೆಳೆಯಲಿಕ್ಕೆ ದೊಡ್ಡ ಅವಕಾಶ ಕಲ್ಪಿಸಿತು. ಕಾರ್ಯಕ್ರಮದಿಂದ ಧಾರಾವಾಹಿಗಳಲ್ಲಿ ಅಭಿನಯಿಸಲು ಹೆಚ್ಚೆಚ್ಚು ಅವಕಾಶ ಬರಲಿಕ್ಕೆ ಕಾರಣವಾಯಿತು. ಏಹ್ಸಾಸ್, ಭನ್ವರ್, ದಸ್ಟರ್, ರಾಜಧಾನಿ ಸೀರಿಯಲ್ಗಳು ನಟಿಯಾಗಿ ಬೆಳೆಯಲಿಕ್ಕೆ ಅವಕಾಶ ನೀಡಿದವೆ ಹೊರತು, ಜನಪ್ರಿಯತೆಯನ್ನು ನೀಡಲೇ ಇಲ್ಲ.
ಸಾಕ್ಷಿಗೆ ಕಿರುತೆರೆ ಜೀವನಕ್ಕೆ ಟರ್ನಿಂಗ್ ಪಾಯಿಂಟ್ ನೀಡಿದ್ದು `ಕಹಾನಿ ಘರ್ ಘರ್ ಕೀ' ಸೀರಿಯಲ್. ಇದರ ನಂತರ `ದೇವಿ'ಯಲ್ಲಿ ಮಾಡಿದ್ದ ಗಾಯತ್ರಿ ಪಾತ್ರ, `ಬಾಲಿಕಾ ವಧು' ತೀಪ್ರಿ ಪಾತ್ರ, ಏಕ್ತಾ ಕಪೂರ್ಳ `ಸಿಕೆ ಕಂಪನಿ'ಯಲ್ಲಿ ಕಾಮಿಡಿ ಪಾತ್ರಗಳೆಲ್ಲವೂ ಜನರಿಗೆ ತುಂಬಾ ಇಷ್ಟವಾದ ಪಾತ್ರಗಳು. ಟೀವಿ ಸೀರಿಯಲ್ಗಳಲ್ಲಿ ಅಭಿನಯಿಸುತ್ತಲೇ ಅನೇಕ ಸಿನಿಮಾ, ಕಿರುಚಿತ್ರ ಮತ್ತು ಜಾಹೀರಾತುಗಳಲ್ಲಿ ಸಾಕ್ಷಿ ಕಾಣಿಸಿಕೊಂಡಿದ್ದಾರೆ. ಸದ್ಯ `ಬಡೆ ಅಚ್ಚೇ ಲಗ್ತೇ ಹೇನ್' ಧಾರಾವಾಹಿಯ ಪ್ರಿಯಾ ಕಪೂರ್ ಪಾತ್ರ ಅನೇಕ ಮಹಿಳಾ ಅಭಿಮಾನಿಗಳನ್ನು ಸೃಷ್ಟಿಸಿದೆ. ಸಾಕ್ಷಿ ತನ್ವರ್ 2011 `ಕೌನ್ ಬನೇಗಾ ಕರೋಡ್ಪತಿ' ದೀಪಾವಳಿ ವಿಶೇಷ ಕಾರ್ಯಕ್ರಮದಲ್ಲಿ ರಾಮ್ಕಪೂರ್ ಜೊತೆ  ಭಾಗವಹಿಸಿ 25 ಲಕ್ಷ ಹಣವನ್ನು ಗೆದ್ದಿದ್ದಳು.

