Sunday, 3 February 2013

ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ನಾಟ್ಯರಾಣಿ ಮಂಜುಶ್ರೀ ನಾಯ್ಕ್


ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಿ ಎಲ್ಲೆಡೆ ಪ್ರಶಂಸೆ ಹಾಗೂ ಸನ್ಮಾನವನ್ನು ಸ್ವೀಕರಿಸುತ್ತಾ, ತಮ್ಮದೇ ನಾಟ್ಯ ಶಾಲೆಯನ್ನು ತೆರೆದು  ನೂರಾರು ವಿದ್ಯಾ ರ್ಥಿ ಗಳಿಗೆ ನಾಟ್ಯ ಕಲೆಯನ್ನು ಧಾರೆ ಎರೆಯುತ್ತಿರುವ ಮಂಜುಶ್ರೀ ನಾಯ್ಕ್ ಈಗ ಸಾಧನೆಯ ಪರ್ವತದತ್ತ ತಮ್ಮ ಚಿತ್ತವನ್ನು ಹರಿಸಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರ ಸಾಧನೆಯನ್ನು ಅರಸಿ ಬಂದಿರುವುದು ಕನ್ನಡ ಮಣ್ಣಿನ ಪ್ರತಿಭೆಗೆ ಸಿಕ್ಕ ಗೌರವವಾಗಿದೆ.


ಕಲಾಸರಸ್ವತಿಯ ಆಶೀರ್ವಾದ  ಪಡೆದವರೆಲ್ಲಾ ನಿಜಕ್ಕೂ ಅದೃಷ್ಟವಂತರೇ. ಕಲಾಪ್ರತಿಭೆಯ ಸಂಪತ್ತನ್ನು ಹೊತ್ತು ತಂದು ಅದನ್ನು ಮಣ್ಣಿನ ಮೇಲೆ ಕಾರ್ಯಗತ ಮಾಡುವ ಪ್ರತಿಭೆಗಳೆಲ್ಲಾ ನಮ್ಮ ಸಂಸ್ಕೃತಿಯ ರಾಯಭಾರಿಗಳೇ. ಶತಶತಮಾನಗಳಿಂದಲೂ  ನಾಟ್ಯ ಮತ್ತು ಸಂಗೀತಕ್ಕೆ ದೇವರಷ್ಟೇ ಗೌರವ ಹಾಗೂ ಆತಿಥ್ಯವಿದೆ. ಇದಕ್ಕೆ ಸಹಕಾರ ಹಾಗೂ ಆಶ್ರಯವನ್ನು ನೂರಾರು ವರ್ಷಗಳಿಂದ ಎಲ್ಲ ಕಾಲಘಟ್ಟದಲ್ಲೂ ಎಲ್ಲರೂ ರಾಜಮಹಾರಾಜರಿಂದ ಇಂದಿನ ಕಲಾರಸಿಕರು ನೀಡುತ್ತಾ ಬಂದಿದ್ದಾರೆ. ನಮ್ಮ ಸಂಸ್ಕೃತಿ, ನಮ್ಮ ಬೇರು ಮುಖ್ಯವಾಗಿ ಅಡಗಿರುವುದೇ ನಾಟ್ಯ ಹಾಗೂ ಸಂಗೀತದಲ್ಲಿ. ಸಾಧನೆಯ ಮೂಲಕ ಕಲೆಯನ್ನು ಒಲಿಸಿಕೊಂಡವರು ಕಲಾಸರಸ್ವತಿಯ ಸೇವಕರಾಗಿ ಮುಂದಿನ ತಲೆಮಾರಿಗೆ ಸಂಸ್ಕೃತಿಯನ್ನು ಕೊಂಡೊಯ್ಯುವ ಹರಿಕಾರರಾಗುತ್ತಾರೆ. ಇಂತಹ ಕಲಾಸರಸ್ವತಿಯ ಅನುಗ್ರಹ ಪಡೆದವರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕುಮಾರಿ ಮಂಜುಶ್ರೀ ನಾಯ್ಕ್ ಅವರನ್ನು ಪ್ರಮುಖವಾಗಿ ಗುರುತಿಸಬಹುದು.