ರಶ್ಮಿ ದೇಸಾಯಿ

ಕಲರ್ಸ್ ವಾಹಿನಿಯ ಜನಪ್ರಿಯ ಸೀರಿಯಲ್ಗಳಲ್ಲಿ `ಉತ್ತರಣ್' ಪ್ರಮುಖವಾಗಿ ನಿಲ್ಲುತ್ತದೆಬಾಲಿಕಾ ವಧು ವಿಶೇಷವಾಗಿ ಗ್ರಾಮೀಣ ಭಾರತದ ವೀಕ್ಷಕರನ್ನು ಪಡೆದಿದ್ದರೆ, ಉತ್ತರಣ್ ಮುಖ್ಯವಾಗಿ ಮೆಟ್ರೋ ನಗರಗಳಲ್ಲಿ ವಾಸಿಸುವ ಮಧ್ಯಮ ವರ್ಗದವರಿಂದ ಹಿಡಿದು ಶ್ರೀಮಂತ ವರ್ಗದವರೆಗಿನ ಎಲ್ಲ ವೀಕ್ಷಕರನ್ನು ಪಡೆದ ಸೀರಿಯಲ್ ಅಂತ ಇಲ್ಲಿ ವಿಮರ್ಶಿಸಬಹುದು. ಸೀರಿಯಲ್ನ ಪ್ರಮುಖ ಪಾತ್ರಧಾರಿಗಳಲ್ಲಿ ತಪಸ್ಯಾ ಠಾಕೂರ್ನ ಪಾತ್ರ ಮಾಡಿದ್ದ ರಶ್ಮಿ ದೇಸಾಯಿಯನ್ನು ಖಂಡಿತ ಮರೆಯಲಾಗದು. ರಶ್ಮಿ ದೇಸಾಯಿ ಜನನ  ಆಗಸ್ಟ್ 4, 1987. ಇವರು ಉತ್ತರಣ್ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ಬೇರೆ ಕಲಾವಿದರಂತೆ ಅವಕಾಶಗಳ ಹುಡುಕಾಟ, ಬ್ರೇಕ್ಗೋಸ್ಕರ ಕಾಯುವುದೆಲ್ಲಾ ರಶ್ಮಿಯ ಕಿರುತೆರೆ ಬದುಕಿನಲ್ಲಿ ಸಂಭವಿಸಲೇ ಇಲ್ಲ. ಚಿಕ್ಕ ವಯಸ್ಸಿನಲ್ಲೇ ಕಿರುತೆರೆ ಉದ್ಯಮಕ್ಕೆ ಬಂದ ರಶ್ಮಿ ದೇಸಾಯಿ ಝೀ ಟೀವಿಯ `ರಾವಣ್' ಸೀರಿಯಲ್ನಲ್ಲಿ ಮೊದಲು ಕಾಣಿಸಿಕೊಂಡರು. ನಂತರ ಸೋನಿ ಟೀವಿಯ `ಮೀತ್ ಮಿಲಾ ದೆ ರಬ್ಬಾ' ಹೀಗೆಯೆ ಅವಕಾಶಗಳು ಸಿಗತೊಡಗಿದವು. ಇದರಲ್ಲಿ ರಶ್ಮಿಗೆ ಬ್ರೇಕ್ ಕೊಟ್ಟಿದ್ದು ಮಾತ್ರ `ಉತ್ತರಣ್' ಸೀರಿಯಲ್. ಅದು ಪಾಸಿಟಿವ್ ಪಾತ್ರವಾದರೂ ಋಣಾತ್ಮ ದಾರಿಯಲ್ಲಿ ಸಾಗಿ ಹೆಚ್ಚೆಚ್ಚು ವೀಕ್ಷಕರನ್ನು ಪಡೆದುಕೊಂಡಿತು.
ಸೀರಿಯಲ್ಗಳ ಹೊರತಾಗಿ ರಶ್ಮಿ ದೇಸಾಯಿ ಹಿಂದಿ, ಅಸ್ಸಾಮಿ, ಬೆಂಗಾಲಿ, ಮಣಿಪುರಿ ಹಾಗೂ ಭೋಜ್ಪುರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾಳೆ. ಕಥಕ್ ಹಾಗೂ ಭರತನಾಟ್ಯಂ ಕಲಿತಿರುವ ರಶ್ಮಿ ದೇಸಾಯಿಗೆ ಒಂದರ್ಥದಲ್ಲಿ ಹಿಂದಿ ಕಿರುತೆರೆಯ ಲಕ್ಕಿ ಗರ್ಲ್  ಅಂದರೂ ತಪ್ಪೇನಿಲ್ಲ. ಯಶಸ್ಸನ್ನು ಬಹುಬೇಗ ಪಡೆದ ನಟಿ. ರಶ್ಮಿ ದೇಸಾಯಿ ಈಗಾಗಲೇ ಮದುವೆಯಾಗಿದ್ದಾಳೆ. ಫೆಬ್ರುವರಿ 12, 2012 ರಂದು ಸಹನಟ ನಂದೀಶ್ ಸಂಧುನನ್ನು ವರಿಸಿದ್ದಾಳೆ. ಕಲರ್ಸ್ ವಾಹಿನಿಯ `ಝಲಕ್ ದಿಖಲು ಆಜಾ' ಡ್ಯಾನ್ಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿ, ಡ್ಯಾನ್ಸ್ ಮೂಲಕ ಎಲ್ಲರ ಮನಗೆದ್ದ ಕಲಾವಿದೆ.

ಮೋನಿಶ್ ಬಾಲ್ಹ್
`ಮುಖರ್ಜಿ -ಸಮರ್ಥ' ಕುಟುಂಬದ ಮೋನೀಶ್ ಕಲಾವಿದರ ಮನೆತನದಲ್ಲಿ ಬೆಳೆದವರು. ಈತನ ತಂದೆ ರಜನೀಶ್ ಇಂಡಿಯನ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ನೂತನ್  ಬಾಲಿವುಡ್ನ ಜನಪ್ರಿಯ ನಟಿ. ಶಮ್ಮಿ ಕಪೂರ್, ದೇವಾನಂದ್, ರಾಜ್ ಕಪೂರ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ನೂತನ್ 1991ರಲ್ಲಿ ಕ್ಯಾನ್ಸರ್ನಿಂದ ತೀರಿಕೊಂಡರು. ನಟಿ ಕಾಜೋಲ್ ಕೂಡ ಮೋನಿಶ್ನ ಹತ್ತಿರ ಸಂಬಂಧದವರು. ಮೋನಿಶ್ 1990 ಆರಂಭದಲ್ಲಿ ಹಿಂದಿ ಸಿನಿಮಾಗಳ ಮೂಲಕ ಕಾಣಿಸಿಕೊಂಡರೂ, ಹೆಚ್ಚಾಗಿ ಮಾಡಿದ್ದು ಪೋಷಕ ಪಾತ್ರಗಳನ್ನೇ. 2000 ನಂತರ ಸಂಪೂರ್ಣವಾಗಿ ಕಿರುತೆರೆಯ ಕಡೆಗೆ ಧಾವಿಸಿದ ಮೋನಿಶ್ ಅನೇಕ ಸೀರಿಯಲ್ಗಳಲ್ಲಿ ಅಭಿನಯಿಸಿದರು. ಇದರಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಸೋನಿ ವಾಹಿನಿಯಲ್ಲಿನ `ಕುಚ್ ತೋ ಲೋಗ್ ಕಹೆಂಗೆ' ಸೀರಿಯಲ್ನ ಡಾ. ಅಶುತೋಷ್ ಪಾತ್ರ. ಇದು ಅಪಾರ ವೀಕ್ಷಕರನ್ನು ಸಂಪಾದಿಸಿಕೊಟ್ಟಿತ್ತು. ಜನರು ಮರೆಯಲಾಗದ ಪಾತ್ರವನ್ನು ಮೋನಿಶ್ ಸೀರಿಯಲ್ನಲ್ಲಿ ಮಾಡಿದ್ದರು.