ಬಾಲ್ಯದಲ್ಲೇ ಸಾಧನೆಯ ಚಿಗುರು
ಕಲೆಯ ಸಂಸ್ಕಾರ ಪೂರ್ವಜರು ಹಾಗೂ ಪಾಲಕರಲ್ಲಿ ಚೆನ್ನಾಗಿ ಅಡಗಿದ್ದಾಗ ಮಾತ್ರ ಅದು ಅವರ ಮಕ್ಕಳಿಗೂ ಕೂಡ ಹರಿದು ಬರುತ್ತದೆ. ನಿಟ್ಟಿನಲ್ಲಿ ನೋಡಿದಾಗ ಮಂಜುಶ್ರೀ ತಂದೆ .ಎಂ. ನಾಯ್ಕ್ ಹಾಗೂ ಶ್ರೀಮತಿ ರೇಣುಕಾರಲ್ಲಿ ಕಲೆಯ ಬೇರಿನ ಅಭಿರುಚಿ ಇದ್ದುದರಿಂದ, ಮಂಜುಶ್ರೀ ಬಾಲ್ಯದಲ್ಲಿರುವಾಗಲೇ ಅವರ ಪ್ರೋತ್ಸಾಹದಿಂದ ನೃತ್ಯವನ್ನು ತುಂಬಾ ಗಂಭೀರವಾಗಿ ಕಲಿಯಲಿಕ್ಕೆ ಪ್ರಾರಂಭಿಸಿದರು. ಭರತನಾಟ್ಯ, ಕೂಚಿಪುಡಿ, ಮೋಹಿನಿ ಅಟ್ಟಂ ಹೀಗೆ ನಾಟ್ಯ ಕಲೆಯ ನಾನಾ ಪ್ರಕಾರಗಳನ್ನು ಚೆನ್ನಾಗಿ ಕಲಿತು ಕ್ಷೇತ್ರದಲ್ಲಿ ಸಾಧನೆಗೈಯ್ಯುವ ದಾರಿಯಲ್ಲಿ ಅನೇಕ ಹಂತಗಳನ್ನು ದಾಟಿ ಈಗ ಗುರುಸ್ಥಾನದಲ್ಲಿ ನಿಂತು ನಾಟ್ಯ ಕಲೆಯನ್ನು ಕಲಿಯುವ ಆಸಕ್ತಿ ಇರುವ ಪ್ರತಿಭೆಗಳಿಗೆ ಕಲೆಯನ್ನು ಕಲಿಸುತ್ತಿದ್ದಾರೆ. ಇವರ ಕೈಯಲ್ಲಿ ಕಲಿತ ಅನೇಕ ಶಿಷ್ಯರು ಈಗಾಗಲೇ ನಾಡಿನಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನೀಡಿ, ಕಲಿಸಿದ ಗುರುಗಳಿಗೂ ಹಾಗೂ ವಿದ್ಯಾಲಯಕ್ಕೂ ಒಳ್ಳೆಯ ಕೀರ್ತಿಯನ್ನು ತಂದಿದ್ದಾರೆ.

ಸಾಧಿಸುವ ಛಲ ಮುಖ್ಯ

ನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವರಿಗೆ ರಂಗಪ್ರವೇಶ ಅವರ ಜೀವನದಲ್ಲಿ ಪ್ರಮುಖವಾದ ಘಟ್ಟ. ಇದಕ್ಕೆ ಅಪಾರ ಶ್ರಮ, ನಿಷ್ಠೆ ಹಾಗೂ ಸಾಧಿಸುವ ಛಲ ಇರಬೇಕು. ಇದನ್ನು ಮಂಜುಶ್ರೀ ತುಂಬಾ ಯಶಸ್ವಿಯಾಗಿ ಪೂರೈಸಿದ್ದಾರೆ. ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಹಾಗೂ ಸೋಷಿಯಾಲಜಿಯಲ್ಲಿ ಎಂಎ ಪದವಿಯನ್ನು ಪಡೆದಿರುವ ಮಂಜುಶ್ರೀ, ನಾಟ್ಯ ಕಲೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಂತವರು. ನೃತ್ಯ ವಿದುಷಿಗಳಾದ ಶ್ರೀಮತಿ ಸೀಮಾ ಭಾಗವತ್, ಶ್ರೀಮತಿ ಸತ್ಯಭಾಮಾ ಕುಟ್ಟಿ ಹಾಗೂ ನೃತ್ಯ ವಿದ್ವಾನ್ ಶ್ರೀ ಜನಾರ್ದನ್ ಅಯ್ಯರ್ ಅವರ ಕೈಯ್ಯಲ್ಲಿ ಭರತನಾಟ್ಯ, ಕೂಚಿಪುಡಿ, ಮೋಹಿನಿ ಅಟ್ಟಂ ಕಲೆಯನ್ನು ಅಭ್ಯಾಸ ಮಾಡಿದ್ದಾರೆ. ನಿಟ್ಟಿನಲ್ಲಿ ಒಳ್ಳೆಯ ಗುರುಗಳ ಆಶೀವರ್ಾದ ದೊರೆತಿರುವುದು ನನ್ನ ಬೆಳವಣಿಗೆಗೆ ತುಂಬಾ ಪೂರಕವಾಗಿದೆ ಅಂತ ತಮ್ಮ ಗುರುಗಳನ್ನು ಸ್ಮರಿಸುತ್ತಾರೆ ಮಂಜುಶ್ರೀ.