ಗುರ್ಮಿತ್ ಸೀತಾರಾಂ ಚೌಧರಿ
ಪೌರಾಣಿಕ ಪಾತ್ರಗಳ ಮೂಲಕ ಅಪಾರ ಅಭಿಮಾನಿಗಳನ್ನು ಪಡೆದ ನಟರಲ್ಲಿ  ಗುರ್ಮಿತ್ ಚೌಧರಿ ಕೂಡ ಒಬ್ಬರು. ಬಿಹಾರ್ ಮೂಲದವರಾಗಿರುವ  ಗುರ್ಮಿತ್ ಚೌಧರಿ ಜನನ ಫೆಬ್ರುವರಿ 22, 1984. ಇವರು ಹಿಂದಿ ಕಿರುತೆರೆ ಉದ್ಯಮದಲ್ಲಿ ತುಂಬಾ ಸಕ್ರಿಯರಾಗಿರುವ ನಟ. 2006ರಲ್ಲಿ ಜಯ ಟೀವಿಯಲ್ಲಿ ಮೂಡಿಬಂದಿದ್ದ `ಮಾಯಾವಿ' ಎಂಬ ತಮಿಳು ಸೀರಿಯಲ್ ಮೂಲಕ ಮೊದಲು ಕಾಣಿಸಿಕೊಂಡಿದ್ದು. ಇದರ ನಂತರ ರಾಮಾಯಣದ ರಾಮನ ಪಾತ್ರ ಹಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಸೀರಿಯಲ್ನಲ್ಲಿ ಸಹ ನಟಿಯಾಗಿ ಕಾಣಿಸಿಕೊಂಡಿದ್ದ ದೆಬೀನಾ ಮುಖಜರ್ಿಯನ್ನೇ ಮದುವೆಯಾಗಿದ್ದಾರೆ. ಗುರ್ಮಿತ್ ಆಕೆಯ ಜೊತೆ `ಪತಿ ಪತ್ನಿ ಔರ್ ' ಅನ್ನುವ ಸೀರಿಯನಲ್ಲೂ ಕಾಣಿಸಿಕೊಂಡಿದ್ದರು. ಗುರ್ಮಿತ್ಗೆ ಬ್ರೇಕ್ ನೀಡಿದ್ದು ಸ್ಟಾರ್ ಓನ್ನ  `ಗೀತ್-ಹೈ ಸಬ್ಸೆ ಪರಾಯಿ', ಸೀರಿಯಲ್ನಲ್ಲಿ ಮಾನ್ಸಿಂಗ್ ಖುರಾನಾ ಪಾತ್ರವನ್ನು  ಗುರ್ಮಿತ್ಮಾಡಿದ್ದ. ಸದ್ಯ ಝೀ ಟೀವಿಯ `ಪುನರ್ ವಿವಾಹ್'ನಲ್ಲಿ ಯಶ್ ಎಂಬ ಪಾತ್ರವನ್ನು ಮಾಡುತ್ತಿದ್ದಾನೆ. ಕಲರ್ಸ್ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ `ಝಲಕ್ ಧಿಕಲಾಜಾ ಸೀಸನ್-5' ಫೈನಲ್ನ ವಿಜೇತ ಕೂಡ ಹೌದು.

ಸಮೀರ್ ಸೋನಿ

ಸಮೀರ್ ಸೋನಿ (ಜನನ ಸೆಪ್ಟಂಬರ್ 29, 1968) ಬಾಲಿವುಡ್ ಸಿನಿಮಾಗಳು ಹಾಗೂ ಹಿಂದಿ ಸೀರಿಯಲ್ಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟ. ಮೂಲತಃ ಪಂಜಾಬಿ ಮನೆತನದ ಸಮೀರ್ ಹುಟ್ಟಿ ಬೆಳೆದುದ್ದೆಲ್ಲಾ ಯುನೈಟೆಡ್ ಕಿಂಗ್ಡಮ್ನಲ್ಲಿ. ನ್ಯೂಯಾರ್ಕ್ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಸಮೀರ್ ಆ್ಯಕ್ಟಿಂಗ್ ಕಡೆ ಆಸಕ್ತಿ ಇದ್ದುದರಿಂದ, ಯುಕೆಯಲ್ಲೇ ಆ್ಯಕ್ಟಿಂಗ್ ತರಬೇತಿ ಪಡೆದು, ಮಾಡಲೆಂಗ್ ಅವಕಾಶಗಳ ಅರಸುತ್ತಾ ಬಾಂಬೆಗೆ ಬಂದುಬಿಟ್ಟರು. ಬಣ್ಣದ ಬದುಕಿನ ಆರಂಭದಲ್ಲಿ ಮಾಡೆಲಿಂಗ್ ಮಾಡುತ್ತಾ, ನಂತರ ಸಿನಿಮಾ, ಕೊನೆಗೆ ಕಿರುತೆರೆಯಲ್ಲಿ ನೆಲೆನಿಂತರು.