ಸಾಧನೆಯ ಬಿಂಬದ ನೋಟ
ಕುಮಾರಿ ಮಂಜುಶ್ರೀ ನಾಯ್ಕ್ ನಮ್ಮ ದೇಶದಾದ್ಯಂತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನೃತ್ಯ ಕಾರ್ಯಕ್ರಮವನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾಗಿ ಹೇಳುವುದಾದರೆ, ಮೈಸೂರು ದಸರಾ ಉತ್ಸವ, ಕದಂಬೋತ್ಸವ, ಕರಾವಳಿ ಉತ್ಸವ, ಚಾಲುಕ್ಯೋತ್ಸವ, ಶರವನ್ನವರಾತ್ರಿ ಉತ್ಸವ, ಕೃಷ್ಣೋತ್ಸವ ಮುಂತಾದವುಗಳು ಅಲ್ಲದೆ ಶಿರಸಿ, ಯಲ್ಲಾಪುರ, ಬೆಂಗಳೂರು, ಮೈಸೂರು, ಮುಂಬೈ, ದೆಹಲಿಯಲ್ಲಿಯೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೊರದೇಶದಲ್ಲಿ ಪ್ರಮುಖವಾಗಿ ಬಹರೇನ್ ದೇಶದ ಮನಾಮಾದಲ್ಲಿ ನಡೆದ 'ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ-2006', ಕುವೈತ್ನಲ್ಲಿ ನಡೆದ 'ವಿಶ್ವ ಕನ್ನಡ ಮತ್ತು ಸಂಸ್ಕೃತಿ ಸಮ್ಮೇಳನ-2007' ರಲ್ಲಿ ತಮ್ಮ ನಾಟ್ಯ ಪ್ರತಿಭೆಯನ್ನು ಪ್ರದಶರ್ಿಸಿ ನಾಟ್ಯ ರಸಿಕರ ಮನಗೆದ್ದಿದ್ದಾರೆ.

ಸಾಧಿಸುವ ಹಸಿವಿಗೆ ಮಿತಿಯಿಲ್ಲ
ಕೇತ್ರದಲ್ಲಿ ಈಗಾಗಲೇ ಅತಿ ಕಡಿಮೆ ವಯಸ್ಸಿನಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದ್ದರೂ, ಮಂಜುಶ್ರೀಗೆ ಸಾಧನೆಯ ಹಸಿವು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇನ್ನು ಸಾಧಿಸುವುದು ಬೆಟ್ಟದಷ್ಟಿದೆ ಅಂತ ಹೇಳುತ್ತಾರೆ. ತಮ್ಮದೇ 'ನೂಪುರ ನೃತ್ಯ ಕುಟೀರ' ಎಂಬ ನೃತ್ಯಶಾಲೆಯನ್ನು ಪ್ರಾರಂಭಿಸಿದ್ದಾರೆ. ಬಹಳಷ್ಟು ವಿದ್ಯಾರ್ಥಿಗಳು ಇವರ ಕೈಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ನಿದರ್ೆಶಿಸಿದ ಅನೇಕ ನೃತ್ಯ ರೂಪಕಗಳು ಕಲಾವಿಮರ್ಶಕರಿಂದ ಮೆಚ್ಚುಗೆ ಪಡೆದಿರುತ್ತವೆ. ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ಹಾಗೂ ಬಡ ಮಕ್ಕಳಿಗೆ ಉಚಿತ ನೃತ್ಯಾಭ್ಯಾಸ ನೀಡಿ, ಎಲ್ಲರಲ್ಲೂ ಕಲಾಭ್ಯಾಸದ ಕಂಪು ಮೂಡಿಸಬೇಕೆಂಬುದು ಇವರ ಅದಮ್ಯ ಕನಸು. ಶ್ರದ್ಧೆ-ನಿಷ್ಠೆಗಳಿಂದ ಕಲಾರಾಧನೆಯನ್ನೇ ಗುರಿಯಾಗಿಸಿಕೊಂಡು, ಸಾಧನೆಯ ದಾರಿಯಲ್ಲಿ ಕುಮಾರಿ ಮಂಜುಶ್ರೀ ಇದುವರೆಗೆ ನಡೆದು ಬಂದಿದ್ದಾರೆ. ಮುಂದೆಯೂ ಇದೇ ದಾರಿಯಲ್ಲಿ  ಸಾಗಿ, ಇತರರನ್ನೂ ತಮ್ಮ ದಾರಿಗೆ ಎಳೆದು ತರುವ ಪ್ರಯತ್ನದಲ್ಲಿದ್ದಾರೆ. ಇವರ ಸಾಧನೆಯ ಬೆಳಕಿಗೆ ಶುಭವಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.