ಅಪಾರ ಅಭಿಮಾನಿಗಳನ್ನು ಹೊಂದಿರುವ ಸಮೀರ್ ಅನೇಕ ಹಿಂದಿ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ ಕಿರುತೆರೆಯ ಹಿರಿಯ ನಟ ಸಮೀರ್ 1995ರಲ್ಲಿ ಪ್ರಾರಂಭವಾದ ಸಮಾಂಧರ್ ಅನ್ನುವ ಧಾರಾವಾಹಿಯ ಮೂಲಕ ಪರಿಚಯವಾದರು. ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಲೇ ಕೆಲವು ಬಾಲಿವುಡ್ ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡರು. ಆದರೆ ಸಮೀರ್ ಸೋನಿಗೆ ಧಾರಾವಾಹಿಯಲ್ಲಿ ಸಿಕ್ಕಂತಹ ಯಶಸ್ಸು ಸಿನಿಮಾಗಳಲ್ಲಿ ಸಿಗಲೇ ಇಲ್ಲ. ಸಮೀರ್ ಅಭಿನಯಿಸಿದ ಜನಪ್ರಿಯ ಧಾರಾವಾಹಿಗಳೆಂದರೆ ಸೋನಿ ವಾಹಿನಿಯ `ಜಸ್ಸಿ ಜೈಸಿ ಕೊಯ್ ನಹೀನ್'(2003), `ಸಾಕ್ಷಿ' (2004), ಸ್ಟಾರ್ಪ್ಲಸ್ನ `ಕುಂಕುಮ್ಹಾಗೂ ಕಲರ್ಸ್ ವಾಹಿನಿಯ `ಪರಿಚಯ್' (2011). ಪರಿಚಯ್ ಚಿತ್ರದ ಅಭಿನಯಕ್ಕಾಗಿ ಸಮೀರ್ ಸೋನಿಗೆ ಇಂಡಿಯನ್ ಟೆಲಿ ಅವಾಡ್ಸರ್್ನ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ದೂರದರ್ಶನದ ಕೆಲವು ಸೀರಿಯಲ್ಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಕಲರ್ಸ್ ವಾಹಿನಿಯ 2010 ಬಿಗ್ಬಾಸ್ನಲ್ಲಿ ಭಾಗವಹಿಸಿದ್ದರು. ಹಿಂದೆ ಅಭಿನಯಿಸಿದ್ದ ಧಾರಾವಾಹಿಗಳಲ್ಲಿನ ಅಭಿನಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಸಮೀರ್ ಸೋನಿ ಪಡೆದುಕೊಂಡಿದ್ದಾನೆ. ಚೈನಾಗೇಟ್, ಬಸ್ತಿ, ಭಾಗ್ಬನ್, ವಿವ್ಹಾ, ಫ್ಯಾಷನ್, ಹೇಟ್ ಲವ್ ಸ್ಟೋರಿಸ್ ಇನ್ನು ಹಲವು ಸಿನಿಮಾಗಳಲ್ಲಿ ಸಮೀರ್ ಕಾಣಿಸಿಕೊಂಡಿದ್ದಾರೆ.

No comments:

Post a Comment