ಪ್ರಶಸ್ತಿ-ಪುರಸ್ಕಾರಗಳು
ಇಲ್ಲಿಯವರೆಗಿನ ನಾಟ್ಯ ಕ್ಷೇತ್ರದಲ್ಲಿನ ಸಾಧನೆ ಹಾಗೂ ಸೇವೆಯನ್ನು ಗುರುತಿಸಿ ಬಹಳಷ್ಟು ಪ್ರಶಸ್ತಿ-ಪುರಸ್ಕಾರಗಳು ರಾಷ್ಟ್ರೀಯ ಮಟ್ಟದಿಂದ, ಸ್ಥಳೀಯ ಸಂಘ ಸಂಸ್ಥೆಗಳಿಂದ ಹರಿದು ಬಂದಿವೆ. ಇದರಲ್ಲಿ  ಪ್ರಮುಖವಾಗಿ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಪ್ರತಿಷ್ಠಾನವು ಕಲಾವಿದೆಯ ಕಲಾಸೇವೆಯನ್ನು ಗುರುತಿಸಿ 'ಆರ್ಯಭಟ ಪ್ರಶಸ್ತಿ' ನೀಡಿ ಗೌರವಿಸಿದೆ. ಅದೇ ರೀತಿ ಬೆಂಗಳೂರಿನ ನೃಪತುಂಗ ಕಲಾನಿಕೇತನವು 'ಅಮೋಘವರ್ಷ ನೃಪತುಂಗ ಪ್ರಶಸ್ತಿ', ಬಿಜಾಪುರದ ಕರ್ಮವೀರ ಕಲಾಸಾಹಿತ್ಯ ವೇದಿಕೆಯು 'ಬಸವ ಜ್ಯೋತಿ ರಾಜ್ಯ ಪ್ರಶಸ್ತಿ', ಬೆಂಗಳೂರಿನ ಕರ್ನಾಟಕ ಸಹೃದಯರ ಸಂಘವು 'ಸಾಧನಾ ರತ್ನ ಪ್ರಶಸ್ತಿ', ಗದುಗಿನ ಡಾ. ಪಂಡಿತ್ ಪುಟ್ಟರಾಜ ಸೇವಾ ಸಮಿತಿಯು  ಸಂಸ್ಥೆಯು 'ಡಾ. ಪಂಡಿತ್ ಪುಟ್ಟರಾಜ ಯುವ ಪ್ರತಿಭಾ ಪುರಸ್ಕಾರ ರಾಜ್ಯ ಪ್ರಶಸ್ತಿ', ಎಸ್.ಟಿ.ಎಲ್. ಸಮಾಜ ಸೇವಾ ಪ್ರತಿಷ್ಠಾನವು 'ಕರುನಾಡಿನ ಹೆಮ್ಮೆಯ ರತ್ನ' ಪ್ರಶಸ್ತಿ, ಬೆಂಗಳೂರಿನ ಹೆಗಡೆ ಕಲ್ಚರಲ್ ಅಂಡ್ ಸೋಷಿಯಲ್ ಅಕಾಡೆಮಿಯು 2008ನೇ ಸಾಲಿನ 'ರಾಜೀವ್ ಗಾಂಧಿ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ', ಯಳಂದೂರಿನ ಅಂಬಾ ಪ್ರಕಾಶನವು 'ಸುವರ್ಣ ಸಿರಿ ಕನ್ನಡಿಗ' ಪ್ರಶಸ್ತಿ, ಧಾರವಾಡದ ಶ್ರೀಲಕ್ಷ್ಮಿ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು 'ರಾಹುಲ್ ಗಾಂಧಿ ಯಂಗ್ ಅಚೀವರ್ ನ್ಯಾಶನಲ್ ಅವಾರ್ಡ್ ', 2006-07ನೇ ಸಾಲಿನ 'ಶ್ರೀ ಗುರು ರಾಘವೇಂದ್ರ ಸದ್ಭಾವನಾ ಪ್ರಶಸ್ತಿ , 2006-07ನೇ ಸಾಲಿನ 'ಜಗಜ್ಯೋತಿ ಶ್ರೀಬಸವೇಶ್ವರ ಸದ್ಭಾವನಾ ಪ್ರಶಸ್ತಿ  ಹೀಗೆ ಪ್ರಶಸ್ತಿಗಳ ದೊಡ್ಡ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.





No comments:

Post a Comment